ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vastu Tips: ಜೀವನದ ಸಮಸ್ಯೆಗಳಿಗೆ ತಲೆದಿಂಬಿನಿಂದ ಪರಿಹಾರ

ಜೀವನದ ಸಮಸ್ಯೆಗಳಿಗೂ ತಲೆದಿಂಬಿಗೂ ಏನು ಸಂಬಂಧ ಎಂದು ಯೋಚಿಸುತ್ತಿದ್ದೀರಾ. ಹೆಚ್ಚು ಸುಸ್ತು, ಮನಸ್ಸಿಗೆ ಬೇಸರವಾದಾಗ ತಲೆದಿಂಬು ನಮಗೆ ಸಾಂತ್ವನ ನೀಡುವುದು ಗೊತ್ತೇ ಇದೆ. ಆದರೆ ಇದು ಕೆಲವೊಂದು ಸಮಸ್ಯೆಗಳನ್ನು ಪರಿಹರಿಸುತ್ತದೆ. ಪ್ರತಿಯೊಬ್ಬರ ಜೀವನದಲ್ಲೂ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಇದ್ದೆ ಇರುತ್ತದೆ. ಕೆಲವೊಂದು ಸಮಸ್ಯೆಗಳಿಗೆ ಪರಿಹಾರವೇ ಇಲ್ಲವೇನೋ ಎಂದೆನಿಸುತ್ತದೆ. ಇಂತಹ ಸಂದರ್ಭದಲ್ಲಿ ವಾಸ್ತು ಶಾಸ್ತ್ರ (Vastu Shastra) ಹೇಳುವ ಕೆಲವು ವಸ್ತುಗಳನ್ನು ತಲೆದಿಂಬಿನ ಒಳಗೆ ಇರಿಸುವುದರಿಂದ ಪರಿಹಾರ ಕಾಣಬಹುದು.

ಸಮಸ್ಯೆಗಳನ್ನು ದೂರ ಮಾಡುತ್ತದೆ ಈ ಐದು ವಸ್ತುಗಳು

ವಾಸ್ತು (Vastu Tips) ಎನ್ನುವುದು ಪ್ರತಿಯೊಬ್ಬರ ಜೀವನದ ಒಂದು ಪ್ರಮುಖ ಅಂಶ. ಇದನ್ನು ಪರಿಗಣಿಸದೆ ಮಾಡುವ ಕೆಲಸಗಳು ಉತ್ತಮ ಫಲ ಕೊಡುವುದಿಲ್ಲ ಎನ್ನುವ ನಂಬಿಕೆ ಎಲ್ಲರಲೂ ಇದೆ. ಪ್ರತಿಯೊಬ್ಬರ ಜೀವನದಲ್ಲೂ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಇದ್ದೆ ಇರುತ್ತದೆ. ಕೆಲವೊಂದು ಸಮಸ್ಯೆಗಳಿಗೆ ಪರಿಹಾರವೇ ಇಲ್ಲವೇನೋ ಎಂದೆನಿಸುತ್ತದೆ. ಇಂತಹ ಸಂದರ್ಭದಲ್ಲಿ ವಾಸ್ತು ಶಾಸ್ತ್ರ ಕೆಲವು ಪರಿಹಾರಗಳನ್ನು ಸೂಚಿಸುತ್ತದೆ. ವಾಸ್ತು ಶಾಸ್ತ್ರದ (Vastu for home) ಪ್ರಕಾರ ತಲೆದಿಂಬಿನ ಕೆಳಗೆ ಈ ಐದು ವಸ್ತುಗಳನ್ನು ಇಟ್ಟು ರಾತ್ರಿ ನಿತ್ಯ ಮಲಗುವುದರಿಂದ (Vastu for sleeping) ಜೀವನದಲ್ಲಿನ ನಕಾರಾತ್ಮಕ ಶಕ್ತಿಯನ್ನು ತೆಗೆದು ಹಾಕಬಹುದು. ಇದರಿಂದ ಸಮಸ್ಯೆಗಳು ದೂರವಾಗುವುದು.

ಜೀವನದಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸಿ ನಕಾರಾತ್ಮಕತೆಯನ್ನು ದೂರ ಮಾಡಲು ವಾಸ್ತು ಶಾಸ್ತ್ರ ಹೇಳುವ ಕೆಲವು ವಸ್ತುಗಳನ್ನು ತಲೆದಿಂಬಿನ ಕೆಳಗೆ ಇಟ್ಟು ಮಲಗಬಹುದು. ಇದು ನಮ್ಮ ಬದುಕಿನಲ್ಲಿರುವ ಸಮಸ್ಯೆಗಳನ್ನು ದೂರ ಮಾಡುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಈ ಐದು ವಸ್ತುಗಳನ್ನು ತಲೆದಿಂಬಿನ ಕೆಳಗೆ ಇಟ್ಟು ನಿತ್ಯ ಅದರ ಮೇಲೆ ತಲೆ ಇಟ್ಟು ಮಲಗುವುದರಿಂದ ಜೀವನದಲ್ಲಿ ಹಲವಾರು ಸಕಾರಾತ್ಮಕ ಬದಲಾವಣೆಗಳನ್ನು ಕಾಣಬಹುದು.

ಲವಂಗ

ತಲೆದಿಂಬಿನ ಕೆಳಗೆ 5,7 ಅಥವಾ 9 ಲವಂಗಗಳನ್ನು ಇಟ್ಟು ಮಲಗುವುದರಿಂದ ಮನೆಯಲ್ಲಿ, ನಿಮ್ಮ ಸುತ್ತಮುತ್ತ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಇದು ಮನೆಯಲ್ಲಿ ನಕಾರಾತ್ಮಕತೆಯನ್ನು ದೂರ ಮಾಡಲು ಸಹಾಯ ಮಾಡುತ್ತದೆ.

ಪಲಾವ್ ಎಲೆ

ಪಲಾವ್ ಎಲೆಯನ್ನು ತಲೆ ದಿಂಬಿನ ಕೆಳಗೆ ಇಟ್ಟು ಮಲಗುವುದರಿಂದ ಜೀವನದಲ್ಲಿ ಸಂತೋಷ ನೆಲೆಸುತ್ತದೆ. ಸಮೃದ್ಧಿ ಹೆಚ್ಚಾಗುತ್ತದೆ. ಇದು ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚುವಂತೆ ಮಾಡುತ್ತದೆ.

ಹರಳೆಣ್ಣೆ

ತಲೆದಿಂಬಿನ ಕೆಳಗೆ ಹರಳೆಣ್ಣೆಯನ್ನು ಇಟ್ಟು ಮಲಗುವುದರಿಂದ ನಕಾರಾತ್ಮಕತೆ ದೂರವಾಗುತ್ತದೆ. ಇದು ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಹರಿವು ಹೆಚ್ಚುವಂತೆ ಮಾಡುತ್ತದೆ.

ಇದನ್ನೂ ಓದಿ: Supreme Court: ಜೀವನಾಂಶಕ್ಕೆ 12 ಕೋಟಿ ರೂ, BMW ಕಾರು, ಮುಂಬೈನಲ್ಲಿ ಐಷಾರಾಮಿ ಮನೆ- ಪತ್ನಿಯ ಡಿಮ್ಯಾಂಡ್ಸ್‌ ನ್ಯಾಯಾಧೀಶರೇ ಶಾಕ್‌!

ನವಿಲು ಗರಿ

ಪ್ರೀತಿ ಮತ್ತು ಸಂತೋಷವನ್ನು ಆಕರ್ಷಿಸುವ ನವಿಲು ಗರಿಯನ್ನು ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರ ಎಂದು ಪರಿಗಣಿಸಲಾಗುತ್ತದೆ. ಇದು ಸಂಪತ್ತನ್ನು ಆಕರ್ಷಿಸುವಂತೆ ಮಾಡುತ್ತದೆ. ಜೀವನದಲ್ಲಿ ಸಮೃದ್ಧಿಯನ್ನು ಬಯಸುವವರು ತಲೆ ದಿಂಬಿನ ಕೆಳಗೆ ನವಿಲು ಗರಿ ಇಟ್ಟು ಮಲಗಬೇಕು. ಇದು ಬದುಕಿನಲ್ಲಿ ಧನಾತ್ಮಕ ಶಕ್ತಿಯನ್ನು ಹಾಗು ಸಂತೋಷವನ್ನು ಹೆಚ್ಚಿಸುತ್ತದೆ.

ತುಳಸಿ ಎಲೆ

ದೇವರ ಪೂಜೆಗಳಿಗೆ ಹೆಚ್ಚಾಗಿ ಬಳಸುವ ತುಳಸಿಯನ್ನು ತಲೆ ದಿಂಬಿನ ಕೆಳಗೆ ಇಟ್ಟು ಮಲಗುವುದರಿಂದ ಜೀವನದಲ್ಲಿ ಸುಖ, ಶಾಂತಿ ನೆಲೆಸುತ್ತದೆ. ಬದುಕಿನಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು.