Viral Video: ಆಟೋದಲ್ಲಿ ಹೋಗುತ್ತಿದ್ದ ಮಹಿಳೆಗೆ ಬಟ್ಟೆ ಬಿಚ್ಚಿ ಕಿರುಕುಳ; ಶಾಕಿಂಗ್ ವಿಡಿಯೊ ಇಲ್ಲಿದೆ
ಇತ್ತೀಚೆಗೆ ಮುಂವೂನ ಬಾಂದ್ರಾದ ಟ್ರಾಫಿಕ್ ಸಿಗ್ನಲ್‍ನಲ್ಲಿ ಮಹಿಳಾ ಪ್ರಯಾಣಿಕಳೊಬ್ಬಳಿಗೆ ವ್ಯಕ್ತಿಯೊಬ್ಬ ಬಟ್ಟೆ ಬಿಚ್ಚಿಕೊಂಡು ಕಿರುಕುಳ ನೀಡಿದ ಆಘಾತಕಾರಿ ಘಟನೆ ನಡೆದಿದೆ. ಈ ಘಟನೆಯನ್ನು ಮಹಿಳೆ ವಿಡಿಯೊ ರೆಕಾರ್ಡ್ ಮಾಡಿ ಆ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾಳೆ. ಇದು ಈಗ ವೈರಲ್(Viral Video) ಆಗಿದೆ.


ಮುಂಬೈ: ಇತ್ತೀಚೆಗೆ ಆಟೋರಿಕ್ಷಾದಲ್ಲಿ ಮನೆಗೆ ಹಿಂದಿರುಗುತ್ತಿದ್ದ ಮಹಿಳಾ ಪ್ರಯಾಣಿಕಳೊಬ್ಬಳಿಗೆ ವ್ಯಕ್ತಿಯೊಬ್ಬ ಬಟ್ಟೆ ಬಿಚ್ಚಿಕೊಂಡು ಕಿರುಕುಳ ನೀಡಿದ ಆಘಾತಕಾರಿ ಘಟನೆ ಮುಂಬೈನಲ್ಲಿ ನಡೆದಿದೆ. ಶನಿವಾರ (ಏಪ್ರಿಲ್ 19)ಸಂಜೆ 7 ಗಂಟೆ ಸುಮಾರಿಗೆ ಬಾಂದ್ರಾದ ಟ್ರಾಫಿಕ್ ಸಿಗ್ನಲ್‍ನಲ್ಲಿ ಆಕೆ ಕುಳಿತಿದ್ದ ಆಟೋ ನಿಂತಿದ್ದ ವೇಳೆ ಈ ಘಟನೆ ನಡೆದಿದೆ. ಆ ವ್ಯಕ್ತಿ ಆಹಾರವನ್ನು ಕೇಳಲು ಅವಳ ಆಟೋದ ಬಳಿ ಬಂದಿದ್ದಾನೆ. ಆಗ ಅವಳು ಅವನನ್ನು ನಿರ್ಲಕ್ಷಿಸಿದ್ದಾಳಂತೆ. ಹೀಗಾಗಿ ಆತ ಈ ರೀತಿಯಾಗಿ ವರ್ತಿಸಿದ್ದಾನೆ ಎನ್ನಲಾಗಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.
ನಗರದ ಬೀದಿಯಲ್ಲಿ ಅವನು ಗಲಾಟೆ ಮಾಡಿದ್ದನ್ನು ಮಹಿಳೆ ವಿಡಿಯೊ ರೆಕಾರ್ಡ್ ಮಾಡಿ ಆ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾಳೆ. ಇದರಲ್ಲಿ ಅವನು ಬಟ್ಟೆ ಬಿಚ್ಚಿಕೊಂಡು ಅವಳ ಮೇಲೆ ಕಿರುಚುವುದು ಮತ್ತು ಕಾಲುದಾರಿಯಲ್ಲಿ ಹೋಗುತ್ತಾ ಉಗುಳುವುದು ಸೆರೆಯಾಗಿದೆ. ಈ ವಿಡಿಯೊದಲ್ಲಿ ಮಹಿಳೆ ಆ ವ್ಯಕ್ತಿ ತನ್ನೊಂದಿಗೆ ಕೆಟ್ಟದಾಗಿ ವರ್ತಿಸಿದ್ದಾನೆ ಎಂದು ಉಲ್ಲೇಖಿಸಿದ್ದಾಳೆ. ಕುಡಿದ ಮತ್ತಿನಲ್ಲಿದ್ದ ಆ ವ್ಯಕ್ತಿ ಅವಳ ತೊಡೆಯನ್ನು ಹಿಡಿದು ಅವಳ ಉಡುಗೆಯ ಬಗ್ಗೆ ಕೆಟ್ಟದ್ದಾಗಿ ಕಾಮೆಂಟ್ ಮಾಡಿ, ಅಂತಹ ಬಟ್ಟೆಗಳು ಕಿರುಕುಳಕ್ಕೆ ಕಾರಣ ಎಂದು ಹೇಳಿದ್ದಾನೆ ಎಂದು ಮಹಿಳೆ ತಿಳಿಸಿದ್ದಾಳೆ. ಅಲ್ಲದೇ ಆಕೆ ತನ್ನ ಸೋಶಿಯಲ್ ಮೀಡಿಯಾ ಅಕೌಂಟ್ ಅನ್ನು ಪ್ರೈವೇಟ್ ಅಕೌಂಟ್ ಆಗಿ ಬದಲಾಯಿಸಿ ವಿಡಿಯೊವನ್ನು ತನ್ನ ಫಾಲೋವರ್ಸ್‍ಗೆ ಮಾತ್ರ ಸೀಮಿತಗೊಳಿಸಿದ್ದಾಳೆ.
