Viral News: ಮಹಿಳೆಗೆ 200 ರೂ. ವಂಚನೆ; ಮಾಜಿ ಡಿಸಿಎಂ ವಿರುದ್ಧವೇ ದೂರು, ಎಫ್ಐಆರ್ ದಾಖಲು
Bihar Woman Alleges Rs 200 Fraud: ಮಹಿಳೆಯೊಬ್ಬರು ಸರ್ಕಾರದ ಯೋಜನೆಯಲ್ಲಿ 200 ರೂ. ವಂಚನೆ ಎಸಗಿದ್ದಾರೆ ಎಂದು ದೂರು ನೀಡಿದ್ದಾರೆ. ಈ ಸಂಬಂಧ ಬಿಹಾರದ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಮತ್ತು ಮಹಾಮೈತ್ರಿಕೂಟದ ಇತರ ನಾಯಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

-

ಪಟನಾ: ಸರ್ಕಾರಿ ಯೋಜನೆಯಲ್ಲಿ ವಂಚನೆ ಆರೋಪದ ಮೇಲೆ ಬಿಹಾರದ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ (Tejaswi Yadav) ಮತ್ತು ಮಹಾಮೈತ್ರಿಕೂಟದ ಇತರ ನಾಯಕರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲಾಗಿದೆ. ಎಫ್‌ಐಆರ್‌ನಲ್ಲಿ ಹೆಸರಿಸಲಾದ ಇತರ ನಾಯಕರಲ್ಲಿ ರಾಜ್ಯಸಭಾ ಸಂಸದ ಸಂಜಯ್ ಯಾದವ್, ಮಾಜಿ ಶಾಸಕ ಮತ್ತು ಆರ್‌ಜೆಡಿ ನಾಯಕ ರಿಷಿ ಮಿಶ್ರಾ ಮತ್ತು ಮಾಜಿ ಕಾಂಗ್ರೆಸ್ ಅಭ್ಯರ್ಥಿ ಮಸ್ಕೂರ್ ಅಹ್ಮದ್ ಉಸ್ಮಾನಿ ಸೇರಿದ್ದಾರೆ.
ಸಿಂಗ್ವಾರಾದ ವಾರ್ಡ್ ಸಂಖ್ಯೆ 7 ರ ನಿವಾಸಿ ಗುಡಿಯಾ ದೇವಿ ಎಂಬವರು ನೀಡಿದ ದೂರಿನ ಆಧಾರದ ಮೇಲೆ ದರ್ಭಂಗಾ ಜಿಲ್ಲೆಯ ಸಿಂಗ್ವಾರಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ದೂರಿನ ಪ್ರಕಾರ, ಗುಡಿಯಾ ದೇವಿ ಅವರು ‘ಮೈ ಬಹಿನ್ ಮಾನ್ ಯೋಜನೆ’ ಅಡಿಯಲ್ಲಿ 2500 ರೂ.ಗಳ ಪ್ರಯೋಜನ ಪಡೆಯಲು ಅರ್ಜಿಯನ್ನು ಭರ್ತಿ ಮಾಡುವಾಗ 200 ರೂ.ಗಳನ್ನು ವಂಚಿಸಲಾಗಿದೆ ಎಂದು ಆರೋಪಿಸಿದ್ದಾರೆ. ಈ ಯೋಜನೆಯನ್ನು ಮೇಲೆ ಉಲ್ಲೇಖಿಸಲಾದ ನಾಯಕರು ಪ್ರಚಾರ ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ವಿವರಗಳು ಮತ್ತು ಮೊಬೈಲ್ ಸಂಖ್ಯೆಗಳು ಸೇರಿದಂತೆ ಮುಗ್ಧ ಮಹಿಳೆಯರಿಂದ ಸೂಕ್ಷ್ಮ ವೈಯಕ್ತಿಕ ಮಾಹಿತಿಯನ್ನು ವಿರೋಧ ಪಕ್ಷದ ನಾಯಕರು ಸಂಗ್ರಹಿಸುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಮಹಿಳೆ ನೀಡಿದ ದೂರಿನ ಮೇರೆಗೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ಸಿಂಗ್ವಾರ ಪೊಲೀಸ್ ಠಾಣೆಯ ಎಸ್‌ಎಚ್‌ಒ ದಾಖಲಾತಿಯನ್ನು ದೃಢಪಡಿಸಿದ್ದಾರೆ.
ಇದನ್ನೂ ಓದಿ: Viral News: ವ್ಯಾಪಾರಿಯ ಕೈಗೆ ಕಚ್ಚಿದ ಕಳ್ಳ; ಮುಂದೆ ಆಗಿದ್ದೇ ಬೇರೆ! ಏನಿದು ಘಟನೆ?
‘ಮೈ ಬೆಹನ್ ಮಾನ್ ಯೋಜನೆ’ ಬಿಹಾರದ ಮಹಿಳೆಯರಿಗಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪ್ರಾರಂಭಿಸಿದ ಸಾಮಾಜಿಕ ನೆರವು ಯೋಜನೆಯಾಗಿದೆ. ಈ ಯೋಜನೆಯಡಿಯಲ್ಲಿ, ಅರ್ಹ ಮಹಿಳೆಯರು ತಿಂಗಳಿಗೆ 2,500 ರೂ.ಗಳನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಂದ ಪಡೆಯುತ್ತಾರೆ. ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುವುದು ಮತ್ತು ಮಹಿಳಾ ಸಬಲೀಕರಣವು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಮನೆ ಲೀಸ್ ಹೆಸರಿನಲ್ಲಿ ವಂಚನೆ
ಬೆಂಗಳೂರು ನಗರದಲ್ಲಿ ಮನೆ ಲೀಸ್ ಹೆಸರಿನಲ್ಲಿ ಹತ್ತಾರು ಜನರಿಗೆ ಭಾರಿ ವಂಚನೆ ಎಸಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಕೆಟಿನಾ ಹೋಮ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಎಂಬ ಖಾಸಗಿ ಕಂಪನಿ ಹೆಸರಿನಲ್ಲಿ ವ್ಯಕ್ತಿಯೊಬ್ಬ ಅನೇಕ ಕುಟುಂಬಗಳಿಂದ ಲಕ್ಷಾಂತರ ರೂಪಾಯಿಗಳನ್ನು ಪಡೆದು ನಾಪತ್ತೆಯಾಗಿದ್ದಾನೆ. ಇದೀಗ ಆರೋಪಿ ವಿವೇಕ್ ಕೇಶವನ್ ಹಾಗೂ ಆತನ ಸಹಚರರ ವಿರುದ್ಧ ಪರಪ್ಪನ ಅಗ್ರಹಾರ, ಹೆಬ್ಬಗೋಡಿ ಮತ್ತು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಗಳಲ್ಲಿ ವಿವಿಧ ಎಫ್ಐಆರ್ಗಳು ದಾಖಲಾಗಿವೆ.