ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Keshava Prasad B Column: ಜಿಎಸ್ʼಟಿ ಇಳಿಕೆಯಿಂದ ರಾಜ್ಯಗಳಿಗೆ ನಷ್ಟವೇ- ಲಾಭವೇ ?!

ನಮ್ಮೆಲ್ಲರ ಗುರಿ- ಜನಸಾಮಾನ್ಯರಿಗೆ ದಿನಬಳಕೆಯ ವಸ್ತುಗಳು‌ ಬೆಲೆ ಇಳಿಯಬೇಕು ಎಂಬುದು. ಕಾರ್ಮಿಕ ಕೇಂದ್ರಿತ ಉದ್ದಿಮೆಗಳಿಗೆ ಇಲ್ಲಿ ಪ್ರೋತ್ಸಾಹ ನೀಡಲಾಗಿದೆ. ರೈತರಿಗೂ ಅನುಕೂಲ ಸಿಗಲಿದೆ. ಆರೋಗ್ಯ ವಲಯಕ್ಕೂ ಲಾಭವಾಗಲಿದೆ. ಪ್ರತಿಯೊಂದು ರಾಜ್ಯದ ಹಣಕಾಸು ಸಚಿವರೂ ಜಿಎಸ್‌ಟಿ ಕೌನ್ಸಿಲ್ ಸಭೆ ಯಲ್ಲಿ ಭಾಗವಹಿಸಿದ್ದಾರೆ. ದಿನವಿಡೀ ಚರ್ಚೆ ನಡೆದಿದೆ.

ಜಿಎಸ್ʼಟಿ ಇಳಿಕೆಯಿಂದ ರಾಜ್ಯಗಳಿಗೆ ನಷ್ಟವೇ-ಲಾಭವೇ ?!

-

ಮನಿ ಮೈಂಡೆಡ್

ಖಂಡಿತವಾಗಿಯೂ ಜಿಎಸ್‌ಟಿ ದರ ಇಳಿಕೆಯಿಂದ ಆರಂಭಿಕ ಹಂತದಲ್ಲಿ ತೆರಿಗೆ ಸಂಗ್ರಹ ಇಳಿಕೆಯಾಗುತ್ತದೆ. ಕೇವಲ ರಾಜ್ಯಕ್ಕಲ್ಲ, ಕೇಂದ್ರ ಸರಕಾರದ ಮೇಲೂ ಇದು ಪರಿಣಾಮ ಬೀರಲಿದೆ. ಆದರೆ ಇಂದು ಸಂಗತಿಯನ್ನು ಗಮನಿಸಬೇಕು. ರಾಜ್ಯ ಸರಕಾರಕ್ಕೆ ಎಷ್ಟರ ಮಟ್ಟಿಗೆ ನಷ್ಟವಾಗಲಿದೆ? ಇದು ಕಾಯಂ ನಷ್ಟವೇ? ದೀರ್ಘಾವಧಿಗೆ ಲಾಭವಾಗುವುದಿಲ್ಲವೇ? ಈ ಪ್ರಶ್ನೆಗೆ ಉತ್ತರ ಸಕಾರಾತ್ಮಕವಾಗಿದೆ.

ಜಿಎಸ್‌ಟಿ 2017ರಲ್ಲಿ ಜಾರಿಯಾದಾಗ, ಶೇಕಡಾ 5, 12, 18 ಮತ್ತು 28ರ ನಾಲ್ಕು ಬಗೆಯ ತೆರಿಗೆಯ ಶ್ರೇಣಿಗಳಿದ್ದವು. ಆಗ, “ಎಲ್ಲಿದೆ ಏಕರೂಪದ ತೆರಿಗೆ?" ಎಂದು ಪ್ರತಿಪಕ್ಷಗಳು ಟೀಕಿಸಿದ್ದವು. ಈಗ 5 ಮತ್ತು 18ರ ಸ್ಲ್ಯಾಬ್‌ಗೆ ಇಳಿಕೆಯಾಗಿದೆ. ಪಾನ್ ಮಸಾಲಾ, ಗುಟ್ಕಾ, ಬೀಡಿ, ಸಿಗರೇಟ್, ಲಕ್ಸುರಿ ಕಾರು, ಕೋಲ್ಡ್ ಡ್ರಿಂಕ್ಸ್‌ ಗಳಿಗೆ 40 ಪರ್ಸೆಂಟ್ ವಿಶೇಷ ಜಿಎಸ್‌ಟಿ ಅನ್ವಯವಾಗಲಿದೆ.

