ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ajith Kumar: ಇಟಲಿಯಲ್ಲಿ ಅಜಿತ್ ಕುಮಾರ್ ರೇಸಿಂಗ್ ಕಾರು ಅಪಘಾತ; ಅವಶೇಷಗಳನ್ನು ತೆರವುಗೊಳಿಸಿದ ನಟನ ಸರಳತೆಗೆ ಜೈ ಎಂದ ನೆಟ್ಟಿಗರು

Ajith Kumar’s racing car crashes: ಅಜಿತ್ ಅವರ ಕಾರು ಟ್ರ್ಯಾಕ್‍ನಲ್ಲಿ ನಿಂತಿದ್ದ ವಾಹನಕ್ಕೆ ಡಿಕ್ಕಿ ಹೊಡಿದಿದೆ. ಅಪಘಾತ ತೀವ್ರವಾಗಿದ್ದರೂ ಅವರು ಪಾರಾಗಿದ್ದಾರೆ. ಅಪಘಾತವಾದ ಬಳಿಕ ದೂರ ಸರಿಯುವ ಬದಲು, ನಟ ತಕ್ಷಣವೇ ಟ್ರ್ಯಾಕ್‍ನಿಂದ ಅವಶೇಷಗಳನ್ನು ತೆರವುಗೊಳಿಸುವಲ್ಲಿ ಮಾರ್ಷಲ್‌ಗಳಿಗೆ ಸಹಾಯ ಮಾಡಿದರು.

ಮಿಸಾನೊದಲ್ಲಿ ಅಜಿತ್ ಕುಮಾರ್ ರೇಸಿಂಗ್ ಕಾರು ಅಪಘಾತ

Priyanka P Priyanka P Jul 21, 2025 7:13 PM

ಮಿಸಾನೊ: ತಮ್ಮ ಬ್ಲಾಕ್‌ಬಸ್ಟರ್ ಚಿತ್ರಗಳಷ್ಟೇ ಕಾರು ರೇಸ್ ಮೇಲಿನ ಪ್ರೀತಿಗೂ ಜನಪ್ರಿಯರಾದ ನಟ ಅಜಿತ್ ಕುಮಾರ್, ಇಟಲಿಯ ಮಿಸಾನೊ ವರ್ಲ್ಡ್ ಸರ್ಕ್ಯೂಟ್‌ನಲ್ಲಿ ನಡೆದ GT4 ಯುರೋಪಿಯನ್ ಸರಣಿಯ ಸಮಯದಲ್ಲಿ ಅಪಘಾತಕ್ಕೀಡಾದರು. ಚಾಂಪಿಯನ್‌ಶಿಪ್‌ನ ಎರಡನೇ ಸುತ್ತಿನಲ್ಲಿ ಭಾಗವಹಿಸುತ್ತಿದ್ದ ನಟ-ರೇಸರ್ ಈ ಘಟನೆಯಿಂದ ಯಾವುದೇ ಅಪಾಯವಿಲ್ಲದೆ ಪಾರಾದರು.

ಅಜಿತ್ ಅವರ ಕಾರು ಟ್ರ್ಯಾಕ್‍ನಲ್ಲಿ ನಿಂತಿದ್ದ ವಾಹನಕ್ಕೆ ಡಿಕ್ಕಿ ಹೊಡೆದಾಗ ಈ ಅಪಘಾತ ಸಂಭವಿಸಿದೆ. ಅಪಘಾತ ತೀವ್ರವಾಗಿದ್ದರೂ ಅವರು ಅಪಾಯವಿಲ್ಲದೆ ಪಾರಾಗಿದ್ದಾರೆ. ಅಪಘಾತವಾದ ಬಳಿಕ ದೂರ ಸರಿಯುವ ಬದಲು ಅವರು ತಕ್ಷಣವೇ ಟ್ರ್ಯಾಕ್‍ನಿಂದ ಅವಶೇಷಗಳನ್ನು ತೆರವುಗೊಳಿಸುವಲ್ಲಿ ಮಾರ್ಷಲ್‌ಗಳಿಗೆ ಸಹಾಯ ಮಾಡಿದರು.

