ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
IPL

IPL

RCB vs RR: ರಾಜಸ್ಥಾನ್‌ ಪಂದ್ಯದಲ್ಲಿ ಆರ್‌ಸಿಬಿ ಆಟಗಾರರು ನಿರ್ಮಿಸಿದ ದಾಖಲೆ ಪಟ್ಟಿ

ರಾಜಸ್ಥಾನ್‌ ಪಂದ್ಯದಲ್ಲಿ ಆರ್‌ಸಿಬಿ ಆಟಗಾರರು ನಿರ್ಮಿಸಿದ ದಾಖಲೆ ಪಟ್ಟಿ

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಮುಂಬೈ ತಂಡವನ್ನು ಹಿಂದಿಕ್ಕಿ ಅಂಕಪಟ್ಟಿಯಲ್ಲಿ ಮತ್ತೆ ಮೂರನೇ ಸ್ಥಾನಕ್ಕೇರಿದೆ. ಆಡಿದ 9 ಪಂದ್ಯಗಳಲ್ಲಿ 6 ಗೆಲುವು ಸಾಧಿಸಿ 12 ಅಂಕ ಪಡೆದಿರುವ ಆರ್‌ಸಿಬಿ ಇನ್ನೆರಡು ಗೆಲುವು ಸಾಧಿಸಿದರೆ ತಂಡದ ಪ್ಲೇ ಆಫ್‌ ಸ್ಥಾನ ಖಚಿತವಾಗಲಿದೆ. ತಂಡಕ್ಕೆ ಇನ್ನು 5 ಪಂದ್ಯಗಳು ಬಾಕಿ ಇದೆ.

MS Dhoni: ಟಿ20ಯಲ್ಲಿ ವಿಶೇಷ ಮೈಲಿಗಲ್ಲು ನಿರ್ಮಿಸಲು ಧೋನಿ ಸಜ್ಜು

ಟಿ20ಯಲ್ಲಿ ವಿಶೇಷ ಮೈಲಿಗಲ್ಲು ನಿರ್ಮಿಸಲು ಧೋನಿ ಸಜ್ಜು

IPL 2025: ಐಪಿಎಲ್ 2025 ಮುಗಿಯುವ ಹೊತ್ತಿಗೆ ಧೋನಿಗೆ 44 ವರ್ಷ ವಯಸ್ಸಾಗುತ್ತದೆ. ಆದ್ದರಿಂದ ಧೋನಿಗೆ ಈ ಬಾರಿಯ ಐಪಿಎಲ್‌ ಕೊನೆಯ ಆವೃತ್ತಿ ಎನ್ನಲಾಗಿದೆ. ಆದರೆ ಧೋನಿ ಮಾತ್ರ ತಮ್ಮ ನಿವೃತ್ತಿಯ ವಿಚಾರವನ್ನು ತಳ್ಳಿ ಹಾಕುತ್ತಲೇ ಇದ್ದಾರೆ. ನಿವೃತ್ತಿ ನಿರ್ಧರಿಸುವುದು ನಾನಲ್ಲ, ನನ್ನ ದೇಹ ಎಂದು ಹೇಳುತ್ತಿದ್ದಾರೆ.

RCB vs RR: ಸೋಲಿಗೆ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ ವೈಫಲ್ಯ ಕಾರಣ; ರಿಯಾನ್‌ ಪರಾಗ್‌

ಸೋಲಿಗೆ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ ವೈಫಲ್ಯ ಕಾರಣ; ರಿಯಾನ್‌ ಪರಾಗ್‌

ರಾಜಸ್ಥಾನ್‌ ತಂಡ ಆಡಿದ 9 ಪಂದ್ಯಗಳಲ್ಲಿ ಕೇವಲ 2 ಗೆಲುವು ಮತ್ತು 7 ಸೋಲಿನಿಂದಿಗೆ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ತಂಡಕ್ಕೆ ಇನ್ನು 5 ಪಂದ್ಯಗಳು ಬಾಕಿ ಇದೆ. ಈ ಎಲ್ಲ ಪಂದ್ಯಗಳನ್ನು ಗೆದ್ದರೆ ತಂಡದ ಒಟ್ಟಾರೆ ಅಂಕ 14 ಆಗಲಿದೆ. ಒಂದೊಮ್ಮೆ 5 ಪಂದ್ಯಗಳ ಪೈಕಿ ಒಂದು ಪಂದ್ಯ ಸೋತರೂ ತಂಡ ಲೀಗ್‌ ಹಂತದಲ್ಲೇ ಹೊರಬೀಳಲಿದೆ.