ಜನಸಾಮಾನ್ಯರು, ಉದ್ದಿಮೆದಾರರು ಈ ಮಹತ್ವದ ಸುಧಾರಣೆಯನ್ನು ಸ್ವಾಗತಿಸಿದ್ದಾರೆ. ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಎಲ್ಲ ರಾಜ್ಯಗಳು ಅನುಮೋದಿಸಿವೆ. ಆದರೆ ಪ್ರತಿಪಕ್ಷಗಳು, “ಇದರಿಂದಾಗಿ ರಾಜ್ಯಗಳಿಗೆ ನಷ್ಟವಾಗಲಿದೆ, ಅಭಿವೃದ್ಧಿ ಯೋಜನೆಗಳಿಗೆ ಹಣದ ಕೊರತೆಯಾಗಲಿದೆ" ಎಂದೆಲ್ಲ ಆರೋಪಿಸಿವೆ!

ಹಾಗಾದರೆ ಯಾವುದು ಸತ್ಯ? ಈಗ ಬಹುತೇಕ ವಸ್ತುಗಳು ಮತ್ತು ಸೇವೆಗಳು ಶೇ.5-18ರ ಸ್ಲ್ಯಾಬ್‌ನಲ್ಲಿ ಇರಲಿವೆ. ಈ ವರ್ಷದ ನವರಾತ್ರಿಯ ಮೊದಲ ದಿನದಿಂದ ದಿನಬಳಕೆಯ 175 ವಸ್ತುಗಳ ತೆರಿಗೆ ಇಳಿಯಲಿದೆ. ತೆರಿಗೆ ಹೊರೆ ಇಳಿದರೆ ಯಾರು ಬೇಡವೆನ್ನುತ್ತಾರೆ? ಎನ್ನಬಹುದು. ಆದರೆ ವಿಪಕ್ಷಗಳು ಪ್ರತಿ ವರ್ಷ ರಾಜ್ಯಗಳಿಗೆ ಸಾವಿರಾರು ಕೋಟಿ ರುಪಾಯಿ ನಷ್ಟವಾಗಲಿದೆ ಎಂದು ಆರೋಪಿಸಿವೆ.

ಇದನ್ನೂ ಓದಿ: Keshava Prasad B Column: ಟ್ರಂಪ್‌, ಭಾರತ ಈಗ ಬಡರಾಷ್ಟ್ರವಲ್ಲ, ಯಾರಿಗೂ ಮಂಡಿಯೂರಲ್ಲ !

ಇದಕ್ಕೆ ಕೇಂದ್ರ ಸರಕಾರ ಏನೆನ್ನುತ್ತಿದೆ? “ಈ ಸುಧಾರಣೆ ಕೇವಲ ಜಿಎಸ್‌ಟಿ ದರಗಳನ್ನು ಸರಳ ಗೊಳಿಸುವುದು ಮಾತ್ರವಲ್ಲ, ಇದು ರಚನಾತ್ಮಕ ಸುಧಾರಣೆಯ ಕ್ರಮ. ತೆರಿಗೆಯ ವರ್ಗೀಕರಣ, ‘ಇನ್‌ಪುಟ್ ಟ್ಯಾಕ್ಸ್’ ಪ್ರಕ್ರಿಯೆಗಳು ಸುಗಮವಾಗಲಿವೆ. ಸೆಸ್ ಕುರಿತ ಗೊಂದಲಗಳೂ ನಿವಾರಣೆ ಯಾಗಿವೆ.

ನಮ್ಮೆಲ್ಲರ ಗುರಿ- ಜನಸಾಮಾನ್ಯರಿಗೆ ದಿನಬಳಕೆಯ ವಸ್ತುಗಳು‌ ಬೆಲೆ ಇಳಿಯಬೇಕು ಎಂಬುದು. ಕಾರ್ಮಿಕ ಕೇಂದ್ರಿತ ಉದ್ದಿಮೆಗಳಿಗೆ ಇಲ್ಲಿ ಪ್ರೋತ್ಸಾಹ ನೀಡಲಾಗಿದೆ. ರೈತರಿಗೂ ಅನುಕೂಲ ಸಿಗಲಿದೆ. ಆರೋಗ್ಯ ವಲಯಕ್ಕೂ ಲಾಭವಾಗಲಿದೆ. ಪ್ರತಿಯೊಂದು ರಾಜ್ಯದ ಹಣಕಾಸು ಸಚಿವರೂ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಭಾಗವಹಿಸಿzರೆ. ದಿನವಿಡೀ ಚರ್ಚೆ ನಡೆದಿದೆ.

ದಿನದ ಮುಕ್ತಾಯದ ವೇಳೆಗೆ ನಾವೆಲ್ಲರೂ ಜನಸಾಮಾನ್ಯರ ಹಿತದ ಪರವಾಗಿದ್ದೇವೆ ಎಂಬುದನ್ನು ಎಲ್ಲರೂ ಸಮ್ಮತಿಸಿದ್ದಾರೆ. ಪ್ರತಿಯೊಂದು ರಾಜ್ಯದ ವಿತ್ತ ಸಚಿವರೂ ಪೂರ್ಣ ಮನಸ್ಸಿನಿಂದ ಬೆಂಬಲಿಸಿದ್ದಾರೆ. ಅದಕ್ಕಾಗಿ ಜಿಎಸ್‌ಟಿ ಕೌನ್ಸಿಲ್‌ಗೆ ಧನ್ಯವಾದಗಳು" ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾ ರಾಮನ್ ಅವರು 56ನೇ ಜಿಎಸ್‌ಟಿ ಮಂಡಳಿ ಸಭೆಯ ಬಳಿಕ ಮಹತ್ವದ ಘೋಷಣೆಗಳ ಬಗ್ಗೆ ವಿವರಿಸುವುದಕ್ಕೆ ಮುನ್ನ ಹೇಳಿದ್ದಾರೆ.

Keshav P

ಅಂದರೆ ಎಲ್ಲ ರಾಜ್ಯಗಳೂ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಜಿಎಸ್‌ಟಿ ದರಗಳನ್ನು ಇಳಿಸಿರುವುದಕ್ಕೆ ಒಪ್ಪಿರುವುದು ಸ್ಪಷ್ಟ. ಪ್ರಧಾನಿ ನರೇಂದ್ರ ಮೋದಿಯವರು ಕೆಂಪುಕೋಟೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ, ಜಿಎಸ್‌ಟಿಯಲ್ಲಿ ದೀಪಾವಳಿ ವೇಳೆಗೆ ಮಹತ್ವದ ಸುಧಾರಣೆ ಜಾರಿ ಯಾಗಲಿದೆ ಎಂದು ಘೋಷಿಸಿದ್ದರು. ಈಗ ನವರಾತ್ರಿಯ ವೇಳೆಯಲ್ಲಿಯೇ ಗುಡ್ ನ್ಯೂಸ್ ಜಾರಿ ಯಾಗುತ್ತಿದೆ.

ಖಂಡಿತವಾಗಿಯೂ ಜಿಎಸ್‌ಟಿ ದರ ಇಳಿಕೆಯಿಂದ ಆರಂಭಿಕ ಹಂತದಲ್ಲಿ ತೆರಿಗೆ ಸಂಗ್ರಹ ಇಳಿಕೆ ಯಾಗುತ್ತದೆ. ಕೇವಲ ರಾಜ್ಯಕ್ಕಲ್ಲ, ಕೇಂದ್ರ ಸರಕಾರದ ಮೇಲೂ ಇದು ಪರಿಣಾಮ ಬೀರಲಿದೆ. ಆದರೆ ಇಂದು ಸಂಗತಿಯನ್ನು ಗಮನಿಸಬೇಕು. ರಾಜ್ಯ ಸರಕಾರಕ್ಕೆ ಎಷ್ಟರ ಮಟ್ಟಿಗೆ ನಷ್ಟವಾಗಲಿದೆ? ಇದು ಕಾಯಂ ನಷ್ಟವೇ? ದೀರ್ಘಾವಽಗೆ ಲಾಭವಾಗುವುದಿಲ್ಲವೇ? ಈ ಪ್ರಶ್ನೆಗೆ ಉತ್ತರ ಸಕಾರಾತ್ಮಕವಾಗಿದೆ.

