ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಪಟ್ಟಣದಲ್ಲಿ ಕೇವಲ 100 ರೂ.ಗೆ ಸಿಗುತ್ತೆ ಐಷಾರಾಮಿ ಮನೆ! ಆದ್ರೆ ಕಂಡೀಷನ್ಸ್‌ ಅಪ್ಲೈಡ್‌

Houses only for 100rs: ಫ್ರಾನ್ಸ್‌ನ ಅಂಬರ್ಟ್‌ನಲ್ಲಿ ಅತ್ಯಂತ ಕಡಿಮೆ ಬೆಲೆಗೆ ಮನೆಗಳನ್ನು ಮಾರಾಟ ಮಾಡಲಾಗುತ್ತಿದೆ. ಮನೆಗಳನ್ನು ಕೇವಲ 1 ಯೂರೋಗೆ, ಅಂದರೆ ಸರಿಸುಮಾರು 100 ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ. ಈ ಮನೆಗಳು ಮೊದಲ ಬಾರಿಗೆ ಖರೀದಿಸುವವರಿಗೆ ಮಾತ್ರ ಮೀಸಲಾಗಿವೆ.

ಈ ಪಟ್ಟಣದಲ್ಲಿ ಕೇವಲ 100 ರೂ.ಗೆ ಸಿಗುತ್ತೆ ಐಷಾರಾಮಿ ಮನೆ!

Priyanka P Priyanka P Jul 22, 2025 1:47 PM

ಪ್ಯಾರಿಸ್: ಮನೆ ಖರೀದಿಸುವಾಗ, ವಿಶೇಷವಾಗಿ ಹಳೆಯ ಮನೆಯನ್ನು ಖರೀದಿಸುವಾಗ, ಹಲವಾರು ಅಂಶಗಳು ಅದರ ಬೆಲೆಯ ಮೇಲೆ ಪ್ರಭಾವ ಬೀರುತ್ತವೆ. ಸ್ಥಳ ಮತ್ತು ಸುತ್ತಮುತ್ತಲಿನ ಮೂಲಸೌಕರ್ಯಗಳ ಜೊತೆಗೆ, ಮನೆಯ ಆಯಸ್ಸು ಮತ್ತು ಅದಕ್ಕೆ ಅಗತ್ಯವಿರುವ ರಿಪೇರಿ ಅಥವಾ ನವೀಕರಣದ ಪ್ರಮಾಣವು ಪ್ರಮುಖ ಪಾತ್ರ ವಹಿಸುತ್ತದೆ. ಈ ಅಂಶಗಳು ಸಾಮಾನ್ಯವಾಗಿ ಹಳೆಯ ಮನೆಗಳ ಬೆಲೆ ನಿರೀಕ್ಷೆಗಿಂತ ಕಡಿಮೆಯಾಗಲು ಕಾರಣವಾಗುತ್ತವೆ. ಇದೀಗ ಫ್ರಾನ್ಸ್‌ನ ಅಂಬರ್ಟ್‌ನಲ್ಲಿ ಅತ್ಯಂತ ಕಡಿಮೆ ಬೆಲೆಗೆ ಮನೆಗಳನ್ನು ಮಾರಾಟ ಮಾಡಲಾಗುತ್ತಿದೆ. ಮನೆಗಳನ್ನು ಕೇವಲ 1 ಯೂರೋಗೆ, ಅಂದರೆ ಸರಿಸುಮಾರು 100 ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ. ಈ ಸುದ್ದಿ ಇದೀಗ ಭಾರೀ ವೈರಲ್‌(Viral News) ಆಗುತ್ತಿದೆ.

ಈ ಯೋಜನೆಯು ಪಟ್ಟಣದ ಕ್ಷೀಣಿಸುತ್ತಿರುವ ಜನಸಂಖ್ಯೆಯನ್ನು ಪುನರುಜ್ಜೀವನಗೊಳಿಸುವ ಗುರಿಯನ್ನು ಹೊಂದಿದೆ. ಆಗ್ನೇಯ ಫ್ರಾನ್ಸ್‌ನಲ್ಲಿರುವ ಅಂಬರ್ಟ್, ಪ್ರಸ್ತುತ ಕೇವಲ 6,500 ಜನಸಂಖ್ಯೆಯನ್ನು ಹೊಂದಿದೆ. ಈ ಮನೆಗಳು ಮೊದಲ ಬಾರಿಗೆ ಖರೀದಿಸುವವರಿಗೆ ಮಾತ್ರ ಮೀಸಲಾಗಿವೆ. ಈಗಾಗಲೇ ಮನೆ ಹೊಂದಿರುವ ಅಥವಾ ಎರಡನೇ ಬಾರಿಗೆ ಮನೆ ಖರೀದಿಸುತ್ತಿರುವ ವ್ಯಕ್ತಿಗಳು ಈ ಯೋಜನೆಯಡಿ ಅರ್ಹರಲ್ಲ. ಮತ್ತೊಂದು ಪ್ರಮುಖ ಷರತ್ತು ಎಂದರೆ ಖರೀದಿದಾರರು ಕನಿಷ್ಠ ಮೂರು ವರ್ಷಗಳ ಕಾಲ ಈ ಮನೆಯಲ್ಲಿ ವಾಸಿಸಬೇಕು. ಹಾಗಂತ ಮನೆಯನ್ನು ಬಾಡಿಗೆಗೆ ನೀಡಲು ಉದ್ದೇಶಿಸಿರುವವರು ಅರ್ಹರಾಗಿರುವುದಿಲ್ಲ. ಒಂದು ವೇಳೆ ಹೇಳಿರುವ ಒಪ್ಪಂದವನ್ನು ಪಾಲಿಸದಿದ್ದರೆ ಸರ್ಕಾರವು ಅನುದಾನವನ್ನು ರದ್ದುಗೊಳಿಸಬಹುದು ಮತ್ತು ದಂಡ ವಿಧಿಸಬಹುದು.

ಮನೆ ನವೀಕರಣಕ್ಕೆ ಬೇಕಾಗುತ್ತೆ ಲಕ್ಷಾಂತರ ರೂ.

ಈ ಮನೆಗಳಲ್ಲಿ ಹೆಚ್ಚಿನವು ಕಳಪೆ ಸ್ಥಿತಿಯಲ್ಲಿದ್ದು, ವ್ಯಾಪಕ ನವೀಕರಣದ ಅಗತ್ಯವಿದೆ. ಛಾವಣಿಯ ದುರಸ್ತಿ ಮತ್ತು ವಿದ್ಯುತ್ ವ್ಯವಸ್ಥೆಗಳನ್ನು ಮರುಹೊಂದಿಸುವುದರಿಂದ ಹಿಡಿದು ಗೋಡೆಗಳನ್ನು ಸರಿಪಡಿಸುವವರೆಗೆ, ಖರೀದಿದಾರರು ಪ್ರಮುಖ ರಚನಾತ್ಮಕ ಕೆಲಸವನ್ನು ಕೈಗೊಳ್ಳಬೇಕಾಗುತ್ತದೆ. ಮನೆಯನ್ನು ವಾಸಯೋಗ್ಯವಾಗಿಸುವ ಒಟ್ಟಾರೆ ವೆಚ್ಚವು ಅತೀ ಹೆಚ್ಚಾಗಬಹುದು.

ಯುರೋಪಿನಾದ್ಯಂತ ಅಸ್ತಿತ್ವದಲ್ಲಿವೆ ಇದೇ ರೀತಿಯ ಯೋಜನೆಗಳು

ಜನಸಂಖ್ಯಾ ಕುಸಿತವನ್ನು ತಡೆಗಟ್ಟಲು ಆಗ್ನೇಯ ಫ್ರಾನ್ಸ್‌ನಲ್ಲಿರುವ ಅಂಬರ್ಟ್ ಪಟ್ಟಣವು ಕಡಿಮೆ ಬೆಲೆಯಲ್ಲಿ ಮನೆಗಳನ್ನು ನೀಡುತ್ತಿದೆ. ಇದು ಕೇವಲ ಅಂಬರ್ಟ್ ಪಟ್ಟಣಕ್ಕೆ ಮಾತ್ರ ಸೀಮಿತವಲ್ಲ. ಇದೇ ರೀತಿಯ ಯೋಜನೆಗಳು ಯುರೋಪಿನಾದ್ಯಂತ ಅಸ್ತಿತ್ವದಲ್ಲಿವೆ. ಈ ಯೋಜನೆಗಳು ಹೊಸ ನಿವಾಸಿಗಳನ್ನು ಆಕರ್ಷಿಸುವ ಗುರಿಯನ್ನು ಹೊಂದಿವೆ. ಆದರೆ ಕೆಲವೊಂದು ಕಟ್ಟುನಿಟ್ಟಾದ ಷರತ್ತುಗಳನ್ನು ವಿಧಿಸಲಾಗುತ್ತದೆ. ಅಂಬರ್ಟ್ ಇದಕ್ಕೆ ಹೊರತಾಗಿಲ್ಲ. ಈ ಕೊಡುಗೆ ಆಕರ್ಷಕವಾಗಿ ಕಂಡುಬಂದರೂ, ಒಳಗೊಂಡಿರುವ ನಿಯಮಗಳ ಬಗ್ಗೆ ತಿಳಿದ ನಂತರ ಎಷ್ಟು ಖರೀದಿದಾರರು ಬದ್ಧರಾಗಲು ಸಿದ್ಧರಿರುತ್ತಾರೆ ಎಂಬುದು ಇನ್ನೂ ಖಚಿತವಾಗಿಲ್ಲ.

1 ಯೂರೋಗೆ ಮನೆ ಖರೀದಿಸುವುದು ಅಂದುಕೊಂಡಷ್ಟು ಸುಲಭವಲ್ಲ. ನವೀಕರಣ ವೆಚ್ಚವು ಲಕ್ಷಾಂತರ ರೂಪಾಯಿಗಳನ್ನು ತಲುಪಬಹುದು. ಆದ್ದರಿಂದ ಆಂಬರ್ಟ್‌ನಲ್ಲಿನ ಖರೀದಿದಾರರು ಸಾಕಷ್ಟು ಸಮಯ ಮತ್ತು ಹಣವನ್ನು ಹೂಡಿಕೆ ಮಾಡಬೇಕಾಗುತ್ತದೆ. ಈ ಕೊಡುಗೆ ಆಕರ್ಷಕವಾಗಿ ಕಂಡುಬಂದರೂ, ಇದು ಗಮನಾರ್ಹ ಅಪಾಯಗಳನ್ನು ಹೊಂದಿದೆ. ಆದರೂ, ಆಂಬರ್ಟ್‌ನಂತಹ ಸಣ್ಣ ಪಟ್ಟಣಗಳ ಕ್ಷೀಣಿಸುತ್ತಿರುವ ಜನಸಂಖ್ಯೆಯನ್ನು ಪುನರುಜ್ಜೀವನಗೊಳಿಸಲು ಇಂತಹ ಕ್ರಮಗಳು ಉಪಯುಕ್ತವಾಗಿವೆ.