ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಒಂದೇ ಮಂಟಪದಲ್ಲಿ ಒಂದೇ ಕುಟುಂಬದ 6 ಜೋಡಿಗಳ ಮದ್ವೆ- ಅರೇ... ಇದೇನಿದು ಸಾಮೂಹಿಕ ವಿವಾಹವೇ?

ಹರಿಯಾಣದ ಹಿಸಾರ್ ಜಿಲ್ಲೆಯ ಪುನಿಯಾ ಕುಟುಂಬದ ರೈತ ಸಹೋದರರಿಬ್ಬರು ಮದುವೆಯ ಖರ್ಚನ್ನು ಉಳಿಸಲು ಒಂದೇ ಮಂಟಪದಲ್ಲಿ ತಮ್ಮ 6ಮಂದಿ ಮಕ್ಕಳಿಗೆ ಒಟ್ಟಿಗೆ ಮದುವೆ ಮಾಡಿಸಿದ್ದಾರೆ.ಈ ಮದುವೆ ಬಹಳ ಅದ್ದೂರಿಯಾಗಿ ನಡೆದಿದ್ದು, ಈ ಸುದ್ದಿ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್(Viral News) ಆಗಿದೆ.

ಒಂದೇ ಮಂಟಪದಲ್ಲಿ 6 ಜೋಡಿಗಳ ಮದುವೆ; ನೆಟ್ಟಿಗರು ಹೇಳಿದ್ದೇನು?

Profile pavithra Apr 22, 2025 8:55 PM

ಚಂಢೀಗಡ್‍: ಈಗ ಮದುವೆಗಾಗಿ ಸಾಕಷ್ಟು ಖರ್ಚು ಮಾಡುತ್ತಾರೆ.ಅದ್ಧೂರಿಯಾಗಿ ಮದುವೆಯಾಗಬೇಕು ಎಂಬ ಆಸೆಯಿಂದ ಸಾಲ ಸೂಲ ಮಾಡಿ ಸಾಕಷ್ಟು ಹಣ ಕೂಡ ಖರ್ಚು ಮಾಡುತ್ತಾರೆ. ಸಾಮಾನ್ಯವಾಗಿ ಮದುವೆಯಲ್ಲಿ ನಾವು ಮಂಟಪದಲ್ಲಿ ಒಂದು ಅಥವಾ ಎರಡು ಜೋಡಿ ಮದುವೆಯನ್ನು ನೋಡಿರುತ್ತೇವೆ. ಆದರೆ ಹರಿಯಾಣದ ಹಿಸಾರ್ ಜಿಲ್ಲೆಯ ಒಂದು ಕುಟುಂಬವು ಮದುವೆಯ ಖರ್ಚನ್ನು ಉಳಿಸಲು ಒಂದೇ ಮಂಟಪದಲ್ಲಿ 6ಮಂದಿಗೆ ಒಟ್ಟಿಗೆ ಸಂಪ್ರದಾಯದಂತೆ ಮದುವೆ ಮಾಡಿಸಿದ್ದಾರೆ.ಈ ಮದುವೆ ಬಹಳ ಅದ್ದೂರಿಯಾಗಿ ನಡೆದಿದೆ ಎನ್ನಲಾಗಿದೆ. ಈ ಸುದ್ದಿ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್(Viral News) ಆಗಿದೆ.

ವರದಿ ಪ್ರಕಾರ, ಗವಾರ್ ಗ್ರಾಮದಲ್ಲಿ, ರಾಜೇಶ್ ಪುನಿಯಾ ಮತ್ತು ಅಮರ್ ಸಿಂಗ್ ಪುನಿಯಾ ಎಂಬ ಇಬ್ಬರು ರೈತ ಸಹೋದರರು ತಮ್ಮ ಎಲ್ಲಾ ಆರು ಮಕ್ಕಳ ಮದುವೆಯನ್ನು ಒಟ್ಟಿಗೆ ಎರಡು ದಿನಗಳ ಕಾಲ ಆಯೋಜಿಸಿದ್ದಾರೆ. ಏಪ್ರಿಲ್ 18 ರಂದು ಪುನಿಯಾ ಕುಟುಂಬದ ಇಬ್ಬರು ಪುತ್ರರು ಮದುವೆಯಾಗಿದ್ದು, ಮರುದಿನ, ಕುಟುಂಬದ ನಾಲ್ವರು ಹೆಣ್ಣುಮಕ್ಕಳು ಇದೇ ಸಮಾರಂಭದಲ್ಲಿ ಮದುವೆಯಾಗಿದ್ದಾರೆ. ಆರು ಮಂದಿ ಮಕ್ಕಳಿಗೆ ಒಟ್ಟಿಗೆ ಒಂದೇ ಮಂಟಪದಲ್ಲಿ ಮದುವೆ ಮಾಡಿಸಿದ್ದು ಸ್ಥಳೀಯ ಸಮುದಾಯದ ಗಮನವನ್ನು ಸೆಳೆದಿದೆ. ಮಾತ್ರವಲ್ಲದೆ ಶೀಘ್ರದಲ್ಲೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದೆ. ಕುಟುಂಬದವರು ಹಣ ಉಳಿಸಿ ಸಂಭ್ರಮದಲ್ಲಿ ಮದುವೆಯಾಗಲು ಮಾಡಿದ ಯೋಜನೆ ವ್ಯಾಪಕ ಮೆಚ್ಚುಗೆಯನ್ನು ಗಳಿಸಿದೆ.

