Viral News: ಕಾರ್ ಒಳಗೆ ಕೈ ಕಾಲು ಕಟ್ಟಿ, ಊಟ-ನೀರು ಕೊಡದೆ ಚಿತ್ರಹಿಂಸೆ; ಮನಕಲಕುವ ವಿಡಿಯೋ ವೈರಲ್
ವಿಶ್ವವಿಖ್ಯಾತ ಪ್ರವಾಸಿ ತಾಣ ಆಗ್ರಾದಲ್ಲಿ ಮನಕಲಕುವ ಘಟನೆ ನಡೆದಿದ್ದು, ಇದರ ವಿಡಿಯೋ ವೈರಲ್ ಆಗಿದೆ. ಆಗ್ರಾದಲ್ಲಿರುವ ತಾಜ್ ಮಹಲ್ ಬಳಿಯ ಪಶ್ಚಿಮ ದ್ವಾರದ ಬಳಿ ನಿಲ್ಲಿಸಿದ್ದ ಲಾಕ್ ಮಾಡಿದ ಕಾರಿನೊಳಗೆ ವೃದ್ಧರೊಬ್ಬರನ್ನು ಕಟ್ಟಿಹಾಕಲಾಗಿದ್ದ ಹೃದಯವಿದ್ರಾವಕ ಘಟನೆ ನಡೆದಿದೆ.


ಆಗ್ರಾ: ಇತ್ತೀಚೆಗೆ ಮಾನವೀಯತೆ ಅನ್ನುವುದೇ ಸತ್ತು ಹೋಗಿದೆ. ಹಲವಾರು ಘಟನೆಗಳು ಇದಕ್ಕೆ ಸಾಕ್ಷಿಯಾಗಿರುವುದು ಬಹಳ ಬೇಸರದ ಸಂಗತಿ. ಹೆತ್ತ (Viral News) ತಂದೆ-ತಾಯಿಗೆ ವಯಸ್ಸಾಗುತ್ತಿದ್ದಂತೆ ಅವರನ್ನು ಅನಾಥಾಶ್ರಮಕ್ಕೆ ಸೇರಿಸುವುದು ಅಥವಾ ಇನ್ನೆಲ್ಲೋ ರಸ್ತೆಬದಿ ಬಿಟ್ಟುಬಂದಂತಹ ಅದೆಷ್ಟೋ ಘಟನೆಗಳು ನಡೆದಿದೆ, ನಡೆಯುತ್ತಲೂ ಇದೆ. ಇದೀಗ ವಿಶ್ವವಿಖ್ಯಾತ ಪ್ರವಾಸಿ ತಾಣ ಆಗ್ರಾದಲ್ಲಿ ಇದೇ ರೀತಿಯ ಮನಕಲಕುವ ಘಟನೆಯ ವಿಡಿಯೋ ವೈರಲ್ ಆಗಿದ್ದು, ನೆಟ್ಚಿಗರು ಬೇಸರ ಹಾಗೂ ಆಕ್ರೋಶ ಹೊರಹಾಕಿದ್ದಾರೆ.
ಉತ್ತರ ಪ್ರದೇಶದ ಆಗ್ರಾದಲ್ಲಿರುವ ತಾಜ್ ಮಹಲ್ (Taj Mahal) ಬಳಿಯ ಪಶ್ಚಿಮ ದ್ವಾರದ ಬಳಿ ನಿಲ್ಲಿಸಿದ್ದ ಲಾಕ್ ಮಾಡಿದ ಕಾರಿನೊಳಗೆ ವೃದ್ಧರೊಬ್ಬರನ್ನು ಕಟ್ಟಿಹಾಕಲಾಗಿದ್ದ ಹೃದಯವಿದ್ರಾವಕ ಘಟನೆ ನಡೆದಿದೆ. ಕಾರಿನೊಳಗೆ ಕಟ್ಟಿಹಾಕಲ್ಪಟ್ಟಿದ್ದ ವೃದ್ಧ ವ್ಯಕ್ತಿ ಪ್ರಜ್ಞಾಹೀನರಾಗಿ ಮಲಗಿದ್ದರು. ವರದಿಗಳ ಪ್ರಕಾರ, ವೃದ್ಧ ವ್ಯಕ್ತಿಯನ್ನು ಹಲವಾರು ಗಂಟೆಗಳ ಕಾಲ ಕಾರಿನೊಳಗೆ ಹೀಗೆ ಕೂಡಿಹಾಕಲಾಗಿತ್ತು ಎನ್ನಲಾಗಿದೆ. ತೀವ್ರ ಶಾಖ ಮತ್ತು ಬಾಯಾರಿಕೆಯು ಅವರ ಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿತ್ತು. ಅವರನ್ನು ಬಟ್ಟೆಗಳಿಂದ ಕಟ್ಟಲಾಗಿತ್ತು.
कार में बुजुर्ग को छोड़ ताजमहल में मजे ले रहा परिवार. घोर कलियुग आया. #Agra #oldage @agrapolice pic.twitter.com/ixUEjtW5rG
— Himanshu Tripathi (@thimanshut) July 17, 2025
ಕಾರು ವಿಚಿತ್ರ ರೀತಿಯಲ್ಲಿ ನಿಲ್ಲಿಸಿರುವುದನ್ನು ಕರ್ತವ್ಯದಲ್ಲಿದ್ದ ಸಿಬ್ಬಂದಿ ಗಮನಿಸಿದಾಗ ಈ ವಿಷಯ ಬೆಳಕಿಗೆ ಬಂದಿತು. ಕಾರಿನೊಳಗೆ ನೋಡಿದಾಗ, ವೃದ್ಧ ಚಲನರಹಿತವಾಗಿ ಬಿದ್ದಿರುವುದನ್ನು ಸಿಬ್ಬಂದಿ ಗಮನಿಸಿದ್ದಾರೆ. ಅವರ ಕೈಗಳು ಮತ್ತು ಕಾಲುಗಳು ಕಟ್ಟಲ್ಪಟ್ಟಿದ್ದವು. ಇದನ್ನು ನೋಡಿ ಗಾಬರಿಗೊಂಡ ಸಿಬ್ಬಂದಿ ಸಹಾಯಕ್ಕಾಗಿ ಕೂಡಲೇ ಇತರೆ ಸಿಬ್ಬಂದಿಯನ್ನು ಕರೆದಿದ್ದಾರೆ. ಇತರ ಸಿಬ್ಬಂದಿಗಳ ಸಹಾಯದಿಂದ ಅವರು ಕಾರಿನ ಕಿಟಕಿಯನ್ನು ಒಡೆದು ಆ ವ್ಯಕ್ತಿಯನ್ನು ಹೊರಗೆಳೆದಿದ್ದಾರೆ.
ವೃದ್ಧ ವ್ಯಕ್ತಿಯನ್ನು ರಕ್ಷಿಸಲಾಗಿದ್ದು, ಕೂಡಲೇ ಅವರಿಗೆ ನೀರು ನೀಡಲಾಯಿತು. ಆದರೆ ಅವರು ಮಾತನಾಡಲು ಸಾಧ್ಯವಾಗದ ಸ್ಥಿತಿಯಲ್ಲಿದ್ದರು. ತಕ್ಷಣ ಆಂಬ್ಯುಲೆನ್ಸ್‌ಗೆ ಕರೆ ಮಾಡಿ, ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅವರ ಸ್ಥಿತಿ ಇನ್ನೂ ಗಂಭೀರವಾಗಿದೆ ಎಂದು ಹೇಳಲಾಗಿದೆ.
ಪ್ರತ್ಯಕ್ಷದರ್ಶಿ ಹಾಗೂ ಸ್ಥಳೀಯ ಪ್ರವಾಸಿ ಮಾರ್ಗದರ್ಶಿಯಾಗಿರುವ ಮೊಹಮ್ಮದ್ ಅಸ್ಲಾಂ, ಘಟನೆಯ ಕುರಿತು ಮಾತನಾಡಿ, ಆ ವ್ಯಕ್ತಿಯನ್ನು ಕಟ್ಟಿಹಾಕಲಾಗಿತ್ತು. ಅವರಿಗೆ ಏನನ್ನೂ ಹೇಳಲು ಸಾಧ್ಯವಾಗಲಿಲ್ಲ. ಇಡೀ ದೃಶ್ಯವು ತುಂಬಾ ಚಿಂತಾಜನಕವಾಗಿತ್ತು ಎಂದು ತಿಳಿಸಿದ್ದಾರೆ.
ಕಾರಿನಲ್ಲಿ ಮಹಾರಾಷ್ಟ್ರ ನಂಬರ್ ಪ್ಲೇಟ್ ಇತ್ತು ಎಂದು ವರದಿಗಳು ಹೇಳಿವೆ. ಅದರ ಮೇಲೆ ಮಹಾರಾಷ್ಟ್ರ ಸರ್ಕಾರ ಎಂಬ ಸ್ಟಿಕ್ಕರ್ ಅನ್ನು ಸಹ ಅಂಟಿಸಲಾಗಿತ್ತು. ವಾಹನದ ಮೇಲ್ಛಾವಣಿಗೆ ಲಗೇಜ್‌ಗಳನ್ನು ಕಟ್ಟಲಾಗಿತ್ತು. ಇದು ಅಧಿಕಾರಿಗಳು ಮಹಾರಾಷ್ಟ್ರದಿಂದ ಆಗ್ರಾಕ್ಕೆ ಭೇಟಿ ನೀಡಲು ಕುಟುಂಬವೊಂದು ಬಂದಿದೆ ಎಂದು ನಂಬುವಂತೆ ಮಾಡಲು ಮಾಡಲು ಸ್ಟಿಕ್ಕರ್ ಅಂಟಿಸಿರಬಹುದು ಎಂದು ಅಂದಾಜಿಸಲಾಗಿದೆ. ಕುಟುಂಬವು ಆ ವ್ಯಕ್ತಿಯನ್ನು ಕಾರಿನಲ್ಲಿಯೇ ಬಿಟ್ಟು ತಾಜ್‍ಮಹಲ್ ನೋಡಲು ಹೋಗಿರಬಹುದು ಎಂದು ಶಂಕಿಸಲಾಗಿದೆ.
ಪ್ರಕರಣವು ನಿರ್ಲಕ್ಷ್ಯ ಅಥವಾ ಅಮಾನವೀಯ ವರ್ತನೆಯಿಂದ ಕೂಡಿದೆ ಎಂದು ಇನ್ಸ್‌ಪೆಕ್ಟರ್ ಕುನ್ವರ್ ಸಿಂಗ್ ತಿಳಿಸಿದ್ದಾರೆ. ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಅವರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ ಮತ್ತು ಕಾರಿಗೆ ಸಂಬಂಧಿಸಿದ ಕುಟುಂಬವನ್ನು ಪತ್ತೆಹಚ್ಚುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ: Viral Video: ಕೋಲ್ಡ್‌ಪ್ಲೇ ಕಾರ್ಯಕ್ರಮದಲ್ಲಿ ಖ್ಯಾತ ಕಂಪನಿಯ CEO ಮತ್ತು HR ಲವ್ವಿ-ಡವ್ವಿ ಬಟಾ ಬಯಲು- ವಿಡಿಯೊ ಫುಲ್ ವೈರಲ್
ಈ ಘಟನೆ ಬಳಿಕ ಸ್ಥಳೀಯರು ಮತ್ತು ಪ್ರವಾಸಿಗರು ಭಾರಿ ಆಕ್ರೋಶ ಹೊರಹಾಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಕೂಡ ಕಿಡಿಕಾರಿದ್ದಾರೆ. ವಯಸ್ಸಾದ ವ್ಯಕ್ತಿಯನ್ನು ಯಾರಾದರೂ ಹೇಗೆ ಇಷ್ಟೊಂದು ಕ್ರೂರವಾಗಿ ನಡೆಸಿಕೊಳ್ಳಬಹುದು ಎಂದು ಹಲವರು ಪ್ರಶ್ನಿಸಿದ್ದಾರೆ.