ತಜ್ಞರ ಪ್ರಕಾರ ಜಿಎಸ್‌ಟಿ ದರ ಇಳಿಕೆಯಿಂದ ಉಂಟಾಗುವ ನಷ್ಟ ತಾತ್ಕಾಲಿಕ ಮತ್ತು ಅದನ್ನೂ ನಿರ್ವಹಿಸುವುದು ಭಾರತಕ್ಕೆ ಕಷ್ಟವೇನಲ್ಲ. ಎರಡನೆಯದ್ದು, ಇದರಿಂದ ಜನಸಾಮಾನ್ಯರಿಗೆ, ಮಧ್ಯಮ ವರ್ಗದ ಜನತೆಗೆ ಹಾಗೂ ಉದ್ದಿಮೆ ವಲಯಕ್ಕೆ ಹಲವಾರು ಆಯಾಮಗಳಲ್ಲಿ ಪ್ರಯೋಜನ ವಾಗಲಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಇತ್ತೀಚಿನ ಸಂಶೋ‌ಧನಾ ವರದಿಯು ಜಿಎಸ್‌ಟಿ 2.0 ಬಗ್ಗೆ ಕುತೂಹಲಕರ ವಿಷಯಗಳನ್ನು ಮಂಡಿಸಿದೆ. “ದೀರ್ಘಾವಧಿಗೆ ತೆರಿಗೆ ಸುಧಾರಣೆ ಮತ್ತು ಖರ್ಚು ವೆಚ್ಚಗಳ ನಡುವೆ ’ಕೊಡು-ಕೊಳ್ಳುವಿಕೆ’ಯ ಸಂಬಂಧ ಇರುವುದಿಲ್ಲ. ಜಿಎಸ್‌ಟಿ 2.0 ಪರಿಣಾಮ ತೆರಿಗೆ ದರಗಳು ಇಳಿಯುತ್ತವೆ. ಜನರು ತಮ್ಮ ಬಯಕೆಗಳಿಗೆ ತಕ್ಕಂತೆ ಖರ್ಚು-ವೆಚ್ಚಗಳನ್ನು ಮಾಡು ತ್ತಾರೆ. ಆಗ ಉತ್ಪಾದನೆಯೂ ವೃದ್ಧಿಸುತ್ತದೆ.

ಸರಕಾರದ ಬೊಕ್ಕಸಕ್ಕೆ ತೆರಿಗೆ ಸಂಗ್ರಹವೂ ಹೆಚ್ಚುತ್ತದೆ. ಜಿಎಸ್‌ಟಿ ಸ್ಲ್ಯಾಬ್ ಕಡಿತದಿಂದ ಉಂಟಾಗುವ ನಷ್ಟವನ್ನು ಭರಿಸಿಕೊಳ್ಳಬಹುದು. 2025-26ರ ವಿತ್ತೀಯ ಕೊರತೆಯ ಟಾರ್ಗೆಟ್ ಕೂಡ ಮುರಿಯುವ ಸಾಧ್ಯತೆ ಇಲ್ಲ" ಎಂದು ಎಸ್‌ಬಿಐ ವರದಿ ತಿಳಿಸಿದೆ.

ಎಸ್‌ಬಿಐ ಎರಡು ವಿಧದಲ್ಲಿ ಕಂದಾಯ ನಷ್ಟವನ್ನು ಗ್ರಹಿಸಿದೆ. ಮೊದಲ ವಿಧದಲ್ಲಿ ಒಟ್ಟಾರೆಯಾಗಿ ವಾರ್ಷಿಕ 1.1 ಲಕ್ಷ ಕೋಟಿ ರುಪಾಯಿಗಳ ನಷ್ಟವನ್ನು ಅಂದಾಜಿಸಿದ್ದರೆ, ಎರಡನೇ ವಿಧದಲ್ಲಿ 60000 ಕೋಟಿ ರುಪಾಯಿಗಳ ನಷ್ಟವನ್ನು ಅಂದಾಜಿಸಿದೆ. ಸರಾಸರಿ 85000 ಕೋಟಿ ರುಪಾಯಿಗಳ ನಷ್ಟ ವನ್ನು ಗ್ರಹಿಸಿದೆ. 2025-26ಕ್ಕೆ ಇದು 45000 ಕೋಟಿ ರುಪಾಯಿಗಳ ನಷ್ಟವನ್ನು ಊಹಿಸಿದೆ. ‘ಸಿನ್ ಗೂಡ್ಸ್’ಗಳ ಮೇಲಿನ (ಅನಾರೋಗ್ಯಕರ ಉತ್ಪನ್ನ) ತೆರಿಗೆ ಶೇಕಡಾ 28ರಿಂದ 40ಕ್ಕೆ ಏರಿಕೆಯಾಗುವು ದರಿಂದ ಒಟ್ಟಾರೆ ನಷ್ಟದ ಪ್ರಮಾಣವನ್ನು ತಗ್ಗಬಹುದು ಎಂದು ಎಸ್‌ಬಿಐ ವರದಿ ತಿಳಿಸಿದೆ.

