ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸತ್ತಿದ್ದಾನೆಂದು ಅಂತ್ಯಕ್ರಿಯೆ ನೆರವೇರಿಸಿದ ಕುಟುಂಬ; ಮರುದಿನವೇ ಜೀವಂತವಾಗಿ ಮರಳಿ ಬಂದ ವ್ಯಕ್ತಿ

Man returns alive: ಮೇಘಾಲಯದಲ್ಲಿ ಇತ್ತೀಚೆಗೆ ಸಂಭವಿಸಿದ್ದ ಗಣಿ ಸ್ಫೋಟದಲ್ಲಿ 31 ಮಂದಿ ಮೃತಪಟ್ಟು, ಹಲವಾರು ಮಂದಿ ಗಾಯಗೊಂಡರು. ಅದರಲ್ಲಿ ಒಬ್ಬ ಕಾರ್ಮಿಕನ ಅಂತ್ಯಕ್ರಿಯೆ ನೆರವೇರಿದ ಬಳಿಕ ಪ್ರತ್ಯಕ್ಷವಾಗಿರುವ ಘಟನೆ ನಡೆದಿದೆ. ಅಂತ್ಯಕ್ರಿಯೆ ನೆರವೇರಿದ್ದ ಗಣಿ ಕಾರ್ಮಿಕನನ್ನು ಶ್ಯಾಂಬಾಬು ಸಿನ್ಹಾ ಎಂದು ಗುರುತಿಸಲಾಗಿದೆ.

ಸತ್ತಿದ್ದಾನೆಂದು ಅಂತ್ಯಕ್ರಿಯೆ ನೆರವೇರಿಸಿದ ಕುಟುಂಬ; ಮರಳಿ ಬಂದ ವ್ಯಕ್ತಿ!

ಜೀವಂತವಾಗಿ ಮನೆಗೆ ಮರಳಿ ಬಂದ ಕಾರ್ಮಿಕ -

Priyanka P
Priyanka P Feb 15, 2026 12:11 PM

ಶಿಲ್ಲಾಂಗ್, ಫೆ.15: ಮೇಘಾಲಯದ ಪೂರ್ವ ಜೈನ್ತಿಯಾ ಬೆಟ್ಟಗಳಲ್ಲಿ ನಡೆದ ಗಣಿ ಸ್ಫೋಟದಲ್ಲಿ (blast) 31 ಮಂದಿ ಮೃತಪಟ್ಟರು. ಅವರೆಲ್ಲರ ಅಂತ್ಯಕ್ರಿಯೆಯನ್ನು ನೆರವೇರಿಸಲಾಗಿದೆ. ಅವರಲ್ಲೊಬ್ಬರು ಗಣಿ ಕಾರ್ಮಿಕನ ಅಂತ್ಯಕ್ರಿಯೆ ಮುಗಿದ ಕೆಲವು ದಿನಗಳ ನಂತರ ಜೀವಂತವಾಗಿ ಮನೆಗೆ ಮರಳಿರುವ ಆಘಾತಕಾರಿ ಘಟನೆ (Shocking incident) ನಡೆದಿದೆ.

ಅಂತ್ಯಕ್ರಿಯೆ ನೆರವೇರಿದ್ದ ಗಣಿ ಕಾರ್ಮಿಕನನ್ನು ಶ್ಯಾಂಬಾಬು ಸಿನ್ಹಾ ಎಂದು ಗುರುತಿಸಲಾಗಿದೆ. ಸಿನ್ಹಾ ಮನೆಗೆ ಮರಳುವ ವೇಳೆಗೆ ಅವರ ಕುಟುಂಬವು ಅವರ ಅಂತ್ಯಕ್ರಿಯೆಯನ್ನು ನಡೆಸಿತ್ತು. ಮೇಘಾಲಯದ ಪೂರ್ವ ಜೈಂಟಿಯಾ ಬೆಟ್ಟಗಳಲ್ಲಿರುವ ಥಾಂಗ್ಸ್ಕು ಎಂಬಲ್ಲಿ ಫೆಬ್ರವರಿ 5 ರಂದು ಸಂಭವಿಸಿದ ಸ್ಫೋಟದಲ್ಲಿ ಮೃತಪಟ್ಟ ಕಲ್ಲಿದ್ದಲು ಗಣಿ ಕಾರ್ಮಿಕನ ಅಂತ್ಯಕ್ರಿಯೆಗಳನ್ನು ನೆರವೇರಿಸಿದ ಮೂರು ದಿನಗಳ ನಂತರ ಸಂಬಂಧಿಕರ ಮುಂದೆ ಜೀವಂತವಾಗಿ ಕಾಣಿಸಿಕೊಂಡರು.

