ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಲೈವ್‌ ರಿಪೋರ್ಟಿಂಗ್‌ ವೇಳೆಯೇ ಬಾಲಕಿ ಡೆಡ್‌ಬಾಡಿ ಪತ್ತೆ! ವರದಿಗಾರ ಫುಲ್‌ ಶಾಕ್‌- ವಿಡಿಯೊ ನೋಡಿ

Brazilian journalist stands in river: 13 ವರ್ಷದ ಬಾಲಕಿಯ ಕಣ್ಮರೆಗೆ ಸಂಬಂಧಿಸಿದಂತೆ ಪತ್ರಕರ್ತರೊಬ್ಬರು ವರದಿ ಮಾಡುತ್ತಿದ್ದರು. ನೇರ ಪ್ರಸಾರದ ಸಮಯದಲ್ಲಿ ನೀರಿನಲ್ಲಿ ಮುಳುಗಿದ್ದ ಆಕೆಯ ದೇಹದ ಮೇಲೆ ಕಾಲಿಟ್ಟಂತೆ ಕಂಡುಬಂದು ಅವರು ಆತಂಕಗೊಂಡ ಘಟನೆಯನ್ನು ವಿಡಿಯೊದಲ್ಲಿ ಸೆರೆಹಿಡಿಯಲಾಗಿದೆ.

ಲೈವ್‌ ರಿಪೋರ್ಟಿಂಗ್‌ ವೇಳೆಯೇ ಬಾಲಕಿ ಡೆಡ್‌ಬಾಡಿ ಪತ್ತೆ!

Priyanka P Priyanka P Jul 22, 2025 3:55 PM

ಬಕಾಬಲ್: ಬಾಲಕಿಯ ಕಣ್ಮರೆ ವಿಚಾರಕ್ಕೆ ಸಂಬಂಧಪಟ್ಟಂತೆ ಪತ್ರಕರ್ತರೊಬ್ಬರು ವರದಿ ಮಾಡುತ್ತಿದ್ದಾಗ ಆಕೆಯ ದೇಹದ ಮೇಲೆ ಕಾಲಿಟ್ಟಂತೆ ಕಂಡುಬಂದ ಆಘಾತಕಾರಿ ವಿಡಿಯೊ ಕ್ಯಾಮರಾದಲ್ಲಿ ಸೆರೆಯಾಗಿದೆ(Viral Video). ಈಶಾನ್ಯ ಬ್ರೆಜಿಲ್‌ನ ಬಕಾಬಲ್‌ನಲ್ಲಿ ಘಟನೆ ನಡೆದಿದೆ. 13 ವರ್ಷದ ಬಾಲಕಿಯ ಕಣ್ಮರೆಗೆ ಸಂಬಂಧಿಸಿದಂತೆ ಪತ್ರಕರ್ತರೊಬ್ಬರು ವರದಿ ಮಾಡುತ್ತಿದ್ದರು. ನೇರ ಪ್ರಸಾರದ ಸಮಯದಲ್ಲಿ ನೀರಿನಲ್ಲಿ ಮುಳುಗಿದ್ದ ಆಕೆಯ ದೇಹದ ಮೇಲೆ ಕಾಲಿಟ್ಟಂತೆ ಕಂಡುಬಂದು ಅವರು ಆತಂಕಗೊಂಡ ಘಟನೆಯನ್ನು ವಿಡಿಯೊದಲ್ಲಿ ಸೆರೆಹಿಡಿಯಲಾಗಿದೆ.