ನೀವು ಕೂಡ, 40 ಪರ್ಸೆಂಟ್ ಶ್ರೇಣಿಯಲ್ಲಿ ಬರುವ ಉತ್ಪನ್ನಗಳನ್ನೊಮ್ಮೆ ಸೂಕ್ಷ್ಮವಾಗಿ ಗಮನಿಸಿ- ತಂಬಾಕು, ಪಾನ್ ಮಸಾಲ, ಗುಟ್ಕಾ, ಎರೇಟೆಡ್ ಡ್ರಿಂಕ್ಸ್ (ಗ್ಯಾಸ್ ಮಿಶ್ರಿತ ತಂಪು ಪಾನೀಯ), ಆನ್‌ ಲೈನ್ ಜೂಜು, ಗೇಮಿಂಗ್ ಸರ್ವೀಸ್,‌ ಐಷಾರಾಮಿ ಕಾರುಗಳು, ಸೂಪರ್‌ಬೈಕುಗಳಿಗೆ 40 ಪರ್ಸೆಂಟ್ ಟ್ಯಾಕ್ಸ್ ಇರಲಿದೆ. ‌

1200 ಸಿಸಿಗಿಂತ ಹೆಚ್ಚಿನ ಸಾಮರ್ಥ್ಯದ ಪೆಟ್ರೋಲ್ ಎಂಜಿನ್ ಕಾರುಗಳು, 1500 ಸಿಸಿಗಿಂತ ಹೆಚ್ಚಿನ ಸಾಮರ್ಥ್ಯದ ಡೀಸೆಲ್ ಎಂಜಿನ್ ಕಾರುಗಳು, 1200 ಸಿಸಿಗಿಂತ ಹೆಚ್ಚಿನ ಸಾಮರ್ಥ್ಯದ ಎಲ್‌ಪಿಜಿ, ಸಿಎನ್‌ಜಿ ಮತ್ತು ಹೈಬ್ರಿಡ್ ಮೋಟಾರ್ ವಾಹನಗಳಿಗೆ 40 ಪರ್ಸೆಂಟ್ ಜಿಎಸ್‌ಟಿ ಅನ್ವಯವಾಗಲಿದೆ. ಪೆಪ್ಸಿ-ಕೋಕ್, ಫೆಂಟಾ ಮೊದಲಾದ ಕಾರ್ಬೊ ನೇಟೆಡ್ ಕೂಲ್ ಡ್ರಿಂಕ್‌ಗಳನ್ನು ಜನ ವ್ಯಾಪಕವಾಗಿ ಬಳಸುತ್ತಾರೆ.

ಆದರೆ ಅವುಗಳು ಆರೋಗ್ಯದ ದೃಷ್ಟಿಯಿಂದ ಅಷ್ಟೊಂದು ಉತ್ತಮವೇನೂ ಅಲ್ಲ. ಆದ್ದರಿಂದ ಅವುಗಳಿಗೆ ಹೆಚ್ಚು ಟ್ಯಾಕ್ಸ್ ಹಾಕಿದರೂ ಯಾರೂ ಆಕ್ಷೇಪಿಸಲಾರರು. ಆದ್ದರಿಂದ ಇಂಥ‌ ಕೂಲ್ ಡ್ರಿಂಕ್ಸ್‌ಗಳ ಮೇಲೆ ಜಿಎಸ್ ಟಿಯನ್ನು 28 ಪರ್ಸೆಂಟ್‌ನಿಂದ 40ಕ್ಕೆ ಏರಿಸಲಾಗಿದೆ. ಇನ್ನು ಬೀಡಿ, ಸಿಗರೇಟ್, ಪಾನ್ ಮಸಾಲ ಇತ್ಯಾದಿಗಳಿಗೆ ಎಷ್ಟು ಟ್ಯಾಕ್ಸ್ ಜಡಿದರೂ, ಯಾರೂ ವಿರೋಧಿಸುವು ದಿಲ್ಲ.

