Viral Video: ಚಿಕನ್ ಫ್ರೈ ವಿಚಾರಕ್ಕೆ ಮದ್ವೆ ಮನೆ ಆಯ್ತು ರಣಾಂಗಣ! ಬಂಧುಗಳ ನಡುವೆ ಮಾರಾಮಾರಿ
Wedding Event Turns into Battlefield: ಮದುವೆ ಸಮಾರಂಭವೊಂದು ಅಚ್ಚರಿಯ ರೀತಿಯಲ್ಲಿ ಅಸ್ತವ್ಯಸ್ತಗೊಂಡಿದೆ. ಊಟದ ವೇಳೆ ಚಿಕನ್ ಫ್ರೈ ಹಂಚಿಕೆಯಲ್ಲಿ ಉಂಟಾದ ತಕರಾರಿನಿಂದ ಅತಿಥಿಗಳ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಅದು ಹೊಯ್‍ಕೈ ಮಟ್ಟಕ್ಕೆ ತಲುಪಿದೆ. ಚಿಕನ್ ಫ್ರೈಗಳನ್ನು ಬಡಿಸುವ ಬಗ್ಗೆ ವಧು ಮತ್ತು ವರನ ಕಡೆಯವರ ನಡುವೆ ಜಗಳ ಭುಗಿಲೆದ್ದಿದೆ. ವರನ ಕುಟುಂಬದ ಕೆಲವು ಸದಸ್ಯರು ಅಲ್ಪ ಪ್ರಮಾಣದ ಖಾದ್ಯವನ್ನಷ್ಟೇ ಬಡಿಸಲಾಗುತ್ತಿದೆ ಎಂದು ದೂರಿದರು. ಸ್ಥಳದಲ್ಲಿದ್ದವರು ಘಟನೆಯ ದೃಶ್ಯವನ್ನು ಚಿತ್ರೀಕರಿಸಿದ್ದು, ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. ಅದು ಭಾರಿ ವೈರಲ್ ಆಗಿದೆ.
                                ಚಿಕನ್ ಫ್ರೈ ವಿಚಾರಕ್ಕೆ ಮದುವೆ ಮನೆಯಲ್ಲಿ ಹೊಡೆದಾಟ ನಡೆದಿರುವ ದೃಶ್ಯ -
                                
                                Priyanka P
                            
                                Nov 4, 2025 12:05 PM
                            ಲಖನೌ: ಮದುವೆ ಅನ್ನೋದು ಪ್ರತಿಯೊಬ್ಬ ವ್ಯಕ್ತಿಯ ಬದುಕಿನ ಪ್ರಮುಖ ಘಟ್ಟ. ಹೀಗಾಗಿ ಸಾಕಷ್ಟು ಅತಿಥಿಗಳನ್ನು ಆಮಂತ್ರಿಸಿ ಅವರ ಮುಂದೆ ನೂತನ ವಧು-ವರರು ಹೊಸ ಬಾಳಿಗೆ ಜೊತೆಯಾಗಿ ಸಪ್ತಪದಿ ತುಳಿಯುತ್ತಾರೆ. ಮದುವೆಗೆ ಬಂದಂತಹ ಅತಿಥಿಗಳು ನವಜೋಡಿಗಳನ್ನು ಆಶೀರ್ವದಿಸಿ, ಊಟ ಮಾಡಿ ತೆರಳುತ್ತಾರೆ. ಅತಿಥಿಗಳಿಗಾಗಿ ಬಗೆ-ಬಗೆಯ ಖಾದ್ಯಗಳನ್ನು ತಯಾರಿಸಿ ಬಡಿಸಲಾಗುತ್ತದೆ. ಕೆಲವೊಮ್ಮೆ, ಊಟದ ವಿಚಾರವಾಗಿ ವಧು ಮತ್ತು ವರನ ಕುಟುಂಬದ ನಡುವೆ ಗಲಾಟೆಯಾಗಿ ಮದುವೆಯೇ ನಿಂತು ಹೋದಂತಹ ಘಟನೆಗಳು ನಡೆದಿವೆ. ಇದೀಗ ಇಲ್ಲೊಂದೆಡೆ ಮದುವೆಗೆ ಬಂದಂತಹ ಅತಿಥಿಗಳು ಊಟದ ವಿಚಾರದಲ್ಲಿ ಹೊಡೆದಾಟ ನಡೆಸಿದ್ದಾರೆ. ವಿವಾಹ (wedding) ಸಮಾರಂಭವೊಂದರಲ್ಲಿ ಆಹಾರ ಕೌಂಟರ್‌ನಲ್ಲಿ ನಡೆದ ಗಲಾಟೆ ತೀವ್ರಗೊಂಡು, ಹಲವಾರು ಅತಿಥಿಗಳು ಗಾಯಗೊಂಡ ಘಟನೆ ಉತ್ತರ ಪ್ರದೇಶದ (Uttar Pradesh) ಬಿಜ್ನೋರ್ ಜಿಲ್ಲೆಯಲ್ಲಿ ಸಂಭವಿಸಿದೆ. ಈ ದೃಶ್ಯಾವಳಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ.
