Gautami Kapoor: ಮಗಳಿಗೆ ಲೈಂಗಿಕ ಆಟಿಕೆಯನ್ನು ಉಡುಗೊರೆಯಾಗಿ ನೀಡಬಯಸಿದ್ದ ಕಿರುತೆರೆ ನಟಿ
ಪೋಷಕರು ಮಕ್ಕಳೊಂದಿಗೆ ಲೈಂಗಿಕ ಕ್ರಿಯೆಯ ಬಗ್ಗೆ ಮಾತನಾಡಲು ಇನ್ನೂ ಹಿಂಜರಿಯುತ್ತಿರುವ ಈ ಕಾಲದಲ್ಲಿ ಖ್ಯಾತ ಕಿರುತೆರೆ ನಟಿ ಗೌತಮಿ ಕಪೂರ್ ತಮ್ಮ ಮಗಳ 16ನೇ ವರ್ಷದ ಹುಟ್ಟುಹಬ್ಬಕ್ಕೆ ಸೆಕ್ಸ್ ಟಾಯ್ಸ್ ಅನ್ನು ಉಡುಗೊರೆಯಾಗಿ ನೀಡಲು ಬಯಸಿದ್ದರಂತೆ. ಇದನ್ನು ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.


ಮುಂಬೈ: ಖ್ಯಾತ ಕಿರುತೆರೆ ನಟಿಯೊಬ್ಬರು ತನ್ನ ಮಗಳ ಹುಟ್ಟುಹಬ್ಬಕ್ಕೆ ಸೆಕ್ಸ್ ಟಾಯ್ಸ್ ಉಡುಗೊರೆಯಾಗಿ ನೀಡಲು ಬಯಸಿದ್ದರು ಎನ್ನುವ ಅವರ ಹೇಳಿಕೆಯು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಮಗಳ 16ನೇ ವರ್ಷದ ಹುಟ್ಟುಹಬ್ಬಕ್ಕೆ ನಟಿ ಈ ಉಡುಗೊರೆ ನೀಡ ಬಯಸಿದ್ದಾಗಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಇದು ಹಳೆಯ ವಿಡಿಯೊ ಆಗಿದ್ದು, ಮತ್ತೊಮ್ಮೆ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ. ಕೆಲವರು ನಟಿಯ ಪರವಾಗಿ ಕಮೆಂಟ್ ಮಾಡಿದ್ದರೆ, ಇನ್ನು ಕೆಲವರು ನಟಿಯನ್ನು ತೀವ್ರವಾಗಿ ಟೀಕಿಸಿದ್ದಾರೆ.
ʼಪರ್ವರಿಶ್ 2ʼ, ʼಖೇಲ್ತಿ ಹೇ ಜಿಂದಿಗಿ ಅಂಕ್ಮಿಚೋಲಿʼ, ʼಕ್ಯುಂಕಿ ಸಾಸ್ ಭೀ ಕಭಿ ಬಹು ಥಿʼ ಧಾರಾವಾಹಿಗಳು ಸೇರಿದಂತೆ ʼಫಾನʼ, ʼಸ್ಟೂಡೆಂಟ್ ಆಫ್ ದಿ ಇಯರ್ʼ ಹಾಗೂ ಇನ್ನು ಹಲವು ಸಿನಿಮಾಗಳಲ್ಲಿ ನಟಿಸಿದ್ದ ನಟಿ ಗೌತಮಿ ಕಪೂರ್ ತಮ್ಮ ಮಗಳು ಸಿಯಾಗೆ ಸೆಕ್ಸ್ ಟಾಯ್ಸ್ ನೀಡ ಬಯಸಿದ್ದರು.
ಗೌತಮಿ ಸಂದರ್ಶನವೊಂದರಲ್ಲಿ ಮಗಳಿಗೆ ಲೈಂಗಿಕ ಆಟಿಕೆ ನೀಡಲು ಬಯಸಿದ್ದನ್ನು ಬಹಿರಂಗಪಡಿಸಿದ್ದಾರೆ. ಭಾರತೀಯ ಪೋಷಕರು ತಮ್ಮ ಮಕ್ಕಳೊಂದಿಗೆ ಲೈಂಗಿಕ ವಿಚಾರದ ಕುರಿತು ಮಾತನಾಡಲು ಇನ್ನೂ ಹಿಂಜರಿಯುತ್ತಿರುವ ಈ ಸಮಯದಲ್ಲಿ ಗೌತಮಿ ತಮ್ಮ ಮಗಳಿಗೆ ಇದರ ಬಗ್ಗೆ ನೇರವಾಗಿ ಕೇಳಿದ್ದನ್ನು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಇದಕ್ಕೆ ಪ್ರತಿಕ್ರಿಯೆಯಾಗಿ ಮಗಳು, ಅಮ್ಮ ನಿನಗೆ ಹುಚ್ಚು ಹಿಡಿದಿದೆಯೇ? ಎಂದಳು. ಅದಕ್ಕೆ ನಾನು ಯಾಕೆ ಕೊಡಬಾರದು ಒಮ್ಮೆ ಯೋಚಿಸಿ ನೋಡು ಎಂದು ಹೇಳಿರುವುದಾಗಿ ಗೌತಮಿ ತಿಳಿಸಿದ್ದಾರೆ. ತಾಯಿ ಮಕ್ಕಳಿಗೆ ಎಲ್ಲ ಸುಖ ನೀಡಬೇಕು ಎಂದು ಬಯಸುತ್ತಾರೆ. ನನ್ನ ತಾಯಿ ನನಗಾಗಿ ಮಾಡಿದ್ದನ್ನು ಮಗಳಿಗಾಗಿ ಮಾಡಿದ್ದೇನೆ. ಅವಳು ಅದನ್ನು ಗೌರವಿಸಿದ್ದಾಳೆ ಎಂದು ಗೌತಮಿ ಹೇಳಿದ್ದಾರೆ.
ಇದನ್ನೂ ಓದಿ: Indira Gandhi Bhavan: ಮೈಸೂರಿನಲ್ಲಿ ಇಂದಿರಾಗಾಂಧಿ ಕಾಂಗ್ರೆಸ್ ಭವನಕ್ಕೆ ಭೂಮಿ ಪೂಜೆ ನೆರವೇರಿಸಿದ ಸಿಎಂ
ರಾಮ್ ಕಪೂರ್‌ನನ್ನು ವಿವಾಹವಾಗಿರುವ ನಟಿ ಗೌತಮಿ ಅವರಿಗೆ ಸಿಯಾ ಮತ್ತೂ ಅಕ್ಸ್ ಕಪೂರ್ ಎಂಬ ಇಬ್ಬರು ಮಕ್ಕಳಿದ್ದಾರೆ. ಗೌತಮಿ ಕೊನೆಯದಾಗಿ ʼಗ್ಯಾರಾ ಗ್ಯಾರಾʼ ವೆಬ್ ಸರಣಿಯಲ್ಲಿ ಕಾಣಿಸಿಕೊಂಡಿದ್ದು, ಇದು 2024ರಲ್ಲಿ ಬಿಡುಗಡೆಯಾಗಿತ್ತು.