ಗೊಬ್ಬರ ತುಂಬಿದ ಲಾರಿ ಬೇಕರಿಗೆ ನುಗ್ಗಿ ಇಬ್ಬರ ದುರ್ಮರಣ
Koratagere News: ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಕೋಳಾಲದ ಬಸ್ ನಿಲ್ದಾಣದ ಬಳಿ ಮಂಗಳವಾರ ಮಧ್ಯಾಹ್ನ ಅಪಘಾತ ನಡೆದಿದೆ. ಗೊಬ್ಬರ ತುಂಬಿದ ಲಾರಿ ಬ್ರೇಕ್ ಫೇಲ್ಯೂರ್ ಆಗಿ, ಬೇಕರಿಗೆ ನುಗ್ಗಿದ ಪರಿಣಾಮ, ಬೇಕರಿ ಮುಂಭಾಗ ಎಲೆ ಹಾಗೂ ಬಳೆ ಮಾರುತಿದ್ದ ಇಬ್ಬರು ವ್ಯಕ್ತಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ.