ಶಿರಸಿಯ ಸಿರಿ: ಯುಗಾದಿಯ ಶೋಭಾಯಾತ್ರೆ
ಹಬ್ಬವನ್ನು ಒಂದೇ ಮಾತಿನಲ್ಲಿ ಹೇಳುವುದಾದರೆ, ಹಬ್ಬವೆಂದರೆ ಸಂಭ್ರಮ, ಸಡಗರ. ಆದರೆ ಒಪ್ಪಬೇಕಾದ ಮಾತೆಂದರೆ, ಈಗ ಹಬ್ಬಗಳು ಮುಂಚಿನಂತಿಲ್ಲ, ದಿನದಿಂದ ದಿನಕ್ಕೆ ಆಚರಣೆಗಳು ಮೊಟಕುಗೊಳ್ಳುತ್ತಿವೆ, ಸಡಗರ ಕ್ಷೀಣಿಸುತ್ತಿದೆ. ಇದಕ್ಕೆ ಅಪವಾದ ಎಂಬಂತೆ ದೇಶದ ಕೆಲವು ಕಡೆಗಳಲ್ಲಿ ಕೆಲವು ಹಬ್ಬಗಳನ್ನು ವಿಭಿನ್ನವಾಗಿ ಆಚರಿಸುವುದೂ ಇದೆ.