ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವಿಜಯನಗರ

Karnataka Weather: ರಾಜ್ಯದಲ್ಲಿ ಮುಂದಿನ ಒಂದು ವಾರ ಅಬ್ಬರಿಸಲಿದೆ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ

ಯೆಲ್ಲೋ ಅಲರ್ಟ್‌; ರಾಜ್ಯದಲ್ಲಿ ಮುಂದಿನ ಒಂದು ವಾರ ಅಬ್ಬರಿಸಲಿದೆ ಮಳೆ!

ಕರ್ನಾಟಕ ಹವಾಮಾನ ವರದಿ: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳವರೆಗೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 29°C ಮತ್ತು 21°C ಇರುವ ಸಾಧ್ಯತೆ ಇದೆ.

Karnataka Weather: ಇಂದಿನ ಹವಾಮಾನ; ಬೆಂಗಳೂರು, ಮಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಮಳೆಯಾರ್ಭಟ ಸಾಧ್ಯತೆ

ಇಂದು ಬೆಂಗಳೂರು, ಮಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಮಳೆಯಾರ್ಭಟ ಸಾಧ್ಯತೆ

ಕರ್ನಾಟಕ ಹವಾಮಾನ ವರದಿ: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳವರೆಗೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಹಗುರದಿಂದ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 29 ° C ಮತ್ತು 21 ° C ಆಗಿರಬಹುದು.

Nirmala sitharaman: ಹಂಪಿ ಶ್ರೀ ವಿರೂಪಾಕ್ಷ ದೇವಸ್ಥಾನಕ್ಕೆ ನಿರ್ಮಲಾ ಸೀತಾರಾಮನ್ ಭೇಟಿ

ಹಂಪಿ ಶ್ರೀ ವಿರೂಪಾಕ್ಷ ದೇವಸ್ಥಾನಕ್ಕೆ ನಿರ್ಮಲಾ ಸೀತಾರಾಮನ್ ಭೇಟಿ

Hampi virupaksha temple: ಹಂಪಿಯಲ್ಲಿ ವಿರೂಪಾಕ್ಷನ ದರ್ಶನ ಪಡೆದ ಬಳಿಕ ನಿರ್ಮಲಾ ಸೀತಾರಾಮನ್ ಅವರು, ಅಲ್ಲಿನ ಆನೆ ಲಕ್ಷ್ಮೀಯಿಂದ ಆಶೀರ್ವಾದ ಪಡೆದರು. ಬಳಿಕ ಹಂಪಿ ವೀಕ್ಷಿಸಲು ಆಗಮಿಸಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಕೇಂದ್ರ ಹಣಕಾಸು ಸಚಿವೆ, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ರಾಜ್ಯಕ್ಕೆ ಆಗಮಿಸಿದ್ದ ವೇಳೆ ಹಂಪಿಗೆ ಭೇಟಿ ನೀಡಿದ್ದರು.

Cylinder Blast: ಹೊಸಪೇಟೆ ಸಿಲಿಂಡರ್ ಸ್ಫೋಟ ದುರಂತ: ಮೃತರ ಸಂಖ್ಯೆ 4ಕ್ಕೇರಿಕೆ, ತಲಾ 5 ಲಕ್ಷ ರೂ. ಪರಿಹಾರ ಘೋಷಣೆ

ಸಿಲಿಂಡರ್ ಸ್ಫೋಟ ದುರಂತ: ಮೃತರ ಕುಟುಂಬಸ್ಥರಿಗೆ 5 ಲಕ್ಷ ರೂ. ಪರಿಹಾರ ಘೋಷಣೆ

Vijayanagara News: ಹೊಸಪೇಟೆಯ ಗಾದಿಗನೂರಿನಲ್ಲಿ ಮನೆಯಲ್ಲಿದ್ದ ಅಡುಗೆ‌ ಅನಿಲ ಸಿಲಿಂಡರ್ ಸ್ಫೋಟಗೊಂಡು ಗಂಭೀರ ಗಾಯಗಳಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳುಗಳ ಪೈಕಿ ಶನಿವಾರ ಮತ್ತೆ ಇಬ್ಬರು ಮೃತಪಟ್ಟಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಮೃತರ ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದರು.

