ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮಹರ್ಷಿ ವಾಲ್ಮೀಕಿ ನಾಯಕ ಸಮಾಜದಿಂದ ಪ್ರತಿಭಟನೆ: ಎಸ್ಸಿ ಎಸ್ಟಿ ಹೆಚ್ಚಿನ ಮೀಸಲಾತಿ ಜಾರಿಗೆ ಆಗ್ರಹ

ಕಳೆದ 70 ವರ್ಷದಿಂದಲೂ ಮೀಸಲಾತಿ ಹೆಚ್ಚಳಕ್ಕೆ ಬೇಡಿಕೆ ಇದ್ದರೂ ಈಗ ಹೆಚ್ಚಳ ಮಾಡಿ ಮೂಗಿಗೆ ತುಪ್ಪ ಸವರಿದಂತೆ ಸರ್ಕಾರಗಳು ನಿರ್ಲಕ್ಷ್ಯ ತೋರಿದೆ. 57 ಸಾವಿರ ಸರ್ಕಾರಿ ಹುದ್ದೆ ಭರ್ತಿಗೆ ಸರ್ಕಾರ ಮುಂದಾಗಿದೆ. ಹಳೆಯ ಮೀಸಲಾತಿ ಶೇ.3ರಂತೆ 1600 ಹುದ್ದೆ ಮಾತ್ರ ದೊರೆ ಯಲಿದೆ. ಹೆಚ್ಚುವರಿ ಶೇ.7ರಂತೆ ಭರ್ತಿ ಮಾಡಿದರೆ ಎಸ್ಟಿ ಜನಾಂಗಕ್ಕೆ 3 ಸಾವಿರಕ್ಕೂ ಅಧಿಕ ಹುದ್ದೆ ಸಿಗಲಿದೆ ಎಂದರು

ಮಹರ್ಷಿ ವಾಲ್ಮೀಕಿ ನಾಯಕ ಸಮಾಜದಿಂದ ಪ್ರತಿಭಟನೆ

-

Ashok Nayak
Ashok Nayak Mar 12, 2026 11:47 PM

ಗುಬ್ಬಿ: ರಾಜ್ಯದ ಎಸ್ಸಿ ಎಸ್ಟಿ ಸಮುದಾಯದ ಹಲವು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗುಬ್ಬಿ ತಾಲ್ಲೂಕು ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಮಾಜದಿಂದ ಪ್ರತಿಭಟನೆ ನಡೆಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಬೇಡಿಕೆ ಪತ್ರವನ್ನು ತಾಲ್ಲೂಕು ಆಡಳಿತ ಮೂಲಕ ಸಲ್ಲಿಸಿದರು.

ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ತಾಲ್ಲೂಕು ಕಚೇರಿಗೆ ತಲುಪಿದ ವಾಲ್ಮೀಕಿ ನಾಯಕ ಸಮಾಜದ ಬಂಧುಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 2022ರಲ್ಲಿ ಎಸ್ಸಿ ಜನಾಂಗ ಶೇ.15 ರಿಂದ 17ಕ್ಕೆ ಏರಿಕೆ ಮಾಡಿದ್ದು, ಎಸ್ಟಿ ಜನಾಂಗಕ್ಕೆ ಶೇ.3 ರಿಂದ 7ಕ್ಕೆ ಹೆಚ್ಚಳ ಮಾಡಿದ್ದಾರೆ. ಆದರೆ ಎರಡೂ ಸರ್ಕಾರಗಳು ವಿಳಂಬ ನೀತಿ ಅನುಸರಿಸುತ್ತಿದೆ. ಸಂವಿಧಾನದ 9 ನೇ ಅನುಸೂಚಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು.

ಮಹರ್ಷಿ ವಾಲ್ಮೀಕಿ ನಾಯಕ ಸಮಾಜದ ಮುಖಂಡ ರಾಮಚಂದ್ರಪ್ಪ ಮಾತನಾಡಿ, ಕಳೆದ 70 ವರ್ಷದಿಂದಲೂ ಮೀಸಲಾತಿ ಹೆಚ್ಚಳಕ್ಕೆ ಬೇಡಿಕೆ ಇದ್ದರೂ ಈಗ ಹೆಚ್ಚಳ ಮಾಡಿ ಮೂಗಿಗೆ ತುಪ್ಪ ಸವರಿದಂತೆ ಸರ್ಕಾರಗಳು ನಿರ್ಲಕ್ಷ್ಯ ತೋರಿದೆ. 57 ಸಾವಿರ ಸರ್ಕಾರಿ ಹುದ್ದೆ ಭರ್ತಿಗೆ ಸರ್ಕಾರ ಮುಂದಾಗಿದೆ. ಹಳೆಯ ಮೀಸಲಾತಿ ಶೇ.3ರಂತೆ 1600 ಹುದ್ದೆ ಮಾತ್ರ ದೊರೆಯಲಿದೆ. ಹೆಚ್ಚುವರಿ ಶೇ.7ರಂತೆ ಭರ್ತಿ ಮಾಡಿದರೆ ಎಸ್ಟಿ ಜನಾಂಗಕ್ಕೆ 3 ಸಾವಿರಕ್ಕೂ ಅಧಿಕ ಹುದ್ದೆ ಸಿಗಲಿದೆ ಎಂದರು.

