ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bihar Election

Bihar Elections

ನವೆಂಬರ್ 20ರಂದು ಬಿಹಾರದಲ್ಲಿ ಎನ್ ಡಿಎ ಪ್ರಮಾಣ ವಚನ, ಪ್ರಧಾನಿ ಮೋದಿ ಭಾಗವಹಿಸುವ ನಿರೀಕ್ಷೆ

ನವೆಂಬರ್ 20ರಂದು ಬಿಹಾರದಲ್ಲಿ ಪ್ರಮಾಣವಚನ

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ 243 ಸ್ಥಾನಗಳಲ್ಲಿ 202 ಸ್ಥಾನಗಳನ್ನು ಗೆದ್ದಿರುವ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ ಡಿಎ) ನಾಯಕರು ನವೆಂಬರ್ 20ರಂದು ಗಾಂಧಿ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಈ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವ ನಿರೀಕ್ಷೆ ಇದೆ.

ರೋಹಿಣಿ ಬಳಿಕ ಮತ್ತೆ ಮೂವರು ಪುತ್ರಿಯರು ಲಾಲೂ ಮನೆಯಿಂದ ಹೊರಗೆ

ಲಾಲೂ ಮನೆಯಿಂದ ಮೂವರು ಪುತ್ರಿಯರು ಹೊರಕ್ಕೆ

ಬಿಹಾರ ವಿಧಾನ ಸಭಾ ಚುನಾವಣೆಯಲ್ಲಿ ಸೋಲು ಆರ್ ಜೆಡಿ ಮುಖ್ಯಸ್ಥನ ಕುಟುಂಬದ ಮೇಲೆ ತೀವ್ರ ಪರಿಣಾಮ ಬೀರಿದೆ. ಶನಿವಾರವಷ್ಟೇ ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ರೋಹಿಣಿ ಆಚಾರ್ಯ ಅವರು ರಾಜಕೀಯ ಮತ್ತು ಕುಟುಂಬವನ್ನು ತ್ಯಜಿಸುವುದಾಗಿ ಘೋಷಿಸಿದ್ದರು. ಇದೀಗ ಅವರ ಮತ್ತೆ ಮೂವರು ಪುತ್ರಿಯರು ಮನೆಯಿಂದ ಹೊರಗೆ ನಡೆದಿದ್ದಾರೆ. ಇದು ಅವರ ಕುಟುಂಬ ಕಲಹದ ಪರಿಣಾಮ ಎನ್ನಲಾಗುತ್ತಿದೆ.

ಬಿಹಾರದಲ್ಲಿ ಅಧಿಕಾರಕ್ಕೆ ಬರಲು ಎನ್‌ಡಿಎ ಅಡ್ಡ ದಾರಿ ಹಿಡಿಯಿತಾ? ವಿಶ್ವ ಬ್ಯಾಂಕ್‌ನ 14,000 ಕೋಟಿ ರೂ. ದುರ್ಬಳಕೆ ಆರೋಪ

ಬಿಹಾರದಲ್ಲಿ ಅಧಿಕಾರಕ್ಕೆ ಬರಲು ಅಡ್ಡ ದಾರಿ ಹಿಡಿದ ಎನ್‌ಡಿಎ?

Pavan Verma: ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರ ಬಂದಿದ್ದು ಎನ್‌ಡಿಎ 202 ಕ್ಷೇತ್ರಗಳಲ್ಲಿ ಬರ್ಜರಿ ಬಹುಮತ ಪಡೆದು ಅಧಿಕಾರಕ್ಕೆ ಮರಳಿದೆ. ಈ ಮಧ್ಯೆ ಕಾಂಗ್ರೆಸ್‌ ವೋಟ್‌ ಚೋರಿ ಆರೋಪ ಮಾಡಿದೆ. ಇತ್ತ ಜನ ಸುರಾಜ್‌ ಪಾರ್ಟಿ ವಿಶ್ವ ಬ್ಯಾಂಕ್‌ ಅನುದಾನವನ್ನು ಕೇಂದ್ರ ಬಳಸಿದೆ ಎಂದು ದೂರಿದೆ.

Bihar Assembly Election Results 2025: ಬಿಹಾರ ಚುನಾವಣೆ ಟ್ರೆಂಡ್‌ ನಿಖರವಾಗಿ ಗುರುತಿಸಿದ್ದ ಸಮೀಕ್ಷೆಗಳು

ಬಿಹಾರ ಚುನಾವಣೆ ಟ್ರೆಂಡ್‌ ನಿಖರವಾಗಿ ಗುರುತಿಸಿದ್ದ ಸಮೀಕ್ಷೆಗಳು

ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎಗೆ ಬಹುಮತ ಗಳಿಸಲಿದೆ ಎಂದು ಸಮೀಕ್ಷೆಯಂತೆಯೇ ಫಲಿತಾಂಶ ಹೊರ ಬಿದ್ದಿದೆ. ಬಿಜೆಪಿ-ಜೆಡಿಯು ನೇತೃತ್ವದಲ್ಲಿ ಎನ್‌ಡಿಎ ಒಟ್ಟು 202 ಸ್ಥಾನಗಳಲ್ಲಿ ಜಯ ಗಳಿಸಿ. ಕಾಮಾಖ್ಯಾ ಅನಾಲಿಟಿಕ್ಸ್‌ 167-187 ಸೀಟುಗಳನ್ನು ಎನ್‌ಡಿಎ ಗೆಲ್ಲಲಿದೆ ಎಂದು ತಿಳಿಸಿತ್ತು.

