ಮೆಟ್ರೋ ನಿಲ್ದಾಣದಲ್ಲಿ ಗೆಳತಿಯೊಂದಿಗಿದ್ದ ಮಗನನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ತಾಯಿ ಮಾಡಿದ್ದೇನು ಗೊತ್ತಾ?
Metro station incident: ಮೆಟ್ರೋ ನಿಲ್ದಾಣದಲ್ಲಿ ಗೆಳತಿಯೊಂದಿಗಿದ್ದ ಮಗನನ್ನು ತಾಯಿ ರೆಡ್ ಹ್ಯಾಂಡ್ ಆಗಿ ಹಿಡಿದ ಘಟನೆ ಎಲ್ಲರ ಗಮನ ಸೆಳೆದಿದೆ. ಅಲ್ಲಿ ತಾಯಿ ತೆಗೆದುಕೊಂಡ ಅನಿರೀಕ್ಷಿತ ನಡೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಇದರ ವಿಡಿಯೊವನ್ನು ಎಕ್ಸ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ಭಾರಿ ವೈರಲ್ ಆಗಿದೆ. ಇದು ಅನೇಕರನ್ನು ಆಶ್ಚರ್ಯಚಕಿತಗೊಳಿಸಿದೆ.
ಗೆಳತಿಯೊಂದಿಗಿದ್ದ ಮಗನನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ತಾಯಿ -
ನವದೆಹಲಿ, ಫೆ.8: ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಗಮನ ಸೆಳೆದ ಘಟನೆಯೊಂದರಲ್ಲಿ, ಮಹಿಳೆಯೊಬ್ಬರು ತನ್ನ ಮಗನನ್ನು ಅವನ ಗೆಳತಿಯೊಂದಿಗೆ ಮೆಟ್ರೋ ನಿಲ್ದಾಣದಲ್ಲಿ (Metro station incident) ರೆಡ್ ಹ್ಯಾಂಡ್ ಹಾಗಿ ಹಿಡಿದು ಸ್ಥಳದಲ್ಲೇ ಅವನ ನಿಶ್ಚಿತಾರ್ಥವನ್ನು ಏರ್ಪಡಿಸಿದ್ದಾರೆ. ಇದರ ವಿಡಿಯೊ ವೈರಲ್ (viral video) ಆಗಿದ್ದು, ಅನೇಕರನ್ನು ಆಶ್ಚರ್ಯಚಕಿತಗೊಳಿಸಿದೆ.
ಎಕ್ಸ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೊದಲ್ಲಿ, ಯುವಕ ಹಾಗೂ ಯುವತಿ ಇಬ್ಬರೂ ಮೆಟ್ರೋದ ಬೆಂಚಿನ ಮೇಲೆ ಕುಳಿತಿದ್ದಾರೆ. ಈ ವೇಳೆ ಯುವಕನ ತಾಯಿಯು ಯುವತಿಗೆ (ಮಗನ ಪ್ರಿಯತಮೆ) ಸಿಹಿತಿಂಡಿಗಳು ಮತ್ತು ಹಣ್ಣುಗಳನ್ನು ನೀಡಿದ್ದಾರೆ. ಈ ಮಧ್ಯೆ, ಹುಡುಗನ ತಾಯಿ ಕ್ಯಾಮರಾ ಹಿಡಿದ ವ್ಯಕ್ತಿಗೆ ಸರಿಯಾದ ರೀತಿಯಲ್ಲಿ ವಿಡಿಯೊವನ್ನು ಸೆರೆಹಿಡಿಯಲು ನಿರ್ದೇಶಿಸಿದರು.
ವಿಡಿಯೊ ವೀಕ್ಷಿಸಿ:
🚨 Mother caught her son with his girlfriend at a metro station.
— News Algebra (@NewsAlgebraIND) February 7, 2026
She immediately arranged his engagement on spot 😂
Intelligent Mom settled the issue in one go, ending the need for excuses or secret meetings. pic.twitter.com/xyk3lYdgqu
ಆಕೆಯ ಮಗ ಪದೇ ಪದೇ ನಿಲ್ಲಿಸುವಂತೆ ಬೇಡಿಕೊಂಡಾಗ, ಮಹಿಳೆ ಆ ದೃಶ್ಯದಿಂದ ಅವಮಾನವಾಯಿತೇ? ಎಂದು ಪ್ರಶ್ನಿಸಿದ್ದಾರೆ. ಆದರೆ, ಇಬ್ಬರನ್ನೂ ಸಂತೋಷವಾಗಿರಿ ಎಂದು ಮಹಿಳೆ (ಯುವಕನ ತಾಯಿ) ಸಂತೋಷದಿಂದ ಹರಿಸಿದ್ದಾರೆ. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತರಹೇವಾರಿ ಪ್ರಶ್ನೆಗಳನ್ನು ಮಾಡಿದ್ದಾರೆ. ಹಲವರು ಇದನ್ನು ಸ್ಕ್ರಿಪ್ಟೆಟ್ ಎಂದು ಕರೆದಿದ್ದಾರೆ.
ಅಶ್ಲೀಲ ವಿಡಿಯೊ ನೋಡುವಾಗ ತನ್ನದೇ ಖಾಸಗಿ ವಿಡಿಯೊ ಕಂಡು ಬೆಚ್ಚಿಬಿದ್ದ ಯುವಕ
ಆನ್‌ಲೈನ್‌ನಲ್ಲಿ ಅಶ್ಲೀಲ ವಿಡಿಯೊಗಳಿಗಾಗಿ ಹುಡುಕಾಟ ನಡೆಸುತ್ತಿದ್ದ ಯುವಕನೊಬ್ಬ ತನ್ನದೇ ವಿಡಿಯೊ ನೋಡಿ ಬೆಚ್ಚಿಬಿದ್ದಿದ್ದಾನೆ. ಅದರಲ್ಲಿರುವುದು ತಾನು ಮತ್ತು ತನ್ನ ಗೆಳತಿ ಎನ್ನುವುದು ಗೊತ್ತಾಗಿ ದಂಗಾಗಿ ಹೋಗಿದ್ದಾನೆ. ಹಾಂಕಾಂಗ್‌ನಲ್ಲಿ ಈ ಘಟನೆ ನಡೆದಿದೆ.
ಕಿಕ್ಕಿರಿದ ಟ್ರಾಫಿಕ್ ನಡುವೆ ಡೋಗೇಶ್ ಭಾಯ್ ದರ್ಬಾರ್: ಚಲಿಸುವ ಆಟೋ ಮೇಲೆ ರಾಜನಂತೆ ಸವಾರಿ! ವಿಡಿಯೋ ನೋಡಿ
2023ರಲ್ಲಿ ಎರಿಕ್ (ಹೆಸರು ಬದಲಿಸಲಾಗಿದೆ) ಎಂಬ ಯುವಕ ತನ್ನ ಗೆಳತಿಯೊಂದಿಗೆ ದಕ್ಷಿಣ ಚೀನಾದ ಶೆನ್ಜೆನ್ ನಗರದ ಹೋಟೆಲ್ ಒಂದರಲ್ಲಿ ತಂಗಿದ್ದ. ಕೆಲವು ವಾರಗಳ ನಂತರ, ಆತ ನಿಯಮಿತವಾಗಿ ಬಳಸುವ ಅಶ್ಲೀಲ ಸೈಟ್‌ನಲ್ಲಿ ವಿಡಿಯೊವೊಂದನ್ನು ನೋಡುತ್ತಿದ್ದಾಗ, ಅದರಲ್ಲಿರುವ ಹೋಟೆಲ್ ಕೊಠಡಿ ತಾನು ತಂಗಿದ್ದ ಕೊಠಡಿಯೇ ಎಂದು ಗುರುತಿಸಿದ್ದಾನೆ. ವಿಡಿಯೊ ಮುಂದುವರಿದಂತೆ ತಾನು ಮತ್ತು ತನ್ನ ಗೆಳತಿ ಬ್ಯಾಗ್ ಇಡುತ್ತಿರುವುದು ಮತ್ತು ನಂತರದ ಖಾಸಗಿ ಕ್ಷಣಗಳು ಅದರಲ್ಲಿ ರೆಕಾರ್ಡ್ ಆಗಿರುವುದನ್ನು ಕಂಡು ಆತ ದಿಗ್ಭ್ರಮೆಗೊಂಡಿದ್ದಾನೆ.
ಹೋಟೆಲ್ ಕೊಠಡಿಯಲ್ಲಿ ಅಳವಡಿಸಲಾಗಿದ್ದ ರಹಸ್ಯ ಕ್ಯಾಮರಾ ಈ ಜೋಡಿಯ ಸುಮಾರು ಒಂದು ಗಂಟೆಯ ದೃಶ್ಯಗಳನ್ನು ಸೆರೆಹಿಡಿದಿತ್ತು. ಈ ವಿಡಿಯೊವನ್ನು ಇವರ ಅನುಮತಿಯಿಲ್ಲದೆ ಅಪ್‌ಲೋಡ್ ಮಾಡಲಾಗಿದ್ದು, ಸಾವಿರಾರು ಜನರು ಇದನ್ನು ವೀಕ್ಷಿಸಿದ್ದಾರೆ.
ವಿಚಿತ್ರವೆಂದರೆ, ಎರಿಕ್‌ಗೆ ಈ ಹಿಂದೆ ಇಂತಹ 'ಸ್ಪೈ-ಕ್ಯಾಮೆರಾ' (ರಹಸ್ಯವಾಗಿ ಚಿತ್ರೀಕರಿಸಿದ) ವಿಡಿಯೊಗಳನ್ನು ನೋಡುವುದು ಇಷ್ಟವಿತ್ತು. ಅಂತಹ ವಿಡಿಯೊಗಳು ನೈಜವಾಗಿರುತ್ತವೆ ಎಂಬುದು ಆತನ ಭಾವನೆಯಾಗಿತ್ತು. ಆದರೆ ತಾನೇ ಅದಕ್ಕೆ ಬಲಿಯಾದಾಗ ಅದರ ಭೀಕರತೆ ಅರಿವಿಗೆ ಬಂದಿದೆ.
ಚೀನಾದಲ್ಲಿ ಅಶ್ಲೀಲ ಚಿತ್ರ ರೆಕಾರ್ಡ್ ಮಾಡುವುದು ಮತ್ತು ಶೇರ್ ಮಾಡುವುದು ಕಾನೂನುಬಾಹಿರವಾಗಿದ್ದರೂ, ಕಳೆದ ಹತ್ತು ವರ್ಷಗಳಿಂದ ಈ 'ಸ್ಪೈ-ಕ್ಯಾಮ್ ಪೋರ್ನ್' ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಹೋಟೆಲ್ ಮಾಲೀಕರು ಕೊಠಡಿಗಳನ್ನು ನಿಯಮಿತವಾಗಿ ತಪಾಸಣೆ ಮಾಡಬೇಕೆಂದು ಸರ್ಕಾರ ಹೊಸ ನಿಯಮಗಳನ್ನು ತಂದಿದ್ದರೂ, ಸಮಸ್ಯೆ ಮುಂದುವರಿದಿದೆ.