ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Suryakumar Yadav: ಏಷ್ಯಾ ಕಪ್‌ ಪಂದ್ಯದ ವೇತನವನ್ನು ಪಹಲ್ಗಾಮ್‌ ಸಂತ್ರಸ್ತರಿಗೆ ದೇಣಿಗೆ ನೀಡಿದ ಸೂರ್ಯ

Asia Cup 2025 final: ಪ್ರತಿ ಟಿ20 ಪಂದ್ಯಕ್ಕೆ ಭಾರತ ಆಟಗಾರರು ₹4 ಲಕ್ಷ ಗಳಿಸುತ್ತಾರೆ. ಒಟ್ಟು ಏಳು ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅವರು ₹28 ಲಕ್ಷ ಗಳಿಸಿದ್ದಾರೆ. ಈ ಮೊತ್ತವನ್ನು ಅವರು ಸಶಸ್ತ್ರ ಪಡೆಗಳು ಮತ್ತು ಪಹಲ್ಗಾಮ್‌ ಸಂತ್ರಸ್ತರಿಗೆ ದೇಣಿಗೆಯಾಗಿ ನೀಡಲಿದ್ದಾರೆ.

ಪಂದ್ಯದ ವೇತನವನ್ನು ಪಹಲ್ಗಾಮ್‌ ಸಂತ್ರಸ್ತರಿಗೆ ದೇಣಿಗೆ ನೀಡಿದ ಸೂರ್ಯ

-

Abhilash BC Abhilash BC Sep 29, 2025 1:18 PM

ದುಬೈ: ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್‌ ಯಾದವ್‌(Suryakumar Yadav) ಏಷ್ಯಾಕಪ್‌ ಟ್ರೋಫಿ ಗೆಲ್ಲುವ ಜತೆಗೆ ತಮ್ಮ ಉದಾರ ಮನಸ್ಸಿನಿಂದಲೂ ಭಾರತೀಯರ ಮನಗೆದ್ದಿದ್ದಾರೆ. ಏಷ್ಯಾ ಕಪ್‌ ಟೂರ್ನಿಯ(Asia Cup 2025 final) ತಮ್ಮ ವೈಯಕ್ತಿಕ ‍ಪಂದ್ಯ ಶುಲ್ಕವನ್ನು ಸಶಸ್ತ್ರ ಪಡೆಗಳು ಮತ್ತು ಪಹಲ್ಗಾಮ್ ದಾಳಿಯ ಸಂತ್ರಸ್ತರಿಗೆ ನೀಡುವುದಾಗಿ ಘೋಷಿಸಿದ್ದಾರೆ.

‘ನಮ್ಮ ಸಶಸ್ತ್ರ ಪಡೆಗಳು ಮತ್ತು ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿಗೆ ಒಳಗಾದ ಕುಟುಂಬಗಳಿಗೆ ಬೆಂಬಲ ನೀಡುವ ಸಲುವಾಗಿ ಈ ಟೂರ್ನಿಯ ಪಂದ್ಯ ಶುಲ್ಕವನ್ನು ದೇಣಿಗೆಯಾಗಿ ನೀಡಲು ನಾನು ನಿರ್ಧರಿಸಿದ್ದೇನೆ. ನಿಮ್ಮೊಂದಿಗೆ ನಾನು ಸದಾ ನಿಲ್ಲುತ್ತೇನೆ. ಜೈ ಹಿಂದ್‌’ ಎಂದು ಸೂರ್ಯಕುಮಾರ್‌ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಸೂರ್ಯ ಅವರ ಈ ನಿರ್ಧಾರಕ್ಕೆ ಅವರ ಅಭಿಮಾನಿಗಳು ಮಾತ್ರವಲ್ಲದೆ ಹಲವು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪಾಕ್‌ ಜತೆಗಿನ ಮೊದಲ ಗೆಲುವನ್ನು ಸಶಸ್ತ್ರ ಪಡೆಗಳು ಮತ್ತು ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಮಡಿದವರ ಕುಟುಂಬಗಳಿಗೆ ಅರ್ಪಿಸುವ ಮೂಲಕ ಸೂರ್ಯ ದಂಡನೆಗೂ ಗುರಿಯಾಗಿದ್ದರು.

28 ಲಕ್ಷ ದೇಣಿಗೆ

ಪ್ರತಿ ಟಿ20 ಪಂದ್ಯಕ್ಕೆ ಭಾರತ ಆಟಗಾರರು ₹4 ಲಕ್ಷ ಗಳಿಸುತ್ತಾರೆ. ಒಟ್ಟು ಏಳು ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅವರು ₹28 ಲಕ್ಷ ಗಳಿಸಿದ್ದಾರೆ. ಈ ಮೊತ್ತವನ್ನು ಅವರು ಸಶಸ್ತ್ರ ಪಡೆಗಳು ಮತ್ತು ಪಹಲ್ಗಾಮ್‌ ಸಂತ್ರಸ್ತರಿಗೆ ದೇಣಿಗೆಯಾಗಿ ನೀಡಲಿದ್ದಾರೆ.



ನಿರೀಕ್ಷೆಯಂತೆ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ಅಧ್ಯಕ್ಷ, ಪಾಕ್‌ನ ಆಂತರಿಕ ವ್ಯವಹಾರಗಳ ಸಚಿವರೂ ಆಗಿರುವ ಏಷ್ಯಾ ಕ್ರಿಕೆಟ್‌ ಮಂಡಳಿ (ಎಸಿಸಿ) ಅಧ್ಯಕ್ಷ ಮೊಹ್ಸಿನ್‌ ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ಭಾರತ ನಿರಾಕರಿಸಿತು. ಭಾರತ ತಂಡ ಪ್ರಶಸ್ತಿ ಸ್ವೀಕರಿಸುವುದಿಲ್ಲ ಎಂದು ಎಸಿಸಿ ಮಾಹಿತಿ ನೀಡಿದೆ’ ಎಂದು ತಿಳಿಸಿ ನಿರೂಪಕ ಸೈಮನ್‌ ಡೂಲ್‌ ಪ್ರಶಸ್ತಿ ವಿತರಣಾ ಸಮಾರಂಭವನ್ನು ಕೊನೆಗೊಳಿಸಿದರು. ಭಾರತೀಯ ಆಟಗಾರರು ಅಣಕು ಟ್ರೋಫಿ ಎತ್ತಿ ಹಿಡಿದಂತೆ ಸಂಭ್ರಮಿಸಿದರು.

ಇದನ್ನೂ ಓದಿ Asia Cup 2025 final: ಪಾಕ್‌ ಮಣಿಸಿದ ಟೀಮ್ ಇಂಡಿಯಾಗೆ ಬಿಗ್ ಗಿಫ್ಟ್ ನೀಡಿದ ಬಿಸಿಸಿಐ