ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಕರ್ನಾಟಕ
KN Rajanna Resigns: ನನ್ನ ರಾಜೀನಾಮೆ ಹಿಂದೆ ದೊಡ್ಡ ಷಡ್ಯಂತ್ರವಿದೆ: ಕೆ.ಎನ್‌.ರಾಜಣ್ಣ ಮೊದಲ ಪ್ರತಿಕ್ರಿಯೆ

ನನ್ನ ರಾಜೀನಾಮೆ ಹಿಂದೆ ದೊಡ್ಡ ಷಡ್ಯಂತ್ರವಿದೆ: ಕೆ.ಎನ್‌.ರಾಜಣ್ಣ

KN Rajanna Resigns: ಸಿಎಂ ಸಿದ್ದರಾಮಯ್ಯ ಮಾತನಾಡಿದ ಬಳಿಕ ನಾನು ಮಾತನಾಡೋ ಎಂದಿದ್ದೆ. ಆದರೆ ಅವರು ಪ್ರತಿಕ್ರಿಯೆ ನೀಡದ ಹಿನ್ನೆಲೆಯಲ್ಲಿ ನಾನು ಮಾತನಾಡುತ್ತಿದ್ದೇನೆ. ರಾಜೀನಾಮೆಯನ್ನು ಸಿಎಂ ಒಪ್ಪಿದ ಬಳಿಕ ರಾಜ್ಯಪಾಲರಿಗೆ ಕಳುಹಿಸಿದ್ದಾರೆ ಎಂದು ಕೆ.ಎನ್‌.ರಾಜಣ್ಣ ತಿಳಿಸಿದ್ದಾರೆ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಅವರು ಮಾತನಾಡಿದ್ದಾರೆ.

Aravind Bellad:‌ ರಾಜಣ್ಣ ರಾಜೀನಾಮೆ; ಸಿದ್ದರಾಮಯ್ಯರಿಗೆ ಡಿಕೆಶಿಯಿಂದ ದೊಡ್ಡ ಹೊಡೆತ ಎಂದ ಅರವಿಂದ ಬೆಲ್ಲದ್‌

ಸಿದ್ದರಾಮಯ್ಯರಿಗೆ ಡಿಕೆಶಿಯಿಂದ ದೊಡ್ಡ ಹೊಡೆತ: ಅರವಿಂದ ಬೆಲ್ಲದ್‌

Aravind Bellad: ಡಿ.ಕೆ. ಶಿವಕುಮಾರ್ ಅವರು ಸಿದ್ದರಾಮಯ್ಯ ಅವರ ಬಲಗೈ ಬಂಟ ರಾಜಣ್ಣ ಅವರ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಮಾಡಿ, ರಾಜೀನಾಮೆ ಕೊಡಿಸಿದ್ದಾರೆ. ಇದು ಶಿವಕುಮಾರ್ ಅವರು ಸಿದ್ದರಾಮಯ್ಯನವರಿಗೆ ನೀಡಿದ ದೊಡ್ಡ ಹೊಡೆತ ಎಂದು ವಿಪಕ್ಷ ಉಪ ನಾಯಕ ಹಾಗೂ ಶಾಸಕ ಅರವಿಂದ ಬೆಲ್ಲದ್‌ ಹೇಳಿದ್ದಾರೆ.

MLC Ivan D'Souza: ರಾಜ್ಯಪಾಲರ ವಿರುದ್ಧ ಪ್ರಚೋದನಾತ್ಮಕ ಹೇಳಿಕೆ; ಎಂಎಲ್‌ಸಿ ಸ್ಥಾನದಿಂದ ಐವನ್ ಡಿಸೋಜಾರನ್ನು ವಜಾಗೊಳಿಸಲು ಬಿಜೆಪಿ-ಜೆಡಿಎಸ್‌ ಮನವಿ

ಎಂಎಲ್‌ಸಿ ಸ್ಥಾನದಿಂದ ಐವನ್ ಡಿಸೋಜಾರನ್ನು ವಜಾಗೊಳಿಸಲು ಮನವಿ

MLC Ivan D'Souza: ರಾಜ್ಯಪಾಲರ ಕುರಿತು ಸಾರ್ವಜನಿಕವಾಗಿ ಸಂವಿಧಾನ ವಿರೋಧಿ ಹಾಗೂ ಪ್ರಚೋದನಾತ್ಮಕ ಹೇಳಿಕೆ ನೀಡಿದ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜಾ ಅವರನ್ನು ವಜಾಗೊಳಿಸಬೇಕೆಂದು ವಿಧಾನ ಪರಿಷತ್ತಿನ ಸಭಾಪತಿಗೆ ಬಿಜೆಪಿ-ಜೆಡಿಎಸ್‌ ಸದಸ್ಯರು ಮನವಿ ಸಲ್ಲಿಸಿದ್ದಾರೆ.

Elephant Attack in Bandipur: ಪ್ರಾಣಕ್ಕಿಂತ ಸೆಲ್ಫಿಯೇ ಹೆಚ್ಚಾಯ್ತಾ? ಆನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪ್ರವಾಸಿಗ ಪಾರು; ಇಲ್ಲಿದೆ ಭಯಾನಕ ವಿಡಿಯೊ

ಸೆಲ್ಫಿಗಾಗಿ ಪ್ರಾಣವನ್ನೇ ಪಣಕ್ಕಿಟ್ಟ ಭೂಪ

Viral Video: ಕಾಡಾನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಕೇರಳದ ಪ್ರವಾಸಿಗರೊಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕರ್ನಾಟಕದ ಬಂಡೀಪುರ ಹುಲಿ ಅಭಯಾರಣ್ಯದಲ್ಲಿ ಘಟನೆ ನಡೆದಿದೆ. ಈ ಭಯಾನಕ ದೃಶ್ಯ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ರಸ್ತೆ ಬದಿ ನಿಂತಿದ್ದ ಆನೆ ಬಳಿ ಸೆಲ್ಫಿ ಕ್ಲಿಕ್ಕಿಸಲು ಯುವಕನೊಬ್ಬ ಮುಂದಾಗಿದ್ದಾನೆ. ಈ ವೇಳೆ ಕೋಪಗೊಂಡ ಆನೆ ದಾಳಿ ಮಾಡಿದೆ.

Maharaja Trophy: ಭರ್ಜರಿ ಗೆಲುವಿನ ಶುಭಾರಂಭ ಕಂಡ ಮಂಗಳೂರು ಡ್ರ್ಯಾಗನ್ಸ್

ಭರ್ಜರಿ ಗೆಲುವಿನ ಶುಭಾರಂಭ ಕಂಡ ಮಂಗಳೂರು ಡ್ರ್ಯಾಗನ್ಸ್

MD vs GBM: ಚೇಸಿಂಗ್‌ ನಡೆಸಿದ ಗುಲ್ಬರ್ಗಾ ನಾಟಕೀಯ ಕುಸಿತ ಕಂಡು ಆಲೌಟ್‌ ಆಯಿತು. ತಂಡದ ಪರ ಲವನಿತ್ ಸಿಸೋಡಿಯಾ(26) ಮತ್ತು ಪ್ರಜ್ವಲ್‌ ಪವನ್‌(25) ಗರಿಷ್ಠ ಸ್ಕೋರರ್‌ ಎನಿಸಿಕೊಂಡರು. ಮಂಗಳೂರು ಪರ ನಾಯಕ ಶ್ರೇಯಸ್‌ ಗೋಪಾಲ್‌ ಮತ್ತು ಕ್ರಾಂತಿ ಕುಮಾರ್ ತಲಾ 3 ವಿಕೆಟ್‌ ಕಿತ್ತು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

Karnataka Rains: ಹವಾಮಾನ ವರದಿ; ನಾಳೆ ರಾಜ್ಯದ ಈ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ

ಹವಾಮಾನ ವರದಿ; ನಾಳೆ ರಾಜ್ಯದ ಈ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ

Karnataka Rains: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳವರೆಗೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಒಂದೆರಡು ಸ್ಥಳಗಳಲ್ಲಿ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 28°C ಮತ್ತು 21°C ಇರುವ ಸಾಧ್ಯತೆ ಇದೆ.

Monsoon Session: ನಕಲಿ ಫಲಾನುಭವಿಗಳ ತಡೆಗೆ ಫೇಸ್ ರೆಕಗ್ನಿಷನ್ ಸಿಸ್ಟಮ್‌ ಜಾರಿ: ಲಕ್ಷ್ಮಿ ಹೆಬ್ಬಾಳ್ಕರ್

ನಕಲಿ ಫಲಾನುಭವಿಗಳ ತಡೆಗೆ ಫೇಸ್ ರೆಕಗ್ನಿಷನ್ ಸಿಸ್ಟಮ್‌ ಜಾರಿ

Laxmi Hebbalkar:ಫಲಾನುಭವಿಗಳಿಗೆ ಪಾರದರ್ಶಕವಾಗಿ ಆಹಾರ ತಲುಪಿಸುವ ಸಲುವಾಗಿ ಎಫ್‌ಆರ್‌ಎಸ್‌ ಜಾರಿ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಎಫ್‌ಆರ್‌ಎಸ್‌ ತಂತ್ರಜ್ಞಾನವನ್ನು ಮತ್ತಷ್ಟು ಸರಳೀಕರಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ತಿಳಿಸಿದ್ದಾರೆ.

Tumkur News: ಮಹಿಳೆಯ ದೇಹ ತುಂಡು, ತುಂಡಾಗಿ ಕತ್ತರಿಸಿದ ಪ್ರಕರಣ; ಕಿರುಕುಳಕ್ಕೆ ಬೇಸತ್ತು ಅತ್ತೆಯನ್ನೇ ಕೊಂದಿದ್ದ ಅಳಿಯ!

ಮಹಿಳೆಯ ದೇಹ ತುಂಡು, ತುಂಡಾಗಿ ಕತ್ತರಿಸಿದ ಪ್ರಕರಣ: ಮೂವರ ಬಂಧನ

Tumkur News: ತುಮಕೂರು ತಾಲೂಕಿನ ಬೆಳ್ಳಾವಿಯ ಲಕ್ಷ್ಮಿದೇವಮ್ಮ (42) ಎಂಬಾಕೆಯನ್ನು ತುಂಡು ತುಂಡಾಗಿ ಕತ್ತರಿಸಿ ವಿವಿಧೆಡೆ ದೇಹದ ಅಂಗಾಂಗಗಳನ್ನು ವಿವಿಧ ಕಡೆ ಬಿಸಾಡಿದ ಆರೋಪದಡಿ ಲಕ್ಷ್ಮಿದೇವಮ್ಮ ಕಿರಿಯ ಮಗಳನ್ನು ವಿವಾಹವಾಗಿದ್ದ ಅಳಿಯ ದಂತ ವೈದ್ಯ ರಾಮಚಂದ್ರ ಸೇರಿ ಮೂವರನ್ನು ಕೊರಟಗೆರೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಧುಮೇಹ ಮತ್ತು ರಕ್ತದೊತ್ತಡ: ಬೆಂಗಳೂರು ನಗರದ “ಕಾಣದ” ಕಾರ್ಮಿಕರ ಮೌನ ಸಾಂಕ್ರಾಮಿಕ

ಬೆಂಗಳೂರು ನಗರದ “ಕಾಣದ” ಕಾರ್ಮಿಕರ ಮೌನ ಸಾಂಕ್ರಾಮಿಕ

ಬೆಂಗಳೂರು ನಗರದ ಗದ್ದಲದ ನಡುವೆ — ಎತ್ತರದ ತಂತ್ರಜ್ಞಾನ ಉದ್ಯಾನಗಳ ನೆರಳಿನಲ್ಲಿ, ಜನಸಂಚಾರದಿಂದ ತುಂಬಿದ ಬೀದಿಗಳ ನಡುವೆ — ಒಂದು ಮೌನ ಸಾಂಕ್ರಾಮಿಕ ಬೆಳೆದುಕೊಳ್ಳು ತ್ತಿದೆ. ಇದು ನಗರವನ್ನು ಮುಂದುವರಿಸಲು ಶ್ರಮಿಸುವ ಗೃಹಸಹಾಯಕರು, ಬೀದಿ ವ್ಯಾಪಾರಿಗಳು, ವಲಸೆ ಕಾರ್ಮಿಕರು ಮತ್ತು ಕಟ್ಟಡ ಕಾರ್ಮಿಕರ ಬದುಕಿನಲ್ಲಿ ನುಗ್ಗಿದೆ.

