Viral Video: ಮಹಿಳೆಯಂತೆ ಸೀರೆಯುಟ್ಟು ಪೊಲೀಸ್ ಅಧಿಕಾರಿ ಎದುರು ಅಶ್ಲೀಲ ನೃತ್ಯ- ಏನಿದು ವೈರಲ್ ವಿಡಿಯೊ?
Men dressed as women: ಸೀರೆಯುಟ್ಟ ಯುವಕನೊಬ್ಬ ಪೊಲೀಸ್ ಅಧಿಕಾರಿಯೊಂದಿಗೆ ಅಶ್ಲೀಲ ರೀಲ್ಸ್ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ವಿಡಿಯೊ ವೀಕ್ಷಿಸಿದ ನೆಟ್ಟಿಗರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಯುವಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.


ನೋಯ್ಡಾ: ಸೀರೆಯುಟ್ಟ ಯುವಕನೊಬ್ಬ ಪೊಲೀಸ್ ಅಧಿಕಾರಿಯೊಂದಿಗೆ ಅಶ್ಲೀಲ ರೀಲ್ಸ್ ಮಾಡುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ಈ ಘಟನೆ ನಡೆದಿದೆ. ವಿಡಿಯೊ ವೀಕ್ಷಿಸಿದ ನೆಟ್ಟಿಗರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ನೋಯ್ಡಾದ ರಾಷ್ಟ್ರೀಯ ದಲಿತ ಪ್ರೇರಣಾ ಸ್ಥಳ ಎಂಬಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಇದು ಸೂಕ್ಷ್ಮ ಮತ್ತು ಸಾಂಕೇತಿಕ ಸ್ಥಳವೆಂದು ಪರಿಗಣಿಸಲ್ಪಟ್ಟಿದ್ದು, ಈ ಕಾರಣದಿಂದಾಗಿ ಅಶ್ಲೀಲ ವಿಡಿಯೊದಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹಲವರು ಆಗ್ರಹಿಸಿದ್ದಾರೆ.
ವೈರಲ್ ವಿಡಿಯೋದಲ್ಲಿ ಏನಿದೆ?
ಶುಕ್ರವಾರ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ 54 ಮತ್ತು 52 ಸೆಕೆಂಡುಗಳ ಎರಡು ವಿಡಿಯೊಗಳು ಕಾಣಿಸಿಕೊಂಡವು. ಮೊದಲ ವಿಡಿಯೊದಲ್ಲಿ, ಪುರುಷನೊಬ್ಬ ಮಹಿಳೆಯರ ಒಳ ಉಡುಪು ತೊಟ್ಟು, ಸೀರೆ ಧರಿಸಿ ಜನಪ್ರಿಯ ಹಾಡಿಗೆ ನೃತ್ಯ ಮಾಡಿದ್ದಾನೆ. ಈ ವೇಳೆ ಸಮವಸ್ತ್ರ ಧರಿಸಿದ ಪೊಲೀಸ್ ಅಧಿಕಾರಿಯ ಸುತ್ತಲೂ ಸುತ್ತುತ್ತಾ ಆತ ನೃತ್ಯ ಪ್ರದರ್ಶನ ನೀಡಿರುವುದನ್ನು ವಿಡಿಯೊದಲ್ಲಿ ನೋಡಬಹುದು. ಈತ ನೃತ್ಯ ಮಾಡುತ್ತಿದ್ದರೆ, ಆ ಅಧಿಕಾರಿ ಅಲ್ಲೇ ನಿಂತಿದ್ದಾರೆ.
ಎರಡನೇ ವಿಡಿಯೊದಲ್ಲಿ ಅದೇ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯೊಂದಿಗೆ ನೃತ್ಯ ಮಾಡುವುದನ್ನು ನೋಡಬಹುದು. ಈ ವೇಳೆ ಆತನ ಹಿಂದೆ ಇಬ್ಬರು ಮಹಿಳೆಯರು ನಿಂತಿದ್ದಾರೆ. ಅಲ್ಲದೆ, ಮತ್ತೆ ಅದೇ ಸ್ಥಳದಲ್ಲಿ ರೀಲ್ ಅನ್ನು ಚಿತ್ರೀಕರಿಸಿದ್ದಾರೆ.
ವಿಡಿಯೊ ವೀಕ್ಷಿಸಿ:
🚨नोएडा : युवक ने पुलिसकर्मी के साथ बनाई अश्लील रील🚨
— भारत समाचार | Bharat Samachar (@bstvlive) July 26, 2025
🆔 महिला के कपड़े पहनकर युवक का अश्लील नृत्य
🕵️♂️ लोगों ने शिकायत कर कार्रवाई की मांग
📍 सेक्टर-95 स्थित दलित प्रेरणा स्थल का वीडियो
📍 वीडियो वायरल, पुलिस युवक की पहचान में जुटी#Noida #ObsceneReel #ViralVideo #PoliceAction… pic.twitter.com/TP7usj0bCF
ಪೊಲೀಸ್ ಕ್ರಮ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವೈರಲ್ ವಿಡಿಯೊದಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ಸ್ಥಳ ಮತ್ತು ಗುರುತುಗಳನ್ನು ಪರಿಶೀಲಿಸಿದ ನಂತರ ಕಾನೂನು ಕ್ರಮ ಕೈಗೊಳ್ಳಲಾಗುವುದು. ಯಾವುದೇ ಅಶ್ಲೀಲ ಕೃತ್ಯ ಅಥವಾ ಪೊಲೀಸ್ ಗೌರವ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ
ಸಾಮಾಜಿಕ ಮಾಧ್ಯಮ ಬಳಕೆದಾರರು, ಭಾರತೀಯ ಸಂಸ್ಕೃತಿಯನ್ನು ಹಾಳು ಮಾಡುತ್ತಿರುವ ಇಬ್ಬರು ಬುದ್ಧಿಹೀನರು ಎಂದು ಜರೆದಿದ್ದಾರೆ. ಪ್ರಮೋದ್ ಕುಮಾರ್ ಆಜಾದ್ ಎಂಬ ಬಳಕೆದಾರರು ಈ ವಿಡಿಯೊವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ಯುಪಿ ಪೊಲೀಸ್ ಮತ್ತು ನೋಯ್ಡಾ ಪೊಲೀಸರನ್ನು ಟ್ಯಾಗ್ ಮಾಡಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. “ಇಂತಹ ವಿಡಿಯೊಗಳನ್ನು ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ. ಇಲ್ಲದಿದ್ದರೆ, ನಮ್ಮ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದರೆ ಸ್ವತಃ ನಾವೇ ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಉದ್ಯಾನವನದ ಭದ್ರತಾ ಸಿಬ್ಬಂದಿಯ ಮೇಲೆ ಜವಾಬ್ದಾರಿ ಇರುತ್ತದೆ” ಎಂದು ಅವರು ಎಚ್ಚರಿಸಿದ್ದಾರೆ.
ಈ ಘಟನೆಯು ಸೂಕ್ಷ್ಮ ಸ್ಥಳಗಳಲ್ಲಿ ಸಾರ್ವಜನಿಕ ನಡವಳಿಕೆಯ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿದೆ. ಪೊಲೀಸ್ ಸಿಬ್ಬಂದಿಯ ವೃತ್ತಿಪರತೆ ಬಗ್ಗೆಯೂ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇದು ಯುವಜನರು ಮತ್ತು ದೇಶದ ಇತರ ಜನರ ಮೇಲೆ ಸಾಮಾಜಿಕ ಮಾಧ್ಯಮದ ಹೆಚ್ಚುತ್ತಿರುವ ಪ್ರಭಾವವನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.