Minister B.Z. Zameer Ahmed Khan: ಜಿಲ್ಲೆಯ ವಿವಿಧೆಡೆಯಿಂದ 105 ಅರ್ಜಿ ಸ್ವೀಕಾರ, 25 ಅರ್ಜಿಗಳ ಸ್ಥಳದಲ್ಲಿ ಇತ್ಯರ್ಥ

ಸಾರ್ವಜನಿಕರ ಬೇಡಿಕೆಗೆ ಭರವಸೆಯಾದ ಅಹವಾಲು ಸ್ವೀಕಾರ

ಜನಸ್ಪಂದನಾ ಮೂಲಕ ಕೇವಲ ಸಾರ್ವಜನಿಕರ ಅಹವಾಲು ಕೇಳುವುದು ಮಾತ್ರ ವಲ್ಲದೇ ಆದಷ್ಟು ಶೀಘ್ರವಾಗಿ ಪರಿಹಾರ ಒದಗಿಸುವ ಕ್ರಮವನ್ನು ಕೈಗೊಂಡು ನಾಗರಿಕರಿಗೆ ಭರವಸೆ ಮೂಡಿಸಲಾಗುವುದು ಎಂದು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ತಿಳಿಸಿದರು.

Vijayanagar News: ವಿಶ್ವ ಪ್ರವಾಸೋದ್ಯಮ ದಿನ ಉದ್ಘಾಟಿಸಿ ಪುರಾತತ್ವ ಇಲಾಖೆ ಅಧಿಕಾರಿ ಸಿ.ದೇವರಾಜ್ ಹೇಳಿಕೆ

ಪ್ರವಾಸಿ ತಾಣಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ: ಸಿ.ದೇವರಾಜ್ ಹೇಳಿಕೆ

ವಿಶ್ವ ಪ್ರವಾಸೋದ್ಯಮ ದಿನವನ್ನು ಈ ವರ್ಷ ಪ್ರವಾಸೋದ್ಯಮ ಹಾಗೂ ಸುಸ್ಥಿರ ಪರಿವರ್ತನೆ ಎಂಬ ಸಂದೇಶದೊಂದಿಗೆ ಆಚರಿಸಲಾಗುತ್ತಿದೆ. ಪ್ರವಾಸೋದ್ಯಮ ಮತ್ತು ಪರಂಪರೆಯ ಎರಡು ಸಹ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಐತಿಹಾಸಿಕ ಪರಂಪರೆಯನ್ನು ಪೋಷಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕಿದೆ. ಪ್ರವಾಸೋದ್ಯಮದಿಂದ ಆರ್ಥಿಕ ಅಭಿವೃದ್ಧಿ ಸಾಧ್ಯವಿದೆ

World Tourism Day: ಪ್ರವಾಸಿ ತಾಣಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ: ಸಿ. ದೇವರಾಜ್

ಪ್ರವಾಸಿ ತಾಣಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ: ಸಿ. ದೇವರಾಜ್

Vijayanagara News: ವಿಶ್ವ ಪ್ರವಾಸೋದ್ಯಮ ದಿನವನ್ನು ಈ ವರ್ಷ ಪ್ರವಾಸೋದ್ಯಮ ಹಾಗೂ ಸುಸ್ಥಿರ ಪರಿವರ್ತನೆ ಎಂಬ ಸಂದೇಶದೊಂದಿಗೆ ಆಚರಿಸಲಾಗುತ್ತಿದೆ. ಪ್ರವಾಸೋದ್ಯಮ ಮತ್ತು ಪರಂಪರೆಯ ಎರಡು ಸಹ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಐತಿಹಾಸಿಕ ಪರಂಪರೆಯನ್ನು ಪೋಷಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕಿದೆ ಎಂದು ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿ ಸಿ. ದೇವರಾಜ್ ತಿಳಿಸಿದ್ದಾರೆ.