ಮಹಿಳೆಗೆ ಕಿರುಕುಳ ನೀಡಿದ ವ್ಯಕ್ತಿಯ ವಿಡಿಯೊ ಇಲ್ಲಿದೆ ನೋಡಿ...
ಆದರೆ , ಮುಂಬೈ ಮೂಲದ ಹಲವಾರು ಸೋಶಿಯಲ್ ಮೀಡಿಯಾ ಪೇಜ್‍ಗಳಲ್ಲಿ ನೆಟ್ಟಿಗರು ಈ ಘಟನೆಯನ್ನು ಖಂಡಿಸಿ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ರಿಪೋಸ್ಟ್ ಮಾಡಿದ್ದಾರೆ. ಹಾಗೂ ನೆಟ್ಟಿಗರು ಈ ವಿಷಯವನ್ನು ಪರಿಶೀಲಿಸುವಂತೆ ಮುಂಬೈ ಪೊಲೀಸರನ್ನು ಒತ್ತಾಯಿಸಿದ್ದಾರೆ. ಹೀಗಾಗಿ ಇದು ಮುಂಬೈ ಪೊಲೀಸರ ಗಮನ ಸೆಳೆದಿದೆ. ಘಟನೆ ನಡೆದ ಸುಮಾರು 12 ಗಂಟೆಗಳ ನಂತರ, ಮುಂಬೈ ಪೊಲೀಸರು ಆಕೆಯ ಪೋಸ್ಟ್‌ಗೆ ಉತ್ತರಿಸಿ, ವಿವರಗಳನ್ನು ಹಂಚಿಕೊಳ್ಳುವಂತೆ ಕೇಳಿದ್ದಾರಂತೆ.
ಈ ಸುದ್ದಿಯನ್ನೂ ಓದಿ:Viral Video: ವೃದ್ಧನಿಗೆ ಮನಬಂದಂತೆ ಥಳಿಸಿದ ವೈದ್ಯರು; ಕ್ರಮ ಕೈಗೊಳ್ಳುವಂತೆ ನೆಟ್ಟಿಗರ ಆಕ್ರೋಶ
ಮುಂಬೈನ ಬೀದಿಯಲ್ಲಿ ಮಹಿಳೆಯರಿಗೆ ಈ ರೀತಿ ಪುರುಷರು ಕಿರುಕುಳ ನೀಡಿದ ಘಟನೆ ನಡೆದಿದ್ದು ಇದೇ ಮೊದಲಲ್ಲ. ಈ ಹಿಂದೆ ಮುಂಬೈನ ಜುಹುನಲ್ಲಿ ಕೆಲವು ಅಪರಿಚಿತ ಪುರುಷರು ನಿಯಮಿತವಾಗಿ ಮಹಿಳೆಯೊಬ್ಬಳಿಗೆ ಕಿರುಕುಳ ನೀಡಿದ್ದು, ಈ ಅಗ್ನಿಪರೀಕ್ಷೆಯನ್ನು ಮಹಿಳೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಳೆ. ಕೆಲವು ಪುರುಷರು ರಸ್ತೆಯ ಮಧ್ಯದಲ್ಲಿ ತಮ್ಮ ಪ್ಯಾಂಟ್ ತೆಗೆದ ನಂತರ ಜೋರಾಗಿ ಕರೆಯುವ ಮೂಲಕ ತನ್ನೊಂದಿಗೆ ಕೆಟ್ಟದಾಗಿ ವರ್ತಿಸಿದ್ದಾರೆ ಎಂದು ಮಹಿಳೆ ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಆರೋಪಿಸಿದ್ದಾಳೆ.