ಈಗ ವೈರಲ್ ಆಗಿರುವ ವಿಡಿಯೊದಲ್ಲಿ ಅಜಿತ್ ಟ್ರ್ಯಾಕ್ ಸಿಬ್ಬಂದಿಗೆ ರಸ್ತೆಯಿಂದ ಹಾನಿಗೊಳಗಾದ ಭಾಗಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತಿರುವುದನ್ನು ಕಾಣಬಹುದು. ʼʼಅಜಿತ್ ಕುಮಾರ್ ಅವರಿದ್ದ ಕಾರು ಅಪಘಾತಕ್ಕೀಡಾಗಿದೆ. ಇದು ಅವರ ಕಾರಿಕೆ ಗರಿಷ್ಠ ಹಾನಿ ಉಂಟು ಮಾಡಿದೆ. ಅವರು ಚಾಂಪಿಯನ್. ಅಪಘಾತಕ್ಕೀಡಾದರೂ ಅವರು ಮಾರ್ಷಲ್‌ಗಳಿಗೆ ಟ್ರ್ಯಾಕ್‌ ಸ್ವಚ್ಛಗೊಳಿಸಲು ಸಹಾಯ ಮಾಡಿದ್ದಾರೆ. ಹೆಚ್ಚಿನ ಚಾಲಕರು ಹಾಗೆ ಮಾಡುವುದಿಲ್ಲʼʼ ಎಂದು ಮೂಲಗಲು ತಿಲಿಸಿವೆ.

ಇಲ್ಲಿದೆ ವಿಡಿಯೊ:





ಅಜಿತ್ 2003ರಲ್ಲಿ ರೇಸಿಂಗ್‌ಗೆ ಕಾಲಿಟ್ಟರು. ದೀರ್ಘ ವಿರಾಮದ ನಂತರ, ಅವರು ಇತ್ತೀಚೆಗೆ ಸ್ಪರ್ಧಾತ್ಮಕ ಮೋಟಾರ್ ಸ್ಪೋರ್ಟ್ಸ್‌ಗೆ ಮರಳಿದ್ದಾರೆ. ಈಗಾಗಲೇ ಹಲವು ಪ್ರತಿಷ್ಠಿತ ರೇಸ್‌ನಲ್ಲಿ ಭಾಗವಹಿಸಿದ್ದಾರೆ. ಅವರು ಈ ಹಿಂದೆ ಜರ್ಮನಿ ಮತ್ತು ಮಲೇಷ್ಯಾದಲ್ಲಿ ನಡೆದ ರೇಸ್‌ನಲ್ಲಿ ಸ್ಪರ್ಧಿಸಿದ್ದಾರೆ. 2010ರಲ್ಲಿಯೂ ಫಾರ್ಮುಲಾ 2 ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದಾರೆ. ಅವರ ಪುನರಾಗಮನವನ್ನು ಅಬಿಮಾನಿಗಳು ಸ್ವಾಗತಿಸಿದ್ದಾರೆ.

ಸಿನಿಮಾ ಮತ್ತು ಮೋಟಾರ್‌ಸ್ಪೋರ್ಟ್ ಎರಡರಲ್ಲೂ ಅಜಿತ್ ಅವರ ಗಮನಾರ್ಹ ಕೊಡುಗೆಯನ್ನು ಗುರುತಿಸಿ ಭಾರತ ಸರ್ಕಾರವು ಇತ್ತೀಚೆಗೆ ಪದ್ಮಭೂಷಣ ಪ್ರಶಸ್ತಿ ಪ್ರದಾನ ಮಾಡಿತ್ತು.

ಅಜಿತ್ ಕೊನೆಯ ಬಾರಿಗೆ ಅಧಿಕ್ ರವಿಚಂದ್ರನ್ ನಿರ್ದೇಶನದ ʼಗುಡ್ ಬ್ಯಾಡ್ ಅಗ್ಲಿʼ ಚಿತ್ರದಲ್ಲಿ ನಟಿಸಿದ್ದರು. ಇದು 2025ರಲ್ಲಿ ತಮಿಳು ಚಿತ್ರರಂಗದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎನಿಸಿಕೊಂಡಿದೆ. ಪ್ರಸ್ತುತ ಅವರು ನಟನೆಗೆ ಕೊಂಚ ಬ್ರೇಕ್‌ ನೀಡಿದ್ದಾರೆ. ಅದಾಗ್ಯೂ ಅವರು ಅಧಿಕ್ ರವಿಚಂದ್ರನ್ ನಿರ್ದೇಶನದ ಚಿತ್ರ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ಅಜಿತ್‌ ಬೆಲ್ಜಿಯಂನ ಸ್ಪಾ-ಫ್ರಾಂಕೋರ್‌ಚಾಂಪ್ಸ್‌ನಲ್ಲಿ ನಡೆಯಲಿರುವ GT4 ಸರಣಿಯ ಮೂರನೇ ಸುತ್ತಿಗೆ ಸಜ್ಜಾಗುತ್ತಿದ್ದಾರೆ.