KN Rajanna: ಕೆ.ಎನ್‌. ರಾಜಣ್ಣ ರಾಜೀನಾಮೆ ಅಂಗೀಕಾರ; ಸಂಪುಟದಿಂದ ಕೈಬಿಡಲು ರಾಜಭವನದಿಂದ ಪತ್ರ

ಕೆ.ಎನ್‌. ರಾಜಣ್ಣರನ್ನು ಸಂಪುಟದಿಂದ ಕೈಬಿಡಲು ರಾಜಭವನದಿಂದ ಪತ್ರ

KN Rajanna:: ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್. ಪ್ರಭುಶಂಕರ್ ಅವರು ರಾಜ್ಯ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರಿಗೆ ಪತ್ರ ಬರೆದಿದ್ದು, ರಾಜ್ಯಪಾಲರ ಅಧಿಸೂಚನೆ ಅನುಸಾರ ಕೆ.ಎನ್.ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ತಕ್ಷಣದಿಂದ ಜಾರಿಗೆ ಬರುವಂತೆ ಕೈಬಿಡುವ ಕುರಿತು ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.

DK Shivakumar: ಬಿಜೆಪಿ ಸೇರುತ್ತಾರಾ ಡಿ.ಕೆ. ಶಿವಕುಮಾರ್‌?: ಪ್ರತಿಕ್ರಿಯೆ ಏನು?

ಬಿಜೆಪಿ ಸೇರುತ್ತಾರಾ ಡಿ.ಕೆ. ಶಿವಕುಮಾರ್‌?: ಪ್ರತಿಕ್ರಿಯೆ ಏನು?

DK Shivakumar: ನಾನೇನೂ ಬಿಜೆಪಿಗೆ ಓಡಿ ಹೋಗುತ್ತಿಲ್ಲ, ನನಗೆ ಅದರ ಅವಶ್ಯಕತೆಯೂ ಇಲ್ಲ. ಯಾರೂ ಇದರ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಮಾಧ್ಯಮದವರು ನಿಧಿ ನೀಡಿದರೆ ನಿಮ್ಮ ಹೆಸರಿನಲ್ಲಿಯೂ ಮೆಟ್ರೋ ನಿಲ್ದಾಣಗಳ ನಾಮಕರಣ ಮಾಡಲಾಗುವುದು. ಈ ಯೋಜನೆ ಬೇರೆ ಎಲ್ಲಿಯೂ ಇಲ್ಲ. ಈ ಮಾದರಿಯನ್ನು ಬೆಂಗಳೂರಿನಲ್ಲಿ ಪ್ರಾರಂಭ ಮಾಡಿದ್ದೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

DK Shivakumar: ಚುಣಾವಣಾ ಆಯೋಗದ ನೋಟಿಸ್‌ಗೆಲ್ಲ ನಾವು ಹೆದರೋದಿಲ್ಲ: ಡಿ.ಕೆ. ಶಿವಕುಮಾರ್

ಚುಣಾವಣಾ ಆಯೋಗದ ನೋಟಿಸ್‌ಗೆಲ್ಲ ನಾವು ಹೆದರೋದಿಲ್ಲ: ಡಿ.ಕೆ. ಶಿವಕುಮಾರ್

DK Shivakumar: ಚುನಾವಣೆಗಳಲ್ಲಿ ಏನು ತಪ್ಪಾಗಿದೆ ಎಂದು ರಾಜಕೀಯ ನಾಯಕರಾದ ನಾವುಗಳು ಚುನಾವಣಾ ಆಯೋಗಕ್ಕೆ ತಿಳಿಸಿದ್ದೇವೆ. ಅವರೇ ಈ ತಪ್ಪುಗಳನ್ನು ಬಗೆಹರಿಸಬೇಕು ಹಾಗೂ ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳಬೇಕು. ಈ ಕೆಲಸ ಮಾಡುವುದು ನಾವಲ್ಲ. ಅವರು ನೀಡಿರುವ ನೋಟಿಸ್‌ಗೆಲ್ಲ ನಾವು ಹೆದರುವುದಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