Cylinder Blast: ಹೊಸಪೇಟೆಯಲ್ಲಿ ಗ್ಯಾಸ್‌ ಸಿಲಿಂಡರ್‌ ಸ್ಫೋಟ, 8 ಮಂದಿಗೆ ಸುಟ್ಟ ಗಾಯ

ಹೊಸಪೇಟೆಯಲ್ಲಿ ಗ್ಯಾಸ್‌ ಸಿಲಿಂಡರ್‌ ಸ್ಫೋಟ, 8 ಮಂದಿಗೆ ಸುಟ್ಟ ಗಾಯ

Hosapete: ಬೆಳಗಿನ ಜಾವ ಸಿಲಿಂಡರ್ ಸ್ಪೋಟಗೊಂಡಿದ್ದು, ಸ್ಪೋಟದ ತೀವ್ರತೆಗೆ ಮನೆಯ ಗೋಡೆ ಕುಸಿದಿದೆ. ಮನೆಯಲ್ಲಿದ್ದ ಹಾಲಪ್ಪ, ಸೋದರ ಮೈಲಾರಪ್ಪ ಸೇರಿ 8 ಜನರಿಗೆ ಗಾಯವಾಗಿದೆ. ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲು ಸಂಜೀವಿನಿ ಆಸ್ಪತ್ರೆಗೆ ಗಾಯಾಳುಗಳನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

MLA H R Gaviyappa: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ವಾಸ್ತವ ಮಾಹಿತಿ ನೀಡಿ: ಶಾಸಕ ಹೆಚ್.ಆರ್.ಗವಿಯಪ್ಪ

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ವಾಸ್ತವ ಮಾಹಿತಿ ನೀಡಿ

ಸೆ.22 ರಿಂದ ಅ.07 ರವರೆಗೆ 18 ದಿನಗಳ ಕಾಲ ನಡೆಯಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಯ ಲಿದೆ. ಸರ್ಕಾರ 10 ವರ್ಷಗಳ ಹಿಂದೆ ಸಮೀಕ್ಷೆಗಳನ್ನು ನಡೆಸಲಾಗಿತ್ತು. ಆದರೆ ಈಗೀನ ಕೌಟುಂ ಬಿಕ ಸ್ಥಿತಿಗತಿಗಳು ಅರಿಯುವ ನಿಟ್ಟಿನಲ್ಲಿ ಈ ಸಮೀಕ್ಷೆ ಕಾರ್ಯ ತುಂಬಾ ಅನುಕೂಲಕರವಾಗಲಿದೆ

Hospet News: ಆರೋಗ್ಯ ಸಂಪತ್ತನ್ನು ಹೊಂದುವುದಕ್ಕೆ ಆಯುರ್ವೇದ ಪ್ರಮುಖ ಪಾತ್ರ ವಹಿಸುತ್ತದೆ

ಧನದ ಸಂಪತ್ ಗಿಂತ ಆರೋಗ್ಯದ ಸಂಪತ್ ಬಹುಮುಖ್ಯ

10ನೇ ಆಯುರ್ವೇದ ದಿನಾಚರಣೆ (ಧನ್ವಂತರಿ ಜಯಂತಿಯ) ಅಂಗವಾಗಿ ಉಚಿತ ಆರೋಗ್ಯ ತಪಾಸಣೆ, ಆಯುರ್ವೇದ ಸಲಹೆ, ಚಿಕಿತ್ಸೆ ಹಾಗೂ ರಕ್ತದಾನ ಶಿಬಿರದಲ್ಲಿ ಮಾತನಾಡಿದರು. ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಹಾಗೂ ಔಷಧಿ ವಿತರಣೆ ನಡೆಯುತ್ತಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆಸಿಕೊಳ್ಳಬೇಕು. ಶಿಬಿರದಲ್ಲಿ ರಕ್ತ ಪರೀಕ್ಷೆ, ರಕ್ತದಾನ, ಇಸಿಜಿ ಇತ್ಯಾದಿ ಸೌಲಭ್ಯಗಳ ಸದುಪಯೋಗ ವನ್ನು ಪಡೆದುಕೊಳ್ಳಬೇಕು