ಇದನ್ನೂ ಓದಿ: Chikkaballapur News: ಭಾನುವಾರ ಬಂದ್ ಕರೆ ಸಮಂಜಸವಲ್ಲ, ವ್ಯಾಪಾರಕ್ಕೆ ತೊಂದರೆ, ಬೇರೆ ದಿನದಲ್ಲಿ ಬಂದ್‌ ಮಾಡಿ: ಮಂಜುನಾಥ್ ಆಗ್ರಹ

ವಾಲ್ಮೀಕಿ ನಾಯಕ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ಸೌಭಾಗ್ಯಮ್ಮ ಮಾತನಾಡಿ, ಎಸ್ ಸಿಪಿ ಹಾಗೂ ಟಿಎಸ್ ಯೋಜನೆಯಲ್ಲಿ ಮೀಸಲಿದ್ದ ಹಣವನ್ನು ಬೇರೆ ಯೋಜನೆಗಳಿಗೆ ಬಳಸಲಾಗುತ್ತಿದೆ. ಸರ್ಕಾರ ನಮ್ಮ ಅಭಿವೃದ್ದಿಯ ಉದ್ದೇಶದ ಹಣ ನಮ್ಮಗಳ ಉದ್ದಾರಕ್ಕೆ ಮಾತ್ರ ಬಳಕೆಯಾಗಬೇಕು. ಜೊತೆಗೆ ಎಸ್ಸಿ ಎಸ್ಟಿ ಜಾತಿಗಳಿಗೆ ಶೇ.56ರಷ್ಟು ಮೀಸಲಾತಿ ಪ್ರಮಾಣ ಹೆಚ್ಚುವವರೆಗೆ ನೇಮಕಾತಿ ಪ್ರಕ್ರಿಯೆ ಮಾಡಬಾರದು ಎಂದು ಒತ್ತಾಯಿಸಿದರು.

ವಾಲ್ಮೀಕಿ ನಾಯಕ ಸಮಾಜದ ಮುಖಂಡ ಜಿ.ಎಲ್.ರಂಗನಾಥ್ ಮಾತನಾಡಿ ರಾಜ್ಯ ಸರ್ಕಾರ 2022 ರಲ್ಲಿ ಮೀಸಲಾತಿ ಹೆಚ್ಚಳ ಮಾಡಿ ಈಗ ಜಾರಿಗೆ ತರಲು ಹಿಂದೇಟು ಹಾಕು ತ್ತಿರುವುದು ಸರಿಯಲ್ಲ. ಸರ್ಕಾರಿ ಹುದ್ದೆ ಭರ್ತಿಗೆ ಮುಂದಾದ ಈ ವೇಳೆ ನಮ್ಮ ಮೀಸಲಾತಿ ಹಕ್ಕು ನಾವುಗಳು ಪ್ರತಿಪಾದಿಸಬೇಕಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಎಸ್ಸಿ ಎಸ್ಟಿ ಸಮಾಜದ ಬಗ್ಗೆ ಕಾಳಜಿ ವಹಿಸಿ ನಮ್ಮ ಹಕ್ಕೊತ್ತಾಯ ಈಡೇರಿಸಬೇಕು. ತಾಲ್ಲೂಕು ಆಡಳಿತ ಮೂಲಕ ಎರಡೂ ಸರ್ಕಾರಗಳಿಗೆ ಬೇಡಿಕೆ ಪತ್ರವನ್ನು ನೀಡುತ್ತಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಪಪಂ ಮಾಜಿ ಅಧ್ಯಕ್ಷ ಜಿ.ಎನ್.ಅಣ್ಣಪ್ಪಸ್ವಾಮಿ, ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಮಾಜದ ಗೌರವಾಧ್ಯಕ್ಷ ನರಸಿಂಹಮೂರ್ತಿ, ಅಧ್ಯಕ್ಷ ಅಡವೀಶಯ್ಯ, ಮುಖಂಡರಾದ ಲಕ್ಷ್ಮೀರಂಗಯ್ಯ, ರಾಘವೇಂದ್ರ, ನಾಗರಾಜು, ಲಕ್ಷ್ಮಣಪ್ಪ, ಕರಿಯಮ್ಮ ರಮೇಶ್, ಹೊಸಹಳ್ಳಿ ರಂಗನಾಥ್, ರವೀಶ್, ಹೇರೂರು ನಾಗಣ್ಣ, ರಾಧಮಣಿ ಇತರರು ಇದ್ದರು.