ಭಾರತದ ಸೈಕ್ಲಿಂಗ್ ಇತಿಹಾಸದಲ್ಲಿ ಹೊಸ ಅಧ್ಯಾಯ; ಯುಸಿಐ ಮಾನ್ಯತೆ ಪಡೆದ ಪುಣೆ ಗ್ರ್ಯಾಂಡ್ ಟೂರ್!
‘ಪುಣೆ ಗ್ರ್ಯಾಂಡ್ ಟೂರ್ (PGT) 2026’ ಭಾರತದಲ್ಲಿ ನಡೆಯುವ ಮೊದಲ ಯೂನಿಯನ್ ಸೈಕ್ಲಿಸ್ಟ್ ಇಂಟರ್ನ್ಯಾಷನಲ್ (UCI) ಮಾನ್ಯತೆ ಪಡೆದ Class 2.2 ವರ್ಗದ ಬಹು ಹಂತದ ರಸ್ತೆ ಸೈಕ್ಲಿಂಗ್ ಸ್ಪರ್ಧೆಯಾಗಲಿದೆ. 2026ರ ಜನವರಿ 19 ರಿಂದ 23 ರವರೆಗೆ ನಡೆಯಲಿರುವ ಈ ಟೂರ್ನಿಯಲ್ಲಿ ನಾಲ್ಕು ಹಂತಗಳ ಸ್ಪರ್ಧೆ ನಡೆಯಲಿದೆ.
ಯುಸಿಐ ಮಾನ್ಯತೆ ಪಡೆದ ಪುಣೆ ಗ್ರ್ಯಾಂಡ್ ಟೂರ್ 2026 -
ನವದೆಹಲಿ: ಭಾರತವು ಪ್ರಖ್ಯಾತ ಪ್ರೋ ಸ್ಟೇಜ್ ಎಲಿಟ್ ರೇಸ್ ಫಾರ್ ಮೆನ್ ಅಂತಾರಾಷ್ಟ್ರೀಯ ಸೈಕ್ಲಿಂಗ್ ಸ್ಪರ್ಧೆ ಮತ್ತು ಒಲಿಂಪಿಕ್ ಅರ್ಹತಾ ಅಂಕಗಳ ರೇಸ್ ಆಯೋಜನೆ ಹಕ್ಕುಗಳನ್ನು ಭಾರತ ಯಶಸ್ವಿಯಾಗಿ ಪಡೆದುಕೊಂಡಿದೆ. ಈ ಸ್ಪರ್ಧೆ ‘ಪುಣೆ ಗ್ರ್ಯಾಂಡ್ ಟೂರ್ (PGT) 2026’ ಎಂಬ ಹೆಸರಿನಲ್ಲಿ ನಡೆಯಲಿದ್ದು, ಇದು ಭಾರತದಲ್ಲಿ ನಡೆಯುವ ಮೊದಲ ಯೂನಿಯನ್ ಸೈಕ್ಲಿಸ್ಟ್ ಇಂಟರ್ನ್ಯಾಷನಲ್ (UCI) ಮಾನ್ಯತೆ ಪಡೆದ Class 2.2 ವರ್ಗದ ಬಹು ಹಂತದ ರಸ್ತೆ ಸೈಕ್ಲಿಂಗ್ ಸ್ಪರ್ಧೆಯಾಗಲಿದೆ. UCI ವಾರ್ಷಿಕ ಕ್ಯಾಲೆಂಡರ್‌ನಲ್ಲಿ ಪ್ರಮುಖ ಸ್ಥಾನ ಪಡೆದಿರುವ ಪುಣೆ ಗ್ರ್ಯಾಂಡ್ ಟೂರ್ 2026, ವಿಶ್ವಮಟ್ಟದ ಸೈಕ್ಲಿಂಗ್‌ನಲ್ಲಿ ಭಾರತಕ್ಕೆ ಹೊಸ ದಾರಿ ತೆರೆದುಕೊಳ್ಳಲಿದೆ. ಈ ಸ್ಪರ್ಧೆ ಕ್ರೀಡಾಪಟುಗಳ ಶ್ರಮ, ಉತ್ಸಾಹ ಮತ್ತು ಸ್ಪರ್ಧಾತ್ಮಕ ಚೈತನ್ಯವನ್ನು ಪ್ರದರ್ಶಿಸಲಿದೆ.
