Viral Video: ಪೊಲೀಸರ ಎದುರೇ ಸಮ್ಮುಖದಲ್ಲಿಯೇ 3,000 ಕೆಜಿ ಪ್ರಸಾದ ಲೂಟಿ- ಇಲ್ಲಿದೆ ನೋಡಿ ವಿಡಿಯೊ
3,000 kg of prasad looted: ಗುಜರಾತ್‌ನ ಡಾಕೋರ್ ಪಟ್ಟಣದ ಪ್ರಸಿದ್ಧ ರಾಂಚೋದ್ರೈಜಿ ದೇವಸ್ಥಾನದಲ್ಲಿ, ಭಕ್ತರು ಭಗವಾನ್ ರಾಂಚೋದ್ರೈಜಿಗಾಗಿ ತಯಾರಿಸಿದ ಅನ್ನಕುಟ್ ಅಥವಾ ಮಹಾಪ್ರಸಾದವನ್ನು ಲೂಟಿ ಮಾಡಿದ್ದಾರೆ. ಹಾಗಂತ ಇದು ಅಪರಾಧವಲ್ಲ, ಬದಲಾಗಿ ಪವಿತ್ರ ಆಚರಣೆಯಾಗಿದೆ.

-

ಅಹಮದಾಬಾದ್: ಪೊಲೀಸರ ಮೇಲ್ವಿಚಾರಣೆಯಲ್ಲಿ ದರೋಡೆ ನಡೆಯುವುದನ್ನು ಎಂದಾದರೂ ನೋಡಿದ್ದೀರಾ? ಗುಜರಾತ್‌ನ (Gujarat) ಖೇಡಾ ಜಿಲ್ಲೆಯಲ್ಲಿ, ಪ್ರತಿ ವರ್ಷವೂ ಇಂತಹ ಲೂಟಿ ನಡೆಯುತ್ತದೆ. ಇದು ಅಪರಾಧವಾಗಿ ಅಲ್ಲ, ಬದಲಾಗಿ ಪವಿತ್ರ ಆಚರಣೆಯಾಗಿದೆ. ಡಾಕೋರ್ ಪಟ್ಟಣದ ಪ್ರಸಿದ್ಧ ರಾಂಚೋದ್ರೈಜಿ ದೇವಸ್ಥಾನದಲ್ಲಿ, ಭಕ್ತರು ಭಗವಾನ್ ರಾಂಚೋದ್ರೈಜಿಗಾಗಿ ತಯಾರಿಸಿದ ಅನ್ನಕುಟ್ (Annakoot) ಅಥವಾ ಮಹಾಪ್ರಸಾದವನ್ನು ಲೂಟಿ ಮಾಡುತ್ತಾರೆ. ಇದು ಎರಡು ಶತಮಾನಗಳಿಗೂ ಹೆಚ್ಚು ಕಾಲ ಮುಂದುವರೆದಿರುವ ಆಚರಣೆಯಾಗಿದೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (viral video) ಆಗಿದೆ.
ಈ ವರ್ಷ, ಪುರೋಹಿತರು ಬೂಂದಿ, ಅಕ್ಕಿ, ಹಣ್ಣುಗಳು, ಸಿಹಿತಿಂಡಿಗಳು ಮತ್ತು ತುಪ್ಪ ಆಧಾರಿತ ಭಕ್ಷ್ಯಗಳನ್ನು ಒಳಗೊಂಡಿರುವ ಸುಮಾರು 3,000 ಕಿಲೋಗ್ರಾಂಗಳಷ್ಟು ತೂಕದ ಮಹಾಪ್ರಸಾದವನ್ನು ಅರ್ಪಿಸಿದರು. ಮಧ್ಯಾಹ್ನ 2.20ಕ್ಕೆ ದೇವಾಲಯದ ಬಾಗಿಲು ತೆರೆಯಲ್ಪಟ್ಟಾಗ ಹತ್ತಿರದ 80 ಹಳ್ಳಿಗಳ ಜನರು ಒಳಗೆ ನುಗ್ಗಿ ಜೈ ರಾಂಚೋದ್ ಎಂದು ಕೂಗಿದರು. ಕೇವಲ ಹತ್ತು ನಿಮಿಷಗಳಲ್ಲಿ ಇಡೀ ಅನ್ನಕುಟ್ ಅಥವಾ ಮಹಾಪ್ರಸಾದ ಲೂಟಿಯಾಯಿತು. ಒಂದು ಹಿಡಿ ಪ್ರಮಾಣದಷ್ಟು ಈ ಪವಿತ್ರ ಆಹಾರವನ್ನು ಭಕ್ತರು ಮನೆಗೆ ತೆಗೆದುಕೊಂಡು ಹೋಗುವುದರಿಂದ ವರ್ಷವಿಡೀ ಉತ್ತಮ ಆರೋಗ್ಯ ಮತ್ತು ಸಮೃದ್ಧಿ ಬರುತ್ತದೆ ಎಂದು ನಂಬಲಾಗಿದೆ.