ಚಿಕನ್ ಫ್ರೈಗಳನ್ನು ಬಡಿಸುವ ಬಗ್ಗೆ ವಧು ಮತ್ತು ವರನ ಕಡೆಯವರ ನಡುವೆ ಜಗಳ ಭುಗಿಲೆದ್ದಿದೆ. ವರನ ಕುಟುಂಬದ ಕೆಲವು ಸದಸ್ಯರು ಅಲ್ಪ ಪ್ರಮಾಣದ ಖಾದ್ಯವನ್ನಷ್ಟೇ ಬಡಿಸಲಾಗುತ್ತಿದೆ ಎಂದು ದೂರಿದರು. ಇದು ಕಾರ್ಯಕ್ರಮದಲ್ಲಿ ಉದ್ವಿಗ್ನತೆಯನ್ನು ಉಂಟುಮಾಡಿತು. ಅವರನ್ನು ಶಾಂತಗೊಳಿಸಲು, ವಧುವಿನ ಕುಟುಂಬವು ಮತ್ತಷ್ಟು ಚಿಕನ್ ಫ್ರೈಗಳನ್ನು ತರಿಸಿದರು. ಆದರೆ, ಇದಕ್ಕೆ ತೃಪ್ತರಾಗುವ ಬದಲು, ಅತಿಥಿಗಳು ಹೊಸ ದೂರನ್ನು ಎತ್ತಿದರು. ಅವರು ಆಹಾರವನ್ನು ಸಭ್ಯವಾಗಿ ಬಡಿಸುತ್ತಿಲ್ಲ ಎಂದು ಆರೋಪಿಸಿದರು.
ವಿಡಿಯೊ ವೀಕ್ಷಿಸಿ:
बिजनौर में शादी में चिकन फ्राई को लेकर बारातियों में भिड़ंत! मैरिज हॉल में जमकर हुई मारपीट, कई लोग घायल pic.twitter.com/YZW1nx5irk
— news for you (@newsforyou36351) November 3, 2025
ಇದನ್ನೂ ಓದಿ: Viral Video: ಚಲಿಸುತ್ತಿದ್ದ ರೈಲು ಹತ್ತಲು ಹೋಗಿದ್ದ ಮಹಿಳೆಯ ಜೀವ ರಕ್ಷಕರಾದ ಆರ್‌ಪಿಎಫ್ ಸಿಬ್ಬಂದಿ; ವಿಡಿಯೋ ನೋಡಿ
ಊಟದ ವಿಚಾರದಲ್ಲಿ ಉಂಟಾದ ವಾದವು ಬೇಗನೆ ತೀವ್ರಗೊಂಡಿತು. ಘಟನೆಯು ಶೀಘ್ರದಲ್ಲೇ ಯುದ್ಧಭೂಮಿಯಾಗಿ ಮಾರ್ಪಟ್ಟಿತು. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಭಾಯಿಸಲು ಪ್ರಯತ್ನಿಸಿದರು. ಎಕ್ಸ್‌ನಲ್ಲಿ ಈ ವಿಡಿಯೊವನ್ನು ಹಂಚಿಕೊಳ್ಳಲಾಗಿದ್ದು, ಅದರಲ್ಲಿ ಜನರು ಭಯಭೀತರಾಗಿ ಓಡುತ್ತಿರುವುದು, ಪರಸ್ಪರ ತಳ್ಳುವುದು ಮತ್ತು ಹೊಡೆದಾಡಿಕೊಳ್ಳುತ್ತಿರುವುದು ಕಂಡುಬರುತ್ತಿದೆ. ಜೊತೆಗೆ ಕಿರುಚಾಟಗಳು ಕೇಳಿಬಂದಿವೆ.
ಪ್ರತ್ಯಕ್ಷದರ್ಶಿಯೊಬ್ಬರ ಪ್ರಕಾರ, ಪರಿಸ್ಥಿತಿ ಅಸ್ತವ್ಯಸ್ತವಾಗಿತ್ತು. ಮಹಿಳೆಯರು ಮತ್ತು ಮಕ್ಕಳು ಗದ್ದಲದ ಮಧ್ಯದಲ್ಲಿ ಸಿಲುಕಿಕೊಂಡರು. ಹೃದ್ರೋಗಿ ಎಂದು ಹೇಳಲಾಗುವ ಒಬ್ಬ ಅತಿಥಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಾವು ಮದುವೆಗೆ ಬಂದಿದ್ದೆವು. ಚಿಕನ್ ಫ್ರೈ ಕೌಂಟರ್‌ನಲ್ಲಿ ಸಭೆ ಸೇರಿತ್ತು. ಅತಿಥಿಗಳು ಚಿಕನ್ ಫ್ರೈಸ್ ಪಡೆಯಲು ಪ್ರಯತ್ನಿಸುತ್ತಿರುವಾಗ, ಜಗಳ ಉಂಟಾಯಿತು. ಅಲ್ಲಿ ಮಹಿಳೆಯರು ಮತ್ತು ಮಕ್ಕಳು ಇದ್ದರು. ಇದರಿಂದ ಕಾಲ್ತುಳಿತ ಸಂಭವಿಸಿದೆ. ಒಬ್ಬ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಅವರ ಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ಹೇಳಿದರು.
ಸ್ಥಳದಲ್ಲಿದ್ದವರ ಎಚ್ಚರಿಕೆಯ ಮೇರೆಗೆ, ಪೊಲೀಸರು ಸ್ಥಳಕ್ಕೆ ತಲುಪಿ ಗುಂಪುಗಳನ್ನು ಚದುರಿಸಿದರು. ಹೆಚ್ಚಿನ ಗೊಂದಲ ಉಂಟಾಗದಂತೆ ತಡೆಯಲು ಅಧಿಕಾರಿಗಳು ಸ್ಥಳದಲ್ಲಿಯೇ ಇದ್ದರು, ವಿವಾಹ ವಿಧಿವಿಧಾನಗಳು ಅವರ ಮೇಲ್ವಿಚಾರಣೆಯಲ್ಲಿ ಮುಕ್ತಾಯಗೊಂಡವು.