ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ವೃತ್ತಿ ಬಗ್ಗೆ ಮುಚ್ಚುಮರೆಯಿಲ್ಲದೆ ಹೇಳಿಕೊಂಡ ಮಾಡೆಲ್‍; ಈಕೆಯ ಧೈರ್ಯ ನೋಡಿ ನೆಟ್ಟಿಗರು ಫುಲ್‌ ಫಿದಾ

ಭಾರತೀಯ ಮೂಲದ ಹ್ಯಾಂಡ್‌ ಮಾಡೆಲ್ ಒಬ್ಬಳು ತನ್ನ ವೃತ್ತಿಯ ಬಗೆಗಿನ ವಿಚಾರಗಳನ್ನು ಯಾವುದೇ ಮುಚ್ಚುಮರೆಯಿಲ್ಲದೆ ಬಹಿರಂಗಪಡಿಸಿದ್ದಾಳೆ. ಈ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral News) ಆಗಿದೆ.ನೆಟ್ಟಿಗರು ಈಕೆಯ ನೇರ ನುಡಿ ಕೇಳಿ ಫುಲ್‌ ಫಿದಾ ಆಗಿದ್ದಾರೆ.

ವೃತ್ತಿ ಬಗ್ಗೆ ಮುಚ್ಚುಮರೆಯಿಲ್ಲದೆ ಹೇಳಿಕೊಂಡ ಮಾಡೆಲ್‍!

Profile pavithra Jun 19, 2025 4:56 PM

ವಾಷಿಂಗ್ಟನ್‌: ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ಹ್ಯಾಂಡ್‌ ಮಾಡೆಲ್‌ ಒಬ್ಬಲ ಸಂದರ್ಶನವೊಂದು ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಏನಿದು ಹ್ಯಾಂಡ್‌ ಮಾಡೆಲ್‌ ಎಂಬ ಕುತುಹೂಲ ನಿಮ್ಮನ್ನು ಕಾಡಿರಬಹುದು. ಅದರ ಮಾಹಿತಿ ಇಲ್ಲಿದೆ ನೋಡಿ. ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಇ-ಕಾಮರ್ಸ್ ಮತ್ತು ಸೋಶಿಯಲ್ ಮೀಡಿಯಾಗಳ ಕಾರಣದಿಂದ ಬ್ರ್ಯಾಂಡ್‌ಗಳು ತಮ್ಮ ಜಾಹೀರಾತುಗಳಲ್ಲಿ ಹ್ಯಾಂಡ್ ಮಾಡೆಲ್‌ಗಳನ್ನು ಹೆಚ್ಚಾಗಿ ಸೇರಿಸಿಕೊಳ್ಳುತ್ತಿವೆ. ಒಬ್ಬ ಫೇಮಸ್ ಹ್ಯಾಂಡ್ ಮಾಡೆಲ್(Hand Model) ಆಗಲು ಸಾಮಾನ್ಯವಾಗಿ ಕಾಂತಿಯುತವಾದ ಚರ್ಮ, ಆಕರ್ಷಕವಾದ ಕೈಗಳು ಮತ್ತು ನೀಟಾಗಿ ಬೆಳಸಿಕೊಂಡು ಶೇಪ್ ನೀಡಲಾದ ಉಗುರುಗಳನ್ನು ಹೊಂದಿರಬೇಕು. ಡಿಜಿಟಲ್ ಮತ್ತು ಪ್ರಿಂಟ್ ಮೀಡಿಯಾ ಎರಡರಲ್ಲೂ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಹ್ಯಾಂಡ್ ಮಾಡೆಲಿಂಗ್ ಉದ್ಯಮವು ವೇಗವಾಗಿ ಬೆಳೆಯುತ್ತಿದೆ. ಹೀಗಿರುವಾಗ ಇತ್ತೀಚೆಗೆ ಸೋಶಿಯಲ್ ಮಿಡಿಯಾದಲ್ಲಿ ಭಾರತೀಯ ಮೂಲದ ಮಹಿಳೆಯೊಬ್ಬಳು ನ್ಯೂಯಾರ್ಕ್‍ನಲ್ಲಿ ಹ್ಯಾಂಡ್ ಮಾಡೆಲ್ ಆಗಿದ್ದು, ತನ್ನ ವೃತ್ತಿಯ ಬಗೆಗಿನ ವಿಚಾರಗಳನ್ನು ಮುಚ್ಚುಮರೆಯಿಲ್ಲದೆ ಬಹಿರಂಗಪಡಿಸಿದ್ದಳು. ಇದು ಈಗ ಸೋಶಿಯಲ್ ಮೀಡಿಯಾದಲ್ಲಿ ಜನರ ಗಮನಸೆಳೆದು ವೈರಲ್(Viral News) ಆಗಿದೆ.