ವಿಡಿಯೊ ವೀಕ್ಷಿಸಿ:
गुजरात: मंदिर में चढ़ा 3000 किलो प्रसाद, 'लूटने' आए सैकड़ों लोग
— News24 (@news24tvchannel) October 22, 2025
◆ सैकड़ों सालों से चलती आ रही है प्रसाद लूटने की परंपरा
◆ गुजरात के डाकोर में प्राचीन श्री रंचोड़रायजी महाराज मंदिर में निभाई जाती है ये परंपरा#Gujrat | Dakor | #Dakor pic.twitter.com/N3ockWykqJ
ಈ ವಾರ್ಷಿಕ ಆಚರಣೆಯಲ್ಲಿ, ಭಕ್ತರು ದೇವಸ್ಥಾನಕ್ಕೆ ಧಾವಿಸಿ ಪ್ರಸಾದವನ್ನು ತಟ್ಟೆಗಳು, ಚೀಲಗಳು ಇತ್ಯಾದಿಗಳಲ್ಲಿ ತುಂಬಿಕೊಂಡು ತಮ್ಮ ಮನೆಗಳಿಗೆ ಕೊಂಡೊಯ್ಯುತ್ತಾರೆ. ಇಲ್ಲಿ ಲೂಟಿ ಎಂಬ ಪದವನ್ನು ನಿಜವಾದ ಅರ್ಥದಲ್ಲಿ ಬಳಸಲಾಗುವುದಿಲ್ಲ. ಇದು ಒಂದು ಸಾಂಸ್ಕೃತಿಕ ಆಚರಣೆಯಾಗಿದ್ದು, ಪುರಾತನ ಸಂಪ್ರದಾಯವಾಗಿದೆ. ಇದನ್ನು ಎಲ್ಲರಿಗೂ ಪ್ರಸಾದ ಸಮಾನವಾಗಿ ಹಂಚಿಕೊಳ್ಳುವ ರೂಪವಾಗಿ ಪರಿಗಣಿಸಲಾಗುತ್ತದೆ.
ದೇವಸ್ಥಾನ ಆಡಳಿತ ಮತ್ತು ಸ್ಥಳೀಯ ಅಧಿಕಾರಿಗಳು ಈ ಕಾರ್ಯಕ್ರಮವನ್ನು ಬಹಳ ಪೂರ್ವಸಿದ್ಧತೆಗಳೊಂದಿಗೆ ಸಿದ್ಧತೆಗಳನ್ನು ಮಾಡುತ್ತಾರೆ. ಈ ಆಚರಣೆಯನ್ನು ಬಹಳ ಸುರಕ್ಷಿತವಾಗಿ ಮತ್ತು ಶಿಸ್ತಿನಿಂದ ಮಾಡಲಾಗುತ್ತದೆ. ಭಕ್ತರು ಬಹಳ ಉತ್ಸಾಹ ಹಾಗೂ ಸಂಭ್ರಮದಿಂದ ಈ ಆಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ. ಬೃಹತ್ ಪ್ರಮಾಣದಲ್ಲಿ ತಯಾರಾಗುವ ಪ್ರಸಾದವನ್ನು ಭಕ್ತರು ತಮ್ಮದಾಗಿಸಿಕೊಂಡು ಹೋಗುವ ಒಂದು ಪುರಾತನ ಸಂಪ್ರದಾಯ ಇದಾಗಿದೆ.
ಈ ಸಂಪ್ರದಾಯದ ಹಿನ್ನೆಲೆ ಏನು?
ಈ ರೀತಿ ಪ್ರಸಾದವನ್ನು ಭಕ್ತರು ಲೂಟಿ ಮಾಡುವ ಸಂಪ್ರದಾಯವು ಶತಮಾನಗಳ ಹಿಂದಿನಿಂದಲೂ ನಡೆಯುತ್ತಿದೆ. ಇದು ದೇವರ ಕೃಪೆಯನ್ನು ಮನೆಗೂ ಕೊಂಡೊಯ್ಯುವ ಸಂಕೇತವಾಗಿ ಪರಿಗಣಿಸಲಾಗುತ್ತದೆ. ಭಕ್ತಿ, ಸಮುದಾಯ ಮತ್ತು ಸಮಾನತೆ ಎಂಬ ಮೌಲ್ಯಗಳನ್ನು ತೋರಿಸುತ್ತದೆ. ಪ್ರತಿ ವರ್ಷ ಈ ಆಚರಣೆಯು ನಿಗದಿತ ದಿನದಲ್ಲಿ ನಡೆಯುತ್ತದೆ. ಜನರು ತಾವು ಬರುವುದು ನಿಶ್ಚಯವಾಗಿಸಿ ಸಿದ್ಧತೆ ಮಾಡಿಕೊಳ್ಳುತ್ತಾರೆ.
ಈ ಸಂದರ್ಭ ಏನೆಲ್ಲಾ ನಡೆಯುತ್ತದೆ?
ಪ್ರಸಾದ ರೂಪದಲ್ಲಿ ಲಡ್ಡು, ಅನ್ನ, ಹಣ್ಣು, ಇತರ ತಿನಿಸುಗಳು ಬೃಹತ್ ಪ್ರಮಾಣದಲ್ಲಿ ತಯಾರಾಗುತ್ತವೆ. ದರ್ಶನದ ನಂತರ, ದೇವಸ್ಥಾನದ ಗೇಟ್ ತೆರೆಯಲ್ಪಟ್ಟಾಗ, ಜನರು ಓಡಿ ಹೋಗಿ ತಮ್ಮ ಕೈಗೆ ಸಿಕ್ಕಷ್ಟನ್ನು ಎತ್ತಿಕೊಂಡು ಹೋಗುತ್ತಾರೆ. ಕೆಲವರು ಚೀಲಗಳಲ್ಲಿ ತುಂಬಿಸುತ್ತಾರೆ. ಇತರರು ತಟ್ಟೆ, ಚೀಲ ಇತ್ಯಾದಿಗಳನ್ನು ತರುತ್ತಾರೆ. ಈ ಆಚರಣೆ ವೇಳೆ ಸ್ಥಳೀಯ ಆಡಳಿತ, ಪೊಲೀಸರು ಮತ್ತು ದೇವಸ್ಥಾನ ಸಮಿತಿಯವರು ಸುರಕ್ಷತೆಗಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಾರೆ.