Viral Video: ಚಲಿಸುತ್ತಿರುವ ಬೈಕ್‌ನಲ್ಲೇ ಪ್ರೇಮಿಗಳ ಸರಸ; ವಿಡಿಯೊ ವೈರಲ್
ಚಲಿಸುತ್ತಿರುವ ಬೈಕ್‍ನಲ್ಲಿ ಪ್ರೇಮಿಗಳಿಬ್ಬರು ಒಬ್ಬರನ್ನೊಬ್ಬರು ಅಪ್ಪಿಕೊಂಡು ಕುಳಿತಿರುವ ದೃಶ್ಯದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ. ವೈರಲ್ ಆಗಿರುವ ವಿಡಿಯೊದಲ್ಲಿ, ಯುವಕ ಬೈಕ್ ಸವಾರಿ ಮಾಡುತ್ತಿದ್ದರೆ, ಪ್ರಿಯತಮೆಯು ಬೈಕ್ ಟ್ಯಾಂಕ್ ಮೇಲೆ ಕುಳಿತು ಅವನನ್ನು ಬಿಗಿಯಾಗಿ ಅಪ್ಪಿ ಹಿಡಿದಿದ್ದಾಳೆ.


ಲಖನೌ: ಸಿನಿಮಾ ಶೈಲಿಯಲ್ಲಿ ಚಲಿಸುತ್ತಿರುವ ಬೈಕ್‍ನಲ್ಲಿ ಪ್ರೇಮಿಗಳಿಬ್ಬರು ಒಬ್ಬರನ್ನೊಬ್ಬರು ಅಪ್ಪಿಕೊಂಡು ಕುಳಿತಿರುವ ದೃಶ್ಯದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ (Viral Video) ಆಗುತ್ತಿದೆ. ಉತ್ತರ ಪ್ರದೇಶದ (Uttar Pradesh) ಗೋರಖ್‌ಪುರದಲ್ಲಿ ಈ ಘಟನೆ ನಡೆದಿದೆ. ಇಬ್ಬರೂ ಚಲಿಸುವ ಬೈಕ್‌ನಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಾ ಸರಸವಾಡುತ್ತಿರುವುದು ಕಂಡುಬಂದಿದೆ.
ವೈರಲ್ ಆಗಿರುವ ವಿಡಿಯೊದಲ್ಲಿ, ಯುವಕ ಬೈಕ್ ಸವಾರಿ ಮಾಡುತ್ತಿದ್ದಾನೆ. ಅವನ ಗೆಳತಿ ಬೈಕ್ ಟ್ಯಾಂಕ್ ಮೇಲೆ ಕುಳಿತು ಅವನನ್ನು ಬಿಗಿಯಾಗಿ ಅಪ್ಪಿ ಹಿಡಿದಿದ್ದಾಳೆ. ಇಬ್ಬರೂ ರಾಮಗಢ ತಾಲ್‌ಗೆ ಭೇಟಿ ನೀಡಲು ಹೋಗುತ್ತಿದ್ದರು ಎಂದು ಹೇಳಲಾಗುತ್ತಿದೆ. ದಾರಿಹೋಕರು ಬೈಕ್‌ನಲ್ಲಿ ಅವರು ಸರಸವಾಡುತ್ತಿರುವ ದೃಶ್ಯವನ್ನು ಚಿತ್ರೀಕರಿಸಿದ್ದು,ಅದು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ವಿಡಿಯೊ ವೈರಲ್ ಆದ ನಂತರ ಪೊಲೀಸರ ಗಮನಕ್ಕೂ ಬಂದಿದೆ. ಗೋರಖ್‌ಪುರ ಪೊಲೀಸರಿಗೆ ಕ್ರಮ ಕೈಗೊಳ್ಳುವಂತೆ ಪತ್ರ ಬರೆಯಲಾಗಿದೆ. ಈ ಘಟನೆ ಗೋರಖ್‌ಪುರದ ರಾಮ್ ಗರ್ತಾಲ್‌ನಲ್ಲಿ ನಡೆದಿದೆ ಎಂದು ಹೇಳಲಾಗಿದೆ. ವಿಡಿಯೊದಲ್ಲಿ ಯುವಕ ಹೆಲ್ಮೆಟ್ ಧರಿಸಿ ಬೈಕ್ ಸವಾರಿ ಮಾಡುತ್ತಿದ್ದರೆ, ಆತನ ಪ್ರಿಯತಮೆ ಅವನ ಮುಂದೆ ಕುಳಿತಿದ್ದಾಳೆ. ತನ್ನೆರಡೂ ಕೈಗಳಿಂದ ಪ್ರಿಯಕರನನ್ನು ಅಪ್ಪಿ ಹಿಡಿದಿದ್ದಾಳೆ.
