Jodidara tradition: ಒಂದೇ ಮಹಿಳೆ ಜೊತೆ ಸಹೋದರರಿಬ್ಬರ ಮದ್ವೆ! ಏನಿದು ಜೋಡಿದಾರ ವಿವಾಹ? ಇದಕ್ಕೆ ಕಾನೂನು ಮಾನ್ಯತೆ ಇದೆಯೇ?
ಭಾರತದ ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯ ಹಟ್ಟಿ ಸಮುದಾಯ ತಲೆ ತಲೆಮಾರುಗಳಿಂದ ಅನುಸರಿಸಿಕೊಂಡು ಬಂದಿರುವ ಮದುವೆ ಪದ್ಧತಿಯಾಗಿರುವ "ಜೋಡಿದಾರ'' ದಲ್ಲಿ (Jodidara tradition) ಸಹೋದರರು ಒಬ್ಬ ಕನ್ಯೆಯನ್ನು ವಿವಾಹವಾಗುತ್ತಾರೆ. ಅಂದರೆ ಬಹು ಪತ್ನಿತ್ವದ ಬಗ್ಗೆ ನಾವೆಲ್ಲರೂ ಕೇಳಿದ್ದೇವೆ. ಆದರೆ ಈ ಜೋಡಿದಾರ ಪದ್ದತಿಯಲ್ಲಿ ಬಹುಪತಿತ್ವವನ್ನು ಕನ್ಯೆ ಸ್ವೀಕರಿಸುತ್ತಾಳೆ.


ಮಹಾಭಾರತದಲ್ಲಿ (mahabharata) ಪಾಂಚಾಲ ನರೇಶನ ಮಗಳಾಗಿದ್ದ ಪಾಂಚಾಲಿಗೆ (Panchali) ಐವರು ಪತಿಯರು ಇದ್ದರು ಎನ್ನುವುದು ನಮಗೆಲ್ಲರಿಗೂ ಗೊತ್ತೇ ಇದೆ. ಪಾಂಚಾಲಿ ಮತ್ತು ಆಕೆಯ ಐವರು ಪತಿಯರು ಕಟ್ಟುನಿಟ್ಟಾಗಿ ಧರ್ಮ (hindu dharma) ಪರಿಪಾಲನೆ ಮಾಡುತ್ತಿದ್ದುದರಿಂದ ಇವರ ವಿವಾಹವನ್ನು(wedding) ಧರ್ಮವೂ ಒಪ್ಪಿಕೊಂಡಿತ್ತು. ಆದರೆ ಧರ್ಮ ಮತ್ತು ಕಾನೂನು ಬದ್ದವಾಗಿ ಬಹು ಪತಿಯರನ್ನು ಹೊಂದಲು ಮಹಿಳೆಯರಿಗೆ ಅವಕಾಶ ನೀಡಲಾಗಿಲ್ಲ. ಇದರ ಹಿಂದಿನ ಕಾರಣ ಏನೇ ಇದ್ದರೂ ಮದುವೆ ವಿಚಾರದಲ್ಲಿ ಕೆಲವೊಂದು ವಿಚಿತ್ರ ಆಚರಣೆ, ನಂಬಿಕೆಗಳು ವಿಶ್ವದಾದ್ಯಂತ ಇದೆ. ಅಂತಹ ಒಂದು ಆಚರಣೆಯೇ "ಜೋಡಿದಾರ'' (Jodidara tradition).
ಭಾರತದ ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯ ಹಟ್ಟಿ ಸಮುದಾಯ ತಲೆ ತಲೆಮಾರುಗಳಿಂದ ಅನುಸರಿಸಿಕೊಂಡು ಬಂದಿರುವ ಮದುವೆ ಪದ್ಧತಿಯಾಗಿರುವ "ಜೋಡಿದಾರ'' ದಲ್ಲಿ ಸಹೋದರರು ಒಬ್ಬ ಕನ್ಯೆಯನ್ನು ವಿವಾಹವಾಗುತ್ತಾರೆ. ಅಂದರೆ ಬಹು ಪತ್ನಿತ್ವದ ಬಗ್ಗೆ ನಾವೆಲ್ಲರೂ ಕೇಳಿದ್ದೇವೆ. ಆದರೆ ಈ ಜೋಡಿದಾರ ಪದ್ದತಿಯಲ್ಲಿ ಬಹುಪತಿತ್ವವನ್ನು ಕನ್ಯೆ ಸ್ವೀಕರಿಸುತ್ತಾಳೆ.
ಇತ್ತೀಚೆಗೆ ಜೋಡಿದಾರ ಪದ್ದತಿಯ ಪ್ರಕಾರ ಸಿರ್ಮೌರ್ ಜಿಲ್ಲೆಯ ಶಿಲೈ ಗ್ರಾಮದ ಪ್ರದೀಪ್ ನೇಗಿ ಮತ್ತು ಕಪಿಲ್ ನೇಗಿ ಎಂಬುವವರು ಕುನ್ಹಾಟ್ ಗ್ರಾಮದ ಮಹಿಳೆ ಸುನೀತಾ ಚೌಹಾಣ್ ಎಂಬವರನ್ನು ವಿವಾಹವಾಗಿದ್ದು ದೇಶಾದ್ಯಂತ ಸುದ್ದಿಯಾಗಿತ್ತು. ಜೋಡಿದಾರ ವಿವಾಹ ಪದ್ದತಿಯು ಇಲ್ಲಿ ಹೊಸದೇನಲ್ಲ. ಇದು ಅನೇಕ ತಲೆಮಾರುಗಳಿಂದ ಪಾಲಿಸಿಕೊಂಡು ಬರುತ್ತಿರುವ ಸಂಪ್ರದಾಯವಾಗಿದೆ.
ಜುಲೈ 12 ರಂದು ಕುನ್ಹಾತ್ ಗ್ರಾಮದ ವಧು ಸುನೀತಾ ಚೌಹಾಣ್, ಶಿಲ್ಲಾಯ್‌ನ ಪ್ರದೀಪ್ ಮತ್ತು ಕಪಿಲ್ ನೇಗಿ ಅವರನ್ನು ಸ್ಥಳೀಯ ಸಂಪ್ರದಾಯದಡಿಯಲ್ಲಿ ವಿವಾಹವಾದರು. ಇವರ ಮದುವೆಗೆ ನೂರಾರು ಮಂದಿ ಸಾಕ್ಷಿಯಾಗಿದ್ದರು. ಇದು ಹಿಮಾಚಲ ಪ್ರದೇಶದ ಕೆಲವು ಬುಡಕಟ್ಟು ಸಮುದಾಯಗಳು ಇಂದಿಗೂ ಆಚರಿಸಿಕೊಂಡು ಬರುತ್ತಿರುವ ಬಹುಪತಿತ್ವದ ಒಂದು ರೂಪವಾಗಿದೆ.
ಎಲ್ಲ ವಿವಾಹ ಸಮಾರಂಭಗಳಲ್ಲಿ ಇರುವಂತೆ ಜೋಡಿದಾರ ವಿವಾಹ ವಿಧಿವಿಧಾನಗಳಲ್ಲೂ ಹಟ್ಟಿ ಬುಡಕಟ್ಟಿನ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ಸಾಂಪ್ರದಾಯಿಕ ಹಾಡುಗಳು, ನೃತ್ಯಗಳು ಮತ್ತು ವಿವಿಧ ಆಚರಣೆಗಳನ್ನು ಒಳಗೊಂಡಿತ್ತು. ಸುನೀತಾ ಅವರು ಯಾವುದೇ ಒತ್ತಡವಿಲ್ಲದೆ ಪೂರ್ಣ ಒಪ್ಪಿಗೆಯಿಂದ ಸಹೋದರರನ್ನು ವಿವಾಹವಾಗಿರುವುದಾಗಿ ಹೇಳಿದ್ದಾರೆ.
ಜೋಡಿದಾರ ವಿವಾಹ ಎಂದರೇನು?
ಜೋಡಿದಾರ ಎಂದರೆ ಇಲ್ಲಿ ಬಹುಪತಿತ್ವಕ್ಕೆ ಆದ್ಯತೆ ನೀಡಲಾಗುತ್ತದೆ. ಇಲ್ಲಿ ಸಹೋದರರು ಒಬ್ಬ ಹೆಂಡತಿಯನ್ನುಹಂಚಿಕೊಳ್ಳುವುದು ಪದ್ಧತಿಯಾಗಿದೆ. ಹಿಮಾಚಲ ಪ್ರದೇಶದ ಟ್ರಾನ್ಸ್-ಗಿರಿ ಪ್ರದೇಶದ ಹಟ್ಟಿ ಬುಡಕಟ್ಟು ಜನಾಂಗದವರಲ್ಲಿ ಈ ಪದ್ಧತಿ ಅನೇಕ ಶತಮಾನಗಳಿಂದ ಆಚರಣೆಯಲ್ಲಿದೆ. ಇಲ್ಲಿ ಇದನ್ನು ಮಹಾಭಾರತದ ದ್ರೌಪದಿಯ ಕಥೆಗೆ ಹೋಲಿಸಲಾಗುತ್ತದೆ. ಈ ವಿವಾಹ ಪದ್ದತಿಯನ್ನು ದ್ರೌಪದಿ ಪ್ರಥ, ಜೋಡಿದಾರನ್ ಅಥವಾ ಉಜ್ಲ ಪಕ್ಷ ಎಂದೂ ಕರೆಯಲಾಗುತ್ತದೆ.
ವಿವಾಹ ನಿಯಮ ಪಾಲನೆ ಹೇಗೆ?
ಈ ವಿವಾಹ ಸಂಪ್ರದಾಯದಲ್ಲೂ ನಿಯಮಗಳಿವೆ. ಹೆಂಡತಿ ಪ್ರತಿಯೊಬ್ಬ ಸಹೋದರನೊಂದಿಗೆ ಅವರು ಪರಸ್ಪರ ಒಪ್ಪುವ ವೇಳಾಪಟ್ಟಿಯ ಪ್ರಕಾರ ವಾಸಿಸುತ್ತಾಳೆ. ಇದು ಪ್ರತಿನಿತ್ಯ, ವಾರಕ್ಕೊಮ್ಮೆ ಅಥವಾ ಹದಿನೈದು ದಿನಕ್ಕೊಮ್ಮೆ ಬದಲಾಗುತ್ತದೆ. ಇಂತಹ ಕುಟುಂಬಗಳಲ್ಲಿ ಜನಿಸುವ ಮಕ್ಕಳನ್ನು ಸಾಮೂಹಿಕವಾಗಿ ಬೆಳೆಸಲಾಗುತ್ತದೆ. ಕಾನೂನುಬದ್ಧವಾಗಿ ಹಿರಿಯ ಸಹೋದರನನ್ನು ಮಗುವಿನ ತಂದೆ ಎಂದು ಪರಿಗಣಿಸಲಾಗುತ್ತದೆ. ಎಲ್ಲಾ ಸಹೋದರರು ಮಕ್ಕಳನ್ನು ಬೆಳೆಸುವ ಸಮಾನ ಜವಾಬ್ದಾರಿಯನ್ನು ಹೊಂದಿರುತ್ತಾರೆ.
ಏಕೆ ಆಚರಿಸಲಾಗುತ್ತದೆ?
ಹಿಮಾಚಲ ಪ್ರದೇಶದ ಗುಡ್ಡಗಾಡು ಪ್ರದೇಶಗಳಲ್ಲಿ ಹೆಚ್ಚಾಗಿ ಕೃಷಿಯೇ ಜೀವನೋಪಾಯದ ಮೂಲವಾಗಿದೆ. ಭೂಮಿ ಸೀಮಿತವಾಗಿರುವುದರಿಂದ ಅದರ ವಿಭಜನೆಯನ್ನು ತಡೆಯಲು ಸಹೋದರರು ಒಬ್ಬ ಮಹಿಳೆಯನ್ನು ಮದುವೆಯಾಗುತ್ತಾರೆ ಮತ್ತು ಒಟ್ಟಿಗೆ ವಾಸಿಸುತ್ತಾರೆ. ಇದರಿಂದ ಕುಟುಂಬದಲ್ಲೂ ಒಗ್ಗಟ್ಟು ಇರುತ್ತದೆ ಎನ್ನುತ್ತಾರೆ ಇಲ್ಲಿನ ಸ್ಥಳೀಯರು.
ಇದನ್ನೂ ಓದಿ: V.S. Achuthanandan: ಕೇರಳದ ಮಾಜಿ ಮುಖ್ಯಮಂತ್ರಿ ವಿ.ಎಸ್.ಅಚ್ಯುತಾನಂದನ್ ಇನ್ನಿಲ್ಲ
ಈ ವಿವಾಹ ಕಾನೂನುಬದ್ಧವೇ?
ಭಾರತೀಯ ಕಾನೂನಿನ ಅಡಿಯಲ್ಲಿ ಬಹುಪತಿತ್ವಕ್ಕೆ ಅನುಮತಿ ಇಲ್ಲ. ಆದರೆ ಹಿಮಾಚಲ ಪ್ರದೇಶ ಹೈಕೋರ್ಟ್ ಜೋಡಿದಾರ ಪದ್ಧತಿಗೆ 'ಜೋಡಿದಾರ ಕಾನೂನು' ರೂಪಿಸಿ ಅದನ್ನು ಮಾನ್ಯವಾಗಿ ಮಾಡಿದೆ. ಇದು ನಿರ್ದಿಷ್ಟವಾಗಿ ಬುಡಕಟ್ಟು ಸಮುದಾಯಗಳಿಗೆ ಸೀಮಿತವಾಗಿದೆ. ಇದನ್ನು ಹಟ್ಟಿ ನಾಯಕರು ತಮ್ಮ ಗೌರವದ ಸಂಕೇತ ಎಂದು ಪರಿಗಣಿಸುತ್ತಾರೆ.