IPL 2025: 7 ಪಂದ್ಯ ಸೋತ ರಾಜಸ್ಥಾನ್‌ ತಂಡದ ಪ್ಲೇ ಆಫ್‌ ಲೆಕ್ಕಾಚಾರ ಹೇಗಿದೆ?

7 ಪಂದ್ಯ ಸೋತ ರಾಜಸ್ಥಾನ್‌ ತಂಡದ ಪ್ಲೇ ಆಫ್‌ ಲೆಕ್ಕಾಚಾರ ಹೇಗಿದೆ?

ಅಗ್ರ 4 ತಂಡಗಳು ಪ್ಲೇ ಆಫ್‌ ಪ್ರವೇಶ ಪಡೆಯಲಿದೆ. ಒಂದೊಮ್ಮೆ ರಾಜಸ್ಥಾನ್‌ ಮುಂದಿನ ಎಲ್ಲ ಪಂದ್ಯ ಗೆದ್ದು 14 ಅಂಕ ಗಳಿಸಿದರೂ ತಂಡಕ್ಕೆ ಪ್ಲೇ-ಆಫ್‌ ಸ್ಥಾನ ಖಚಿತವಾಗುವುದಿಲ್ಲ. ಏಕೆಂದರೆ ಇತರ ತಂಡದ ಫಲಿತಾಂಶ ಕೂಡ ಇಲ್ಲಿ ಮುಖ್ಯವಾಗಿದೆ. ಗುಂಪು ಹಂತದ ಅಂತ್ಯದಲ್ಲಿ ನಾಲ್ಕು ತಂಡಗಳು 16 ಅಂಕಗಳನ್ನು ಗಳಿಸಿಸಬಾರದು. ಆಗ ರಾಜಸ್ಥಾನ್‌ಗೆ ಅವಕಾಶವಿದೆ.

Virat Kohli: ಪಾಕ್‌ನ ಬಾಬರ್‌ ಅಜಂ ದಾಖಲೆ ಮುರಿದ ವಿರಾಟ್‌ ಕೊಹ್ಲಿ

ಪಾಕ್‌ನ ಬಾಬರ್‌ ಅಜಂ ದಾಖಲೆ ಮುರಿದ ವಿರಾಟ್‌ ಕೊಹ್ಲಿ

IPL 2025: ಹಾಲಿ ಆವೃತ್ತಿಯ ಐಪಿಎಲ್‌ನಲ್ಲಿ ವಿರಾಟ್‌ ಕೊಹ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರುತ್ತಿದ್ದಾರೆ. ಒಟ್ಟಾರೆ ಈ ಆವೃತ್ತಿಯಲ್ಲಿ 392* ರನ್‌ ಬಾರಿಸಿ ಆರೆಂಜ್‌ ಕ್ಯಾಪ್‌ ರೇಸ್‌ನಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ. 417 ರನ್‌ ಬಾರಿಸಿದ ಗುಜರಾತ್‌ ಟೈಟಾನ್ಸ್‌ ತಂಡದ ಸಾಯಿ ಸುದರ್ಶನ್‌ ಮೊದಲ ಸ್ಥಾನದಲ್ಲಿದ್ದಾರೆ.

IPL 2025: ಆರ್‌ಸಿಬಿ ವಿರುದ್ಧ ದಾಖಲೆ ಬರೆದ ಜೈಸ್ವಾಲ್‌; ಈ ಸಾಧನೆ ಮಾಡಿದ ಮೊದಲಿಗ

ಆರ್‌ಸಿಬಿ ವಿರುದ್ಧ ದಾಖಲೆ ಬರೆದ ಜೈಸ್ವಾಲ್‌; ಈ ಸಾಧನೆ ಮಾಡಿದ ಮೊದಲಿಗ

ಗುರುವಾರದ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್‌ ನಡೆಸಿದ್ದ ಜೈಸ್ವಾಲ್‌ ಕೇವಲ 19 ಎಸೆತಗಳಲ್ಲಿ 49 ರನ್‌ ಬಾರಿಸಿದ್ದರು. ಅವರ ಈ ಇನಿಂಗ್ಸ್‌ನಲ್ಲಿ 3 ಸಿಕ್ಸರ್‌ ಮತ್ತು 7 ಬೌಂಡರಿ ಒಳಗೊಂಡಿತ್ತು. ಆದರೆ ಪಂದ್ಯ ಸೋತ ಕಾರಣ ಇವರ ಬ್ಯಾಟಿಂಗ್‌ ಪ್ರದರ್ಶನ ವ್ಯರ್ಥವಾಯಿತು.