ವಿಡಿಯೊ ವೀಕ್ಷಿಸಿ:
ये कपल गोरखपुर में बाइक से सैर कर रहा था। एक दूसरे से फेस-टू-फेस बात करने का ये तरीका बेहतर है। फिर भी पता नहीं क्यों पुलिस ने इनका 2500 रुपए का चालान काट दिया। pic.twitter.com/tG2uaghF6i
— Bhadohi Wallah (@Mithileshdhar) August 23, 2025
ವಿಡಿಯೊದಲ್ಲಿ ಇಬ್ಬರೂ ಒಬ್ಬರನ್ನೊಬ್ಬರು ನೋಡುತ್ತಾ ನಗುತ್ತಾ ತಮಾಷೆ ಮಾಡುವುದನ್ನು ಕಾಣಬಹುದು. ಈ ಪ್ರೇಮಿಗಳ ಪ್ರಣಯವನ್ನು ಯಾರೋ ರೆಕಾರ್ಡ್ ಮಾಡಿ, ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಸುತ್ತಮುತ್ತಲಿನ ಜನರು ಕೂಡ ಅವರಿಬ್ಬರನ್ನೂ ನೋಡಿ ಅಚ್ಚರಿಗೊಂಡಿದ್ದಾರೆ. ಇದ್ಯಾವುದನ್ನೂ ಲೆಕ್ಕಿಸದ ಜೋಡಿಯು ತಮ್ಮ ಪ್ರಣಯವನ್ನು ಆನಂದಿಸಿದ್ದಾರೆ.
ಇತ್ತೀಚೆಗೆ ಛತ್ತೀಸ್‌ಗಢದ ದುರ್ಗ್ ಜಿಲ್ಲೆಯಲ್ಲೂ ಇಂಥದ್ದೇ ಘಟನೆ ವರದಿಯಾಗಿತ್ತು. ಚಲಿಸುತ್ತಿರುವ ಬೈಕ್‌ನ ಪೆಟ್ರೋಲ್ ಟ್ಯಾಂಕ್ ಮೇಲೆ ಕುಳಿತಿದ್ದ ಪ್ರಿಯತಮೆಯು ಸವಾರನನ್ನು ಅಪ್ಪಿ ಹಿಡಿದಿದ್ದಳು. ಈ ಮೂಲಕ ಪ್ರೇಮಿಗಳಿಬ್ಬರು ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಹಿಂದಿನಿಂದ ಬರುತ್ತಿದ್ದ ಕಾರಿನಲ್ಲಿದ್ದವರು ಈ ದೃಶ್ಯವನ್ನು ಚಿತ್ರೀಕರಿಸಿದ್ದರು ಎನ್ನಲಾಗಿದೆ.
ಇದನ್ನೂ ಓದಿ: Viral News: ಭಾರತೀಯರು ಮೊದಲು ವಿದ್ಯುತ್ ಬಲ್ಬ್ ನೋಡಿ ಭೂತದ ಕಣ್ಣೆಂದು ಭಾವಿಸಿ ಓಡಿ ಹೋಗಿದ್ರಂತೆ!