ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಸರ್ಜರಿ ಮಾಡುತ್ತಿರುವಾಗ ಸೆಲ್ಫಿ ತೆಗೆದು ಪೋಸ್ಟ್- ವೈದ್ಯನ ಲೈಸೆನ್ಸ್‌ ಕ್ಯಾನ್ಸಲ್‌!

Doctor Loses License: ರೋಗಿಯೊಬ್ಬರ ಮೆದುಳಿನ ಶಸ್ತ್ರಚಿಕಿತ್ಸೆ ನಡೆಸುತ್ತಿರುವ ಚಿತ್ರವನ್ನು ಡೇಟಿಂಗ್ ಸೈಟ್‌ಗೆ ಅಪ್‌ಲೋಡ್ ಮಾಡಿದ ನಂತರ ವೈದ್ಯರೊಬ್ಬರನ್ನು ಕೆಲಸದಿಂದ ವಜಾ ಮಾಡಲಾಗಿದೆ. ಅಷ್ಟೇ ಅಲ್ಲ, ಈ ವೈದ್ಯನ ಮೇಲೆ ಅತ್ಯಾಚಾರ ಆರೋಪ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ.

ಸರ್ಜರಿ ಮಾಡ್ತಿರುವಾಗ ಸೆಲ್ಫಿ ತೆಗೆದು ವೈದ್ಯನಿಂದ ಪೋಸ್ಟ್!

Priyanka P Priyanka P Aug 28, 2025 4:54 PM

ಇಂಗ್ಲೆಂಡ್: ರೋಗಿಯೊಬ್ಬರ ಮೆದುಳಿನ ಶಸ್ತ್ರಚಿಕಿತ್ಸೆ ನಡೆಸುತ್ತಿರುವ ಚಿತ್ರವನ್ನು ಡೇಟಿಂಗ್ ಸೈಟ್‌ಗೆ ಅಪ್‌ಲೋಡ್ ಮಾಡಿದ ನಂತರ ವೈದ್ಯರೊಬ್ಬರನ್ನು ಕೆಲಸದಿಂದ ವಜಾ ಮಾಡಲಾಗಿರುವ ಘಟನೆ ಯುಕೆ (UK) ಯಲ್ಲಿ ನಡೆದಿದೆ. ಶಸ್ತ್ರಚಿಕಿತ್ಸೆಯ (Surgery) ಸಮಯದಲ್ಲಿ ರೋಗಿಯ ತೆರೆದ ಮೆದುಳನ್ನು ಅವರ ಒಪ್ಪಿಗೆಯಿಲ್ಲದೆ ತೋರಿಸಿದ್ದಾರೆ. ಸ್ಟಾಫರ್ಡ್‌ಶೈರ್‌ನ ಟ್ಯಾಮ್‌ವರ್ತ್‌ನ ಡಾ. ಸಯೀದ್ ತಲೀಬಿ ಅವರು ಸೆಪ್ಟೆಂಬರ್ 2017 ರಲ್ಲಿ 28 ವರ್ಷದ ಮೆದುಳು ಶಸ್ತ್ರಚಿಕಿತ್ಸಕ ಎಂಬ ಶೀರ್ಷಿಕೆಯೊಂದಿಗೆ ಸೆಲ್ಫಿ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಈ ವಿಚಾರ ವೈದ್ಯರ ನ್ಯಾಯಮಂಡಳಿ ಸೇವೆ (MPTS) ಗೆ ಗೊತ್ತಾಗಿದ್ದೇ ತಡ ಅವರನ್ನು ಸೇವೆಯಿಂದ ವಜಾ ಮಾಡಲಾಗಿದೆ ಎಂದು ವರದಿಯಾಗಿದೆ.

ವೈದ್ಯ ತಲೀಬಿ ವಿರುದ್ಧವಿದೆ ಅನೇಕ ಆರೋಪ

ವೈದ್ಯ ತಲೀಬಿ ವಿರುದ್ಧ ಅನೇಕ ಆರೋಪಗಳಿವೆ. ಅವರು ಮುಸ್ಲೀಂತೇರರನ್ನು ದ್ವೇಷಿಸುತ್ತಿದ್ದರು ಎನ್ನಲಾಗಿದೆ. ಮಹಿಳೆಯೊಬ್ಬರಿಗೆ ಬೆದರಿಕೆ ಹಾಕುವುದು, ಜನಾಂಗೀಯ ಹೇಳಿಕೆಗಳನ್ನು ನೀಡುವುದು, ಶಸ್ತ್ರಾಸ್ತ್ರಗಳೊಂದಿಗೆ ಪೋಸ್ ನೀಡುವುದು ಮತ್ತು ನಿಂದನೀಯ ನಡವಳಿಕೆಯಲ್ಲಿ ತೊಡಗಿದ್ದಕ್ಕಾಗಿ ಆರೋಪ ಹೊರಿಸಲಾಗಿದೆ. ಹೆಸರು ಹೇಳದ ಮಹಿಳೆಯೊಬ್ಬರು ಅವರು ತಮ್ಮನ್ನು ಬಲವಂತವಾಗಿ ಲೈಂಗಿಕತೆಗೆ ಒಳಪಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: Viral Video: ಪುಟ್ಟ ಕಂದಮ್ಮನ ಪ್ರಾಣದ ಜೊತೆ ಈ ಪಾಪಿಗಳ ಚೆಲ್ಲಾಟ! ಎದೆ ಝಲ್ಲೆನಿಸೋ ವಿಡಿಯೊ ಇಲ್ಲಿದೆ