Hospete News: ಪರಿಶಿಷ್ಟ ಜಾತಿ ವಿಭಾಗದ ಸಂಘಟನಾ ಪ್ರಗತಿ ಪರಿಶೀಲನ ಸಭೆ

ಪರಿಶಿಷ್ಟ ಜಾತಿ ವಿಭಾಗದ ಸಂಘಟನಾ ಪ್ರಗತಿ ಪರಿಶೀಲನ ಸಭೆ

ದೇವದಾಸಿ ಮಹಿಳೆಯರ ಸಮಸ್ಯೆಗಳನ್ನು ರಾಜ್ಯ ಸರಕಾರದ ಗಮನ ಸೆಳೆಯುವದಾಗಿ ತಿಳಿಸಿದರು. ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ ಪರಿಶಿಷ್ಟ ಸಮುದಾಯಗಳ ನಾಯಕರು ವಿಜಯನಗರ ಜಿಲ್ಲೆಯ ವಿವಿಧ ಗ್ರಾಮೀಣ ಪ್ರದೇಶಗಳಲ್ಲಿ ಪರಿಶಿಷ್ಟರು ಅನುಭವಿಸುತ್ತಿರುವ ಭೂಮಿ ಸಮಸ್ಯೆಗಳು ಮತ್ತು ವಿಶೇಷವಾಗಿ ಸ್ಮಶಾನದ ಸಮಸ್ಯೆಯನ್ನು ರಾಜ್ಯಾಧ್ಯಕ್ಷರ ಗಮನಕ್ಕೆ ತಂದರು.

Road Accident: ಲಾರಿ ಓವರ್‌ಟೇಕ್‌ ಮಾಡಲು ಹೋಗಿ ಬಸ್‌ ಅಪಘಾತ, ಇಬ್ಬರು ಸಾವು

ಲಾರಿ ಓವರ್‌ಟೇಕ್‌ ಮಾಡಲು ಹೋಗಿ ಬಸ್‌ ಅಪಘಾತ, ಇಬ್ಬರು ಸಾವು

Vijayanagara news: ಮುದ್ಗಲ್‌ನಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಬಸ್, ಲಾರಿಯೊಂದನ್ನು ಓವರ್‌ಟೇಕ್ ಮಾಡಲು ಹೋದಾಗ ನಿಯಂತ್ರಣ ತಪ್ಪಿ ರಸ್ತೆಯ ಡಿವೈಡರ್​​ಗೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿದೆ. ಮೃತರನ್ನು ಮನೋಜ್ (28) ಮತ್ತು ಸುರೇಶ್ (45) ಎಂದು ಗುರುತಿಸಲಾಗಿದೆ.

Hospete News: ಪರಿಸರ ಚೆನ್ನಾಗಿದ್ದಷ್ಟು ನಾವೂ ಚೆನ್ನಾಗಿರಲು ಸಾಧ್ಯ: ಡಾ.ನರೇಂದ್ರ ಕುಮಾರ್ ಬಲ್ಡೋಟ