Bihar Election 2025: ಆರ್‌ಜೆಡಿ ಸೋಲಿನ ಬಳಿಕ ರಾಜಕೀಯ, ಕುಟುಂಬ ತೊರೆದ ಲಾಲು ಪ್ರಸಾದ್ ಯಾದವ್ ಪುತ್ರಿ

ಆರ್‌ಜೆಡಿ ಸೋಲಿನ ಬಳಿಕ ಕುಟುಂಬ ತೊರೆದ ರೋಹಿಣಿ

ಬಿಹಾರ ವಿಧಾನ ಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಪಕ್ಷದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ರೋಹಿಣಿ ಆಚಾರ್ಯ ಅವರು ರಾಜಕೀಯವನ್ನು ತೊರೆದಿದ್ದು, ಬಳಿಕ ಇದೀಗ ಕುಟುಂಬವನ್ನು ಕೂಡ ತೊರೆಯುವುದಾಗಿ ಘೋಷಿಸಿದ್ದಾರೆ. ಪಕ್ಷದ ಸೋಲಿನ ಸಂಪೂರ್ಣ ಹೊಣೆಯನ್ನು ತಾವು ಹೊತ್ತುಕೊಂಡಿರುವುದಾಗಿ ಅವರು ತಿಳಿಸಿದ್ದಾರೆ.

Bihar Election 2025: ಬಿಹಾರದಲ್ಲಿ ಗೆಲುವಿನ ಮರುದಿನವೇ ಬಿಜೆಪಿಯಿಂದ ಮೂವರು  ಅಮಾನತು

ಬಿಹಾರದಲ್ಲಿ ಬಿಜೆಪಿಯ ಮೂವರು ವರಿಷ್ಠರು ಅಮಾನತು

ಬಿಹಾರದಲ್ಲಿ ಬಿಜೆಪಿ ಗೆಲುವಿನ ಸಂಭ್ರಮದ ನಡುವೆಯೇ ಮೂವರನ್ನು ಅಮಾನತುಗೊಳಿಸಿದೆ. ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಮಾಜಿ ಕೇಂದ್ರ ಸಚಿವ ಆರ್.ಕೆ. ಸಿಂಗ್, ಎಂಎಲ್‌ಸಿ ಅಶೋಕ್ ಅಗರ್ವಾಲ್ ಮತ್ತು ಕಟಿಹಾರ್ ಮೇಯರ್ ಉಷಾ ಅಗರ್ವಾಲ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಈ ಕುರಿತು ಪತ್ರ ಬರೆದಿರುವ ಬಿಜೆಪಿ ಇವರಿಬ್ಬರ ಚಟುವಟಿಕೆಗಳು ಪಕ್ಷಕ್ಕೆ ವಿರುದ್ಧವಾಗಿದ್ದು ಅಶಿಸ್ತು ಎಂದು ಪರಿಗಣಿಸಿರುವುದಾಗಿ ಹೇಳಿದೆ.

ಕಾಂಗ್ರೆಸ್‌ ಎಂದರೆ ಎಂಎಂಸಿ-ಮುಸ್ಲಿಂ ಲೀಗ್‌ ಮಾವೋಯಿಸ್ಟ್‌ ಕಾಂಗ್ರೆಸ್‌: ಬಿಹಾರ ವಿಧಾನಸಭೆ ಫಲಿತಾಂಶ ಬೆನ್ನಲ್ಲೇ ಮೋದಿ ಹೊಸ ವ್ಯಾಖ್ಯಾನ

ಬಿಹಾರ ವಿಧಾನಸಭೆ ಫಲಿತಾಂಶ ಬೆನ್ನಲ್ಲೇ ಕಾಂಗ್ರೆಸ್‌ ವಿರುದ್ಧ ಮೋದಿ ವಾಗ್ದಾಳಿ

Narendra Modi: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ 202ಕ್ಕಿಂತ ಅಧಿಕ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ ಹಿನ್ನೆಲೆಯಲ್ಲಿ ದೆಹಲಿಯ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಸಂಭ್ರಮಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ಈ ವೇಳೆ ಕಾಂಗ್ರೆಸ್‌ ನೇತೃತ್ವದ ಮಹಘಟಬಂಧನ್‌ ಮೈತ್ರಿಕೂಟದ ವಿರುದ್ದ ವಾಗ್ದಾಳಿ ನಡೆಸಿದರು.

Tejashwi Yadav: ಕೊನೆಗೂ ಗೆಲುವಿನ ನಿಟ್ಟುಸಿರು ಬಿಟ್ಟ ತೇಜಸ್ವಿ ಯಾದವ್‌; ಬಿಜೆಪಿ ವಿರುದ್ಧ 14 ಸಾವಿರ ಮತಗಳಿಂದ ಜಯ

ಬಿಜೆಪಿ ಅಭ್ಯರ್ಥಿ ವಿರುದ್ಧ ಗೆದ್ದ ಆರ್‌ಜೆಡಿಯ ತೇಜಸ್ವಿ ಯಾದವ್‌

Bihar Election Results 2025: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಭರ್ಜರಿ ಜಯದತ್ತ ದಾಪುಗಾಲು ಇರಿಸಿದ್ದು, ಮಹಾಘಟಬಂಧನ್‌ ಸೋಲಿನತ್ತ ಮುಖ ಮಾಡಿದೆ. 243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಮ್ಯಾಜಿಕ್‌ ಸಂಖ್ಯೆ 122. ಎನ್‌ಡಿಎ ಈಗಾಗಲೇ 202 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಈ ಮಧ್ಯೆ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಕೊನೆಗೂ ಜಯಗಳಿಸಿದ್ದು, ಕಾರ್ಯಕರ್ತರಿಗೆ ಕೊಂಚ ಸಮಾಧಾನ ತಂದಿದೆ.

Bihar Election 2025 Results:  ಬಿಹಾರದಲ್ಲಿ ಕಾಂಗ್ರೆಸ್‌ಗೆ ತೀವ್ರ ಮುಖ ಭಂಗ: ರಾಹುಲ್ ಗಾಂಧಿ ನಾಪತ್ತೆ

ಕಾಂಗ್ರೆಸ್ ಗೆ ಸೋಲು: ರಾಹುಲ್ ಗಾಂಧಿಯನ್ನು ಹುಡುಕಿಕೊಡಿ

ಬಿಹಾರದಲ್ಲಿ ತೀವ್ರ ಮುಖ ಭಂಗ ಅನುಭವಿಸಿರುವ ಕಾಂಗ್ರೆಸಿಗರು ಈಗ ನಾಯಕ ರಾಹುಲ್ ಗಾಂಧಿ ಅವರನ್ನು ಹುಡುಕುತ್ತಿದ್ದಾರೆ. ಬಿಹಾರದಲ್ಲಿ ಎನ್‌ಡಿಎಯ ಪ್ರಚಾರ ಆರಂಭಿಸಿದ ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನಾಪತ್ತೆಯಾಗಿದ್ದರು. ಇದು ಚುನಾವಣಾ ಫಲಿತಾಂಶದ ಮೇಲೆ ನೇರ ಪರಿಣಾಮ ಬಿದ್ದಿದೆ ಎನ್ನುತ್ತಿದ್ದಾರೆ ಅನುಭವಿ ನಾಯಕರು.

Maithili Thakur: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಜೆನ್‌ ಝಿ ಸಂಚಲನ; ಬಿಜೆಪಿಯ 25 ವರ್ಷದ ಗಾಯಕಿ ಮೈಥಿಲಿ ಠಾಕೂರ್‌ಗೆ ಭರ್ಜರಿ ಜಯ

ಬಿಹಾರ ವಿಧಾನಸಭಾ ಚುನಾವಣೆ; ಗಾಯಕಿ ಮೈಥಿಲಿ ಠಾಕೂರ್‌ಗೆ ಭರ್ಜರಿ ಜಯ

Bihar Election 2025 Results: ದೇಶದ ಕೂತೂಹಲ ಕೆರಳಿಸಿದ ಬಿಹಾರ ವಿಧಾನಸಭಾ ಚುನಾವಣೆಯ ಪಲಿತಾಂಶ ಹೊರ ಬೀಳುತ್ತಿದ್ದು, ಬಿಜೆಪಿ ಅಭ್ಯರ್ಥಿ 25 ವರ್ಷದ ಗಾಯಕಿ ಮೈಥಿಲಿ ಠಾಕೂರ್‌ ಬರೋಬ್ಬರಿ 12 ಸಾವಿರ ಮತಗಳಿಂದ ಜಯ ಗಳಿಸಿದ್ದಾರೆ. ಆ ಮೂಲಕ ಬಿಹಾರದ ಅತೀ ಕಿರಿಯ ಶಾಸಕಿ ಎನಿಸಿಕೊಂಡಿದ್ದಾರೆ. ಅಲಿನಗರ್‌ ಕ್ಷೇತ್ರದಿಂದ ಕಣಕ್ಕಿಳಿದ ಅವರು ಮೊದಲ ಪ್ರಯತ್ನದಲ್ಲೇ ತಮ್ಮ ನೇರ ಪ್ರತಿಸ್ಪರ್ಧಿ ಆರ್‌ಜೆಡಿಯ ಬಿನೋದ್‌ ಮಿಶ್ರಾ ಅವರನ್ನು ಸೋಲಿಸಿದ್ದಾರೆ.

Nitish Kumar: ನಿತೀಶ್ ಕುಮಾರ್ ಅವರ ರಾಜಕೀಯ ರಂಗ ಪ್ರವೇಶ ಹೇಗಿತ್ತು?

