ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

VIral News: ಹನಿಮೂನ್‌ಗೆ ಹೊರಡುತ್ತಿದ್ದ ಸೊಸೆಯ ಸೂಟ್ ಕೇಸ್‌ನಲ್ಲಿ ಬಿಕಿನಿ ನೋಡಿ ಈ ಅತ್ತೆ ಮಾಡಿದ್ದೇನು ಗೊತ್ತಾ?

ಕೆನಡಾದಲ್ಲಿ ಮುಸ್ಲಿಂ ಸಮುದಾಯದ ನವ ವಧುವೊಬ್ಬಳು ಹನಿಮೂನ್‌ ವೇಳೆ ಧರಿಸಲೆಂದು ಬಿಕಿನಿ ಪ್ಯಾಕ್ ಮಾಡಿದ್ದಳು. ಇದನ್ನು ನೋಡಿದ ಅತ್ತೆ ಇದು ನಮ್ಮ ಸಂಪ್ರದಾಯಕ್ಕೆ ವಿರೋಧವಾಗಿರುವುದು ಎಂದು ಹೇಳಿದ್ದು, ಕುಟುಂಬದಲ್ಲಿ ಭಿನ್ನಾಭಿಪ್ರಾಯಕ್ಕೆ ಕಾರಣವಾಯಿತು. ಈ ಕುರಿತು ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ.

ಸೊಸೆ ಬ್ಯಾಗ್‌ನಲ್ಲಿ ಬಿಕಿನಿ- ಈ ಅತ್ತೆ ಮಾಡಿದ್ದೇನು ಗೊತ್ತಾ?

-

ಒಟ್ಟಾವಾ: ಹಲವಾರು ಕನಸುಗಳೊಂದಿಗೆ ಹನಿಮೂನ್ (Honeymoon) ಗೆ ಹೊರಡುತ್ತಿದ್ದ ದಂಪತಿಯ ಬದುಕಿನಲ್ಲಿ ಅತ್ತೆ ವಿಲನ್ ಆಗಿ ಎಂಟ್ರಿ ಕೊಟ್ಟ ಘಟನೆ ನಡೆದಿದೆ. ನವ ದಂಪತಿಯ ವೈವಾಹಿಕ ಜೀವನ ಮುರಿದು ಬೀಳುವ ಹಂತವನ್ನು ತಲುಪಿದ್ದು, ಹನಿಮೂನ್ ವೇಳೆ ಧರಿಸಲು ನವ ವಧು (Muslim Bride) ಬಿಕಿನಿ (Bikini) ಪ್ಯಾಕ್ ಮಾಡಿದ್ದೇ ಈ ಘಟನೆಗೆ ಕಾರಣ. ಈ ಘಟನೆ ಕುಟುಂಬದಲ್ಲಿ ಸಾಕಷ್ಟು ಉದ್ವಿಗ್ನತೆಯನ್ನು ಉಂಟು ಮಾಡಿತ್ತು ಎನ್ನಲಾಗಿದೆ. ಇದರ ಸ್ಟೋರಿ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral News) ಆಗಿದೆ.

ಮುಸ್ಲಿಂ ವಧುವೊಬ್ಬಳು ಹನಿಮೂನ್‌ ವೇಳೆ ಧರಿಸಲೆಂದು ಬಿಕಿನಿ ಪ್ಯಾಕ್ ಮಾಡಿದ್ದಳು. ಇದನ್ನು ನೋಡಿದ ಅತ್ತೆ ಇದು ನಮ್ಮ ಸಂಪ್ರದಾಯಕ್ಕೆ ವಿರೋಧವಾಗಿರುವುದು ಎಂದು ಹೇಳಿದ್ದು, ಜಗಳಕ್ಕೆ ಕಾರಣವಾಯಿತು. ನೂತನ ದಂಪತಿ ಮಧುಚಂದ್ರಕ್ಕೆ ಹೊರಡುವ ಸಿದ್ಧತೆಯಲ್ಲಿದ್ದರು. ಇದಕ್ಕೆ ಸ್ವಲ್ಪ ಮೊದಲು ಅತ್ತೆ, ವರನ ತಾಯಿ ನವವಿವಾಹಿತರ ಸೂಟ್‌ಕೇಸ್ ಅನ್ನು ಚೆಕ್ ಮಾಡಿದ್ದಾರೆ. ಅದರಲ್ಲಿ ಅವರು ತಮ್ಮ ಸಂಪ್ರದಾಯಕ್ಕೆ ವಿರುದ್ಧವಾಗಿರುವ ಉಡುಗೆಗಳನ್ನು ನೋಡಿ ಆಕ್ರೋಶಗೊಂಡಿದ್ದಾರೆ. ಇದು ಮನೆಯಲ್ಲಿ ಉದ್ವಿಗ್ನತೆಯನ್ನು ಉಂಟು ಮಾಡಿದೆ.