ಲಕ್ಸುರಿ ಕಾರುಗಳಿಗೆ ತೆರಿಗೆ ಹೆಚ್ಚಿಸಿದರೂ, ಉಳ್ಳವರು ಕೊಡಲಿ ಎಂಬ ಅಭಿಪ್ರಾಯಕ್ಕೆ ತೂಕ ಬರುತ್ತದೆ. ಹೀಗಿದ್ದರೂ, ಈ 40 ಪರ್ಸೆಂಟ್ ಕೆಟಗರಿ ಯಲ್ಲಿ ಈ ಹಿಂದಿನ ಸೆಸ್‌ಗಳು ಇರುವುದಿಲ್ಲ. ಆದ್ದರಿಂದ ಒಟ್ಟಾರೆ ತೆರಿಗೆ ಹಳೆಯ ಮಟ್ಟದಲ್ಲಿಯೇ ಇರಲಿವೆ ಎಂದು ಸರಕಾರ ತಿಳಿಸಿದೆ.

‘ಇಕನಾಮಿಕ್ ಟೈಮ್ಸ್’ ವರದಿಯ ಪ್ರಕಾರ, ವಾರ್ಷಿಕ 48000 ಕೋಟಿ ರುಪಾಯಿ ನಷ್ಟವಾಗುವ ಸಾಧ್ಯತೆ ಇದೆ. ‘ಸಿಟಿ‌ ಗ್ರೂಪ್’ ಪ್ರಕಾರ, ತೆರಿಗೆ ಇಳಿಕೆಯ ಲಾಭ ಗ್ರಾಹಕರಿಗೆ ಸಂಪೂರ್ಣ ವರ್ಗಾವಣೆ ಯಾದರೆ, ಹಣದುಬ್ಬರದಲ್ಲೂ 1.1 ಪರ್ಸೆಂಟ್ ಇಳಿಯಲಿದೆ. ಇನ್ನು ಕೆಲವರು ಮತ್ತೊಂದು ವಾದ ಮಂಡಿಸುತ್ತಾರೆ. ಜಿಎಸ್‌ಟಿ ಸಂಗ್ರಹ ಕಡಿಮೆಯಾದರೆ, ಕೊರತೆಯನ್ನು ಭರಿಸಲು ಸರಕಾರ ನೋಟು ಗಳನ್ನು ಮುದ್ರಿಸಬಹುದು.

ಇದರಿಂದ ಸಾಲ ಮತ್ತು ಹಣದುಬ್ಬರ ಹೆಚ್ಚಲಿದೆ ಎನ್ನುವುದು. ಆದರೆ ಕೇವಲ ನೋಟುಗಳನ್ನು ಮುದ್ರಿಸುತ್ತಾ ಹೋದರೆ, ಅದರಿಂದ ಪ್ರಯೋಜನ ಇಲ್ಲ ಎಂಬುದು ಸರಕಾರಕ್ಕೂ ತಿಳಿಯದ ಸಂಗತಿಯೇನಲ್ಲ. ಆದ್ದರಿಂದಲೇ ಹೆಚ್ಚುವರಿ ಸೆಸ್‌ಗಳನ್ನು ವಿಧಿಸುವ ಆಯ್ಕೆಯನ್ನು ಇಟ್ಟು ಕೊಂಡಿದೆ.