IPL 2025 Points Table: ಮುಂಬೈ ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಿದ ಆರ್‌ಸಿಬಿ

ಮುಂಬೈ ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಿದ ಆರ್‌ಸಿಬಿ

ಐದು ಬಾರಿಯ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ಕೊನೆಯ ಸ್ಥಾನದಲ್ಲಿದ್ದರೆ, ಸನ್‌ರೈಸರ್ಸ್‌ ಹೈದರಾಬಾದ್‌ 9ನೇ ಸ್ಥಾನದಲ್ಲಿದೆ. ಇಂದು ನಡೆಯುವ ಪಂದ್ಯದಲ್ಲಿ ಉಭಯ ತಂಡಗಳು ಸೆಣಸಾಟ ನಡೆಸಲಿದೆ. ಗೆದ್ದ ತಂಡ ಅಂಕಪಟ್ಟಿಯಲ್ಲಿ ತನ್ನ ಸ್ಥಾನ ವೃದ್ಧಿಪಡಿಸಿಕೊಳ್ಳಲಿದೆ.

RCB vs RR: ರಾಜಸ್ಥಾನ್‌ಗೆ ನಿರಾಶೆ, ತವರು ಅಂಗಣದಲ್ಲಿ ಮೊದಲ ಜಯ ಸಾಧಿಸಿದ ಆರ್‌ಸಿಬಿ!

RCB vs RR: ಬೆಂಗಳೂರಿನಲ್ಲಿ ಕೊನೆಗೂ ವಿಜಯ ಪತಾಕೆ ಹಾರಿಸಿದ ಆರ್‌ಸಿಬಿ!

RCB vs RR Match Highlights: ವಿರಾಟ್‌ ಕೊಹ್ಲಿ (70) ಅರ್ಧಶತಕ ಹಾಗೂ ಜಾಶ್‌ ಹೇಝಲ್‌ವುಡ್‌ (33ಕ್ಕೆ 4) ಬೌಲಿಂಗ್‌ ನೆರವಿನಿಂದ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ, 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ 42ನೇ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ವಿರುದ್ದ 11 ರನ್‌ಗಳ ರೋಚಕ ಗೆಲುವು ಸಾಧಿಸಿತು. ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿಗೆ ಪ್ರಸಕ್ತ ಆವೃತ್ತಿಯಲ್ಲಿ ಮೊದಲ ಗೆಲುವು ಇದಾಗಿದೆ.

IPL 2025: ಅರ್ಧಶತಕ ಸಿಡಿಸುವ ಮೂಲಕ ಕ್ರಿಸ್‌ ಗೇಲ್‌ ದಾಖಲೆ ಮುರಿದ ವಿರಾಟ್‌ ಕೊಹ್ಲಿ!

ಅರ್ಧಶತಕ ಸಿಡಿಸಿ ಕ್ರಿಸ್‌ ಗೇಲ್‌ ದಾಖಲೆ ಮುರಿದ ಕಿಂಗ್ಸ್‌ ಕೊಹ್ಲಿ!

ರಾಜಸ್ಥಾನ್‌ ರಾಯಲ್ಸ್‌ ವಿರುದ್ದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಅರ್ಧಶತಕವನ್ನು ಸಿಡಿಸಿದ್ದಾರೆ. ಆ ಮೂಲಕ ಟಿ20 ಕ್ರಿಕೆಟ್‌ನಲ್ಲಿ 111ನೇ ಬಾರಿ 50ಕ್ಕೂ ಅಧಿಕ ರನ್‌ ಗಳಿಸಿದ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ. ಆ ಮೂಲಕ ವೆಸ್ಟ್‌ ಇಂಡೀಸ್‌ ದಿಗ್ಗಜ ಕ್ರಿಸ್‌ ಗೇಲ್‌ ದಾಖಲೆಯನ್ನು ವಿರಾಟ್‌ ಕೊಹ್ಲಿ ಹಿಂದಿಕ್ಕಿದ್ದಾರೆ.

ʻಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 3500 ರನ್‌ʼ-ಇತಿಹಾಸ ಬರೆದ ವಿರಾಟ್‌ ಕೊಹ್ಲಿ!

ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇತಿಹಾಸ ಬರೆದ ವಿರಾಟ್‌ ಕೊಹ್ಲಿ!

ರಾಜಸ್ಥಾನ್‌ ರಾಯಲ್ಸ್‌ ವಿರುದ್ದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ ಅತ್ಯುತ್ತಮ ಬ್ಯಾಟ್‌ ಮಾಡಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಹಿರಿಯ ಬ್ಯಾಟ್ಸ್‌ಮನ್‌ ವಿರಾಟ್‌ ಕೊಹ್ಲಿ ಸತತ ಐದನೇ ಅರ್ಧಶತಕ ಸಿಡಿಸಿದ್ದಾರೆ. ಆ ಮೂಲಕ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 3500 ಟಿ20 ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಆ ಮೂಲಕ ಏಕೈಕ ಕ್ರೀಡಾಂಗಣದಲ್ಲಿ ಅತಿ ಹೆಚ್ಚು ಟಿ20 ರನ್‌ ಗಳಿಸಿದ ಮೊದಲ ಬ್ಯಾಟ್ಸ್‌ಮನ್‌ ಎಂಬ ದಾಖಲೆಯನ್ನು ಕೊಹ್ಲಿ ಬರೆದಿದ್ದಾರೆ.

ಯುವರಾಜ್‌ ಸಿಂಗ್‌ ತರಬೇತಿ ಕೊಟ್ರೆ ಅರ್ಜುನ್‌ ತೆಂಡೂಲ್ಕರ್‌ ಮುಂದಿನ ಕ್ರಿಸ್‌ ಗೇಲ್‌ ಆಗುತ್ತಾರೆ: ಯೋಗರಾಜ್‌ ಸಿಂಗ್‌!

ಅರ್ಜುನ್‌ ತೆಂಡೂಲ್ಕರ್‌ ಮುಂದಿನ ಗೇಲ್‌ ಆಗಬಹುದು- ಯೋಗರಾಜ್‌ ಸಿಂಗ್‌!

ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್, ಕ್ರಿಕೆಟ್‌ ದಂತಕತೆ ಸಚಿನ್‌ ತೆಂಡೂಲ್ಕರ್‌ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ. ಅರ್ಜುನ್ ಬೌಲ್‌ ಮಾಡುವ ಬದಲು ಬ್ಯಾಟಿಂಗ್ ಮೇಲೆ ಗಮನ ಹರಿಸಬೇಕು. ಅರ್ಜುನ್‌ ತೆಂಡೂಲ್ಕರ್‌ಗೆ ಯುವರಾಜ್ ಸಿಂಗ್‌ ತರಬೇತಿ ನೀಡಿದರೆ, ಅವರು ಮುಂದಿನ ಕ್ರಿಸ್ ಗೇಲ್ ಆಗಬಹುದು ಎಂದು ಯೋಗರಾಜ್ ಸಿಂಗ್‌ ಭವಿಷ್ಯ ನುಡಿದಿದ್ದಾರೆ.

RCB vs RR: ತವರಿನಲ್ಲಿ ಸತತ 4ನೇ ಬಾರಿ ಟಾಸ್‌ ಸೋತ ಆರ್‌ಸಿಬಿ ಮೊದಲ ಬ್ಯಾಟಿಂಗ್‌!

RCB vs RR: ರಾಜಸ್ಥಾನ್‌ ಎದುರು ಟಾಸ್‌ ಸೋತ ಆರ್‌ಸಿಬಿ ಮೊದಲ ಬ್ಯಾಟಿಂಗ್‌!

RCB vs RR: ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ 42ನೇ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ರಾಜಸ್ಥಾನ್‌ ರಾಯಲ್ಸ್‌ ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್‌ ಗೆದ್ದ ಆರ್‌ಆರ್‌ ನಾಯಕ ರಿಯಾನ್‌ ಪರಾಗ್‌ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ.

IPL 2025: ತವರು ಅಂಗಣದಲ್ಲಿ ಗೆಲ್ಲಲ್ಲು ಆರ್‌ಸಿಬಿಗೆ ಉಪಯುಕ್ತ ಸಲಹೆ ನೀಡಿದ ಅನಿಲ್‌ ಕುಂಬ್ಳೆ!

ಬೆಂಗಳೂರಿನಲ್ಲಿ ಗೆಲ್ಲಲು ಆರ್‌ಸಿಬಿಗೆ ಉಪಾಯ ಹೇಳಿಕೊಟ್ಟ ಅನಿಲ್‌ ಕುಂಬ್ಳೆ!

Anil Kumble on RCB's Form in Home: ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, ತವರು ಅಂಗಣ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಿದ ಮೂರೂ ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಬೆಂಗಳೂರಿನಲ್ಲಿ ಗೆಲ್ಲಲು ಆರ್‌ಸಿಬಿ ಅನಿಲ್‌ ಕುಂಬ್ಳೆ ಉಪಯುಕ್ತ ಸಲಹೆಯನ್ನು ನೀಡಿದ್ದಾರೆ.

IPL 2025: ʻಮುಂದಿನ ವರ್ಷ ಐಪಿಎಲ್‌ ಆಡಲು ನನಗೆ ಅವಕಾಶವಿದೆʼ-ಮೊಹಮ್ಮದ್‌ ಆಮಿರ್‌!

ಮುಂದಿನ ವರ್ಷ ಐಪಿಎಲ್‌ ಆಡಲು ನನಗೆ ಅವಕಾಶವಿದೆ: ಮೊಹಮ್ಮದ್‌ ಆಮಿರ್!

Mohammad Amir on IPL: ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಆಡುವ ಇಂಗಿತವನ್ನು ಪಾಕಿಸ್ತಾನ ಮಾಜಿ ವೇಗಿ ಮೊಹಮ್ಮದ್‌ ಆಮಿರ್‌ ವ್ಯಕ್ತಪಡಿಸಿದ್ದಾರೆ. ಮುಂದಿನ ವರ್ಷ ಐಪಿಎಲ್‌ ಟೂರ್ನಿಯಲ್ಲಿ ಆಡಲು ನನಗೆ ಅವಕಾಶ ಸಿಗಲಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಇದು ಹೇಗೆ ಸಾಧ್ಯ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

RCB vs RR: ಇಂದು ಮಧ್ಯಾಹ್ನ 3 ಗಂಟೆಯಿಂದ ಬೆಂಗಳೂರಿನ ಈ ರಸ್ತೆಯಲ್ಲಿ ವಾಹನ ನಿಲುಗಡೆಗೆ ನಿರ್ಬಂಧ

ಇಂದು ಮಧ್ಯಾಹ್ನ 3 ಗಂಟೆಯಿಂದ ಬೆಂಗಳೂರಿನ ಈ ರಸ್ತೆಯಲ್ಲಿ ಸಂಚಾರ ಬದಲಾವಣೆ

Bengaluru Traffic Advisory: ಕಬ್ಬನ್ ರಸ್ತೆ, ಕ್ವೀನ್ಸ್ ರಸ್ತೆ, ಎಂ.ಜಿ. ರಸ್ತೆ, ರಾಜಭವನ ರಸ್ತೆ, ಸೆಂಟ್ರಲ್ ಸ್ಟ್ರೀಟ್, ಸೇಂಟ್ ಮಾರ್ಕ್ಸ್ ರಸ್ತೆ, ಮ್ಯೂಸಿಯಂ ರಸ್ತೆ, ಕಸ್ತೂರಬಾ ರಸ್ತೆ, ವಿಧಾನಸೌಧ–ಹೈಕೋರ್ಟ್ ಎದುರಿನ ರಸ್ತೆ, ಟ್ರಿನಿಟಿ ರಸ್ತೆ, ಲ್ಯಾವೆಲ್ಲೆ ರಸ್ತೆ, ವಿಠ್ಠಲ್ ಮಲ್ಯ ರಸ್ತೆ, ನೃಪತುಂಗ ರಸ್ತೆಯಲ್ಲಿ ವಾಹನಗಳ ನಿಲುಗಡೆ ನಿರ್ಬಂಧಿಸಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

