ವಿಶ್ವ ಪ್ಯಾರಾ ಅಥ್ಲೆಟಿಕ್ಸ್: ಬೆಳ್ಳಿ ಗೆದ್ದ ಯೋಗೇಶ್ ಕಥುನಿಯಾ
ಬ್ರೆಜಿಲ್‌ನ ಕ್ಲೌಡಿನಿ ಬಟಿಸ್ಟಾ ಚಿನ್ನದ ಪದಕ ಜಯಿಸಿದರು. ಅವರು ತಮ್ಮ ಮೂರನೇ ಎಸೆತದಲ್ಲಿ 45.67 ಮೀ. ಎಸೆದು ಚಿನ್ನ ಗೆದ್ದರು. ಈ ಮೂಲಕ ಕಳೆದ ಮೂರು ಪ್ಯಾರಾಲಿಂಪಿಕ್ ಕ್ರೀಡಾಕೂಟಗಳಲ್ಲಿಯೂ ಚಿನ್ನ ಗೆದ್ದ ಸಾಧನೆಗೈದರು. ಗ್ರೀಸ್‌ನ ಕಾನ್‌ಸ್ಟಾಂಟಿನೋಸ್ ಟ್ಝೌನಿಸ್ 39.97 ಮೀ ದೂರ ಎಸೆದು ಕಂಚಿನ ಪದಕ ಗೆದ್ದರು.

-

ನವದೆಹಲಿ: ಇಲ್ಲಿನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ(World Para Athletics Championships) ಮಂಗಳವಾರ ನಡೆದ ಪುರುಷರ ಡಿಸ್ಕಸ್ ಥ್ರೋ F56 ಸ್ಪರ್ಧೆಯಲ್ಲಿ ಭಾರತೀಯ ಪ್ಯಾರಾ ಅಥ್ಲೀಟ್ ಯೋಗೇಶ್ ಕಥುನಿಯಾ(Yogesh Kathuniya) ಬೆಳ್ಳಿ ಪದಕ ಗೆದ್ದರು.
ಯೋಗೇಶ್ ತಮ್ಮ ಎರಡನೇ ಪ್ರಯತ್ನದಲ್ಲಿ 42.49 ಮೀ ದೂರ ಎಸೆಯುವಲ್ಲಿ ಯಶಸ್ವಿಯಾಗುವ ಮೂಲಕ ಬೆಳ್ಳಿಗೆ ತೃಪ್ತಿಪಟ್ಟರು. ಇದು ಈ ಕೂಟದಲ್ಲಿ ಯೋಗೇಶ್‌ಗೆ ಒಲಿದ ಸತತ ಮೂರನೇ ಬೆಳ್ಳಿ ಪದಕವಾಗಿದೆ. 2023 ಮತ್ತು 2024 ರಲ್ಲಿ ಫ್ರಾನ್ಸ್ ಮತ್ತು ಜಪಾನ್‌ನಲ್ಲಿ ನಡೆದ ಆವೃತ್ತಿಗಳಲ್ಲಿಯೂ ಅವರು ಬೆಳ್ಳಿ ಗೆದ್ದಿದ್ದರು.
ಬ್ರೆಜಿಲ್‌ನ ಕ್ಲೌಡಿನಿ ಬಟಿಸ್ಟಾ ಚಿನ್ನದ ಪದಕ ಜಯಿಸಿದರು. ಅವರು ತಮ್ಮ ಮೂರನೇ ಎಸೆತದಲ್ಲಿ 45.67 ಮೀ. ಎಸೆದು ಚಿನ್ನ ಗೆದ್ದರು. ಈ ಮೂಲಕ ಕಳೆದ ಮೂರು ಪ್ಯಾರಾಲಿಂಪಿಕ್ ಕ್ರೀಡಾಕೂಟಗಳಲ್ಲಿಯೂ ಚಿನ್ನ ಗೆದ್ದ ಸಾಧನೆಗೈದರು. ಗ್ರೀಸ್‌ನ ಕಾನ್‌ಸ್ಟಾಂಟಿನೋಸ್ ಟ್ಝೌನಿಸ್ 39.97 ಮೀ ದೂರ ಎಸೆದು ಕಂಚಿನ ಪದಕ ಗೆದ್ದರು.
F56 ವಿಭಾಗವು ವೀಲ್ ಚೇರ್‌ನಲ್ಲಿ ಕುಳಿತು ಅಂಗಚ್ಛೇದನ ಮತ್ತು ಬೆನ್ನುಹುರಿಯ ಗಾಯಗಳನ್ನು ಹೊಂದಿರುವವರು ಸ್ಪರ್ಧಿಸುತ್ತಾರೆ. ಇದುವರೆಗೂ ಭಾರತ ಆರು ಪದಕ ಜಯಿಸಿದೆ. ಎರಡು ಚಿನ್ನ, ಮೂರು ಬೆಳ್ಳಿ ಮತ್ತು ಒಂದು ಕಂಚು.
ಇದನ್ನೂ ಓದಿ ವಿಶ್ವ ಪ್ಯಾರಾ ಆರ್ಚರಿ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಶೀತಲ್ ದೇವಿ!