ಪರಿಸರ ಚೆನ್ನಾಗಿದ್ದಷ್ಟು ನಾವೂ ಚೆನ್ನಾಗಿರಲು ಸಾಧ್ಯ

ಪರಿಸರ ಚೆನ್ನಾಗಿದ್ದಷ್ಟು ನಾವು ಚೆನ್ನಾಗಿರಲು ಸಾಧ್ಯ. ಹೊಸಪೇಟೆ ನಗರ ಈ ಹಿಂದೆ ಹೆಚ್ಚಿನ ತಾಪ ಮಾನ ಹೊಂದಿದ ಪ್ರದೇಶ ಎಂದೇ ಗುರುತಿಸಲಾಗಿತ್ತು. ಆದರೆ ಎಂ ಎಸ್ ಪಿ ಎಲ್ ಸಂಸ್ಥೆಯು ಹೊಸ ಪೇಟೆ, ಕೊಪ್ಪಳ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ 20 ಲಕ್ಷಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಪೋಷಿಸಿ ಕೊಂಡು ಬಂದಿದ್ದು ನಗರದಲ್ಲಿ ತಾಪಮಾನ ಕಡಿಮೆಯಾಗಿದೆ

Harapanahalli News: ಸೆ.10ರಂದು ಬಂಜಾರರಿಂದ ವಿಧಾನಸೌಧ ಮುತ್ತಿಗೆ

ಸೆ.10ರಂದು ಬಂಜಾರರಿಂದ ವಿಧಾನಸೌಧ ಮುತ್ತಿಗೆ

ಹಿಂದಿನ ಬಿಜೆಪಿ ಸರ್ಕಾರ ನ್ಯಾ.ಸದಾಶಿವ ಆಯೋಗ ಒಳಮೀಸಲಾತಿಯನ್ನು ಲಂಬಾಣಿ, ಭೋವಿ, ಕೊರಚ, ಕೊರಮ ಸಮುದಾಯಕ್ಕೆ ಶೇ.04.5 ಘೋಷಿಸಿತ್ತು. ಆದರೆ, ಈಗಿನ ಸರ್ಕಾರ 63 ಸಮುದಾಯ ಗಳನ್ನು ಪಟ್ಟಿ ಮಾಡಿ, ಶೇ.05 ಒಳಮೀಸ ಲಾತಿ ಘೋಷಿಸಿದೆ. ಇದಕ್ಕಿಂದ ಘೋರ ಅನ್ಯಾಯ ಬೇರೊಂ ದಿಲ್ಲ. ನಮ್ಮ ಸಮುದಾಯಗಳಿಗೆ ಅನ್ಯಾಯ ಮಾಡುವ ಪಕ್ಷ, ಸರ್ಕಾರಕ್ಕೆ ನಾವು ತಕ್ಕ ಪಾಠ ಕಲಿಸುತ್ತೇವೆ

DK Shivakumar: ತುಂಗಭದ್ರಾ ಡ್ಯಾಂ ನೂತನ ಕ್ರಸ್ಟ್ ಗೇಟ್‌ಗಳ ತಯಾರಿ ಕೆಲಸ ಪ್ರಗತಿಯಲ್ಲಿದೆ: ಡಿಕೆಶಿ

ತುಂಗಭದ್ರಾ ಡ್ಯಾಂ ನೂತನ ಕ್ರಸ್ಟ್ ಗೇಟ್‌ಗಳ ತಯಾರಿ ಕೆಲಸ ಪ್ರಗತಿಯಲ್ಲಿದೆ

DK Shivakumar: ತುಂಗಭದ್ರಾ ಅಣೆಕಟ್ಟೆಯ ಸುರಕ್ಷತೆ ದೃಷ್ಟಿಯಿಂದ 80 ಟಿಎಂಸಿ ನೀರನ್ನು ಮಾತ್ರ ಸಂಗ್ರಹ ಮಾಡಬೇಕಾದ ಕಾರಣಕ್ಕೆ ಎರಡನೇ ಬೆಳೆಗೆ ಈ ವರ್ಷ ನೀರು ನೀಡಲು ಸಾಧ್ಯವಾಗುತ್ತಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