IPL 2025: ಐಪಿಎಲ್‌ನಲ್ಲಿ ಅನಗತ್ಯ ದಾಖಲೆ ಬರೆದ ಕನ್ನಡಿಗ ಅಭಿನವ್

ಐಪಿಎಲ್‌ನಲ್ಲಿ ಅನಗತ್ಯ ದಾಖಲೆ ಬರೆದ ಕನ್ನಡಿಗ ಅಭಿನವ್ ಮನೋಹರ್

Abhinav Manohar: ಸನ್‌ರೈಸರ್ಸ್‌ ವಿರುದ್ಧದ ಪಂದ್ಯದಲ್ಲಿ ಇಂಪ್ಯಾಕ್ಟ್‌ ಆಟಗಾರನಾಗಿ ಕಣಕ್ಕಿಳಿದ ಅಭಿನವ್ ಮನೋಹರ್ ಅವರು ಕ್ಲಾಸೆನ್‌ ಜತೆಗೂಡಿ ಉತ್ತಮ ಇನಿಂಗ್ಸ್‌ ಒಂದನ್ನು ಆಡಿದ್ದರು. ಮುಂಬೈ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿ 3 ಸಿಕ್ಸರ್‌ ಮತ್ತು 2 ಬೌಂಡರಿ ನೆರವಿನಿಂದ 40 ರನ್‌ ಬಾರಿಸಿದ್ದರು.

RCB vs RR: ಇಂದು ಆರ್‌ಸಿಬಿ-ರಾಜಸ್ಥಾನ್‌ ಕಾದಾಟ; ಹವಾಮಾನ ವರದಿ ಹೇಗಿದೆ?

ಇಂದು ಆರ್‌ಸಿಬಿ-ರಾಜಸ್ಥಾನ್‌ ಕಾದಾಟ; ಹವಾಮಾನ ವರದಿ ಹೇಗಿದೆ?

ಕೋಚ್ ದ್ರಾವಿಡ್ ಅವರ ಮಾರ್ಗದರ್ಶನ ರಾಜಸ್ಥಾನ್‌ಗೆ ಈ ಪಂದ್ಯದಲ್ಲಿ ಹೆಚ್ಚು ನೆರವಾಗಲಿದೆ. ಏಕೆಂದರೆ ತಾವು ಬಾಲ್ಯದಿಂದಲೂ ಆಡಿ ಬೆಳೆದ ಕ್ರೀಡಾಂಗಣವನ್ನು ದ್ರಾವಿಡ್ ಚೆನ್ನಾಗಿ ಬಲ್ಲರು. ಹೀಗಾಗಿ ಎದುರಾಳಿ ತಂಡಕ್ಕೆ ದ್ರಾವಿಡ್‌ ಭೀತಿಯೂ ಕಾಡಿದೆ ಎನ್ನಲಡ್ಡಿಯಿಲ್ಲ.

Rohit Sharma: ಕೊಹ್ಲಿ ಜತೆ ಎಲೈಟ್‌ ಪಟ್ಟಿ ಸೇರಿದ ರೋಹಿತ್‌ ಶರ್ಮ

Rohit Sharma: ಕೊಹ್ಲಿ ಜತೆ ಎಲೈಟ್‌ ಪಟ್ಟಿ ಸೇರಿದ ರೋಹಿತ್‌ ಶರ್ಮ

ರೋಹಿತ್‌ ಶರ್ಮ(Rohit Sharma) ಅವರು ಟಿ20 ಕ್ರಿಕೆಟ್‌ನಲ್ಲಿ ವಿಶೇಷ ಮೈಲುಗಲ್ಲೊಂದನ್ನು ನೆಟ್ಟಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ 12 ಸಾವಿರ ರನ್ ಪೂರೈಸಿದ 2ನೇ ಭಾರತೀಯ ಹಾಗೂ ಒಟ್ಟಾರೆ 8ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಭಾರತೀಯ ದಾಖಲೆ ವಿರಾಟ್‌ ಕೊಹ್ಲಿ ಹೆಸರಿನಲ್ಲಿದೆ.