ಹೀಗಾಗಿ ಜಿಎಸ್‌ಟಿ ನಷ್ಟ ಪರಿಹಾರಕ್ಕೆ ನೋಟುಗಳನ್ನು ಮುದ್ರಿಸುವ ಕೆಲಸಕ್ಕೆ ಸರಕಾರ ಕೈ ಹಾಕದು. ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಜಿಎಸ್‌ಟಿ ಸಂಗ್ರಹ ವಾರ್ಷಿಕ ಸರಾಸರಿ 9.4ರಿಂದ 10 ಪರ್ಸೆಂಟ್ ಲೆಕ್ಕದಲ್ಲಿ ವೃದ್ಧಿಸುತ್ತಿದೆ. ಆದ್ದರಿಂದ ನಷ್ಟವನ್ನು ಭರಿಸಿಕೊಳ್ಳುವುದು ಕಷ್ಟವೇನಲ್ಲ. ಹಾಗಾದರೆ, ಜಿಎಸ್‌ಟಿ 2.0 ಪದ್ಧತಿಯಲ್ಲಿ ರಾಜ್ಯಗಳಿಗೆ ಲಾಭವಾಗಲಿದೆಯೇ? ಹೌದು ಎನ್ನುತ್ತಿದೆ ಎಸ್‌ಬಿಐ ಸಂಶೋಧನಾ ವರದಿ. ಯಾವುದೇ ವಿಧದಲ್ಲಿ ಸರಾಸರಿ 85000 ಕೋಟಿ ರು. ರೆವಿನ್ಯೂ ನಷ್ಟವಾದರೂ, ಆರ್ಥಿಕ ಚಟುವಟಿಕೆ ಅಥವಾ ಬಳಕೆಯಲ್ಲಿ 1 ಲಕ್ಷದ 98 ಸಾವಿರ ಕೋಟಿ ರುಪಾಯಿ ಯಷ್ಟು ಹೆಚ್ಚಳವಾಗಲಿದೆ.

ನಷ್ಟ ಪರಿಹಾರಾರ್ಥ ಸೆಸ್ಸಂ ಗ್ರಹಣೆಯನ್ನು ಹಂತಗಳಲ್ಲಿ ತೆರವುಗೊಳಿಸಿದರೂ, ರಾಜ್ಯಗಳಿಗೆ ಲಾಭ ಸಿಗಲಿದೆ. ಜಿಎಸ್‌ಟಿ ಕಲೆಕ್ಷನ್‌ನಲ್ಲಿ ಕೇಂದ್ರ-ರಾಜ್ಯ ಸರಕಾರಗಳಿಗೆ ಸಮಾನ ಪಾಲು ಹೋಗುತ್ತದೆ. ಕೇಂದ್ರದ ಪಾಲಿನಲ್ಲಿ 41 ಪರ್ಸೆಂಟ್ ಮತ್ತೆ ರಾಜ್ಯಗಳಿಗೆ ಮರು ಹಂಚಿಕೆಯಾಗುತ್ತದೆ. ಹೀಗಾಗಿ ಪ್ರತಿ 100 ರುಪಾಯಿ ಸಂಗ್ರಹವಾದರೆ 70.5 ರುಪಾಯಿ ರಾಜ್ಯಗಳಿಗೆ ಸಂದಾಯವಾಗುತ್ತದೆ.

2025-26ರಲ್ಲಿ ರಾಜ್ಯಗಳು ಎಸ್‌ಜಿಎಸ್‌ಟಿ ರೂಪದಲ್ಲಿ 10 ಲಕ್ಷ ಕೋಟಿ ರುಪಾಯಿಗಳನ್ನು ಹಾಗೂ ಕೇಂದ್ರೀಯ ತೆರಿಗೆ ಮರು ಹಂಚಿಕೆಯಿಂದ 4.1 ಲಕ್ಷ ಕೋಟಿ ರುಪಾಯಿ ಸೇರಿ ಅಂದಾಜು ಒಟ್ಟು 14.1 ಲಕ್ಷ ಕೋಟಿ ರುಪಾಯಿಗಳನ್ನು ಗಳಿಸಲಿವೆ ಎಂದು ಎಸ್‌ಬಿಐ ವರದಿ ತಿಳಿಸಿದೆ.

ಇನ್ನು ಕೆಲವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ವಿರುದ್ಧ 50 ಪರ್ಸೆಂಟ್ ಟಾರಿಫ್‌ ಹಾಕಿದ ಬಳಿಕ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಭಾವಿಸಿದ್ದಾರೆ. ಆದರೆ ಟ್ರಂಪ್ ಟಾರಿಫ್‌ʼಗೂ ಇದಕ್ಕೂ‌ ಸಂಬಂಧ ಕಾಣಿಸುತ್ತಿಲ್ಲ. ಏಕೆಂದರೆ, ಜಿಎಸ್‌ಟಿ ತೆರಿಗೆಯ ಸ್ಲ್ಯಾಬ್‌ಗಳನ್ನು ಕಡಿಮೆ ಮಾಡಬೇಕು ಎಂಬುದು ಈ ಪದ್ಧತಿಯ ಮೂಲಭೂತ ಅಶಯಗಳಂದು.

