ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mithali Raj: ವಿಶಾಖಪಟ್ಟಣ ಸ್ಟೇಡಿಯಂ ಸ್ಟ್ಯಾಂಡ್‌ಗಳಿಗೆ ಮಿಥಾಲಿ ರಾಜ್, ರವಿ ಕಲ್ಪನಾ ಹೆಸರಿಡಲು ನಿರ್ಧಾರ

ಮಿಥಾಲಿ ರಾಜ್ ಅವರ ವೃತ್ತಿಜೀವನವು ಗಮನಾರ್ಹ ಸಾಧನೆಗಳ ಸರಣಿಯಿಂದ ಗುರುತಿಸಲ್ಪಟ್ಟಿದೆ. 232 ಏಕದಿನ ಪಂದ್ಯಗಳಲ್ಲಿ 50.68 ಸರಾಸರಿಯಲ್ಲಿ 7,805 ರನ್ ಗಳಿಸಿದ ನಂತರ ಅವರು 2022 ರಲ್ಲಿ ನಿವೃತ್ತರಾದರು. ಇದರಲ್ಲಿ ಏಳು ಶತಕಗಳು ಸೇರಿವೆ. ಇದಲ್ಲದೆ, ಅವರು 89 ಟಿ20ಗಳಲ್ಲಿ 17 ಅರ್ಧಶತಕಗಳೊಂದಿಗೆ 2,364 ರನ್ ಮತ್ತು 12 ಟೆಸ್ಟ್‌ಗಳಲ್ಲಿ 43.68 ಸರಾಸರಿಯಲ್ಲಿ 699 ರನ್ ಗಳಿಸಿದ್ದಾರೆ.

ಅ.12ರಂದು ವೈಜಾಗ್ ಸ್ಟೇಡಿಯಂನಲ್ಲಿ ಮಿಥಾಲಿ ಸ್ಟ್ಯಾಂಡ್ ಅನಾವರಣ

-

Abhilash BC Abhilash BC Oct 7, 2025 12:20 PM

ಹೈದರಾಬಾದ್: ಐಸಿಸಿ ಮಹಿಳೆಯರ ಕ್ರಿಕೆಟ್ ವಿಶ್ವಕಪ್‌ನಲ್ಲಿ(Women's World Cup) ಭಾರತ ತಂಡವು ಅ.12ರಂದು ಆಸ್ಟ್ರೇಲಿಯ ತಂಡವನ್ನು ಎದುರಿಸಲಿದೆ. ಅದೇ ದಿನ ವಿಶಾಖಪಟ್ಟಣಂನ ಎಸಿಎ-ವಿಡಿಸಿಎ ಕ್ರೀಡಾಂಗಣದ(Visakhapatnam cricket stadium) ಸ್ಟ್ಯಾಂಡ್‌ಗೆ ದಿಗ್ಗಜ ಆಟಗಾರ್ತಿಯರಾದ ಮಿಥಾಲಿ ರಾಜ್(Mithali Raj) ಮತ್ತು ರವಿ ಕಲ್ಪನಾ(Raavi Kalpana) ಅವರ ಹೆಸರನ್ನು ಇಟ್ಟು ಗೌರವಿಸಲು ನಿರ್ಧರಿಸಲಾಗಿದೆ.

2025ರ ಆಗಸ್ಟ್‌ನಲ್ಲಿ ‘ಬ್ರೇಕಿಂಗ್ ಬೌಂಡರೀಸ್’ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಭಾರತ ತಂಡದ ಆರಂಭಿಕ ಆಟಗಾರ್ತಿ ಸ್ಮತಿ ಮಂಧಾನ ಸ್ಟೇಡಿಯಂನ ಸ್ಟ್ಯಾಂಡ್‌ಗಳಿಗೆ ಇಬ್ಬರು ಪ್ರಮುಖ ಮಹಿಳಾ ಕ್ರಿಕೆಟಿಗರ ಹೆಸರನ್ನು ಇಡುವಂತೆ ಆಂಧ್ರ ಪ್ರದೇಶದ ಸಚಿವ ನಾರಾ ಲೋಕೇಶ್‌ಗೆ ಮನವಿ ಮಾಡಿದ್ದರು.