KN Rajanna: ಸಚಿವ ರಾಜಣ್ಣ ರಾಜೀನಾಮೆಯನ್ನು ಅಂಗೀಕರಿಸಿದ ರಾಜ್ಯಪಾಲರು

ಸಚಿವ ರಾಜಣ್ಣ ರಾಜೀನಾಮೆಯನ್ನು ಅಂಗೀಕರಿಸಿದ ರಾಜ್ಯಪಾಲರು

KN Rajanna: ಬಿಜೆಪಿ ಮತಗಳ್ಳತನ ಕುರಿತಂತೆ ಅವರು ನೀಡಿದ್ದ ಹೇಳಿಕೆಗೆ ರಾಜಣ್ಣ ವಿರುದ್ಧ ಕಾಂಗ್ರೆಸ್‌ ಹೈಕಮಾಂಡ್‌ ತೀವ್ರವಾಗಿ ಗರಂ ಆಗಿತ್ತು. ಈ ಹಿನ್ನೆಲೆಯಲ್ಲಿ ಹೈಕಮಾಂಡ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ರಾಜೀನಾಮೆ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.

Raksha Bandhan: ತಂಗಿಯ ಆಸೆ; 41 ಕಿ.ಮೀ ನಡೆದುಕೊಂಡೇ ಹೋಗಿ ರಾಖಿ ಕಟ್ಟಿಸಿಕೊಂಡ ಅಣ್ಣ!

ತಂಗಿಯ ಆಸೆ; 41 ಕಿ.ಮೀ ನಡೆದುಕೊಂಡೇ ಹೋಗಿ ರಾಖಿ ಕಟ್ಟಿಸಿಕೊಂಡ ಅಣ್ಣ!

Kalaburagi News: ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಬಡದಾಳ ಗ್ರಾಮದಿಂದ ಆಲಮೇಲದಲ್ಲಿರುವ ತಂಗಿ ಮನೆಗೆ ಸಹೋದರ ನಡೆದುಕೊಂಡು ಹೋಗಿ ರಾಖಿ ಕಟ್ಟಿಸಿಕೊಂಡಿದ್ದಾನೆ. ನಡೆದುಕೊಂಡು ಬಂದು ರಾಖಿ ಕಟ್ಟಿಸಿಕೊಳ್ಳಬೇಕು ಎಂದು ಭಾಗೀಶ್ ತಂಗಿ ಆಸೆ ಪಟ್ಟಿದ್ದರಿಂದ ಯುವಕ ತಂಗಿಯ ಆಸೆ ಪೂರೈಸಿದ್ದಾನೆ.

KN Rajanna Resigns: ಸಚಿವ ಕೆಎನ್‌ ರಾಜಣ್ಣ ದಿಢೀರ್‌ ರಾಜೀನಾಮೆ, ಹೈಕಮಾಂಡ್‌ ರಾಂಗ್‌ ಆಗಿದ್ದೇ ಕಾರಣ!

ಹೈಕಮಾಂಡ್‌ ರಾಂಗ್‌, ಸಚಿವ ಕೆಎನ್‌ ರಾಜಣ್ಣ ದಿಢೀರ್‌ ರಾಜೀನಾಮೆ

KN Rajanna: ಬಿಜೆಪಿ ಮತಗಳವು ಹಿನ್ನೆಲೆಯಲ್ಲಿ ರಾಜಣ್ಣ ನೀಡಿದ ಹೇಳಿಕೆಗೆ ಹೈಕಮಾಂಡ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ರಾಜೀನಾಮೆ ನೀಡುವಂತೆ ಸೂಚನೆ ನೀಡಲಾಗಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಕೆಲ ಹೊತ್ತಿನಲ್ಲೇ ರಾಜಣ್ಣ ರಾಜೀನಾಮೆ ಸಲ್ಲಿಕೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

