ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಗಂಡನ ಮೇಲೆ ದೌರ್ಜನ್ಯ ಎಸಗಿದ್ದಕ್ಕೆ ಮಹಿಳೆಯ ಮೇಲೆ ಎಂಎನ್‌ಎಸ್ ಕಾರ್ಯಕರ್ತೆಯಿಂದ ಕಪಾಳಮೋಕ್ಷ; ಇಲ್ಲಿದೆ ವಿಡಿಯೊ

MNS worker slaps woman: ಆಕಸ್ಮಿಕವಾಗಿ ಡಿಕ್ಕಿ ಹೊಡೆದಿದ್ದಕ್ಕೆ ಗಂಡನ ಮೇಲೆ ದೌರ್ಜನ್ಯ ಎಸಗಿದ್ದಕ್ಕೆ ಮಹಿಳೆಯೊಬ್ಬರ ಮೇಲೆ ಎಂಎನ್‌ಎಸ್ ಕಾರ್ಯಕರ್ತೆಯೊಬ್ಬರು ಕಪಾಳಮೋಕ್ಷ ಮಾಡಿ, ಕ್ಷಮೆಯಾಚಿಸುವಂತೆ ಒತ್ತಾಯಿಸಿದ್ದಾರೆ. ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಗಂಡನ ಮೇಲೆ ದೌರ್ಜನ್ಯ ಎಸಗಿದ್ದಕ್ಕೆ ಮಹಿಳೆಗೆ ಕಪಾಳಮೋಕ್ಷ

-

Priyanka P Priyanka P Oct 12, 2025 10:18 PM

ಮುಂಬೈ: ಗಂಡನ ಮೇಲೆ ದೌರ್ಜನ್ಯ ಎಸಗಿದ್ದಕ್ಕೆ ಮಹಿಳೆಯೊಬ್ಬರ ಮೇಲೆ ಮಹಾರಾಷ್ಟ್ರ ನವನಿರ್ಮಾಣ ಸೇನಾ (MNS) ಕಾರ್ಯಕರ್ತೆಯೊಬ್ಬರು ಕಪಾಳಮೋಕ್ಷ ಮಾಡಿ, ಕ್ಷಮೆಯಾಚಿಸುವಂತೆ ಒತ್ತಾಯಿಸಿದ್ದಾರೆ. ಮಹಾರಾಷ್ಟ್ರದ ಥಾಣೆಯ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು (Viral Video), ಎಂಎನ್‌ಎಸ್ ಕಾರ್ಯಕರ್ತೆ ಸ್ವರಾ ಘಾಟೆ ಎಂದು ಗುರುತಿಸಲಾಗಿದೆ. ರಾಜ್ ಠಾಕ್ರೆ ಅವರ ಪಕ್ಷದ ಹಲವು ಬೆಂಬಲಿಗರ ಸಮ್ಮುಖದಲ್ಲಿ ಮಹಾರಾಷ್ಟ್ರದ ಜನರಲ್ಲಿ ಕ್ಷಮೆಯಾಚಿಸುವಂತೆ ಮಹಿಳೆಯನ್ನು ಒತ್ತಾಯಿಸಿದ್ದಾರೆ.

ಎಂಎನ್‌ಎಸ್ ಕಾರ್ಯಕರ್ತೆಯ ಪತಿ ಕಲ್ವಾ ರೈಲು ನಿಲ್ದಾಣದಲ್ಲಿ ಲೋಕಲ್ ರೈಲಿನಿಂದ ಇಳಿಯುವಾಗ ಜನದಟ್ಟಣೆಯಿದ್ದಿದ್ದರಿಂದ ಗೊತ್ತಾಗದೆ ಮಹಿಳೆಗೆ ಡಿಕ್ಕಿ ಹೊಡೆದಿದ್ದಾರೆ. ಆ ವ್ಯಕ್ತಿ ಕ್ಷಮೆಯಾಚಿಸಿದರೂ ಕೋಪಗೊಂಡ ಮಹಿಳೆ ಅವರನ್ನು ನಿಂದಿಸಿದ್ದಾಳೆ ಎಂದು ಅವರು ಆರೋಪಿಸಿದ್ದಾರೆ. ಅವರು ಮರಾಠಿ ಜನರ ವಿರುದ್ಧ ಅವಹೇಳನಕಾರಿ ಭಾಷೆಯನ್ನು ಬಳಸಿದ್ದಾರೆ. ಅಲ್ಲದೆ ಅವರಿಗೆ ಮಹಿಳೆಯು ಕಪಾಳಮೋಕ್ಷ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಮಹಿಳೆ ತನ್ನ ಕಾಲರ್ ಹಿಡಿದು ಹಲ್ಲೆ ನಡೆಸಿದ್ದಾಳೆ ಎಂದು ಎಂಎನ್‌ಎಸ್ ಕಾರ್ಯಕರ್ತೆಯ ಪತಿ ಆರೋಪಿಸಿದ್ದಾರೆ. ಇದರಿಂದ ಕೋಪಗೊಂಡ ಸ್ವರಾ, ಆ ಮಹಿಳೆಯನ್ನು ಕಲ್ವಾದಲ್ಲಿರುವ ಪಕ್ಷದ ಕಚೇರಿಗೆ ಕರೆದೊಯ್ದರು. ಕಚೇರಿಯಲ್ಲಿ ಚಿತ್ರೀಕರಿಸಲಾದ ವಿಡಿಯೊದಲ್ಲಿ ಮಹಿಳೆಯು ಕ್ಷಮೆಯಾಚಿಸುತ್ತಿರುವುದು ಕಂಡುಬಂದಿದೆ.

ವಿಡಿಯೊ ವೀಕ್ಷಿಸಿ:



ಇಂದು ಕಲ್ವಾ ನಿಲ್ದಾಣದಲ್ಲಿ ಘಟನೆಯೊಂದು ಸಂಭವಿಸಿದೆ. ನಾನು ಒಬ್ಬ ಮಹಾರಾಷ್ಟ್ರದ ವ್ಯಕ್ತಿಯನ್ನು ನೋಯಿಸಿದೆ. ನಾನು ಅವರನ್ನು ನಿಂದಿಸಿದೆ. ಅಲ್ಲದೆ ಅವರ ಮೇಲೆ ಕೈ ಎತ್ತಿದೆ. ಇದಕ್ಕಾಗಿ ನಾನು ಎಲ್ಲಾ ಮಹಾರಾಷ್ಟ್ರ ಜನರಲ್ಲಿ ಕ್ಷಮೆಯಾಚಿಸುತ್ತೇನೆ ಎಂದು ಮಹಿಳೆಯು ವಿಡಿಯೊ ಮೂಲಕ ಕ್ಷಮೆಯಾಚಿಸಿದ್ದಾರೆ. ನಂತರ ಸ್ವರಾ ಘಾಟೆ, ಮಹಿಳೆಯ ಕೆನ್ನೆಗೆ ಹೊಡೆದು, ಮಹಾರಾಷ್ಟ್ರದ ಜನರಿಗೆ ಇನ್ನು ಮುಂದೆ ಹಾಗೆ ಹೇಳಬೇಡ. ಅರ್ಥವಾಯಿತೇ? ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Viral Video: ನಿತ್ಯ ತುಂಬಿ ತುಳುಕೋ ಲೋಕಲ್‌ ರೈಲು- ಒಳಗೆ ಹತ್ತಲು ಮಹಿಳೆಯರ ನೂಕುನುಗ್ಗಲು! ವಿಡಿಯೊ ನೋಡಿ

ಒಬ್ಬ ಮಹಿಳೆ ಪುರುಷನ ಮೇಲೆ ಕೈ ಎತ್ತಿದರೂ ಅವಳಿಗೆ ಏನನ್ನೂ ಹೇಳುವುದಿಲ್ಲ. ಕಾನೂನು ಮಹಿಳೆಯರಿಗೆ ಮಾತ್ರ ಏಕೆ ಅನ್ವಯಿಸುತ್ತದೆ? ಅವಳು ನನ್ನ ಗಂಡನನ್ನು ಅರ್ಧ ಗಂಟೆ ನಿಂದಿಸುತ್ತಲೇ ಇದ್ದಳು. ಆದರೆ ನಾನು ಅವಳಿಗೆ ಏನನ್ನೂ ಹೇಳಲಿಲ್ಲ. ನಾನು ಅವಳ ವಿರುದ್ಧ ಪ್ರಕರಣ ದಾಖಲಿಸಲು ಹೊರಟಿದ್ದೆ. ಆದರೆ ಅವಳ ಮಗಳು ಮತ್ತು ಅವಳ ಕುಟುಂಬವನ್ನು ನೋಡಿ, ನಾನು ಅವಳನ್ನು ಬಿಟ್ಟುಬಿಡುತ್ತಿದ್ದೇನೆ ಎಂದು ಅವರು ಹೇಳಿದರು.

ಎನ್‌ಸಿಪಿ (ಎಸ್‌ಪಿ) ನಾಯಕಿ ಸುಪ್ರಿಯಾ ಸುಳೆ ಈ ಘಟನೆಯನ್ನು ಖಂಡಿಸಿದ್ದಾರೆ. ಗಲಾಟೆ ಮತ್ತು ಜಗಳಗಳು ಒಳ್ಳೆಯದಲ್ಲ ಎಂದು ನಾನು ಎಲ್ಲರನ್ನೂ ವಿನಂತಿಸುತ್ತೇನೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸಬೇಕು. ಸಂವಿಧಾನದ ಪ್ರಕಾರ ಮಾತ್ರ ದೇಶ ನಡೆಯುತ್ತದೆ. ಗಲಾಟೆ ಮತ್ತು ಜಗಳಗಳ ಮೂಲಕ ದೇಶ ನಡೆಯುವುದಿಲ್ಲ ಎಂದು ಹೇಳಿದರು.