ವೈರಲ್‌ ಆದ ವಿಡಿಯೊದಲ್ಲಿ, ಮಹಿಳೆಯೊಬ್ಬಳು ತನ್ನ ಹ್ಯಾಂಡ್‌ ಮಾಡೆಲ್‌ ವೃತ್ತಿಯ ಬಗ್ಗೆ ವಿವರವಾಗಿ ತಿಳಿಸಿದ್ದಾಳೆ.ಅವಳು ಆಭರಣ ಬ್ರಾಂಡ್‌ಗಳು, ಸ್ಕಿನ್ ಕೇರ್‌, ಫುಡ್, ಕೂಲ್‍ ಡ್ರಿಂಕ್ಸ್, ಆಲ್ಕೋಹಾಲ್ ಮತ್ತು ಇನ್ನೂ ಹೆಚ್ಚಿನವುಗಳಿಗೆ ಹ್ಯಾಂಡ್ ಮಾಡೆಲ್ ಆಗಿ ತಾನು ಹೇಗೆಲ್ಲಾ ಕೆಲಸ ಮಾಡಿದ್ದೇನೆಂದು ಹೇಳಿದ್ದಾಳೆ. ಅದು ಅಲ್ಲದೇ, ತನ್ನ ಗಳಿಕೆಯ ಬಗ್ಗೆ ಮಾಹಿತಿ ನೀಡಿದ್ದಾಳೆ.

ಈ ಸುದ್ದಿಯನ್ನೂ ಓದಿ:‌Viral Video: ಇದೆಂಥ ಕ್ರೇಜ್‌; ಸಿಂಹದ ಜತೆ ಪೋಸ್‌ ನೀಡಲು ಮಗುವನ್ನೇ ಅಪಾಯಕ್ಕೆ ತಳ್ಳಿದ ತಂದೆ: ವಿಡಿಯೊ ವೈರಲ್

ಈ ವಿಡಿಯೊ ವೈರಲ್ ಆಗಿ,ನೆಟ್ಟಿಗರು ಸಾಕಷ್ಟು ಕಾಮೆಂಟ್‌ ಮಾಡಿದ್ದಾರೆ. ಅನೇಕರು ಮಹಿಳೆ ಯಾವುದೇ ಮುಚ್ಚುಮರೆ ಇಲ್ಲದೇ ಉತ್ತರಗಳನ್ನು ನೀಡಿದ್ದನ್ನು ಕಂಡು ಮೆಚ್ಚಿಕೊಂಡಿದ್ದಾರೆ ಮತ್ತು ಇತರರು ಆಕೆಯ ವೃತ್ತಿಯ ಬಗ್ಗೆ ಆಕೆ ನೀಡಿದ ಪ್ರತಿಕ್ರಿಯೆಗಳನ್ನು ನೋಡಿ ಖುಷಿಪಟ್ಟಿದ್ದಾರೆ. ಅದು ಅಲ್ಲದೇ ಆಕೆ ತಾನು ಭಾರತೀಯಳು ನಾವು ಎಲ್ಲೇ ಇದ್ದರೂ ತಮ್ಮ ರಾಷ್ಟ್ರೀಯತೆಯನ್ನು ಎಂದಿಗೂ ಬಿಟ್ಟುಕೊಡಬಾರದು ಎಂದು ಜನರಿಗೆ ಸಲಹೆ ನೀಡಿದ್ದನ್ನು ಕಂಡು ಎಲ್ಲರೂ ಆಕೆಯನ್ನು ಹೊಗಳಿದ್ದಾರೆ.