Australia Tour: ಆಸ್ಟ್ರೇಲಿಯಾ ಟಿ20 ಸರಣಿಗೂ ಮುನ್ನ ಗಾಯಗೊಂಡ ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್
"ದುಬೆ ತಂಡದೊಂದಿಗೆ ಪ್ರಯಾಣಿಸಿದರು. ಆದರೆ ಶೀತ ಹವಾಮಾನದಿಂದಾಗಿ ಅವರಿಗೆ ಬೆನ್ನು ನೋವು ಕಾಣಿಸಿಕೊಂಡಿತು. ವೈದ್ಯಕೀಯ ತಂಡವು ಅವರಿಗೆ ವಿಶ್ರಾಂತಿ ಪಡೆಯಲು ಸಲಹೆ ನೀಡಿತು, ಆದ್ದರಿಂದ ಅವರು ಮುಂಬೈಗೆ ಮರಳಿದರು" ಎಂದು ಮುಂಬೈ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ಮೂಲಗಳು ಪ್ರಕಟಣೆಗೆ ತಿಳಿಸಿವೆ. ಒಂದೊಮ್ಮೆ ದುಬೆ ಚೇತರಿಕೆ ಕಾಣದಿದ್ದರೆ ಆಸೀಸ್ ಟಿ20 ಸರಣಿಯಿಂದ ಹೊರಬೀಳಲಿದ್ದಾರೆ.

-

ಮುಂಬಯಿ: ಅಕ್ಟೋಬರ್ 19 ರಿಂದ ಪ್ರಾರಂಭವಾಗುವ ಮೂರು ಏಕದಿನ ಪಂದ್ಯಗಳು ಮತ್ತು ನಂತರ ಅಕ್ಟೋಬರ್ 29 ರಿಂದ ಪ್ರಾರಂಭವಾಗುವ ಐದು ಪಂದ್ಯಗಳ T20I ಸರಣಿಯೊಂದಿಗೆ ಪೂರ್ಣ ಪ್ರಮಾಣದ ಪ್ರವಾಸಕ್ಕಾಗಿ(Australia Tour) ಭಾರತ ತಂಡ ಆಸ್ಟ್ರೇಲಿಯಾಕ್ಕೆ(Australia vs India) ಪ್ರಯಾಣ ಬೆಳೆಸಲಿದೆ. 7 ತಿಂಗಳ ನಂತರ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಂಡಕ್ಕೆ ಮರಳಿರುವುದರಿಂದ ಮತ್ತು ಶುಭಮನ್ ಗಿಲ್ ಏಕದಿನ ತಂಡದ ನೂತನ ನಾಯಕರಾಗಿರುವುದು ಈ ಪ್ರವಾಸದ ವಿಶೇಷತೆ. ಆದರೆ ಸರಣಿ ಆರಂಭಕ್ಕೂ ಮುನ್ನ ಭಾರತವು ತನ್ನ ಸ್ಟಾರ್ ಆಲ್‌ರೌಂಡರ್‌ಗಳಲ್ಲಿ ಒಬ್ಬರಾದ ಶಿವಂ ದುಬೆ(Shivam Dube) ಅವರಿಗೆ ಗಾಯದ ಚಿಂತೆಯನ್ನು ಎದುರಿಸುತ್ತಿದೆ.
ಫೆಬ್ರವರಿ-ಮಾರ್ಚ್‌ನಲ್ಲಿ ನಡೆಯುವ 2026 ರ T20 ವಿಶ್ವಕಪ್‌ಗೆ ತಯಾರಿ ನಡೆಸುತ್ತಿರುವ ಭಾರತ ತಂಡವು ಅಗ್ರ ತಂಡವನ್ನು ಎದುರಿಸಲಿರುವ ಕಾರಣ ಈ ಟಿ20 ಸರಣಿ ಮಹತ್ವದ ಪಾಮುಖ್ಯತೆ ಪಡೆದಿದೆ.
ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಶಿವಂ ದುಬೆ ಅವರಿಗೆ ಬೆನ್ನು ನೋವು ಕಾಣಿಸಿಕೊಂಡಿದ್ದು, ಇದೇ ಕಾರಣಕ್ಕೆ ಶ್ರೀನಗರದಲ್ಲಿ ಬುಧವಾರ ಆರಂಭಗೊಂಡ ರಣಜಿ ಟ್ರೋಫಿ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರ ವಿರುದ್ಧದ ಪಂದ್ಯದಲ್ಲಿ ಅವರು ಕಣಕ್ಕಿಳಿಯಲಿಲ್ಲ ಎನ್ನಲಾಗಿದೆ. ಮುಂಬೈ ತಂಡದಲ್ಲಿ ಸ್ಥಾನ ಪಡೆದಿರುವ ದುಬೆ ಶ್ರೀನಗರಕ್ಕೆ ಪ್ರಯಾಣ ಬೆಳೆಸಿದ್ದರು. ಆದರೆ ಅಲ್ಲಿನ ಶೀತ ವಾತಾವರಣವು ಅವರ ಬೆನ್ನು ನೋವಿಗೆ ಕಾರಣವಾಯಿತು. ಇದರಿಂದಾಗಿ ಅವರು ಮುಂಬೈಗೆ ಮತ್ತೆ ವಾಪಸ್ ಹಿಂತಿರುಗಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ IND vs AUS: ಆಸ್ಟ್ರೇಲಿಯಾದ ಜನತೆಗೆ ರೋಹಿತ್-ಕೊಹ್ಲಿ ನೋಡಲು ಇದು ಕೊನೆಯ ಅವಕಾಶ: ಪ್ಯಾಟ್ ಕಮ್ಮಿನ್ಸ್
"ದುಬೆ ತಂಡದೊಂದಿಗೆ ಪ್ರಯಾಣಿಸಿದರು. ಆದರೆ ಶೀತ ಹವಾಮಾನದಿಂದಾಗಿ ಅವರಿಗೆ ಬೆನ್ನು ನೋವು ಕಾಣಿಸಿಕೊಂಡಿತು. ವೈದ್ಯಕೀಯ ತಂಡವು ಅವರಿಗೆ ವಿಶ್ರಾಂತಿ ಪಡೆಯಲು ಸಲಹೆ ನೀಡಿತು, ಆದ್ದರಿಂದ ಅವರು ಮುಂಬೈಗೆ ಮರಳಿದರು" ಎಂದು ಮುಂಬೈ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ಮೂಲಗಳು ಪ್ರಕಟಣೆಗೆ ತಿಳಿಸಿವೆ. ಒಂದೊಮ್ಮೆ ದುಬೆ ಚೇತರಿಕೆ ಕಾಣದಿದ್ದರೆ ಆಸೀಸ್ ಟಿ20 ಸರಣಿಯಿಂದ ಹೊರಬೀಳಲಿದ್ದಾರೆ.
ಇತ್ತೀಚೆಗೆ ನಡೆದಿದ್ದ ಏಷ್ಯಾಕಪ್ ಟೂರ್ನಿಯಲ್ಲಿ ದುಬೆ ಬ್ಯಾಟಿಂಗ್ ಮಾತ್ರವಲ್ಲದೆ ಬೌಲಿಂಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದರು. ಪ್ರತಿ ಪಂದ್ಯದಲ್ಲಿಯೂ ವಿಕೆಟ್ ಟೇಕರ್ ಬೌಲರ್ ಆಗಿ ಕಾಣಿಸಿಕೊಂಡಿದ್ದರು.