ಈ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಕಾಣೆಯಾದ ಹುಡುಗಿಯ ಕೊನೆಯ ಸ್ಥಳವಾದ ಮೇರಿಮ್ ನದಿಯಿಂದ ವರದಿ ಮಾಡುತ್ತಿರುವ ಲೆನಿಲ್ಡೊ ಫ್ರಜಾವೊ ಎಂಬ ವರದಿಗಾರ, ನೀರಿನ ಆಳ ಮತ್ತು ಹರಿವಿನ ವಿವರಗಳನ್ನು ನೀಡಲು ನೀರಿನೊಳಗೆ ಪ್ರವೇಶಿಸಿದರು. ಎದೆಯೆತ್ತರದ ನೀರಿನಲ್ಲಿ ನಿಂತುಕೊಂಡು ಅವರು ನೇರಪ್ರಸಾರ ಕೊಡುತ್ತಿದ್ದಾಗ ಇದ್ದಕ್ಕಿದ್ದಂತೆ ಒಂದು ಹೆಜ್ಜೆ ಹಿಂದಕ್ಕೆ ಸರಿದು ತನ್ನ ಸಿಬ್ಬಂದಿಗೆ ಮೇಲ್ಮೈ ಅಡಿಯಲ್ಲಿ ಏನೋ ತನ್ನ ಮೇಲೆ ಸುಳಿದಾಡುತ್ತಿರುವಂತೆ ಭಾಸವಾಗುತ್ತಿದೆ ಎಂದು ಹೇಳಿದರು.

ವಿಡಿಯೊ ಇಲ್ಲಿದೆ:



ನೀರಿನ ತಳದಲ್ಲಿ ಏನೋ ಇದೆ ಅಂತ ನನಗೆ ಅನಿಸುತ್ತಿದೆ ಎಂದು ಕ್ಯಾಮರಾ ಮುಂದೆ ಹೇಳುತ್ತಾ, ಅವರು ಭಯಗೊಂಡವರಂತೆ ಕಾಣುತ್ತಿದೆ. ಇಲ್ಲ, ನಾನು ಹೋಗುತ್ತಿಲ್ಲ, ನನಗೆ ಭಯವಾಗುತ್ತಿದೆ. ಅದು ತೋಳಿನಂತೆ ಭಾಸವಾಯಿತು. ಅದು ಅವಳಾಗಿರಬಹುದೇ? ಆದರೆ ಅದು ಮೀನೂ ಆಗಿರಬಹುದು. ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

ವರದಿಯ ನಂತರ, ರಕ್ಷಣಾ ತಂಡಗಳು ಮತ್ತು ಡೈವರ್‌ಗಳು ತಮ್ಮ ಹುಡುಕಾಟವನ್ನು ಪುನರಾರಂಭಿಸಿದರು. ಜೂನ್ 30 ರ ಬೆಳಗ್ಗೆ ಈ ಘಟನೆ ನಡೆದಿದ್ದು, ಬಾಲಕಿಯ ಶವವು ಪತ್ರಕರ್ತ ವರದಿ ಮಾಡಿದ ಸ್ಥಳದಲ್ಲೇ ಪತ್ತೆಯಾಗಿದೆ. ಆ ಕ್ಷಣದಲ್ಲಿ ಆತ ನಿಜವಾಗಿಯೂ ಮೃತದೇಹವನ್ನು ತುಳಿದಿದ್ದಾನೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ರೈಸಾ ಎಂದು ಮಾತ್ರ ಗುರುತಿಸಲ್ಪಟ್ಟ ಹುಡುಗಿ ಸ್ನೇಹಿತರೊಂದಿಗೆ ಈಜುತ್ತಿದ್ದಾಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾಳೆ ಎಂದು ವರದಿಯಾಗಿದೆ. ಅಧಿಕಾರಿಗಳು, ಬಾಲಕಿ ನೀರಿನಲ್ಲಿ ಆಕಸ್ಮಿಕವಾಗಿ ಮುಳುಗಿ ಮೃತಪಟ್ಟಿದ್ದಾಳೆ ಎಂದು ದೃಢಪಡಿಸಿದ್ದಾರೆ. ಬಾಲಕಿಯ ಮೃತದೇಹದ ಮೇಲೆ ಬಾಹ್ಯ ಗಾಯಗಳ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಜೂನ್ 30ರ ಸಂಜೆ ಬಾಲಕಿಯ ಅಂತ್ಯಕ್ರಿಯೆ ನಡೆಯಿತು.