ಸ್ಮತಿ ಮಂಧಾನ ಮನವಿಯಂತೆ, ಲೋಕೇಶ್‌ ಅವರು ಆಂಧ್ರ ಕ್ರಿಕೆಟ್ ಅಸೋಸಿಯೇಶನ್ ಸಂಪರ್ಕಿಸಿ ಮಿಥಾಲಿ ಮತ್ತು ಕಲ್ಪನಾ ಅವರ ಹೆಸರು ಇಡುವ ಕುರಿತು ಮಾತುಕತೆ ನಡೆಸಿದ್ದರು. ಇದಕ್ಕೆ ಒಪ್ಪಿಗೆ ಸೂಚಿಸಿದ ಆಂಧ್ರ ಕ್ರಿಕೆಟ್ ಅಸೋಸಿಯೇಶನ್, ಇದೀಗ ಎಸಿಎ-ವಿಡಿಸಿಎ ಸ್ಟೇಡಿಯಂನ ಎರಡು ಸ್ಟ್ಯಾಂಡ್‌ಗಳಿಗೆ ದಿಗ್ಗಜ ಆಟಗಾರ್ತಿಯರ ಹೆಸರು ಇಡಲು ಮುಂದಾಗಿದೆ.

ಮಿಥಾಲಿ ರಾಜ್ ಅವರ ವೃತ್ತಿಜೀವನವು ಗಮನಾರ್ಹ ಸಾಧನೆಗಳ ಸರಣಿಯಿಂದ ಗುರುತಿಸಲ್ಪಟ್ಟಿದೆ. 232 ಏಕದಿನ ಪಂದ್ಯಗಳಲ್ಲಿ 50.68 ಸರಾಸರಿಯಲ್ಲಿ 7,805 ರನ್ ಗಳಿಸಿದ ನಂತರ ಅವರು 2022 ರಲ್ಲಿ ನಿವೃತ್ತರಾದರು. ಇದರಲ್ಲಿ ಏಳು ಶತಕಗಳು ಸೇರಿವೆ. ಇದಲ್ಲದೆ, ಅವರು 89 ಟಿ20ಗಳಲ್ಲಿ 17 ಅರ್ಧಶತಕಗಳೊಂದಿಗೆ 2,364 ರನ್ ಮತ್ತು 12 ಟೆಸ್ಟ್‌ಗಳಲ್ಲಿ 43.68 ಸರಾಸರಿಯಲ್ಲಿ 699 ರನ್ ಗಳಿಸಿದ್ದಾರೆ.

ಇದನ್ನೂ ಓದಿ Abhishek Sharma: ಏಷ್ಯಾಕಪ್‌ನಲ್ಲಿ ಕಾರು ಗೆದ್ದರೂ ಭಾರತದಲ್ಲಿ ಓಡಿಸುವಂತಿಲ್ಲ ಅಭಿಷೇಕ್ ಶರ್ಮಾ; ಕಾರಣ ಏನು?

2015 ರಿಂದ 2016 ರವರೆಗೆ ಏಳು ಏಕದಿನ ಪಂದ್ಯಗಳ ಅಂತರರಾಷ್ಟ್ರೀಯ ಪಂದ್ಯ ಆಡಿದ್ದ ರವಿ ಕಲ್ಪನಾ, ಆಂಧ್ರಪ್ರದೇಶ ಕ್ರಿಕೆಟ್‌ನಲ್ಲಿ ಪ್ರಭಾವಶಾಲಿ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಕಲ್ಪನಾ ಅವರ ಪ್ರಯಾಣವು ಅರುಂಧತಿ ರೆಡ್ಡಿ, ಎಸ್ ಮೇಘನಾ ಮತ್ತು ಎನ್ ಶ್ರೀ ಚರಣಿ ಅವರಂತಹ ಇತರ ಪ್ರಾದೇಶಿಕ ಪ್ರತಿಭೆಗಳಿಗೆ ಸ್ಫೂರ್ತಿ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ರಾಷ್ಟ್ರೀಯ ತಂಡಕ್ಕೆ ಅವರ ಪ್ರವೇಶ ಈ ಪ್ರದೇಶದ ಅನೇಕ ಯುವತಿಯರನ್ನು ಕ್ರೀಡೆಯಲ್ಲಿ ಗಂಭೀರವಾಗಿ ತೊಡಗಿಕೊಳ್ಳಲು ಪ್ರೋತ್ಸಾಹಿಸಿದೆ.