ನಿತೀಶ್ ಕುಮಾರ್ ರಾಜಕೀಯ ಜೀವನದ ಬಗ್ಗೆ ನಿಮಗೆಷ್ಟು ಗೊತ್ತಾ..?

Nitish Kumar Politics: ನಿತೀಶ್ ಕುಮಾರ್ ಕಳೆದ 24 ವರ್ಷದಲ್ಲಿ 9 ಬಾರಿ ಸಿಎಂ ಆಗಿದ್ದಾರೆ. 2000ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿ ಆಗಿದ್ದರು. ಕಳೆದ 19 ವರ್ಷದಲ್ಲಿ 18 ವರ್ಷ ಅವರು ಸಿಎಂ ಸ್ಥಾನದಲ್ಲಿದ್ದಾರೆ. ಬಿಹಾರದ ಮಾಸ್ಟರ್ ಮೈಂಡ್ ಆದ ನಿತೀಶ್ ಕುಮಾರ್ ಅವರ ರಾಜಕೀಯ ಜೀವನ ಪ್ರಾರಂಭವಾಗಿದ್ದೇಗೆ...? ಅದಕ್ಕೆ ಪ್ರೇರಣೆ ಏನು..? ಎಂಬಿತ್ಯಾದಿ ಮಾಹಿತಿ ಇಲ್ಲಿದೆ

Bihar Election 2025 Results: ಚಿರಾಗ್‌ ಪಾಸ್ವಾನ್:‌ ಎನ್‌ಡಿಎ ಗೆಲುವಿನ ಆಕಾಶದಲ್ಲಿ ಮೂಡಿಬಂದ ಯುವ ತಾರೆ!

ಚಿರಾಗ್‌ ಪಾಸ್ವಾನ್:‌ ಎನ್‌ಡಿಎ ಗೆಲುವಿನ ಆಕಾಶದಲ್ಲಿ ಮೂಡಿಬಂದ ಯುವ ತಾರೆ!

Chirag Paswan: 2020ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ 130 ಸೀಟ್‌ಗಳಲ್ಲಿ ಕೇವಲ ಒಂದನ್ನು ಗೆದ್ದಿದ್ದರು ಚಿರಾಗ್.‌ ಜೆಡಿಯುವಿನ ಸಾಕಷ್ಟು ಮತಗಳನ್ನು ಕಸಿದು ಹಾನಿ ಎಸಗಿದ್ದರೂ, ಅವು ಸೀಟುಗಳಾಗಿ ಬಂದಿರಲಿಲ್ಲ. ಪರಿಸ್ಥಿತಿಯನ್ನು ಇನ್ನಷ್ಟು ಕೆಡಿಸುವಂತೆ, 2021ರಲ್ಲಿ ಚಿರಾಗ್‌ ಚಿಕ್ಕಪ್ಪ ಪಶುಪತಿ ಕುಮಾರ್‌ ಪರಸ್‌ ಎಲ್‌ಜೆಪಿಯ ಇನ್ನೊಂದು ಬಣವನ್ನು ತನ್ನ ಜೊತೆಗೆ ಕೊಂಡೊಯ್ದಿದ್ದರು. ಈ ಮನುಷ್ಯನಿಗೆ ತಂದೆಯ ಲೆಗಸಿಯನ್ನು ಮುಂದುವರಿಸುವ ಸಾಮರ್ಥ್ಯ ಇಲ್ಲವೆಂದೇ ತಜ್ಞರು ಭಾವಿಸಿದ್ದರು. ತಜ್ಞರ ಅನಿಸಿಕೆಗಳನ್ನು ಚಿರಾಗ್‌ ಇದೀಗ ಸುಳ್ಳು ಮಾಡಿದ್ದಾರೆ.

Bihar Election 2025 Results: ಮತ ಚೋರಿ ಎಂದವರಿಗೆ ಬಿಹಾರದಲ್ಲಿ ತಕ್ಕ ಪಾಠ: ಬಿ.ವೈ.ವಿಜಯೇಂದ್ರ

ಮತ ಚೋರಿ ಹೆಸರಲ್ಲಿ ಅಪಪ್ರಚಾರ ಮಾಡಿದವರಿಗೆ ತಕ್ಕ ಪಾಠ: ವಿಜಯೇಂದ್ರ

BY Vijayendra: ಬಿಹಾರ ಚುನಾವಣೆಯಲ್ಲಿ ಮತಚೋರಿ ಹೆಸರಿನಲ್ಲಿ ಅಪಪ್ರಚಾರ ನಡೆಸಿ ರಾಜಕೀಯ ಚೋರತನ ಮಾಡಲು ಹೊರಟ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್‌ಗೆ ಬಿಹಾರದ ಮತದಾರರು ತಕ್ಕ ಪಾಠ ಕಲಿಸಿ, ಬಿಹಾರದ ರಾಜಕೀಯ ಭೂಪಟದಲ್ಲಿ ಕಾಂಗ್ರೆಸ್‌ಗೆ ಅಸ್ತಿತ್ವಕ್ಕಾಗಿ ತಿಣುಕಾಡಬೇಕಾದ ಸ್ಥಿತಿಗೆ ತಳ್ಳಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.

