148 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ: ವಿಶ್ವ ದಾಖಲೆ ಮುರಿಯುವ ಸನಿಹ ಕೊಹ್ಲಿ
india vs australia: ವಿರಾಟ್ ಆಸ್ಟ್ರೇಲಿಯಾದಲ್ಲಿ 29 ಏಕದಿನ ಪಂದ್ಯಗಳನ್ನು ಆಡಿದ್ದು, 51.03 ಸರಾಸರಿಯಲ್ಲಿ 1,327 ರನ್ ಗಳಿಸಿದ್ದಾರೆ. ಮತ್ತು 89 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್ ಹೊಂದಿದ್ದಾರೆ. 29 ಇನ್ನಿಂಗ್ಸ್‌ಗಳಲ್ಲಿ ಐದು ಶತಕಗಳು ಮತ್ತು ಆರು ಅರ್ಧಶತಕ ಬಾರಿಸಿದ್ದಾರೆ.

-

ಪರ್ತ್: ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಏಳು ತಿಂಗಳ ನಂತರ ತಮ್ಮ ಮೊದಲ ಅಂತರರಾಷ್ಟ್ರೀಯ ಪಂದ್ಯವನ್ನು ಆಡಲು ಸಜ್ಜಾಗಿದ್ದಾರೆ. ಭಾನುವಾರ ಪರ್ತ್‌ನಲ್ಲಿ ನಡೆಯುವ ಆಸ್ಟ್ರೇಲಿಯಾ(india vs australia) ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆಡಲಿದಾರೆ. ಈ ವರ್ಷದ ಆರಂಭದಲ್ಲಿ ಟೆಸ್ಟ್‌ನಿಂದ ನಿವೃತ್ತರಾದ ನಂತರ 36 ವರ್ಷದ ಕೊಹ್ಲಿ ಏಕದಿನ ಮಾದರಿಯಲ್ಲಿ ಮಾತ್ರ ಭಾರತ ಪರ ಆಡಲಿದ್ದಾರೆ.
2027 ರ ವಿಶ್ವಕಪ್ ತನಕ ಕೊಹ್ಲಿ ಆಡುವುದು ಅನುಮಾನ ಎಂಬ ವರದಿಗಳ ಮಧ್ಯೆ, ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಕೊಹ್ಲಿಗೆ ವಿಶ್ವ ದಾಖಲೆಯೊಂದನ್ನು ನಿರ್ಮಿಸುವ ಸುವರ್ಣ ಅವಕಾಶವಿದೆ. ಇದಕ್ಕೆ ಒಂದು ಶತಕದ ಅಗತ್ಯವಿದೆ.
ಹೌದು, ಕೊಹ್ಲಿ ಆಸೀಸ್ ಸರಣಿಯಲ್ಲಿ ಶತಕವೊಂದನ್ನು ಬಾರಿಸಿದರೆ ಒಂದೇ ಮಾದರಿಯಲ್ಲಿ ಅತಿ ಹೆಚ್ಚು ಶತಕ ಗಳಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ನಿರ್ಮಿಸಲಿದ್ದಾರೆ. ಕೊಹ್ಲಿ ಪ್ರಸ್ತುತ 51 ಏಕದಿನ ಶತಕಗಳನ್ನು ಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್ 51 ಶತಕ ಬಾರಿಸಿದ್ದಾರೆ.
ಇದನ್ನೂ ಓದಿ Virat Kohli: ಪಾಕ್ ಅಭಿಮಾನಿಗೆ ಆಟೋಗ್ರಾಫ್ ನೀಡಿದ ಕೊಹ್ಲಿ; ಭಾರತ ವಿರೋಧಿ ಎಂದ ನೆಟ್ಟಿಗರು
ಒಟ್ಟಾರೆಯಾಗಿ, ಅಂತರರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ100 ಶತಕಗಳೊಂದಿಗೆ (51 ಟೆಸ್ಟ್, 49 ಏಕದಿನ) ಸಚಿನ್ ಅಗ್ರಸ್ಥಾನದಲ್ಲಿದ್ದರೆ, ಕೊಹ್ಲಿ 82 ಶತಕಗಳೊಂದಿಗೆ (51 ಏಕದಿನ, 30 ಟೆಸ್ಟ್, 1 ಟಿ20ಐ) ಎರಡನೇ ಸ್ಥಾನದಲ್ಲಿದ್ದಾರೆ.
ವಿರಾಟ್ ಆಸ್ಟ್ರೇಲಿಯಾದಲ್ಲಿ 29 ಏಕದಿನ ಪಂದ್ಯಗಳನ್ನು ಆಡಿದ್ದು, 51.03 ಸರಾಸರಿಯಲ್ಲಿ 1,327 ರನ್ ಗಳಿಸಿದ್ದಾರೆ. ಮತ್ತು 89 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್ ಹೊಂದಿದ್ದಾರೆ. 29 ಇನ್ನಿಂಗ್ಸ್‌ಗಳಲ್ಲಿ ಐದು ಶತಕಗಳು ಮತ್ತು ಆರು ಅರ್ಧಶತಕ ಬಾರಿಸಿದ್ದಾರೆ.
ಇದನ್ನೂ ಓದಿ Young Kohli Fan: ಕೊಹ್ಲಿಯಿಂದ ಆಟೋಗ್ರಾಫ್ ಪಡೆದ ಪುಟ್ಟ ಅಭಿಮಾನಿ; ಹೃದಯಸ್ಪರ್ಶಿ ವಿಡಿಯೊ ಇಲ್ಲಿದೆ
ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಐದು ಇನ್ನಿಂಗ್ಸ್‌ಗಳಲ್ಲಿ ಕೊಹ್ಲಿ, 54, 56, 85, 54 ಮತ್ತು 84, ರನ್ ಗಳಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ಕೊನೆಯ ಐದು ಇನ್ನಿಂಗ್ಸ್‌ಳಲ್ಲಿ 104, 46, 21, 89 ಮತ್ತು 63 ಗಳಿಸಿದ್ದಾರೆ.