ಈ ಘಟನೆ ಕೆನಡಾದಲ್ಲಿ ವಾಸಿಸುವ ಒಂದು ಮುಸ್ಲಿಂ ಕುಟುಂಬದಲ್ಲಿ ನಡೆದಿದೆ. ನವವಿವಾಹಿತ ದಂಪತಿ ಅವರ ಹನಿಮೂನ್ ಪ್ರವಾಸಕ್ಕೆ ಸ್ವಲ್ಪ ಮೊದಲು ಮನೆಯಲ್ಲಿ ಗಲಾಟೆ ನಡೆದಿದೆ. ಬಟ್ಟೆ ಪ್ಯಾಕಿಂಗ್ ವಿಚಾರದಲ್ಲಿ ತೀವ್ರ ಚರ್ಚೆ ಉಂಟಾಗಿದೆ. ಹನಿಮೂನ್‌ ವೇಳೆ ಬಳಸಲು ನವ ವಧು ಪ್ಯಾಕ್ ಮಾಡಿದ ಬಿಕಿನಿಯಿಂದಾಗಿ ಕುಟುಂಬ ಸದಸ್ಯರಲ್ಲಿ ಭಿನ್ನಾಭಿಪ್ರಾಯ ಉಂಟಾಗಿದೆ. ಇಸ್ಲಾಂನಲ್ಲಿ, ಧರಿಸುವ ಬಟ್ಟೆಗೆ ಸಂಬಂಧಿಸಿ ಕಟ್ಟುನಿಟ್ಟಾದ ಮಾರ್ಗಸೂಚಿಗಳಿವೆ. ಮಹಿಳೆ ತನ್ನ ದೇಹವನ್ನು ಸಂಪೂರ್ಣವಾಗಿ ಮುಚ್ಚಿಡಬೇಕು ಮತ್ತು ಸಾರ್ವಜನಿಕವಾಗಿ ಬಹಿರಂಗಪಡಿಸುವ ಬಟ್ಟೆಗಳನ್ನು ಧರಿಸುವುದನ್ನು ಅನುಚಿತವೆಂದು ಪರಿಗಣಿಸಲಾಗುತ್ತದೆ.

ನವವಿವಾಹಿತ ವಧು ಬಿಕಿನಿ ಪ್ಯಾಕ್ ಮಾಡಿದ್ದು ಈ ವೇಳೆ ಅತ್ತೆ ಇದನ್ನು ನೋಡಿದ್ದಾರೆ. ಬಳಿಕ ಅವರು ಆಶ್ಚರ್ಯಚಕಿತರಾಗಿ ಇದನ್ನು ತೆಗೆದುಕೊಂಡು ಹೋಗಲು ಯೋಜಿಸುತ್ತಿದ್ದೀಯಾ ಎಂದು ಪ್ರಶ್ನಿಸಿದ್ದರಿಂದ ಮುಜುಗರಕ್ಕೊಳಗಾದ ವಧು ಇದನ್ನು ವಿರೋಧಿಸಿದಳು. ತನ್ನ ವೈಯಕ್ತಿಕ ವಸ್ತುಗಳನ್ನು ನೋಡುವುದು ಸೂಕ್ತವಲ್ಲ ಎಂದು ಹೇಳಿದಳು. ಆಗ ಅತ್ತೆ ಇಂತಹ ಉಡುಗೆ ಧಾರ್ಮಿಕವಾಗಿ ಅಥವಾ ನೈತಿಕವಾಗಿ ಸ್ವೀಕಾರಾರ್ಹವಲ್ಲ ಎಂದು ಹೇಳಿದರು. ಹನಿಮೂನ್‌ಗೆ ಹೋಗುವುದು ಇಂತಹ ಅಸಭ್ಯವಾಗಿ ಉಡುಗೆಯನ್ನು ಪ್ರದರ್ಶಿಸುವುದಕ್ಕಲ್ಲ ಎಂದಿದ್ದಾರೆ.

ಇದಕ್ಕೆ ವಧು, ಇದು ನಮ್ಮ ಖಾಸಗಿ ಜೀವನ. ನನ್ನ ಅತ್ತೆಗೆ ಇದರಲ್ಲಿ ಹಸ್ತಕ್ಷೇಪ ಮಾಡುವ ಹಕ್ಕಿಲ್ಲ ಎಂದು ಹೇಳಿದ್ದು, ಇದರಿಂದ ಆಕೆಯ ಪತಿ ಮಧ್ಯಸ್ಥಿಕೆ ವಹಿಸಲು ಮುಂದಾಗಬೇಕಾಯಿತು. ಆದರೆ ಈಗಾಗಲೇ ಈ ವಿವಾದ ಗಂಭೀರ ಹಂತಕ್ಕೆ ತಲುಪಿತ್ತು.

ಇದನ್ನೂ ಓದಿ: Muniratna: ಶಾಸಕ ಮುನಿರತ್ನಗೆ ಬಿಗ್‌ ರಿಲೀಫ್‌; ಅತ್ಯಾಚಾರ ಆರೋಪದಲ್ಲಿ ಕ್ಲೀನ್‌ಚಿಟ್‌

ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿ ವೈರಲ್ ಆಗಿದೆ. ಇದು ಕುಟುಂಬದಲ್ಲಿ ಗೌಪ್ಯತೆ ಮತ್ತು ವಯಕ್ತಿಕ ಗಡಿಗಳ ವಿಚಾರದಲ್ಲಿ ಚರ್ಚೆಯನ್ನು ಹುಟ್ಟುಹಾಕಿತು. ಈ ಕುರಿತು ನೊಂದಿರುವ ವಧು, ತನ್ನ ಅತ್ತೆ- ಮಾವನವರೊಂದಿಗೆ ತನ್ನ ವಯಕ್ತಿಕ ಗಡಿಗಳನ್ನು ಹೇಗೆ ಹಂಚಿಕೊಳ್ಳುವುದು ಎಂದು ಯೋಚಿಸುತ್ತಿರುವುದಾಗಿ ಹೇಳಿಕೊಂಡಿದ್ದಾಳೆ.