ಅಲ್ಲದೇ ಎಲ್ಲಾ ಆರು ಮದುವೆಗಳಿಗೆ ಒಂದೇ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಲಾಯಿತು, ಮತ್ತು ಸಮಾರಂಭಕ್ಕಾಗಿ ಪ್ರತ್ಯೇಕ ಮಂಟಪಗಳನ್ನು ಅಕ್ಕಪಕ್ಕದಲ್ಲಿ ನಿರ್ಮಿಸಲಾಯಿತು. ಈ ವ್ಯವಸ್ಥೆಯು ಕ್ಯಾಟರಿಂಗ್, ಅಲಂಕಾರ ಮತ್ತು ಲಾಜಿಸ್ಟಿಕ್ಸ್ ಮೇಲಿನ ವೆಚ್ಚಗಳನ್ನು ಕಡಿಮೆ ಮಾಡಿದೆ. ಇದರಿಂದ ಅವರಿಗೆ ಹಲವಾರು ಲಕ್ಷ ರೂಪಾಯಿಗಳನ್ನು ಉಳಿಸಿದೆ ಎಂಬುದಾಗಿ ಕುಟುಂಬದವರು ತಿಳಿಸಿದ್ದಾರೆ.

ಈ ಕಾರ್ಯಕ್ರಮಕ್ಕೆ ನೂರಾರು ಅತಿಥಿಗಳು ಆಗಮಿಸಿದ್ದಾರೆ. ಹಾಗೇ ಆಚರಣೆಗಳ ವಿಡಿಯೊಗಳು ಮತ್ತು ಪೋಟೊಗಳು ಸೋಶಿಯಲ್ ಮಿಡಿಯಾಗಳಲ್ಲಿ ಹರಡುತ್ತಿದ್ದಂತೆ, ನೆಟ್ಟಿಗರು ಪುನಿಯಾ ಕುಟುಂಬದ ವಿಧಾನವನ್ನು ಹೊಗಳಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಆಟೋದಲ್ಲಿ ಹೋಗುತ್ತಿದ್ದ ಮಹಿಳೆಗೆ ಬಟ್ಟೆ ಬಿಚ್ಚಿ ಕಿರುಕುಳ; ಶಾಕಿಂಗ್‌ ವಿಡಿಯೊ ಇಲ್ಲಿದೆ

ಹರಿಯಾಣದಲ್ಲಿ ಈ ರೀತಿಯ ವಿಶೇಷವಾದ ಮದುವೆ ನಡೆದಿದ್ದು ಇದೇ ಮೊದಲಲ್ಲ. ಈ ಹಿಂದೆ ಹರಿಯಾಣದ ಝಜ್ಜರ್ ಜಿಲ್ಲೆಯ ಗೋರಿಯಾ ಗ್ರಾಮದಲ್ಲಿ ಅಂತಹ ಒಂದು ವಿಶಿಷ್ಟ ಮದುವೆ ನಡೆದಿತ್ತು. ಇದರಲ್ಲಿ ವಧು-ವರರು ಇದ್ದರು, ಆದರೆ ಪಂಡಿತರು ಇರಲಿಲ್ಲ, ಮಂತ್ರಗಳನ್ನು ಪಠಿಸಲಿಲ್ಲ ಮತ್ತು ಮಂಟಪವನ್ನು ಅಲಂಕರಿಸಲಾಗಿಲ್ಲ. ಇಲ್ಲಿ, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಶಹೀದ್ ಭಗತ್ ಸಿಂಗ್ ಅವರನ್ನು ಸಾಕ್ಷಿಯಾಗಿ ಪರಿಗಣಿಸಿ ವಿಶಿಷ್ಟವಾದ ರೀತಿಯಲ್ಲಿ ಮದುವೆ ಮಾಡಿಸಲಾಗಿತ್ತು. ಈ ಮದುವೆಯಲ್ಲಿ ಯಾವುದೇ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ತೆಗೆದುಕೊಳ್ಳಲಾಗಿಲ್ಲ. ಮದುವೆಯ ನಂತರ, ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ಶಹೀದ್ ಭಗತ್ ಸಿಂಗ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ವಿವಾಹ ಸಮಾರಂಭವನ್ನು ನಡೆಸಲಾಯಿತು. ಶಹೀದ್ ಭಗತ್ ಸಿಂಗ್ ಅವರನ್ನು ಸಾಕ್ಷಿಯಾಗಿ ಪರಿಗಣಿಸಿ ಮದುವೆಯ ಆಚರಣೆಗಳನ್ನು ಪೂರ್ಣಗೊಳಿಸಲಾಯಿತು.