Viral News: ಲೈವ್‌ಸ್ಟ್ರೀಮಿಂಗ್ ಮಾಡುತ್ತಿದ್ದಾಗಲೇ ಟಿಕ್‌ಟಾಕ್ ಸ್ಟಾರ್ ಮೇಲೆ ಮೇಲೆ ಗುಂಡಿನ ದಾಳಿ; ಕಾರಣವೇನು?
ಮೆಕ್ಸಿಕನ್‍ನ ಖ್ಯಾತ ಟಿಕ್‍ಟಾಕರ್ 23 ವರ್ಷದ ವಲೇರಿಯಾ ಮಾರ್ಕ್ವೆಜ್ ಲೈವ್‌ಸ್ಟ್ರೀಮಿಂಗ್ ಮಾಡುತ್ತಿದ್ದಾಗ ಗುಂಡಿನ ದಾಳಿಗೆ ಬಲಿಯಾಗಿದ್ದಾಳೆ. ಡೆಲಿವರಿ ಬಾಯ್ ವೇಷದಲ್ಲಿ ಮನೆಗೆ ಬಂದ ಬಂದೂಕುಧಾರಿ ವ್ಯಕ್ತಿ ಆಕೆಯ ಮೇಲೆ ಸತತ ಮೂರು ಬಾರಿ ಗುಂಡು ಹಾರಿಸಿ ಕೊಂದಿದ್ದಾನೆ. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


ಟಿಕ್‌ಟಾಕ್‌ನಲ್ಲಿ ಲೈವ್‌ಸ್ಟ್ರೀಮಿಂಗ್ ಮಾಡುತ್ತಿದ್ದಾಗ ಮೆಕ್ಸಿಕನ್‍ನ ಖ್ಯಾತ ಟಿಕ್‍ಟಾಕರ್ ಒಬ್ಬಳು ದುರಂತವಾಗಿ ಸಾವಿಗೀಡಾಗಿದ್ದಾಳೆ. 23 ವರ್ಷದ ವಲೇರಿಯಾ ಮಾರ್ಕ್ವೆಜ್ ಸಾವಿಗೀಡಾದ ಟಿಕ್‍ಟಾಕರ್. ಈಕೆ ಟಿಕ್‌ಟಾಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಸುಮಾರು 2,00,000 ಫಾಲೋವರ್ಸ್‍ಗಳನ್ನು ಹೊಂದಿದ್ದಾಳೆ. ಇತ್ತೀಚಿಗೆ ಲೈವ್ ಸೆಷನ್ ನಡೆಸುತ್ತಿದ್ದಾಗ ಆಕೆಯ ಮೇಲೆ ಸತತ ಮೂರು ಗುಂಡು ಹಾರಿದ ಪರಿಣಾಮ ಅಲ್ಲೇ ಕೊನೆಯುಸಿರೆಳೆದ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಿದೆ.
ಮಾರ್ಕ್ವೆಜ್ ತನ್ನ ಬ್ಯೂಟಿ ಸಲೂನ್, ಬ್ಲಾಸಮ್ ದಿ ಬ್ಯೂಟಿ ಲೌಂಜ್‌ನಲ್ಲಿ ಶೂಟಿಂಗ್‌ನಲ್ಲಿದ್ದಾಗ ಈ ಘಟನೆ ನಡೆದಿದೆ. ಕ್ಯಾಮೆರಾ ಮುಂದೆ ಕುಳಿತು ಇನ್ನೇನು "ಹಾಯ್" ಎಂದು ಕೈ ಬೀಸುವ ಮೊದಲೇ, ಅಚಾನಕ್ ಆಗಿ ಅವಳ ಮೇಲೆ ಮೂರು ಗುಂಡುಗಳು ಹಾರಿಸಲಾಗಿದೆ. ಇದರಿಂದ ಆಕೆ ಅಲ್ಲೇ ಕುಸಿದುಬಿದ್ದು ಸಾವನಪ್ಪಿದ್ದಾಳೆ.
ಆಕೆಯ ಎದೆ ಮತ್ತು ತಲೆಗೆ ಗುಂಡು ತಗುಲಿದ್ದು, ಸ್ಥಳದಲ್ಲೇ ಅವಳು ಮೃತಪಟ್ಟಿದ್ದಾಳೆ ಎಂದು ವರದಿಗಳು ತಿಳಿಸಿವೆ. ಗಿಫ್ಟ್ ನೀಡುವ ನೆಪದಲ್ಲಿ ಬೈಕಿನಲ್ಲಿ ಆಕೆಯ ಮನೆಗೆ ಬಂದ ಬಂದೂಕುಧಾರಿ ಡೆಲಿವರಿ ಬಾಯ್‍ಯೊಬ್ಬ ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದ್ದು, ಪೊಲೀಸರು ಬಂದೂಕುಧಾರಿಯನ್ನು ಪತ್ತೆಹಚ್ಚಲು ಪ್ರಯತ್ನಿಸಿದ್ದಾರೆ. ಆಕೆಯ ಸಾವಿನ ಸುದ್ದಿ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಈ ಸುದ್ದಿಯನ್ನೂ ಓದಿ:Viral Video: ಶ್ವಾನದ ವಿಚಾರಕ್ಕೆ ಕಿತ್ತಾಡಿಕೊಂಡ ನೆರೆಹೊರೆಯವರು; ಕೊನೆಗೆ ಆಗಿದ್ದೇನು? ವಿಡಿಯೊ ನೋಡಿ!
ಈ ಘಟನೆ ನಡೆದ ಕೆಲವು ಗಂಟೆಗಳ ನಂತರ, ಮೆಕ್ಸಿಕನ್ ಪಿಆರ್‌ಐ ಪಕ್ಷದ ಮಾಜಿ ಪ್ರತಿನಿಧಿ ಲೂಯಿಸ್ ಅರ್ಮಾಂಡೊ ಕೊರ್ಡೋವಾ ಡಿಯಾಜ್ ಅವರನ್ನು ಹತ್ತಿರದ ಕೆಫೆಯಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು. ಇದು ಜಲಿಸ್ಕೋದಲ್ಲಿ ಹಿಂಸಾಚಾರದ ಹೆಚ್ಚಳದ ಬಗ್ಗೆ ಮತ್ತಷ್ಟು ಕಳವಳವನ್ನು ಹುಟ್ಟುಹಾಕಿದೆ. ಇತ್ತೀಚಿನ ವರ್ಷಗಳಲ್ಲಿ ಮೆಕ್ಸಿಕೊ, ಬ್ರೆಜಿಲ್ ಮತ್ತು ಎಲ್ ಸಾಲ್ವಡಾರ್ ದೇಶಗಳಲ್ಲಿ ಇಂತಹ ಅಪರಾಧಗಳು ಹೆಚ್ಚು ನಡೆಯುತ್ತಿದ್ದು, ರಾಜಕೀಯ ಅಸ್ಥಿರತೆ, ಬಡತನ ಮತ್ತು ಕ್ರಿಮಿನಲ್ ಶಿಕ್ಷೆಯ ಕೊರತೆಯಿಂದಾಗಿ ಇದು ಹೆಚ್ಚಾಗುತ್ತಿದೆ ಎನ್ನಲಾಗಿದೆ.