ಗ್ರಾಮಸ್ಥರು ಮತ್ತು ಕುಟುಂಬ ಸದಸ್ಯರು ಆರಂಭದಲ್ಲಿ ದಿಗ್ಭ್ರಮೆಗೊಂಡು ನಂಬಲು ಕಷ್ಟಪಟ್ಟರು. ಆದರೆ, ಅವರು ನಿಜವಾಗಿಯೂ ಜೀವಂತವಾಗಿದ್ದಾರೆ ಎಂದು ದೃಢಪಟ್ಟ ನಂತರ, ಕುಟುಂಬ ಸದಸ್ಯರು ಸಂತೋಷಪಟ್ಟರು.

ಕೇರಳದ 16 ವರ್ಷದ ಬಾಲಕಿಯ ಆತ್ಮಹತ್ಯೆಯ ಹಿಂದೆಯೂ ಕೊರಿಯನ್‌ ಕರಿ ನೆರಳು; ಇನ್ನೆಷ್ಟು ಅಪ್ರಾಪ್ತರು ಬಲಿಯಾಗಬೇಕು?

ಗಣಿಯಲ್ಲಿ ಸಿಲುಕಿರುವ ಇನ್ನುಳಿದವರನ್ನು ಹುಡುಕಲು ಸಾಧ್ಯವಾಗುವುದಲ್ಲಿ ಎಂದು ತಂಡಗಳು ನಿರ್ಧರಿಸಿದ ನಂತರ, ಫೆಬ್ರವರಿ 9 ರಂದು ರಾಜ್ಯ ಸರ್ಕಾರವು ಸ್ಫೋಟ ಸ್ಥಳದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತು.

ಆದರೆ, ಇಲ್ಲಿ ಪ್ರಶ್ನೆ ಇರುವುದೇನೆಂದರೆ ಸಿನ್ಹಾ ಅವರು ಮೃತಪಟ್ಟಿದ್ದಾರೆ ಎಂದು ಯಾರ ಮೃತದೇಹವನ್ನು ಅವರದ್ದು ಎಂದು ಕುಟುಂಬಸ್ಥರಿಗೆ ನೀಡಿದ್ದಾರೆ ಎಂಬುದು ಗೊಂದಲಕ್ಕೆ ಕಾರಣವಾಗಿದೆ. ಇದು ಅಧಿಕಾರಿಗಳ ವಿರುದ್ಧ ಆಕ್ರೋಶಕ್ಕೂ ಕಾರಣವಾಗಿದೆ.

ಸಿನ್ಹಾ ಅವರು ಸುಮಾರು ಒಂದು ತಿಂಗಳ ಹಿಂದೆ ಕೆಲಸ ಹುಡುಕಿಕೊಂಡು ಮೇಘಾಲಯಕ್ಕೆ ಪ್ರಯಾಣ ಬೆಳೆಸಿದ್ದರು. ಅವರು ಥಾಂಗ್ಸ್ಕುವಿನ ಚುಟುಂಗಾ ಪ್ರದೇಶದ ಕಲ್ಲಿದ್ದಲು ಗಣಿಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಫೆಬ್ರವರಿ 5 ರಂದು, ಪ್ರಬಲವಾದ ಸ್ಫೋಟವೊಂದು ಗಣಿಯಲ್ಲಿ ಸಂಭವಿಸಿದ್ದು, ಹಲವಾರು ಕಾರ್ಮಿಕರು ಮೃತಪಟ್ಟರು. ಇತರ ಅನೇಕರು ಗಾಯಗೊಂಡರೆ, ಸಿನ್ಹಾ ನಾಪತ್ತೆಯಾದರು.

ಹಲವಾರು ದಿನಗಳವರೆಗೆ ಅವರ ಸುಳಿವು ಸಿಗದಿದ್ದರಿಂದ ಅಧಿಕಾರಿಗಳು ಅವರು ಮೃತಪಟ್ಟಿದ್ದಾಗಿ ಕುಟುಂಬಸ್ಥರಿಗೆ ತಿಳಿಸಿದ್ದಾರೆ. ಅಧಿಕಾರಿಗಳ ಮಾತನ್ನು ಕುಟುಂಬ ಸದಸ್ಯರು ನಂಬಿದರು. ನಂತರ ಸಿನ್ಹಾ ಅವರದ್ದು ಎಂದು ನಂಬಲಾದ ಮೃತದೇಹವನ್ನು ಅಧಿಕಾರಿಗಳು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಿದರು. ಕುಟುಂಬ ಸದಸ್ಯರು ಅದರ ಅಂತ್ಯಕ್ರಿಯೆಯನ್ನು ನೆರವೇರಿಸಿದರು. ಅಂತ್ಯಕ್ರಿಯೆ ಬಳಿಕ ಸಿನ್ಹಾ ಪ್ರತ್ಯಕ್ಷವಾಗಿದ್ದಾರೆ. ಇದೀಗ ಯಾರ ಮೃತದೇಹವನ್ನು ಅಧಿಕಾರಿಗಳು ನೀಡಿದ್ದಾರೆ ಎಂಬ ಪ್ರಶ್ನೆ ಹುಟ್ಟುಹಾಕಿದ್ದು, ಕುಟುಂಬಸ್ಥರು ಹಾಗೂ ಸಾರ್ವಜನಿಕರು ಅಧಿಕಾರಿಗಳ ಬೇಜವಾಬ್ದಾರಿಗೆ ಕಿಡಿಕಾರಿದ್ದಾರೆ.

ಹಾಸನ ಮಹಿಳೆ ನಾಪತ್ತೆ ಕೇಸ್‌ಗೆ ಟ್ವಿಸ್ಟ್‌; ಪತಿಯ ಸ್ನೇಹಿತನ ಮನೆಯಲ್ಲಿ ಜೀವಂತವಾಗಿ ಪತ್ತೆ

ಹೈದರಾಬಾದ್‌ನಲ್ಲಿ ರಸ್ತೆ ಅಪಘಾತ

ಹೈದರಾಬಾದ್‌ನ ಕುಶೈಗುಡದಲ್ಲಿ ರಸ್ತೆ ಅಪಘಾತ ಸಂಭವಿಸಿದೆ. ವೇಗವಾಗಿ ಬಂದ ಬೊಲೆರೊ ವಾಹನವು ವ್ಯಕ್ತಿಯೊಬ್ಬರಿಗೆ ಡಿಕ್ಕಿ ಹೊಡೆದು ಹಲವಾರು ಮೀಟರ್‌ಗಳಷ್ಟು ಎಳೆದೊಯ್ದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡ ವ್ಯಕ್ತಿಯನ್ನು ಪಿ. ರಾಜು ಎಂದು ಗುರುತಿಸಲಾಗಿದೆ. ಈ ಘಟನೆ ಫೆಬ್ರವರಿ 9ರ ಸಂಜೆ ಸಂಭವಿಸಿದೆ.

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಪಿ.ರಾಜು, ನಾಚಾರಂ ಪೊಲೀಸ್ ಠಾಣೆ ವ್ಯಾಪ್ತಿಯ ಮಲ್ಲಾಪುರದಲ್ಲಿ ಕೆಲಸ ಮುಗಿಸಿ ತನ್ನ ಕಾರಿನಲ್ಲಿ ಮನೆಗೆ ಹಿಂತಿರುಗುತ್ತಿದ್ದಾಗ, ಬೊಲೆರೊ ಕಾರನ್ನು ಚಲಾಯಿಸಿಕೊಂಡು ಬಂದ ಬಾಲಾಜಿ ನಗರದ ಇಬ್ಬರು ವ್ಯಕ್ತಿಗಳು ಹಿಂದಿನಿಂದ ಬಂದು, ಮಲ್ಲಾಪುರ ಎಕ್ಸ್-ರೋಡ್ ಬಳಿ ಅವರ ಕಾರಿಗೆ ಡಿಕ್ಕಿ ಹೊಡೆದು, ಪರಾರಿಯಾಗಿದ್ದಾರೆ.

ಕುಶೈಗುಡ ಪೊಲೀಸ್ ಠಾಣೆ ವ್ಯಾಪ್ತಿಯ ಎಚ್‌ಬಿ ಕಾಲೋನಿ ಬಳಿ ರಾಜುವಿನ ಸ್ನೇಹಿತರು ಬೊಲೆರೊವನ್ನು ಬೆನ್ನಟ್ಟಿ ತಡೆಯಲು ಪ್ರಯತ್ನಿಸಿದರು ಎಂದು ಹೇಳಲಾಗಿದೆ. ರಾಜುವಿನ ಸ್ನೇಹಿತ ಸತೀಶ್, ಯುವಕರನ್ನು ಪ್ರಶ್ನಿಸಲು ಬೊಲೆರೊ ಮುಂದೆ ನಿಂತಾಗ, ಅವರಿಗೆ ಡಿಕ್ಕಿ ಹೊಡೆದು, ಬಂಪರ್‌ಗೆ ಬಿದ್ದ ಅವರನ್ನು ಒಂದಷ್ಟು ದೂರ ಎಳೆದೊಯ್ದಿದ್ದಾರೆ.