NZ vs ZIM: ಜಿಂಬಾಬ್ವೆ ವಿರುದ್ದ ಟೆಸ್ಟ್ ಸರಣಿ ಗೆದ್ದು ನೂತನ ಮೈಲುಗಲ್ಲು ಸ್ಥಾಪಿಸಿದ ನ್ಯೂಜಿಲೆಂಡ್!
ಬುಲವಾಯೊದಲ್ಲಿ ನಡೆದಿದ್ದ ಎರಡನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ, ಜಿಂಬಾಬ್ವೆ ವಿರುದ್ಧ ಇನಿಂಗ್ಸ್ ಮತ್ತು 359 ರನ್‌ಗಳ ಅಂತರದಲ್ಲಿ ಭರ್ಜರಿ ಗೆಲುವು ಪಡೆಯಿತು. ಇದು ಟೆಸ್ಟ್ ಇತಿಹಾಸದಲ್ಲಿ ಕಿವೀಸ್ ಪಾಲಿಗೆ ಅತಿದೊಡ್ಡ ಗೆಲುವು. ಈ ಗೆಲುವಿನೊಂದಿಗೆ ನ್ಯೂಜಿಲೆಂಡ್ ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ.

ನ್ಯೂಜಿಲೆಂಡ್ ತಂಡಕ್ಕೆ ದಾಖಲೆಯ ಜಯ.

ಬುಲವಾಯೊ: ಶನಿವಾರ ಇಲ್ಲಿನ ಕ್ವೀನ್ಸ್ ಪಾರ್ಕ್‌ನಲ್ಲಿ ಅಂತ್ಯವಾದ ಎರಡನೇ ಟೆಸ್ಟ್ ಪಂದ್ಯದಲ್ಲಿ ಜಿಂಬಾಬ್ವೆ (Zimbabwe) ವಿರುದ್ಧ ಇನಿಂಗ್ಸ್ ಮತ್ತು 359 ರನ್‌ಗಳಿಂದ ಅಂತರದಲ್ಲಿ ನ್ಯೂಜಿಲೆಂಡ್ (New Zealand) ತಂಡ ಗೆಲುವು ಪಡೆಯಿತು. ಇದು ನ್ಯೂಜಿಲೆಂಡ್ ತಂಡದ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿಯೇ ಅತಿದೊಡ್ಡ ಗೆಲುವಾಗಿದೆ. ಈ ಗೆಲುವಿನ ಮೂಲಕ ಕಿವೀಸ್ ಈ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಂಡಿತು. ಜಿಂಬಾಬ್ವೆ ತಂಡ 476 ರನ್‌ಗಳ ಹಿನ್ನಡೆಯಲ್ಲಿತ್ತು ಮತ್ತು ಮೂರನೇ ದಿನದ ಮೊದಲ ಅವಧಿಯಲ್ಲಿ ನ್ಯೂಜಿಲೆಂಡ್‌ನ ವೇಗದ ಬೌಲಿಂಗ್ ದಾಳಿಯ ಮುಂದೆ ಎರಡನೇ ಇನಿಂಗ್ಸ್‌ನಲ್ಲಿ 117 ರನ್‌ಗಳಿಗೆ ಆಲ್‌ಔಟ್ ಆಯಿತು.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ನ್ಯೂಜಿಲೆಂಡ್, ಪ್ರಥಮ ಇನಿಂಗ್ಸ್‌ನಲ್ಲಿ ಮೂರು ವಿಕೆಟ್ ಕಳೆದುಕೊಂಡು 601 ರನ್‌ಗಳಿಗೆ ಡಿಕ್ಲೇರ್ ಮಾಡಿಕೊಂಡಿತ್ತು. ನಂತರ ಆತಿಥೇಯ ಜಿಂಬಾಬ್ವೆ ತಂಡವನ್ನು ಪ್ರಥಮ ಇನಿಂಗ್ಸ್‌ನಲ್ಲಿ 125 ರನ್‌ಗಳಿಗೆ ಆಲ್‌ಔಟ್ ಮಾಡಿತ್ತು. ಡೆಬ್ಯೂಟೆಂಟ್ ವೇಗದ ಬೌಲರ್ ಜಕಾರಿ ಫೌಲ್ಕ್ಸ್ ಪ್ರಥಮ ಇನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್‌ಗಳನ್ನು ಪಡೆದ ನಂತರ ದ್ವಿತೀಯ ಇನಿಂಗ್ಸ್‌ನಲ್ಲಿಯೂ 37 ರನ್‌ಗಳಿಗೆ ಐದು ವಿಕೆಟ್‌ಗಳ ಸಾಧನೆಯನ್ನು ಮಾಡಿದ್ದರು. ಅವರು ತಮ್ಮ ಸ್ಮರಣೀಯ ಚೊಚ್ಚಲ ಟೆಸ್ಟ್‌ನಲ್ಲಿ 10 ವಿಕೆಟ್‌ಗಳನ್ನು ಪಡೆಯಲು ಕೇವಲ ಒಂದೇ ಒಂದು ವಿಕೆಟ್ ಕಡಿಮೆಯಾಯಿತು.
ಶುಭಮನ್ ಗಿಲ್ ಔಟ್! IND vs ENG ಸಂಯೋಜನೆಯ ಪ್ಲೇಯಿಂಗ್ XI ಆರಿಸಿದ ಸ್ಟುವರ್ಟ್ ಬ್ರಾಡ್
ವೇಗಿಗಳಾದ ಮ್ಯಾಟ್ ಹೆನ್ರಿ (16 ರನ್‌ಗಳಿಗೆ 2 ವಿಕೆಟ್‌ಗಳು), ಜಾಕೋಬ್ ಡಫಿ (28 ರನ್‌ಗಳಿಗೆ 2 ವಿಕೆಟ್‌ಗಳು) ಮತ್ತು ಮ್ಯಾಥ್ಯೂ ಫಿಶರ್ (22 ರನ್‌ಗಳಿಗೆ 1 ವಿಕೆಟ್) ಜಿಂಬಾಬ್ವೆಯನ್ನು ಸರಣಿಯ ಅತ್ಯಂತ ಕಡಿಮೆ ಸ್ಕೋರ್‌ಗೆ 28.1 ಓವರ್‌ಗಳಲ್ಲಿ ಔಟ್ ಮಾಡಿದರು. ಜಿಂಬಾಬ್ವೆ ಪರ ಕೇವಲ ಇಬ್ಬರು ಬ್ಯಾಟ್ಸ್‌ಮನ್‌ಗಳು ಮಾತ್ರ ಎರಡಂಕಿ ತಲುಪಲು ಸಾಧ್ಯವಾಯಿತು. ಮೂರನೇ ನಂಬರ್ ಬ್ಯಾಟ್ಸ್‌ಮನ್ ನಿಕ್ ವೆಲ್ಚ್ 71 ಎಸೆತಗಳಲ್ಲಿ 47 ರನ್‌ಗಳೊಂದಿಗೆ ಅಜೇಯರಾಗಿ ಉಳಿದರು. ನಾಯಕ ಕ್ರೇಗ್ ಎರ್ವಿನ್ (17) ಎರಡಂಕಿ ತಲುಪಿದ ಎರಡನೇ ಬ್ಯಾಟ್ಸ್‌ಮನ್.
Congratulations, @BLACKCAPS. See you next time!#ZIMvNZ #ExperienceZimbabwe pic.twitter.com/u8mCMzczxm
— Zimbabwe Cricket (@ZimCricketv) August 9, 2025
ನ್ಯೂಜಿಲೆಂಡ್ ಎರಡನೇ ದಿನದ ಅಂತ್ಯಕ್ಕೆ ಮೂರು ವಿಕೆಟ್ ನಷ್ಟಕ್ಕೆ 601 ರನ್ ಗಳಿಸಿ ತನ್ನ ಪ್ರಥಮ ಇನಿಂಗ್ಸ್ ಅನ್ನು ಡಿಕ್ಲೇರ್ ಮಾಡಿಕೊಂಡಿತ್ತು. ರಚಿನ್ ರವೀಂದ್ರ (ಅಜೇಯ 165) ಮತ್ತು ಹೆನ್ರಿ ನಿಕೋಲ್ಸ್ (ಅಜೇಯ 150) ನಾಲ್ಕನೇ ವಿಕೆಟ್‌ಗೆ 256 ರನ್‌ಗಳ ಭರ್ಜರಿ ಜೊತೆಯಾಟವಾಡಿದ್ದರು. ಕಿವೀಸ್ ಆರಂಭಿಕ ಆಟಗಾರ ಡೆವೊನ್ ಕಾನ್ವೇ ಕೂಡ ಶತಕ ಬಾರಿಸಿದರು. ಅವರು 18 ಬೌಂಡರಿಗಳ ಸಹಾಯದಿಂದ 153 ರನ್ ಗಳಿಸಿದರು. ಕಳೆದ ವಾರ ಇದೇ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್ ಅನ್ನು ನ್ಯೂಜಿಲೆಂಡ್ ಮೂರು ದಿನಗಳಲ್ಲಿ ಒಂಬತ್ತು ವಿಕೆಟ್‌ಗಳಿಂದ ಗೆದ್ದುಕೊಂಡಿತು. ಈ ಸರಣಿಯು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಭಾಗವಾಗಿಲ್ಲ. ಹಾಗಾಗಿ ಈ ಸರಣಿ ಗೆಲುವಿನಿಂದ ಕಿವೀಸ್‌ಗೆ ಯಾವುದೇ ಲಾಭವಾಗಿಲ್ಲ.