Bihar Election 2025 Results: ಗೆದ್ದರೆ ಮಾತ್ರ ಮಾಸ್ಕ್‌ ತೆಗೆಯುವೆ ಎಂದಿದ್ದ ಪುಷ್ಪಮ್‌ ಪ್ರಿಯಾಗೆ ಮುಖಭಂಗ

ಮಾಸ್ಕ್‌ನಿಂದಲೇ ಫೇಮಸ್‌ ಆಗಿದ್ದ ಪುಷ್ಪಮ್ ಪ್ರಿಯಾ ಅವರ ರಿಸಲ್ಟ್‌ ಏನಾಯ್ತು?

ಮುಖ ಮುಚ್ಚಿಕೊಂಡು ಸಂಪೂರ್ಣ ಕಪ್ಪು ಧಿರಿಸಿನಲ್ಲಿ ನಾಮಪತ್ರ ಸಲ್ಲಿಸಲು ಬಂದು ಎಲ್ಲರ ಗಮನ ಸೆಳೆದಿದ್ದ ಮಾಜಿ ಶಾಸಕರ ಪುತ್ರಿ ಪುಷ್ಪಮ್ ಪ್ರಿಯಾ ಚೌಧರಿ (Pushpam Priya Choudhary) ಚುನಾವಣೆಯಲ್ಲಿ ಗೆದ್ದ ಮೇಲೆಯೇ ಮಾಸ್ಕ್‌ ತೆಗೆಯುವ ಪ್ರತಿಜ್ಞೆ ಮಾಡಿದ್ದರು. ಆದರೆ ಇದೀಗ ಅವರು ಚುನಾವಣೆಯಲ್ಲಿ 81,000 ಕ್ಕೂ ಹೆಚ್ಚು ಮತಗಳಿಂದ ಸೋತಿದ್ದಾರೆ. ಹೀಗಾಗಿ ಅವರು ತಮ್ಮ ಮಾಸ್ಕ್‌ ಅನ್ನು ತೆಗೆಯುತ್ತಾರೆಯೇ ಇಲ್ಲವೇ ಎನ್ನುವ ಚರ್ಚೆಗಳು ಶುರುವಾಗಿದೆ.

Bihar Election Result 2025: ಬಿಹಾರದಲ್ಲಿ ಹೊಸ ʼMEʼ ಅಲೆ; NDA ಭರ್ಜರಿ ಗೆಲುವಿನ ಹಿಂದಿದೆಯಾ ಅದೊಂದು ರಹಸ್ಯ

NDA ಭರ್ಜರಿ ಗೆಲುವಿನ ಹಿಂದಿದೆಯಾ ಅದೊಂದು ರಹಸ್ಯ!

ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಎನ್‌ಡಿಎ ಮೈತ್ರಿಕೂಟವು ಭರ್ಜರಿ ಗೆಲುವಿನತ್ತ ಮುನ್ನುಗ್ಗುತ್ತಿದೆ. ಎನ್‌ಡಿಎ 200 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಮಹಾಘಟಬಂಧನ್‌ಗೆ ಹಿನ್ನಡೆಯಾಗಿದ್ದು, ಕಾಂಗ್ರೆಸ್ ಮತ್ತು ಎಸ್‌ಪಿ ನಾಯಕರು ಚುನಾವಣಾ ಆಯೋಗದ ಮೇಲೆ ಮತ್ತು ಮತದಾರರಪಟ್ಟಿ 'ವಿಶೇಷ ತೀವ್ರ ಪರಿಷ್ಕರಣೆ' (ಎಸ್‌ಐಆರ್ ) ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ.

Chirag Paswan: ಬಿಹಾರದಲ್ಲಿ ಎನ್‌ಡಿಎಗೆ ಬಹುಮತ; ಚಿರಾಗ್‌ ಪಾಸ್ವಾನ್‌ಗೆ ಉಪಮುಖ್ಯಮಂತ್ರಿ ಪಟ್ಟ?

ಬಿಹಾರದ ಮುಂದಿನ ಉಪಮುಖ್ಯಮಂತ್ರಿ ಚಿರಾಗ್‌ ಪಾಸ್ವಾನ್‌?

Bihar Election 2025 Results: ದೇಶದ ಗಮನ ಸೆಳೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ನಿರೀಕ್ಷೆಯಂತೆ ಎನ್‌ಡಿಎ ಭರ್ಜರಿ ಬಹುಮತದತ್ತ ಸಾಗಿದೆ. ಚುನಾವಣೋತ್ತರ ಸಮೀಕ್ಷೆಯ ಭವಿಷ್ಯದಂತೆ ಎನ್‌ಡಿಎ ಮ್ಯಾಜಿಕ್‌ ಮಾಡುವಲ್ಲಿ ಸಫಲವಾಗಿದ್ದು, ಈಗಾಗಲೇ 202 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಕೇಂದ್ರ ಸಚಿವ, ಯುವ ನಾಯಕ ಚಿರಾಗ್‌ ಪಾಸ್ವಾನ್‌ ಅವರ ಲೋಕಜನಶಕ್ತಿ ಪಾರ್ಟಿ (ರಾಮ್‌ ವಿಲಾಸ್)‌ ಬಿಹಾರದ 4ನೇ ಅತೀ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದು ಉಪಮುಖ್ಯಮಂತ್ರಿ ಸ್ಥಾನಕ್ಕೆ ಬೇಡಿಕೆ ಸಲ್ಲಿಸುವ ಸಾಧ್ಯತೆ ಇದೆ.

