ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shakib Al Hasan: ಟಿ20ಯಲ್ಲಿ 500 ವಿಕೆಟ್‌ ಸಾಧನೆಗೈದ ಶಕೀಬ್ ಅಲ್ ಹಸನ್

ಬಾಂಗ್ಲಾ ಪರ ಶಕೀಬ್‌ 71 ಟಿ20 ಪಂದ್ಯಗಳನ್ನು ಆಡಿ 2551 ರನ್‌ ಮತ್ತು 149 ವಿಕೆಟ್‌ ಕಿತ್ತ ಸಾಧನೆ ಮಾಡಿದ್ದಾರೆ. 20 ರನ್‌ಗೆ 5 ವಿಕೆಟ್‌ ಕಿತ್ತದ್ದು ವೈಯಕ್ತಿಕ ಸಾಧನೆಯಾಗಿದೆ. 70 ಟೆಸ್ಟ್ ಪಂದ್ಯಗಳನ್ನಾಡಿರುವ ಶಕೀಬ್ 128 ಇನಿಂಗ್ಸ್‌ಗಳಿಂದ​ 4,600 ರನ್ ಕಲೆಹಾಕಿದ್ದಾರೆ. ಈ ವೇಳೆ 5 ಶತಕ, 1 ದ್ವಿಶತಕ ಹಾಗೂ 31 ಅರ್ಧಶತಕಗಳನ್ನು ಬಾರಿಸಿದ್ದಾರೆ.

ಟಿ20ಯಲ್ಲಿ 500 ವಿಕೆಟ್‌ ಸಾಧನೆಗೈದ ಶಕೀಬ್ ಅಲ್ ಹಸನ್

Abhilash BC Abhilash BC Aug 25, 2025 11:49 AM

ಬಾರ್ಬಡಾಸ್‌: ಹಿರಿಯಾ ಆಲ್‌ರೌಂಡರ್‌ ಶಕೀಬ್ ಅಲ್ ಹಸನ್(Shakib Al Hasan) ಅವರು ಬಾಂಗ್ಲಾ ಕ್ರಿಕೆಟ್ ಇತಿಹಾಸದಲ್ಲಿ ನೂತನ ಇತಿಹಾಸವೊಂದನ್ನು ಬರೆದಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ 500 ವಿಕೆಟ್‌ಗಳನ್ನು ತಲುಪಿದ ಮೊದಲ ಬಾಂಗ್ಲಾದೇಶಿ ಹಾಗೂ ವಿಶ್ವದ 5ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 38 ವರ್ಷದ ಶಕೀಬ್‌, ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ನಲ್ಲಿ ಆಡುವ ಮೂಲಕ ಈ ಮೈಲಿಗಲ್ಲು ತಲುಪಿದರು. ಶಕೀಬ್‌ಗೆ ಈ ದಾಖಲೆ ಬರೆಯಲು ಕೇವಲ ಒಂದು ವಿಕೆಟ್ ಅಗತ್ಯವಿತ್ತು.

ಆಂಟಿಗುವಾ ಮತ್ತು ಬಾರ್ಬುಡಾ ಫಾಲ್ಕನ್ಸ್ ತಂಡ ಆಟಗಾರನಾಗಿರುವ ಎಡಗೈ ಸ್ಪಿನ್ನರ್ ಶಕೀಬ್‌ ಪಂದ್ಯದಲ್ಲಿ ಎರಡು ಓವರ್‌ಗಳಲ್ಲಿ ಕೇವಲ 11 ರನ್‌ ಬಿಟ್ಟುಕೊಟ್ಟು 3 ವಿಕೆಟ್‌ಗಳನ್ನು ಪಡೆದು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಶಕೀಬ್‌ ಟಿ20ಯಲ್ಲಿ 500 ವಿಕೆಟ್‌ ಪೂರ್ತಿಗೊಳಿಸಿದ ವಿಶ್ವದ ಐದನೇ ಬೌಲರ್ ಎನಿಸಿಕೊಂಡರು. ಒಟ್ಟು 502* ವಿಕೆಟ್‌ ಕಿತ್ತಿದ್ದಾರೆ.

ಅಫ್ಘಾನಿಸ್ತಾನದ ರಶೀದ್ ಖಾನ್ 660 ವಿಕೆಟ್‌ಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ವೆಸ್ಟ್ ಇಂಡೀಸ್‌ನ ಡ್ವೇನ್ ಬ್ರಾವೋ (631) ಮತ್ತು ಸುನಿಲ್ ನರೈನ್ (590) ಹಾಗೂ ದಕ್ಷಿಣ ಆಫ್ರಿಕಾದ ಇಮ್ರಾನ್ ತಾಹಿರ್ (554) ಆ ನಂತರದ ಸ್ಥಾನದಲ್ಲಿದ್ದಾರೆ.

ಬಾಂಗ್ಲಾದಲ್ಲಿನ ರಾಜಕೀಯ ಅಶಾಂತಿಯಿಂದಾಗಿ ಮತ್ತು ಅವಾಮಿ ಲೀಗ್‌ನೊಂದಿಗೆ ತೊಡಗಿಸಿಕೊಂಡಿದ್ದರಿಂದ ಜೀವ ಬೆದರಿಕೆಯನ್ನು ಎದುರಿಸಿದ ನಂತರ ಶಕೀಬ್ ಬಾಂಗ್ಲಾದೇಶಕ್ಕೆ ಹಿಂತಿರುಗಿಲ್ಲ. ಅವರು ಲಂಡನ್‌ನಲ್ಲಿ ನೆಲೆಸಿದ್ದಾರೆ.

ಇದನ್ನೂ ಓದಿ Shakib Al Hasan: ಬಾಂಗ್ಲಾ ಕ್ರಿಕೆಟಿಗ ಶಕೀಬ್‌ ಆಸ್ತಿ ಸ್ವಾಧೀನಕ್ಕೆ ಆದೇಶ

ಬಾಂಗ್ಲಾ ಪರ ಶಕೀಬ್‌ 71 ಟಿ20 ಪಂದ್ಯಗಳನ್ನು ಆಡಿ 2551 ರನ್‌ ಮತ್ತು 149 ವಿಕೆಟ್‌ ಕಿತ್ತ ಸಾಧನೆ ಮಾಡಿದ್ದಾರೆ. 20 ರನ್‌ಗೆ 5 ವಿಕೆಟ್‌ ಕಿತ್ತದ್ದು ವೈಯಕ್ತಿಕ ಸಾಧನೆಯಾಗಿದೆ. 70 ಟೆಸ್ಟ್ ಪಂದ್ಯಗಳನ್ನಾಡಿರುವ ಶಕೀಬ್ 128 ಇನಿಂಗ್ಸ್‌ಗಳಿಂದ​ 4,600 ರನ್ ಕಲೆಹಾಕಿದ್ದಾರೆ. ಈ ವೇಳೆ 5 ಶತಕ, 1 ದ್ವಿಶತಕ ಹಾಗೂ 31 ಅರ್ಧಶತಕಗಳನ್ನು ಬಾರಿಸಿದ್ದಾರೆ. ಬೌಲಿಂಗ್‌ನಲ್ಲಿ 242 ವಿಕೆಟ್​ಗಳನ್ನು ಕಬಳಿಸಿದ್ದಾರೆ. 19 ಬಾರಿ 5 ವಿಕೆಟ್ ಗೊಂಚಲು ಪಡೆದ ಸಾಧನೆ ಮಾಡಿದ್ದಾರೆ.