SRH vs MI: ಟಿ20ಯಲ್ಲಿ 300 ವಿಕೆಟ್‌ ಪೂರೈಸಿದ ಜಸ್‌ಪ್ರೀತ್‌ ಬುಮ್ರಾ

ಟಿ20ಯಲ್ಲಿ 300 ವಿಕೆಟ್‌ ಪೂರೈಸಿದ ಜಸ್‌ಪ್ರೀತ್‌ ಬುಮ್ರಾ

Jasprit Bumrah: 300 ವಿಕೆಟ್‌ ಸಾಧನೆ ಮಾತ್ರವಲ್ಲದೆ, ಮುಂಬೈ ಇಂಡಿಯನ್ಸ್ ಪರ ಗರಿಷ್ಠ ವಿಕೆಟ್ ಪಡೆದ ಲಸಿತ್ ಮಾಲಿಂಗ ದಾಖಲೆಯನ್ನು ಕೂಡ ಬುಮ್ರಾ ಸರಿಗಟ್ಟಿದರು. ಉಭಯ ಆಟಗಾರರು ಸದ್ಯ 170 ವಿಕೆಟ್‌ ಕಿತ್ತಿದ್ದಾರೆ. ಮಾಲಿಂಗ ನಿವೃತ್ತಿಯಾಗಿರುವ ಕಾರಣ ಬುಮ್ರಾ ಮುಂದಿನ ಪಂದ್ಯದಲ್ಲಿ ಒಂದು ವಿಕೆಟ್‌ ಕಿತ್ತರೆ ದಾಖಲೆ ತಮ್ಮ ಹೆಸರಿಗೆ ಬರೆಯಲಿದ್ದಾರೆ.

IPL 2025 Points Table: ಭಾರೀ ಜಿಗಿತ ಕಂಡ ಮುಂಬೈ; ಆರ್‌ಸಿಬಿಗೆ ಒಂದು ಸ್ಥಾನ ನಷ್ಟ

ಭಾರೀ ಜಿಗಿತ ಕಂಡ ಮುಂಬೈ; ಆರ್‌ಸಿಬಿಗೆ ಒಂದು ಸ್ಥಾನ ನಷ್ಟ

SRH vs MI: ಮುಂಬೈ ಗೆಲುವಿನಿಂದ ಅಂಕಪಟ್ಟಿಯಲ್ಲಿ ಕೆಲ ಮಹತ್ವದ ಬದಲಾವಣೆ ಸಂಭವಿಸಿತು. ಆರ್‌ಸಿಬಿ ಒಂದು ಸ್ಥಾನದ ಕುಸಿತ ಕಂಡು ಮೂರನೇ ಸ್ಥಾನದಿಂದ ನಾಲ್ಕನೇ ಸ್ಥಾನ ಪಡೆದರೆ, ನಾಲ್ಕನೇ ಸ್ಥಾನದಲ್ಲಿದ್ದ ಪಂಜಾಬ್‌ ಕಿಂಗ್ಸ್‌ 5ನೇ ಸ್ಥಾನಕ್ಕೆ ಕುಸಿಯಿತು.

SRH vs MI: ರೋಹಿತ್‌ ಬ್ಯಾಟಿಂಗ್‌ ಅಬ್ಬರ; ಮುಂಬೈಗೆ ‌7 ವಿಕೆಟ್‌ ಜಯ

ರೋಹಿತ್‌ ಬ್ಯಾಟಿಂಗ್‌ ಅಬ್ಬರ; ಮುಂಬೈಗೆ ‌7 ವಿಕೆಟ್‌ ಜಯ

ಪಂದ್ಯಕ್ಕೂ ಮುನ್ನ ಇತ್ತಂಡಗಳ ಆಟಗಾರರು ಮೌನ ಪ್ರಾರ್ಥನೆಯ ಮೂಲಕ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯಲ್ಲಿ ಮೃತಪಟ್ಟವರಿಗೆ ಅಂತಿಮ ನಮನವನ್ನು ಸಲ್ಲಿಸಿದರು. ದಾಳಿಯಲ್ಲಿ ಮೃತಪಟ್ಟವರ ಗೌರವಾರ್ಥವಾಗಿ ಆಟಗಾರರು, ಅಂಪೈರ್‌ಗಳು ಮತ್ತು ಎಲ್ಲ ಅಧಿಕಾರಿಗಳು ತಮ್ಮ ತೋಳುಗಳಿಗೆ ಕಪ್ಪು ಪಟ್ಟಿ ಧರಿಸಿದರು.