Actor Arjun Yogi: ಸ್ಯಾಂಡಲ್‌ವುಡ್‌ ನಟ ಅರ್ಜುನ್‌ ಯೋಗಿ ಕಾರು ಅಪಘಾತ; ನಜ್ಜುಗುಜ್ಜಾದ ವಾಹನ

ಸ್ಯಾಂಡಲ್‌ವುಡ್‌ ನಟ ಅರ್ಜುನ್‌ ಯೋಗಿ ಕಾರು ಅಪಘಾತ

Actor Arjun Yogi: ಬೆಂಗಳೂರಿನ ಆರ್.ಆರ್. ನಗರದ ಚನ್ನಸಂದ್ರದ ಸಮೀಪ ಸೋಮವಾರ ಮುಂಜಾನೆ ಅಪಘಾತ ನಡೆದಿದೆ. ಕಾರಿಗೆ ನಾಯಿ ಅಡ್ಡ ಬಂದ ಕಾರಣ, ಕಾರಿನ ನಿಯಂತ್ರಣ ತಪ್ಪಿ ರಸ್ತೆ ಬದಿ ಕಾರು ಡಿಕ್ಕಿ ಹೊಡೆದಿದೆ. ಏರ್ ಬ್ಯಾಗ್ ಓಪನ್ ಆದ ಕಾರಣ ಯಾವುದೇ ಅವಘಡ ಸಂಭವಿಸಿಲ್ಲ.

ಶೇ.84ರಷ್ಟು ಮಂದಿಗೆ ವಿಮೆ: ಎಕ್ಸಿಸ್‌ ಮ್ಯಾಕ್ಸ್‌ ಲೈಫ್‌ ಇಂಡಿಯಾ ಪ್ರೊಟೆಕ್ಷನ್ ಸೂಚ್ಯಂಕ 7.0

ಶೇ.84ರಷ್ಟು ಮಂದಿಗೆ ಜೀವ ವಿಮೆ ಸೌಲಭ್ಯ: ದಕ್ಷಿಣ ಭಾರತ ಮುಂದು

ನಗರವಾಸಿಗಳು, ಗ್ರಾಮೀಣ ಪ್ರದೇಶಗಳಿಗೆ ಸೇರಿದವರು, ವೇತನ ವರ್ಗದವರು, ಗಿಗ್‌ ಕಾರ್ಮಿಕರು ಮತ್ತು ನಿವೃತ್ತರು ಯಾವ ಅಭಿಪ್ರಾಯವನ್ನು ದಾಖಲಿಸಿದ್ದಾರೆ ಎಂಬುದನ್ನು ಇದು  ಹೇಳುತ್ತದೆ. ಹಣಕಾಸಿನ ರಕ್ಷೆ, ಯೋಜನೆ ಮತ್ತು ದೀರ್ಘಾವಧಿ ಭದ್ರತೆಯ ವಿಚಾರವಾಗಿ ದೇಶದಲ್ಲಿ ಯಾವ ಬಗೆಯ ದೃಷ್ಟಿಕೋನ ಇದೆ ಎಂಬುದರ ಬಗ್ಗೆ ಇದು ಅಧಿಕೃತವಾದ ಒಳನೋಟಗಳನ್ನು ನೀಡುತ್ತದೆ.

Monsoon Session: ರಾಜ್ಯ ಮುಂಗಾರು ಅಧಿವೇಶನ ಆರಂಭ, ಸಂತಾಪ ಸೂಚನೆ ವೇಳೆ ಗುಡುಗಿದ ಸ್ಪೀಕರ್

ಮುಂಗಾರು ಅಧಿವೇಶನ ಆರಂಭ, ಸಂತಾಪ ಸೂಚನೆ ವೇಳೆ ಗುಡುಗಿದ ಸ್ಪೀಕರ್

ಇಂದಿನಿಂದ ರಾಜ್ಯ ವಿಧಾನ ಮಂಡಲದ ಮುಂಗಾರು ಅಧಿವೇಶನ (Monsoon Session) ಶುರುವಾಗಿದೆ. ಅಧಿವೇಶನದ ಮೊದಲ ದಿನವೇ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿಪಕ್ಷಗಳು ಮುಂದಾಗಿದೆ. ಆರ್ ಸಿ ಬಿ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತದಿಂದ 11 ಜನ ಸಾವಿನ ವಿಚಾರವನ್ನು ಪ್ರಸ್ತಾಪಿಸಲು ನಿಲುವಳಿ ಸೂಚನೆ ನೀಡಲಾಯಿತು.