Self Harming: ಮದುವೆಯಾಗಿದ್ದರೂ ಪರಪುರುಷನ ಜತೆ ದೈಹಿಕ ಸಂಬಂಧ ಬೆಳೆಸಿದ ಮಹಿಳೆ; ಆತ ಮದುವೆಗೆ ನಿರಾಕರಿಸಿದಾಗ ಆತ್ಮಹತ್ಯೆ

ಅನೈತಿಕ ಸಂಬಂಧಕ್ಕೆ ಮತ್ತೊಂದು ಗೃಹಿಣಿ ಬಲಿ

Vijayanagar News: ಮದುವೆಯಾಗಿದ್ದರೂ ಪರಪುರುಷನ ಜತೆ ದೈಹಿಕ ಸಂಬಂಧ ಬೆಳೆಸಿಕೊಂಡಿದ್ದ ಮಹಿಳೆ ಆತ ಮದುವೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತ ಮಹಿಳೆಯನ್ನು ವಿಜಯನಗರ ಜಿಲ್ಲೆಯ ಹಡಗಲಿ ತಾಲೂಕಿನ ಮದಲಗಟ್ಟಿ ಗ್ರಾಮದ ಜ್ಯೋತಿ ಎಂದು ಗುರುತಿಸಲಾಗಿದೆ.

Mylara Lingeshwara Karnika: ಶಾಸಕರ ಮನಸ್ಸು ಕದಲಿದರೆ ಸಿಎಂ ಬದಲಾವಣೆ ಖಚಿತ; ಮೈಲಾರಲಿಂಗೇಶ್ವರ ಕಾರ್ಣಿಕ ಭವಿಷ್ಯ!

ರಾಜ್ಯದಲ್ಲಿ ಸಿಎಂ ಬದಲಾವಣೆ ಖಚಿತ; ಮೈಲಾರಲಿಂಗೇಶ್ವರ ಕಾರ್ಣಿಕ ಭವಿಷ್ಯ!

Mylara Lingeshwara Karnika: ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನಲ್ಲಿ ಮೈಲಾರಲಿಂಗೇಶ್ವರ ಕಾರ್ಣಿಕ ಭವಿಷ್ಯ ಹೊರಬಿದ್ದಿದೆ. ಡಿ.ಕೆ. ಶಿವಕುಮಾರ್‌ಗೆ ಸಿಎಂ ಆಗುವ ಯೋಗ ಇದೆ ಎಂದು ಶ್ರೀ ವೆಂಕಪ್ಪಯ್ಯ ಮೈಲಾರದ ಕಾರ್ಣಿಕ ನುಡಿಯನ್ನು ವಿಶ್ಲೇಷಿಸಿದ್ದಾರೆ.

ಹೊಸ ಸಕ್ಕರೆ ಕಾರ್ಖಾನೆ ಸ್ಥಾಪನೆ, ಹೊಸಪೇಟೆ ಜಿಲ್ಲೆ ಮಟ್ಟಿಗೆ ಸಾಧನೆ

ಹೊಸ ಸಕ್ಕರೆ ಕಾರ್ಖಾನೆ ಸ್ಥಾಪನೆ, ಹೊಸಪೇಟೆ ಜಿಲ್ಲೆ ಮಟ್ಟಿಗೆ ಸಾಧನೆ

ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ 1249.64 ಹೆಕ್ಟೇರ್ ಪ್ರದೇಶ ಕಬ್ಬು ಬೆಳೆಯಲಾಗುತ್ತಿದೆ. ಕೊಳವೆ ಬಾವಿ ಅವಲಂಬಿತ ಕೃಷಿಯಲ್ಲಿ ಕಬ್ಬು ಬೆಳೆಯುತ್ತಿದ್ದು, ನೀರಿನ ಲಭ್ಯತೆ ಮೇಲೆ ಬೆಳೆ ವಿಸ್ತೀರ್ಣದಲ್ಲಿ ವ್ಯತ್ಯಾಸವಾಗುತ್ತದೆ. ಕಾರ್ಖಾನೆ ನಿರ್ಮಾಣ ಉದ್ದೇಶಿತ ಪ್ರದೇಶ ಹಂಪಸಾಗರ ಮತ್ತು ತಂಬ್ರಹಳ್ಳಿ ಹೋಬಳಿಗಳಿಂದ 20 ಕಿ.ಮೀ. ಅಂತರದಲ್ಲಿದೆ.