Bihar Election 2025 Results: ಸೋಲಿನ ಶತಕದೆಡೆಗೆ ಹೆಜ್ಜೆ ಹಾಕುತ್ತಿರುವ ರಾಹುಲ್ ಗಾಂಧಿಗೆ ಅಭಿನಂದನೆ: ಆರ್‌.ಅಶೋಕ್‌ ವ್ಯಂಗ್ಯ

ಸೋಲಿನ ಶತಕದೆಡೆಗೆ ಹೆಜ್ಜೆ ಹಾಕುತ್ತಿರುವ ರಾಹುಲ್ ಗಾಂಧಿಗೆ ಅಭಿನಂದನೆ

R Ashok: ಬಿಹಾರದ ಪ್ರಜ್ಞಾವಂತ ಮತದಾರರು ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿ ಅವರ ʼವೋಟ್ ಚೋರಿʼ ಪ್ರಹಸನವನ್ನು ಸಾರಾಸಗಟಾಗಿ ತಿರಸ್ಕರಿಸಿ ಪ್ರಧಾನಿ ನರೇಂದ್ರ ಮೋದಿ ಹಾಗೂ ನಿತೀಶ್ ಕುಮಾರ್ ಅವರ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಮತ್ತೊಮ್ಮೆ ಸ್ಪಷ್ಟ ಜನಾದೇಶ ನೀಡಿದ್ದಾರೆ ಎಂದು ವಿಪಕ್ಷ ನಾಯಕ ಆರ್‌.ಅಶೋಕ್‌ ತಿಳಿಸಿದ್ದಾರೆ.

CM Siddaramaiah: ಬಿಹಾರ ಚುನಾವಣೆ ಫಲಿತಾಂಶ ಎಫೆಕ್ಟ್, ರಾಜ್ಯದಲ್ಲಿ ಸಿದ್ದರಾಮಯ್ಯ ಸಿಎಂ ಸ್ಥಾನ ಇನ್ನಷ್ಟು ಗಟ್ಟಿ!

ಬಿಹಾರ ಫಲಿತಾಂಶ ಎಫೆಕ್ಟ್, ಸಿದ್ದರಾಮಯ್ಯ ಸಿಎಂ ಸ್ಥಾನ ಇನ್ನಷ್ಟು ಗಟ್ಟಿ!

Bihar Election Result 2025: ಬಿಹಾರ ಫಲಿತಾಂಶದ ಬಗ್ಗೆ ಯಾವುದೇ ಕ್ಲೂ ಇಲ್ಲದ ಹೊತ್ತಿನಲ್ಲಿ, ಸಿದ್ದರಾಮಯ್ಯ ಅವರನ್ನು ಬದಲಿಸಿ ಇರುವೆ ಬಿಟ್ಟುಕೊಳ್ಳಲು ಕಾಂಗ್ರೆಸ್‌ ಹೈಕಮಾಂಡ್‌ ಸಿದ್ಧವಿರಲಿಲ್ಲ. ಒಂದು ವೇಳೆ ಬಿಹಾರದಲ್ಲಿ ಮಹಾಘಟಬಂಧನ್‌ ಅಧಿಕಾರಕ್ಕೆ ಬಂದಿದ್ದರೆ, ಕಾಂಗ್ರೆಸ್‌ಗೆ ಹೆಚ್ಚಿನ ಸ್ಥಾನಗಳು ದಕ್ಕಿದ್ದರೆ, ಆಗ ಕಾಂಗ್ರೆಸ್‌ ಹೈಕಮಾಂಡ್‌ ಇನ್ನಷ್ಟು ಬಲಿಷ್ಠವಾಗುತ್ತಿತ್ತು. ತನ್ನ ಕಾರ್ಯತಂತ್ರಗಳು ನಡೆಯುತ್ತವೆ ಎಂಬ ಆತ್ಮವಿಶ್ವಾಸದಿಂದ ಇತರ ರಾಜ್ಯಗಳಲ್ಲೂ ಆಂತರಿಕ ಬದಲಾವಣೆಗಳನ್ನು ಮಾಡಿಕೊಳ್ಳಲು ಕೈ ವರಿಷ್ಠರು ಮುಂದಾಗುತ್ತಿದ್ದರು.

Bihar Election Result 2025: ಮುಗ್ಗರಿಸಿದ ಮಹಾಘಟಬಂಧನ್‌; ಗ್ಯಾರಂಟಿ ಸ್ಕೀಮ್‌ಗಳು ಫೇಲ್‌ ಆಗಿದ್ದೆಲ್ಲಿ?

ಮುಗ್ಗರಿಸಿದ ಮಹಾಘಟಬಂಧನ್‌; ಸೋಲಿಗೆ ಕಾರಣವೇನು?

ಬಿಹಾರ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು, ಎನ್‌ಡಿಗೆ ದ್ವಿಶತಕ ಭಾರಿಸಿ ಭರ್ಜರಿ ಮುನ್ನಡೆಯನ್ನು ಸಾಧಿಸಿದೆ. ಮಹಾಘಟಬಂಧನ್‌ ಮೈತ್ರಿಕೂಟಕ್ಕೆ ಭಾರೀ ಹಿನ್ನಡೆಯುಂಟಾಗಿದ್ದು, ಪ್ರಭಾವಿಗಳೂ ಸಹ ಸೋಲನ್ನು ಕಂಡಿದ್ದಾರೆ. ಮತದಾರರನ್ನು ಸೆಳೆಯಲು ಆರ್‌ಜೆಡಿ ವಿಫಲವಾಗಿದೆ. ಹಾಗಾದರೆ ಮೈತ್ರಿ ಕೂಟದ ಪ್ರಣಾಳಿಕೆಗಳು ಸಂಪೂರ್ಣವಾಗಿ ವಿಫಲಗೊಂಡಿದ್ದೆಲ್ಲಿ?

Bihar Election 2025 Results: ಬಿಹಾರಲ್ಲಿ ಎನ್‌ಡಿಎ ಸ್ಪಷ್ಟ ಬಹುಮತದತ್ತ; ಸಂಜೆ ದೆಹಲಿ ಬಿಜೆಪಿ ಕಚೇರಿಗೆ ಮೋದಿ ಭೇಟಿ

ಬಿಹಾರ ಚುನಾವಣೆ ಫಲಿತಾಂಶ; ಸಂಜೆ ದೆಹಲಿ ಬಿಜೆಪಿ ಕಚೇರಿಗೆ ಮೋದಿ ಭೇಟಿ

ದೇಶದ ಕುತೂಹಲ ಕೆರಳಿಸಿದ ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರ ಬರುತ್ತಿದ್ದು, ಎನ್‌ಡಿಎ ಸ್ಪಷ್ಟ ಬಹುಮತದತ್ತ ಸಾಗಿದೆ. ಅಧಿಕಾರ ಉಳಿಸಿಕೊಳ್ಳುವತ್ತ ದಿಟ್ಟ ಹೆಜ್ಜೆ ಇಟ್ಟಿದ್ದು, ಸದ್ಯದ ಮಾಹಿತಿ ಪ್ರಕಾರ ಎನ್‌ಡಿಎ 200ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇತ್ತ ಮಹಾಘಟಬಂಧನ್‌ ಕೇವಲ 39 ಸೀಟ್‌ಗಳಲ್ಲಿ ಮುಂದಿದೆ. ಸಂಜೆ 7 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಗೆ ಭೇಟಿ ನೀಡುವ ನಿರೀಕ್ಷೆ ಇದೆ.

Bihar Election 2025 Results: ಬಿಹಾರದ ʼಮಹಾಮಾಂತ್ರಿಕʼ ನಿತೀಶ್‌ ಕುಮಾರ್‌ ಸಾಗಿ ಬಂದ ಹಾದಿಯಿದು!

ಬಿಹಾರದ ʼಮಹಾಮಾಂತ್ರಿಕʼ ನಿತೀಶ್‌ ಕುಮಾರ್‌ ಸಾಗಿ ಬಂದ ಹಾದಿಯಿದು!

Nitish Kumar: ಜೆಡಿಯು ನಾಯಕ ನಿತೀಶ್ ಕುಮಾರ್ ಅವರು ಬಿಹಾರವನ್ನು ಅತಿ ಹೆಚ್ಚು ಕಾಲ ಆಳಿದ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಅವರ ಪಕ್ಷ ಎಂದಿಗೂ ಸ್ವಂತವಾಗಿ ಸರಕಾರ ರಚಿಸುವಷ್ಟು ಬಹುಮತವನ್ನು ಅಲ್ಲಿ ಗಳಿಸಿಲ್ಲ. ಆದರೆ ತಮ್ಮ ರಾಜಕೀಯ ಕುಶಾಗ್ರಮತಿ, ಚಾಣಾಕ್ಷತನದಿಂದಾಗಿ ಅಧಿಕಾರದಲ್ಲಿರುವ ನಿತೀಶ್‌ಗೆ ಈಗ 74 ವರ್ಷ. ಆಗಾಗ ಮಿತ್ರಪಕ್ಷಗಳನ್ನು ಬದಲಾಯಿಸಿದ್ದಾರೆ. ಆದರೆ ಹೆಚ್ಚು ಕಾಲ ಬಿಜೆಪಿ ಜೊತೆಗೆ ಇದ್ದಾರೆ. ಇದೀಗ ಮತ್ತೆ ಒಂಬತ್ತನೇ ಸಲ ಅಧಿಕಾರಕ್ಕೇರಲು ಸಿದ್ಧರಾಗಿರುವ ನಿತೀಶ್‌, ರಾಷ್ಟ್ರ ರಾಜಕಾರಣದ ಮುತ್ಸದ್ಧಿಗಳಲ್ಲೊಬ್ಬರು.