2026ರ ಜನವರಿ 19 ರಿಂದ 23 ರವರೆಗೆ ನಡೆಯಲಿರುವ ಈ ಟೂರ್ನಿಯಲ್ಲಿ ನಾಲ್ಕು ಹಂತಗಳ ಸ್ಪರ್ಧೆ ನಡೆಯಲಿದ್ದು, ಒಟ್ಟು 437 ಕಿ.ಮೀ ದೂರವನ್ನು ಒಳಗೊಂಡಿದೆ. ಪುಣೆ ಜಿಲ್ಲಾಧಿಕಾರಿ ಮತ್ತು ಪುಣೆ ಗ್ರ್ಯಾಂಡ್ ಟೂರ್ 2026 ಆಡಳಿತಾಧಿಕಾರಿ ಜಿತೇಂದ್ರ ದುಡಿ (IAS) ಮಾತನಾಡಿ "ಇದು ಭಾರತೀಯ ಕ್ರೀಡಾ ಇತಿಹಾಸದಲ್ಲಿ ಒಂದು ಮಹತ್ವದ ಕ್ಷಣ. ಪುಣೆ ಗ್ರ್ಯಾಂಡ್ ಟೂರ್ 2026 ಅನ್ನು ವಾರ್ಷಿಕ ಕಾರ್ಯಕ್ರಮವಾಗಿ ರೂಪಿಸಲು ನಮ್ಮ ಗುರಿಯಾಗಿದೆ," ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಮ್ಯಾಚ್ ಫಿಕ್ಸಿಂಗ್ ಪ್ರಕರಣ; ಮಧ್ಯಪ್ರವೇಶಿಸಲು ಬಿಸಿಸಿಐಗೆ ಸುಪ್ರೀಂ ಅನುಮತಿ
ಸೈಕ್ಲಿಂಗ್ ಫೆಡರೇಷನ್ ಆಫ್ ಇಂಡಿಯಾ (CFI) ಅಧ್ಯಕ್ಷ ಪಂಕಜ್ ಸಿಂಗ್ ಮಾತನಾಡಿ "CFI ದೇಶದಲ್ಲಿ ಸೈಕ್ಲಿಂಗ್ ಕ್ರೀಡೆಯ ಬೆಳವಣಿಗೆಗೆ ಬದ್ಧವಾಗಿದೆ. ಪುಣೆ ಗ್ರ್ಯಾಂಡ್ ಟೂರ್ 2026 ನಮ್ಮ ಪ್ರಯಾಣದ ಹೆಮ್ಮೆಯ ಮೈಲುಗಲ್ಲು. ಮಹಾರಾಷ್ಟ್ರ ಸರ್ಕಾರದ ಸಹಯೋಗದೊಂದಿಗೆ ನಡೆಯುವ ಈ UCI Class 2.2 ಸ್ಪರ್ಧೆ, ಪ್ರೊಫೆಷನಲ್ ರೈಡರ್‌ಗಳೊಂದಿಗೆ ಭಾರತೀಯ ಕ್ರೀಡಾಪಟುಗಳಿಗೆ ವಿಶ್ವಮಟ್ಟದ ಸ್ಪರ್ಧಾತ್ಮಕ ಅನುಭವ ನೀಡಲಿದೆ," ಎಂದು ಹೇಳಿದ್ದಾರೆ.
ಯೂನಿಯನ್ ಸೈಕ್ಲಿಸ್ಟ್ ಇಂಟರ್ನ್ಯಾಷನಲ್ (UCI) ಅಧ್ಯಕ್ಷ ಡೇವಿಡ್ ಲಾಪ್ಪಾರ್ಟಿಯೆಂಟ್ ಮಾತಾನಾಡಿ "ಪುಣೆ ಗ್ರ್ಯಾಂಡ್ ಟೂರ್ ಅನ್ನು UCI ಕ್ಯಾಲೆಂಡರ್‌ಗೆ ಸೇರಿಸಲು ನಮಗೆ ಸಂತೋಷವಾಗಿದೆ. ಇದನ್ನು UCI 2.2 ರೇಸ್ ಎಂದು ಗುರುತಿಸುವುದು ಭಾರತೀಯ ಸೈಕ್ಲಿಂಗ್‌ಗೆ ದೊಡ್ಡ ಮೈಲಿಗಲ್ಲು. ಇದು ವಿಶ್ವಮಟ್ಟದ ಕ್ರೀಡಾ ಕಾರ್ಯಕ್ರಮಗಳನ್ನು ಆಯೋಜಿಸಲು ಈ ಪ್ರದೇಶದ ಬದ್ಧತೆಯನ್ನು ತೋರಿಸುತ್ತದೆ," ಎಂದರು.
🚴♂️ Pune Gears Up for Global Spotlight!
— YIIPPEE® NEWS NETWORK (@YiippeeNN) July 4, 2025
Maharashtra CM Devendra Fadnavis announces the Pune Grand Challenge Tour — an international cycling event set to boost tourism and eco-sports. 🌍🏞️
Coming 2026. Global athletes. Local pride.
🔗 https://t.co/Nq9n3fl4dY#PuneCycling… pic.twitter.com/KaEcQnn8TD
ಪುಣೆ ಜಿಲ್ಲಾ ಆಡಳಿತ ಮತ್ತು ಮಹಾರಾಷ್ಟ್ರ ಸರ್ಕಾರದ ಸಹಯೋಗದಲ್ಲಿ ಆಯೋಜಿಸಲ್ಪಡುವ ಪುಣೆ ಗ್ರ್ಯಾಂಡ್ ಟೂರ್ 2026, ಸೈಕ್ಲಿಂಗ್ ಫೆಡರೇಷನ್ ಆಫ್ ಇಂಡಿಯಾ (CFI) ಸಹಭಾಗಿತ್ವದಲ್ಲಿ ನಡೆಯಲಿದೆ.