Gold Price Today: ಚಿನ್ನದ ದರದಲ್ಲಿ ಮತ್ತೆ ಇಳಿಕೆ; ಇಂದಿನ ರೇಟ್‌ ಚೆಕ್‌ ಮಾಡಿ

ಇಂದು ಚಿನ್ನದ ದರ ಎಷ್ಟಿದೆ? ಇಲ್ಲಿ ಚೆಕ್‌ ಮಾಡಿ

Gold Price Today on 11th Aug 2025: ಬೆಂಗಳೂರಿನಲ್ಲಿ ನಿನ್ನೆ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 70 ರೂ ಇಳಿಕೆಯಾಗಿದ್ದು 9,375 ರೂ. ಗೆ ಬಂದು ತಲುಪಿದೆ. ಇನ್ನು 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 76 ರೂ. ಇಳಿಕೆಯಾಗಿ, 10,228 ರೂ. ಆಗಿದೆ. ಆ ಮೂಲಕ 22 ಕ್ಯಾರಟ್‌ನ 8 ಗ್ರಾಂ ಚಿನ್ನ 75,000 ರೂ. ಬಾಳಿದರೆ, 10 ಗ್ರಾಂಗೆ ನೀವು 93,750 ರೂ. ಹಾಗೂ 100 ಗ್ರಾಂಗೆ 9,37,500ರೂ. ನೀಡಬೇಕಾಗುತ್ತದೆ.

Dharmasthala Case: ಧರ್ಮಸ್ಥಳದಲ್ಲಿ ಹಲ್ಲೆ, ಯೂಟ್ಯೂಬರ್‌ಗಳ ಮೇಲೂ ಬಿತ್ತು ಕೇಸ್

ಧರ್ಮಸ್ಥಳದಲ್ಲಿ ಹಲ್ಲೆ, ಯೂಟ್ಯೂಬರ್‌ಗಳ ಮೇಲೂ ಬಿತ್ತು ಕೇಸ್

Assaut Case: ಯೂಟ್ಯೂಬರ್‌ಗಳು ಅಡ್ಡಗಟ್ಟಿ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಬೈಕ್ ಸವಾರನನ್ನು ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಮೂವರು ಯೂಟ್ಯೂಬರ್‌ಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Namma Metro Yellow Line: ಇಂದಿನಿಂದ ಹಳದಿ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ, ಟಿಕೆಟ್‌ ದರಗಳು ಹೀಗಿವೆ

ಇಂದಿನಿಂದ ಹಳದಿ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ, ಟಿಕೆಟ್‌ ದರಗಳು ಹೀಗಿವೆ

Bengaluru: ಇಂದಿನಿಂದ ಯೆಲ್ಲೋ ಮಾರ್ಗದ ರೈಲು ಸಾರ್ವಜನಿಕರಿಗೆ ಲಭ್ಯವಿರಲಿದೆ. ಇಂದು ಬೆಳಗ್ಗೆ 6:30ರಿಂದ ಸಂಚಾರ ಶುರುವಾಗಿದೆ. ಒಂದು ದಿಕ್ಕಿನಲ್ಲಿ 35 ನಿಮಿಷಗಳ ಸಂಚಾರ ಸಮಯ ಇದ್ದು, ಹಳದಿ ಮಾರ್ಗ ಒಟ್ಟು 16 ಮೆಟ್ರೋ ನಿಲ್ದಾಣಗಳನ್ನು ಹೊಂದಿದೆ. ಡೆಲ್ಟಾ ಎಲೆಕ್ಟ್ರಾನಿಕ್‌ನಿಂದ ಬೊಮ್ಮಸಂದ್ರದವರೆಗೂ ಮೆಟ್ರೋ ಸಂಚಾರ ನಡೆಸಲಿದೆ. ರಾತ್ರಿ 11:15ಕ್ಕೆ ಕೊನೆಯ ರೈಲು ಸಂಚರಿಸಲಿದೆ.