SRH vs MI: ವಿವಾದಕ್ಕೆ ಕಾರಣವಾದ ಇಶಾನ್‌ ಕಿಶನ್‌ ಔಟ್‌ ತೀರ್ಪು

ವಿವಾದಕ್ಕೆ ಕಾರಣವಾದ ಇಶಾನ್‌ ಕಿಶನ್‌ ಔಟ್‌ ತೀರ್ಪು

ಘಟನೆಯ ವಿಡಿಯೊ ವೈರಲ್‌ ಆಗಿದ್ದು. ಕೆಲವರು ಅಂಪೈರ್‌ ಅವರದ್ದು ತಪ್ಪು ಎಂದರೆ, ಇನ್ನು ಕೆಲವರು ಇಶಾನ್‌ ಕಿಶನ್‌ರದ್ದೇ ತಪ್ಪು ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಕೆಲ ನೆಟ್ಟಿಗರು ಇಶಾನ್‌ ಕಿಶನ್‌ ಮತ್ತು ಅಂಪೈರ್‌ ಮುಂಬೈ ಇಂಡಿಯನ್ಸ್‌ ಜತೆ ಫಿಕ್ಸಿಂಗ್‌ ನಡೆಸಿದ್ದಾರೆ ಎಂದು ಕಾಲೆಳೆದಿದ್ದಾರೆ.

RCB vs RR: ತವರಿನಲ್ಲಿ ಗೆಲುವಿನ ಖಾತೆ ತೆರೆದೀತೇ ರಾಯಲ್ ಚಾಲೆಂಜರ್ಸ್?

ತವರಿನಲ್ಲಿ ಗೆಲುವಿನ ಖಾತೆ ತೆರೆದೀತೇ ರಾಯಲ್ ಚಾಲೆಂಜರ್ಸ್?

ಚೊಚ್ಚಲ ಪಂದ್ಯದಲ್ಲೇ ಆಕ್ರಮಣಕಾರಿ ಬ್ಯಾಟಿಂಗ್‌ ಮೂಲಕ ಭಾರೀ ಸಂಚಲನ ಮೂಡಿಸಿರುವ 14ರ ಪೋರ ವೈಭವ್‌ ಸೂರ್ಯವಂಶಿ ಪಂದ್ಯದ ಪ್ರಮುಖ ಆಕರ್ಷಣೆಯಾಗಿದ್ದಾರೆ. ಅದರಲ್ಲೂ ಬ್ಯಾಟಿಂಗ್‌ ಟ್ರ್ಯಾಕ್‌ ಚಿನ್ನಸ್ವಾಮಿಯಲ್ಲಿ ಅವರ ಅಬ್ಬರ ಹೇಗಿದ್ದೀತು ಎಂದು ಕ್ರಿಕೆಟ್‌ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

Rajasthan Royals: ಮ್ಯಾಚ್ ಫಿಕ್ಸಿಂಗ್ ಆರೋಪ; ರಾಜ್ಯ ಸರ್ಕಾರಕ್ಕೆ ದೂರು ನೀಡಿದ ರಾಜಸ್ಥಾನ್‌ ರಾಯಲ್ಸ್

ಮ್ಯಾಚ್ ಫಿಕ್ಸಿಂಗ್ ಆರೋಪ; ಸರ್ಕಾರಕ್ಕೆ ದೂರು ನೀಡಿದ ರಾಜಸ್ಥಾನ್‌ ರಾಯಲ್ಸ್

IPL 2025: ಮೂಲಗಳ ಮಾಹಿತಿ ಪ್ರಕಾರ, ಆರ್​ಸಿಎ ಆಡ್​ಹಾಕ್​ ಸಮಿತಿ ಸದಸ್ಯರಿಗೆ ಐಪಿಎಲ್​ ಪಂದ್ಯಗಳ ವೇಳೆ ಸ್ಟೇಡಿಯಂ ಪ್ರವೇಶಕ್ಕೆ ಮಾನ್ಯತೆ ಕಾರ್ಡ್​ಗಳನ್ನು ನೀಡದಿರುವುದು ಜೈದೀಪ್​ ಸಿಟ್ಟಿಗೆ ಪ್ರಮುಖ ಕಾರಣವಾಗಿತ್ತು. ಇದರಿಂದ ಅವರು ಫ್ರಾಂಚೈಸಿ ವಿರುದ್ಧ ಫಿಕ್ಸಿಂಗ್‌ ಆರೋಪ ಮಾಡಿದ್ದಾರೆ ಎನ್ನಲಾಗಿದೆ.