Rahul Gandhi: ಹಕ್ಕು ಪತ್ರ ವಿತರಣೆ ಮೂಲಕ 6ನೇ ಗ್ಯಾರಂಟಿ ಜಾರಿ: ರಾಹುಲ್‌ ಗಾಂಧಿ

ಹಕ್ಕು ಪತ್ರ ವಿತರಣೆ ಮೂಲಕ 6ನೇ ಗ್ಯಾರಂಟಿ ಜಾರಿ: ರಾಹುಲ್‌ ಗಾಂಧಿ

Sadhana Samavesha: ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ 2 ವರ್ಷಗಳ ಆಡಳಿತ ಪೂರೈಸಿದೆ. ಚುನಾವಣೆಯ ವೇಳೆಯಲ್ಲಿ ತಮಗೆ 5 ಗ್ಯಾರಂಟಿಗಳನ್ನು ಕೊಡುವ ಆಶ್ವಾಸನೆ ನೀಡಿದ್ದೆವು. ಈ ಗ್ಯಾರಂಟಿಗಳನ್ನು ಕಾಂಗ್ರೆಸ್ ಜಾರಿ ಮಾಡಲು ಸಾಧ್ಯವಿಲ್ಲ ಎಂದಿದ್ದರು. ಪ್ರಧಾನಮಂತ್ರಿಗಳು ಇದನ್ನೇ ಪುನರುಚ್ಚರಿಸಿದ್ದರು. ಆದರೆ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಪ್ರಯೋಜನವನ್ನು ಕರ್ನಾಟಕದ ಜನರು ಅನುಭವಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.

Laxmi Hebbalkar: ಹೊಸಪೇಟೆಯಲ್ಲಿ ಸಮರ್ಪಣೆ ಸಂಕಲ್ಪ ಸಮಾವೇಶ: ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿದ ಲಕ್ಷ್ಮಿ ಹೆಬ್ಬಾಳ್ಕರ್

ಸಮರ್ಪಣೆ ಸಂಕಲ್ಪ ಸಮಾವೇಶ: ಹಕ್ಕು ಪತ್ರ ವಿತರಿಸಿದ ಹೆಬ್ಬಾಳ್ಕರ್

Laxmi Hebbalkar: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಹೊಸಪೇಟೆಯಲ್ಲಿ ಮಂಗಳವಾರ ನಡೆದ ಪ್ರಗತಿಯತ್ತ ಕರ್ನಾಟಕ ಹಾಗೂ ಸಮರ್ಪಣೆ ಸಂಕಲ್ಪ ಸಮಾವೇಶದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿದರು.

Sadhana Samavesha: ಒಂದೇ ದಿನ 1,11,111 ಕುಟುಂಬಕ್ಕೆ ಹಕ್ಕುಪತ್ರ ವಿತರಿಸಿದ ಸಿಎಂ

ಒಂದೇ ದಿನ 1,11,111 ಕುಟುಂಬಕ್ಕೆ ಹಕ್ಕುಪತ್ರ ವಿತರಿಸಿದ ಸಿಎಂ

Sadhana Samavesha: ಮೊದಲ ಬಾರಿ ಮುಖ್ಯಮಂತ್ರಿಯಾಗಿ ನಾನು ನೀಡಿದ್ದ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದಲ್ಲದೆ, ಪ್ರಣಾಳಿಕೆಯಲ್ಲಿ ಘೋಷಿಸದ ಹೊಸದಾದ 30 ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸಿದ್ದೇವೆ. ಆದರೆ, ಬಿಜೆಪಿ ಏಕೆ ತಾನು ಕೊಟ್ಟಿದ್ದ ಭರವಸೆಗಳನ್ನು ಈಡೇರಿಸಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