ಹತ್ಯೆ ಮತ್ತು ಶಿರಚ್ಛೇದನಗಳ ವಿಡಿಯೊಗಳನ್ನು ಹಾಗೂ ವಾಟರ್‌ಬೋರ್ಡಿಂಗ್ ಸಾಧನಗಳ ಚಿತ್ರಗಳನ್ನು ತಲೀಬಿ ಡೌನ್‌ಲೋಡ್ ಮಾಡಿ ವೀಕ್ಷಿಸಿದ್ದಾನೆ ಎಂದು ನ್ಯಾಯಮಂಡಳಿ ಹೇಳಿದೆ. ಜನವರಿ 2016 ಮತ್ತು ಆಗಸ್ಟ್ 2017 ರ ನಡುವೆ ‘ನಾನು ಅಫ್ಘಾನ್ ಸಂಸ್ಕೃತಿಯನ್ನು ದ್ವೇಷಿಸುತ್ತೇನೆ’ ಮತ್ತು ‘ನಾನು ಮುಸ್ಲಿಮೇತರರು ಮತ್ತು ಬಿಳಿಯರನ್ನು ದ್ವೇಷಿಸುತ್ತೇನೆ’ ಎಂಬಂತಹ ಜನಾಂಗೀಯ ಮತ್ತು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾನೆ ಎಂದು ಹೇಳಲಾಗಿದೆ.

ಇದೀಗ ತಲೀಬಿಯ ಹೆಸರನ್ನು ಜನರಲ್ ಮೆಡಿಕಲ್ ಕೌನ್ಸಿಲ್‌ನ ರಿಜಿಸ್ಟರ್‌ (GMC) ನಿಂದ ತೆಗೆದುಹಾಕಲಾಯಿತು. ಅಂದರೆ ಅವರು ಇನ್ನು ಮುಂದೆ ವೈದ್ಯಕೀಯ ವೃತ್ತಿಯನ್ನು ಮಾಡಲು ಸಾಧ್ಯವಿಲ್ಲ. ವರದಿಯ ಪ್ರಕಾರ, ತಲೀಬಿ ಸ್ವತಃ ಅಕ್ಟೋಬರ್ 2017 ರಲ್ಲಿ ಜಿಎಂಸಿಗೆ ಮೊದಲು ಎಚ್ಚರಿಕೆ ನೀಡಿ, ತನ್ನ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡಲಾಗಿದೆ ಎಂದಿದ್ದರು. ಜುಲೈ 2018 ರಲ್ಲಿ, ವೆಸ್ಟ್ ಮಿಡ್ಲ್ಯಾಂಡ್ಸ್ ಪೊಲೀಸರು ಬಲವಂತದ ಮತ್ತು ಮೂರು ಅತ್ಯಾಚಾರ ಆರೋಪಗಳ ಮೇಲೆ ಅವರನ್ನು ಬಂಧಿಸಿದರು.

ಅಷ್ಟೇ ಅಲ್ಲ 2017 ರಲ್ಲಿ ಉದ್ದೇಶಪೂರ್ವಕವಾಗಿ ಮಹಿಳೆಯ ಒಪ್ಪಿಗೆಯಿಲ್ಲದೆ ಆಕೆಯ ಮನೆಯೊಳಗೆ ನುಸುಳಿದ್ದಾನೆ ಎಂದೂ ವರದಿಯಾಗಿದೆ. ನಂತರ 2018 ರಲ್ಲಿ ಆ ಮಹಿಳೆಯನ್ನು ಸಂಪರ್ಕಿಸದಂತೆ ಕೋರ್ಟ್ ಆದೇಶ ಹೊರಡಿಸಿದ್ದರೂ ಅದನ್ನು ಉಲ್ಲಂಘಿಸಿದ್ದಾನೆ. ಅಲ್ಲದೆ, ಮೇ 2017 ರಲ್ಲಿ ಅಂಗಡಿಯೊಂದರಿಂದ ಪೌಂಡ್ 23.50 ಮೌಲ್ಯದ ಹಾಲಿನ ಪುಡಿಯನ್ನು ಕದ್ದಿದ್ದಾರೆ ಎಂದು ವರದಿಯಾಗಿದೆ. ಇಷ್ಟೆಲ್ಲಾ ಆದ ಬಳಿಕ ಇದೀಗ ಆತನನ್ನು ಸೇವೆಯಿಂದ ವಜಾಗೊಳಿಸಲಾಗಿದೆ.