ಎಲ್ಲ ನಿರೀಕ್ಷೆಗಳನ್ನೂ ಮೀರಿ, ನಷ್ಟವಾದರೆ ಅದಕ್ಕೂ ಪ್ಲಾನ್ ಮಾಡಿಕೊಳ್ಳಲು ಜಿಎಸ್‌ಟಿ ಕೌನ್ಸಿಲ್‌ ಗೆ ಅಧಿಕಾರ, ಸ್ವಾತಂತ್ರ್ಯ ಇದೆ. ಆದರೆ ಜನಸಾಮಾನ್ಯರಿಗೆ, ಉದ್ದಿಮೆಗೆ ಪೂರಕವಾದ ನಿರ್ಧಾರವಿದು. ಹೇರ್ ಆಯಿಲ್,‌ ಶ್ಯಾಂಪೂ, ಟೂತ್‌ಪೇಸ್ಟ್, ಬೆಣ್ಣೆ, ತುಪ್ಪ, ಡೇರಿ ಉತ್ಪನ್ನಗಳು, ಹೆಲ್ತ್ ಇನ್ಷೂರೆನ್ಸ್ ಮತ್ತು ಲೈಫ್ ಇನ್ಷೂರೆನ್ಸ್, ಸಣ್ಣ ಕಾರು,‌ ಟಿವಿ, ಎ.ಸಿ, ಸಿಮೆಂಟ್ ಸೇರಿದಂತೆ ದಿನನಿತ್ಯದ ಬಳಕೆಯ ವಸ್ತುಗಳ ಮೇಲಿನ ಜಿಎಸ್‌ಟಿ ಇಳಿಸಿರುವುದು ಜನಸ್ನೇಹಿ ನಡೆಯಲ್ಲದೆ ಇನ್ನೇನು? ಮಧ್ಯಮ ವರ್ಗದ ಜನರಿಗೆ ತಲೆಯ ಮೇಲೊಂದು ಸ್ವಂತ ಸೂರು, ಓಡಾಡಲೊಂದು ಸಣ್ಣ ಕಾರು ಕೊಳ್ಳುವ ಕನಸು ಇದ್ದೇ ಇರುತ್ತದೆ.

ಸಿಮೆಂಟ್ ಮೇಲಿನ ಜಿಎಸ್‌ಟಿ 28 ಪರ್ಸೆಂಟ್‌ನಿಂದ 18ಕ್ಕೆ ತಗ್ಗಿದೆ. ಪ್ರಯೋಜನವಾಗುವುದಿಲ್ಲವೇ? ಸಣ್ಣ ಕಾರುಗಳ ಜಿಎಸ್‌ಟಿಯೂ ಇಳಿಯುತ್ತಿದೆ. ಉಳಿತಾಯವಾಗುವುದಿಲ್ಲವೇ? ಹೀಗಿದ್ದರೂ, ಸರಕಾರ ಗಳು ಬದ್ಧತೆಯನ್ನು ಉಳಿಸಿಕೊಳ್ಳುವುದು ಮುಖ್ಯ. ಜತೆಗೆ ಜನರೂ ಟ್ಯಾಕ್ಸ್ ಕಡಿಮೆ ಆಯಿತು ಎಂದು ಅನವಶ್ಯಕ ಖರ್ಚುಗಳಲ್ಲಿ ವ್ಯಸ್ತರಾದರೆ, ವೈಯಕ್ತಿಕ ಹಣಕಾಸು ಅಸ್ತವ್ಯಸ್ತವಾಗುವುದೂ ವಾಸ್ತವ. ಆದ್ದರಿಂದ ಉಳಿತಾಯವಾಗುವ ಹಣವನ್ನು ಹೂಡಿಕೆ ಮಾಡಿ ಬೆಳೆಸಲು ಮರೆಯದಿರಿ.