Sadhana Samavesha: ನಾಳೆ ಹೊಸಪೇಟೆಯಲ್ಲಿ ರಾಜ್ಯ ಸರ್ಕಾರದ 2 ವರ್ಷದ ಸಾಧನಾ ಸಮಾವೇಶ; 2 ಲಕ್ಷ ಜನ ಸೇರುವ ನಿರೀಕ್ಷೆ

ರಾಜ್ಯ ಸರ್ಕಾರದ 2 ವರ್ಷದ ಸಾಧನಾ ಸಮಾವೇಶ ಹೊಸಪೇಟೆ ಸಜ್ಜು

ರಾಜ್ಯ ಸರ್ಕಾರದ ಎರಡು ವರ್ಷಗಳ ಸಾಧನೆಗಳನ್ನು ಬಿಂಬಿಸುವ 'ಸಮರ್ಪಣೆ ಸಂಕಲ್ಪ ಸಮಾವೇಶʼಕ್ಕೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭವ್ಯ ವೇದಿಕೆ ನಿರ್ಮಾಣ ಪೂರ್ಣಗೊಂಡಿದ್ದು ಐತಿಹಾಸಿ ಸಮಾವೇಶದ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಈ ಕುರಿತ ವಿವರ ಇಲ್ಲಿದೆ.

Hospet News: ಮೇ 20ರಂದು ಹೊಸಪೇಟೆಯಲ್ಲಿ ರಾಜ್ಯ ಸರ್ಕಾರದ ಸಾಧನಾ ಸಮಾವೇಶ; 2 ಲಕ್ಷ ಜನ ಸೇರುವ ನಿರೀಕ್ಷೆ

ಮೇ 20ರಂದು ಹೊಸಪೇಟೆಯಲ್ಲಿ ರಾಜ್ಯ ಸರ್ಕಾರದ ಸಾಧನಾ ಸಮಾವೇಶ

Hospet News: ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಮೇ 20 ರಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ರಾಜ್ಯ ಸರ್ಕಾರದ ಸಾಧನಾ ಸಮಾವೇಶದ ಬೃಹತ್ ವೇದಿಕೆ ಕಾರ್ಯಕ್ರಮ ಜರುಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮಕ್ಕರ ಚಾಲನೆ ನೀಡಲಿದ್ದಾರೆ.

Karnataka Rains: ವಿಜಯನಗರ, ರಾಯಚೂರಲ್ಲಿ ಮಳೆ ಆರ್ಭಟ; ಸಿಡಿಲಿಗೆ ಇಬ್ಬರು ವ್ಯಕ್ತಿಗಳು, ಹಸು ಬಲಿ

ರಾಜ್ಯದಲ್ಲಿ ಮಳೆ ಆರ್ಭಟ; ಸಿಡಿಲಿಗೆ ಇಬ್ಬರು ವ್ಯಕ್ತಿಗಳು, ಹಸು ಬಲಿ

Karnataka Rains: ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ತೆಲಿಗಿ ಗ್ರಾಮದಲ್ಲಿ ಸಿಡಿಲು ಬಡಿದು ಕೂಲಿ ಕಾರ್ಮಿಕ ಹಾಗೂ ಆಕಳು ಮೃತಪಟ್ಟಿದೆ. ಅದೇ ರೀತಿ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕೆಗುಡದಿನ್ನಿ ಗ್ರಾಮದಲ್ಲಿ ಸಿಡಿಲು ಬಡಿದು ಪತಿ ಮೃತಪಟ್ಟು, ಪತ್ನಿ ಗಂಭೀರವಾಗಿ ಗಾಯಗೊಂಡಿದ್ದಾರೆ.

Loading...