Viral Video: ಕಸದ ತೊಟ್ಟಿಗೆ ಸಿಪಿಆರ್ ಮಾಡಿದ ಕರಡಿ; ವಿಡಿಯೊ ವೈರಲ್
Massive Bear Giving CPR: ಕರಡಿಯೊಂದು ಕಸದ ಡಬ್ಬವನ್ನು ಮುರಿಯಲು ಪ್ರಯತ್ನಿಸಿ ವಿಫಲವಾಗಿದೆ. ಅದು ಕಸದ ಡಬ್ಬಿಗೆ ಸಿಪಿಆರ್ ಮಾಡುವ ರೀತಿಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ನೆಟ್ಟಿಗರು ನಗೆಗಡಲಲ್ಲಿ ತೇಲಿದೆ. ಅಲಾಸ್ಕಾದಲ್ಲಿ ಈ ಘಟನೆ ನಡೆದಿದೆ.

-

ವಾಷಿಂಗ್ಟನ್: ಕರಡಿಯೊಂದು ಕಸದ ಡಬ್ಬಿಯನ್ನು ಮುರಿಯಲು ಪ್ರಯತ್ನಿಸಿ ವಿಫಲವಾಗಿದ್ದು, ಕೊನೆಗೆ ಹತಾಶೆಯಿಂದ ಅದನ್ನು ಪದೇ ಪದೆ ಹೊಡೆಯುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅಮೆರಿಕದ ಅಲಾಸ್ಕಾದಲ್ಲಿ (Alaska) ಈ ಘಟನೆ ನಡೆದಿದೆ. ಭಾರಿ ಮಳೆಯ ಸಮಯದಲ್ಲಿ ವಸತಿ ಪ್ರದೇಶದಲ್ಲಿ ನಡೆದ ಈ ಮೋಜಿನ ಘಟನೆ ವೈರಲ್ ಆಗಿದ್ದು (Viral Video), ನೆಟ್ಟಿಗರು ಕರಡಿಯ ಚಲನವಲನ ನೋಡಿ ತಮಾಷೆಯಿಂದ ಪ್ರತಿಕ್ರಿಯಿಸಿದ್ದಾರೆ.
ವಿಡಿಯೊದಲ್ಲಿ ಕರಡಿಯು ಕಸದ ತೊಟ್ಟಿಯನ್ನು ಬೀದಿಯ ಮಧ್ಯಕ್ಕೆ ಎಳೆದುಕೊಂಡು ಹೋಗಿ, ಅದನ್ನು ಉರುಳಿಸಿ, ಕಸದ ತೊಟ್ಟಿಗೆ ಸಿಪಿಆರ್ ನೀಡುವಂತೆ ತನ್ನ ಕೈಗಳಿಂದ ಬಡಿದಿದೆ. ಅನೇಕ ಪ್ರಯತ್ನಗಳ ಹೊರತಾಗಿಯೂ ಡಬ್ಬಿಯನ್ನು ಮುಚ್ಚಲ ತೆರೆದುಕೊಂಡಿಲ್ಲ. ಕರಡಿ ಆಹಾರ ಹುಡುಕಿಕೊಂಡು ಅಲೆದಾಡುವ ವೇಳೆ ಈ ಘಟನೆ ನಡೆದಿದೆ.
ವಿಡಿಯೊ ವೀಕ್ಷಿಸಿ:
ಇದನ್ನೂ ಓದಿ: ದೀಪಾವಳಿ ವೇಳೆ ಮಿನಿ ಭಾರತವಾದ ಸಿಡ್ನಿ; ಬೆಳಕಿನ ಹಬ್ಬದಲ್ಲಿ ಆಸ್ಟ್ರೇಲಿಯಾದ ಪ್ರಮುಖ ನಗರ ಮಿಂದೆದ್ದಿದ್ದು ಹೀಗೆ
ಕರಡಿ ತನ್ನ ವಿಫಲ ಪ್ರಯತ್ನದ ನಂತರ ಜನರಿಗೆ ಅಥವಾ ಆಸ್ತಿಗೆ ಯಾವುದೇ ಹಾನಿ ಮಾಡದೆ ಸುರಕ್ಷಿತವಾಗಿ ಆ ಪ್ರದೇಶವನ್ನು ತೊರೆದಿದೆ. ಈ ವಿಡಿಯೊ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದೆ. ಕರಡಿ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ತೆರಳಿದ್ದು ಮೋಜಿನ ಕ್ಷಣವಾಗಿತ್ತು ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. ಇದು ಕಸದ ಡಬ್ಬಿ ಕಂಪನಿಗೆ ಉತ್ತಮ ಜಾಹೀರಾತು. ಕರಡಿ ನಿರೋಧಕ ಕಸದ ಡಬ್ಬಿ ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ. ಪಾಪ ಕರಡಿ ಹಸಿದಿದೆ. ಕಸದ ತೊಟ್ಟಿಯನ್ನು ತೆರೆಯಲು ತುಂಬಾ ಪ್ರಯತ್ನಿಸುತ್ತಿದೆ ಎಂದು ಮಗದೊಬ್ಬರು ತಿಳಿಸಿದ್ದಾರೆ.
ಬುಧವಾರ ಜಪಾನ್‌ನ ಉತ್ತರ ನಗರವಾದ ಡೈಸೆನ್‌ನಲ್ಲಿ 82 ವರ್ಷದ ಮಹಿಳೆಯೊಬ್ಬರು ವಾಕಿಂಗ್‍ಗೆ ತೆರಳಿದ್ದರು. ಈ ವೇಳೆ ಕರಡಿಯೊಂದು ದಾಳಿ ಮಾಡಿದೆ. ಕಾಡು ಪ್ರದೇಶದ ಬಳಿಯ ಸ್ಥಳೀಯ ರಸ್ತೆಯಲ್ಲಿ ವೃದ್ಧೆ ವಾಕಿಂಗ್ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ದಾಳಿ ಮಾಡಿದೆ. ಕರಡಿಯು ಆಕೆಯ ಮುಖವನ್ನು ತನ್ನ ಉಗುರುಗಳಿಂದ ಪರಚಿದ್ದು, ಆಕೆಗೆ ಗಂಭೀರ ಗಾಯವಾಗಿದೆ. ನಂತರ ಕರಡಿ ಕಾಡಿಗೆ ತೆರಳಿದೆ.
ವಯಸ್ಸು 82 ಆದರೂ ಕರಡಿಯೊಂದಿಗೆ ಧೀರೆಯಾಗಿ ವೃದ್ಧೆ ಹೋರಾಡಿದ್ದಾಳೆ. ಅದನ್ನು ದೂರ ಎಸೆಯುವ ಮೂಲಕ ತನ್ನನ್ನು ತಾನು ರಕ್ಷಣೆ ಮಾಡಿಕೊಂಡಿದ್ದಾಳೆ. ಅದು ಅಂತಿಮವಾಗಿ ಓಡಿಹೋಯಿತು ಎಂದು ವರದಿಯಾಗಿದೆ.