ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪಂತ್ ಶತಕದ ಅಬ್ಬರ; 720 ರನ್‌ ಪೇರಿಸಿದ ಭಾರತ, ಸೋಲಿನ ಸುಳಿಯಲ್ಲಿ ನ್ಯೂಜಿಲೆಂಡ್

ನ್ಯೂಜಿಲೆಂಡ್ ವಿರುದ್ಧ ಬೇಸಿನ್ ರಿಸರ್ವ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಶುಭಮನ್ ಗಿಲ್ ನೇತೃತ್ವದ ಭಾರತ ತಂಡ ಸಂಪೂರ್ಣ ಹಿಡಿತ ಸಾಧಿಸಿದೆ. ನಾಲ್ಕನೇ ದಿನದಾಟದ ಅಂತ್ಯಕ್ಕೆ ನ್ಯೂಜಿಲೆಂಡ್ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 2 ವಿಕೆಟ್ ನಷ್ಟಕ್ಕೆ 119 ರನ್ ಗಳಿಸಿದ್ದು, ಇನ್ನೂ 233 ರನ್‌ಗಳ ಬೃಹತ್ ಹಿನ್ನಡೆಯಲ್ಲಿದೆ.

ಪಂತ್ ಶತಕದ ಅಬ್ಬರ; 720 ರನ್‌ ಪೇರಿಸಿದ ಭಾರತ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Nov 22, 2026 12:00 PM

ವೆಲ್ಲಿಂಗ್ಟನ್‌: ನ್ಯೂಜಿಲೆಂಡ್ ವಿರುದ್ಧ ಬೇಸಿನ್ ರಿಸರ್ವ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಶುಭಮನ್ ಗಿಲ್ ನೇತೃತ್ವದ (Ind vs Nz Test) ಭಾರತ ತಂಡ ಸಂಪೂರ್ಣ ಹಿಡಿತ ಸಾಧಿಸಿದೆ. ನಾಲ್ಕನೇ ದಿನದಾಟದ ಅಂತ್ಯಕ್ಕೆ ನ್ಯೂಜಿಲೆಂಡ್ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 2 ವಿಕೆಟ್ ನಷ್ಟಕ್ಕೆ 119 ರನ್ ಗಳಿಸಿದ್ದು, ಇನ್ನೂ 233 ರನ್‌ಗಳ ಬೃಹತ್ ಹಿನ್ನಡೆಯಲ್ಲಿದೆ. ಐದನೇ ಹಾಗೂ ಅಂತಿಮ ದಿನದಾಟದ ಪಂದ್ಯ ಗೆಲ್ಲಲು ಭಾರತಕ್ಕೆ ಕೇವಲ 8 ವಿಕೆಟ್‌ಗಳ ಅಗತ್ಯವಿದೆ.

ಮೂರನೇ ದಿನದ ಅಂತ್ಯಕ್ಕೆ 486 ನಾಲ್ಕನೇ ದಿನದಾಟದಲ್ಲೂ ತನ್ನ ಆಕ್ರಮಣಕಾರಿ ಬ್ಯಾಟಿಂಗ್ ಮುಂದುವರಿಸಿತು. ಅಂತಿಮವಾಗಿ 9 ವಿಕೆಟ್ ನಷ್ಟಕ್ಕೆ 720 ರನ್ ಗಳಿಸಿದಾಗ ನಾಯಕ ಶುಭಮನ್ ಗಿಲ್ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡರು. ಈ ಮೂಲಕ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 352 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿತು. ಭಾರತದ ಪರ ಕೆ.ಎಲ್. ರಾಹುಲ್ (136) ಶತಕ ಬಾರಿಸಿ ಇನ್ನಿಂಗ್ಸ್‌ಗೆ ಭದ್ರ ಬುನಾದಿ ಹಾಕಿದರೆ, ವಿಕೆಟ್ ಕೀಪರ್ ರಿಷಭ್ ಪಂತ್ 128 ಸ್ಫೋಟಕ ಶತಕ ಸಿಡಿಸಿದರು. ನಾಯಕ ಶುಭಮನ್ ಗಿಲ್ 98 ಬಾರಿಸಿ ಕೇವಲ 2 ರನ್‌ಗಳಿಂದ ಶತಕ ವಂಚಿತರಾದರೆ, ಯಶಸ್ವಿ ಜೈಸ್ವಾಲ್ 85, ದೇವದತ್ ಪಡಿಕ್ಕಲ್ 80 ಮತ್ತು ಧ್ರುವ್ ಜುರೆಲ್ 78 ಭರ್ಜರಿ ಅರ್ಧಶತಕಗಳೊಂದಿಗೆ ತಂಡದ ಬೃಹತ್ ಮೊತ್ತಕ್ಕೆ ನೆರವಾದರು.

ಕಿವೀಸ್‌ಗೆ ಆರಂಭಿಕ ಆಘಾತ

352 ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್‌ಗೆ ಮೊದಲ ಓವರ್‌ನಲ್ಲೇ ವೇಗಿ ಜಸ್ಪ್ರೀತ್ ಬುಮ್ರಾ ಆಘಾತ ನೀಡಿದರು. ನಾಯಕ ಟಾಮ್ ಲಾಥಮ್ ಖಾತೆ ತೆರೆಯುವ ಮುನ್ನವೇ ಪೆವಿಲಿಯನ್ ಸೇರಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಅಜೇಯ 175 ರನ್ ಬಾರಿಸಿ ಮಿಂಚಿದ್ದ ಹೆನ್ರಿ ನಿಕೋಲ್ಸ್ 31 ರನ್‌ ಬಾರಿಸಿ ಪ್ರಸಿದ್ಧ್ ಕೃಷ್ಣ ಬೌಲಿಂಗ್‌ನಲ್ಲಿ ಧ್ರುವ್ ಜುರೆಲ್ ಹಿಡಿದ ಅದ್ಭುತ ಕ್ಯಾಚ್‌ಗೆ ಔಟಾದರು.

60 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ನ್ಯೂಜಿಲೆಂಡ್ ತಂಡಕ್ಕೆ ಡೆವೊನ್ ಕಾನ್ವೇ ಮತ್ತು ರಚಿನ್ ರವೀಂದ್ರ ಆಸರೆಯಾಗಿದ್ದಾರೆ. ದಿನದಾಟದ ಅಂತ್ಯಕ್ಕೆ ಕಾನ್ವೇ ಅಜೇಯ 59 ರನ್ ಹಾಗೂ ರಚಿನ್ ರವೀಂದ್ರ ಅಜೇಯ 27 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.