ಬಿಹಾರದಲ್ಲಿ ಎನ್‌ಡಿಎ ಕ್ಲೀನ್‌ ಸ್ವೀಪ್‌... ಮ್ಯಾಜಿಕ್‌ ಮಾಡಿದ ಆ 5 ಅಂಶಗಳಾವುವು?

ಬಿಹಾರದಲ್ಲಿ ನಿತೀಶ್ ಕುಮಾರ್‌ ಭರ್ಜರಿ ಗೆಲುವಿಗೆ ಕಾರಣ ಏನು?

ಬಿಹಾರದಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಬಹುಮತದ ಗಡಿಯನ್ನು ದಾಟಿದೆ. ಈ ಮೂಲಕ ಜೆಡಿಯು ಮತ್ತು ಬಿಜೆಪಿ ರಾಜ್ಯದ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಮಹಾಘಟಬಂಧನ್ ಭಾರಿ ಅಂತರದಲ್ಲಿ ಹಿನ್ನಡೆ ಸಾಧಿಸಿರುವುದರಿಂದ ಇನ್ನು ಕೆಲವು ಗಂಟೆಗಳಲ್ಲಿ ಉತ್ತಮ ಆಡಳಿತ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ. ಭರ್ಜರಿ ಯಶಸ್ಸಿನ ಸಂಭ್ರಮದಲ್ಲಿರುವ ಅವರ ಗೆಲುವಿಗೆ ಕಾರಣವಾಗಿದ್ದು ಈ ಐದು ಅಂಶಗಳು.

Bihar Election Result 2025: ವರ್ಕ್‌ಔಟ್‌ ಆಗಿಲ್ಲ ಪ್ರಶಾಂತ್‌ ಕಿಶೋರ್‌ ಮ್ಯಾಜಿಕ್‌; ಚುನಾವಣಾ ಚಾಣಕ್ಯ ಫ್ಲಾಪ್‌ ಆಗಿದ್ದೇಗೆ?

ವರ್ಕ್‌ಔಟ್‌ ಆಗಿಲ್ಲ ಪ್ರಶಾಂತ್‌ ಕಿಶೋರ್‌ ಮ್ಯಾಜಿಕ್‌

Prashant Kishore: ಬಿಹಾರದಲ್ಲಿ ನಡೆದ ಚುನಾವಣಾ ಫಲಿತಾಂಶ ಬಹುತೇಕ ಹೊರಬಿದ್ದಿದ್ದು, ಎನ್‌ಡಿಎ ಭರ್ಜರಿ ಗೆಲುವನ್ನು ಕಾಣುವ ನಿರೀಕ್ಷೆ ಹೆಚ್ಚಿದೆ. ಬಿಹಾರದಲ್ಲಿ ಭಾರೀ ನಿರೀಕ್ಷೆ ಮೂಡಿಸಿದ್ದ ಪ್ರಶಾಂತ್‌ ಕಿಶೋರ್‌ ಅವರ ಯಾವುದೇ ಟ್ರಿಕ್‌ ಫಲ ಕೊಟ್ಟಿಲ್ಲ. ಪ್ರಶಾಂತ್‌ ಕಿಶೋರ್‌ ಅವರು ಚುನಾವಣೆಗೆ ಸ್ಪರ್ಧೆ ಮಾಡದೇ ಇದ್ದರೂ 240 ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದರು.

Bihar Election Result 2025: ಬಿಹಾರದಲ್ಲಿ ಎನ್‌ಡಿಎ ‌ಗೆಲುವು: ಸಿಎಂ ಸಿದ್ದರಾಮಯ್ಯ ಫಸ್ಟ್ ರಿಯಾಕ್ಷನ್‌‌ ಏನು?

ಬಿಹಾರ ಎನ್‌ಡಿಎ ‌ಗೆಲುವು: ಸಿಎಂ ಸಿದ್ದರಾಮಯ್ಯ ಫಸ್ಟ್ ರಿಯಾಕ್ಷನ್‌‌ ಏನು?

CM Siddaramaiah: ಬಿಹಾರದಲ್ಲಿ ವಿಧಾನಸಭೆ ಚುನಾವಣೆಯ ಮತ ಎಣಿಕೆಯ ಆರಂಭಿಕ ಟ್ರೆಂಡ್‌ ಎನ್‌ಡಿಎ ಪರವಾಗಿದೆ. ಬಹುಮತ ನಿಚ್ಚಳವಾಗಿದೆ. ಕಾಂಗ್ರೆಸ್‌ ಸೇರಿದಂತೆ ಮಹಾಘಟಬಂಧನ್‌ ಹಿನ್ನಡೆ ಅನುಭವಿಸಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿರುವ ಕರ್ನಾಟಕ ಸಿಎಂ ಸಿದ್ದರಾಮಯ್ಯ, ಫಲಿತಾಂಶದ ಕುರಿತು ತಮ್ಮ ಮೊದಲ ರಿಯಾಕ್ಷನ್‌ ನೀಡಿದ್ದಾರೆ.

Loading...