Self Harming: ಅಂತರ್ಜಾತೀಯ ಮದುವೆಯಾಗಿ ಬದುಕು ಕೊನೆಗೊಳಿಸಿಕೊಂಡ ಯುವತಿ

ಅಂತರ್ಜಾತೀಯ ಮದುವೆಯಾಗಿ ಬದುಕು ಕೊನೆಗೊಳಿಸಿಕೊಂಡ ಯುವತಿ

Intercaste Marriage: ಯುವಜೋಡಿ 4 ತಿಂಗಳ ಹಿಂದೆ ರಿಜಿಸ್ಟರ್ ಮ್ಯಾರೇಜ್‌ ಆಗಿದ್ದರು. ಮದುವೆಯಾದ ಕೆಲವೇ ದಿನಕ್ಕೆ ನಿಲೇಶ್‌ ಕೆಲಸ ಬಿಟ್ಟಿದ್ದ. ಅನಿತಾ ಕೂಡಾ 3 ತಿಂಗಳ ಗರ್ಭಿಣಿ ಆಗಿದ್ದಳು. ಸಣ್ಣಪುಟ್ಟ ವಿಷಯಕ್ಕೂ ಗಂಡ ಹೆಂಡತಿ ನಡುವೆ ಜಗಳ ಶುರುವಾಗಿತ್ತು. ಜೊತೆಗೆ ಹುಡುಗನ ಮನೆಯವರು ಜಾತಿ ವಿಷಯದಲ್ಲಿ ತುಂಬಾ ಕಿರುಕುಳ ಕೊಡುತ್ತಿದ್ದರು.

Gruhalkahsmi Scheme: ಮಹಿಳೆಯರಿಗೆ ಸಿಹಿ ಸುದ್ದಿ, ಗೃಹಲಕ್ಷ್ಮೀ ಯೋಜನೆ ಎರಡು ಕಂತಿನ ಹಣ ಜಮೆ

ಮಹಿಳೆಯರಿಗೆ ಸಿಹಿ ಸುದ್ದಿ, ಗೃಹಲಕ್ಷ್ಮೀ ಯೋಜನೆ ಎರಡು ಕಂತಿನ ಹಣ ಜಮೆ

ಗೃಹಲಕ್ಷ್ಮಿ ಯೋಜನೆಯಡಿ ಜೂನ್ ತಿಂಗಳ ಭತ್ಯೆಯನ್ನು ಆಯಾ ತಾಲೂಕು ಪಂಚಾಯಿತಿ ಮುಖೇನ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನಗದು ನೇರ ವರ್ಗಾವಣೆಯಾಗುತ್ತಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂಲಗಳ ಪ್ರಕಾರ ಯೋಜನೆಯಡಿ 1.23 ಕೋಟಿ ಅರ್ಹ ಫಲಾನುಭವಿಗಳಿದ್ದಾರೆ.

Actor Chetan Ahimsa: ಸಂರಕ್ಷಿತಾರಣ್ಯ ಅಕ್ರಮ ಪ್ರವೇಶ, ನಟ ಚೇತನ್‌ ಅಹಿಂಸಾ ಮೇಲೆ ಪ್ರಕರಣ ದಾಖಲು

ಸಂರಕ್ಷಿತಾರಣ್ಯ ಅಕ್ರಮ ಪ್ರವೇಶ, ನಟ ಚೇತನ್‌ ಅಹಿಂಸಾ ಮೇಲೆ ಪ್ರಕರಣ

Nagarahole Forest: ಚೇತನ್ ಅಹಿಂಸಾ, ನ್ಯಾಷನಲ್ ಆದಿವಾಸಿ ಸಂಘಟನೆ ಮುಖ್ಯಸ್ಥ ರಾಯ್ ಡೇವಿಡ್, ರಾಜಾರಾಮ್, ಪತ್ರಕರ್ತೆ ನಿಕಿತಾ ಜೈನ್, ಸರ್ತ ಜಾಲಿ ವಿರುದ್ಧ ನಾಗರಹೊಳೆ ಅರಣ್ಯಕ್ಕೆ ಅಕ್ರಮ ಪ್ರವೇಶ ಆರೋಪದಡಿ ನಾಗರಹೊಳೆ ವನ್ಯಜೀವಿ ಉಪ ವಿಭಾಗದ ಸಂರಕ್ಷಣಾಧಿಕಾರಿ ಜೆ.ಅನನ್ಯಕುಮಾರ್ ಪ್ರಕರಣ ದಾಖಲಿಸಿದ್ದಾರೆ.

Loading...