ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12 Contestant: ಬಿಗ್ ಬಾಸ್ 12ಕ್ಕೆ 4 ಮಂದಿ ಕಂಟೆಸ್ಟೆಂಟ್ ಫೈನಲ್: ಇವರೇ ನೋಡಿ

ಮೊನ್ನೆಯಷ್ಟೆ ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬದ ಕಾರಣ ಬಿಗ್ ಬಾಸ್ ಕನ್ನಡ ಸೀಸನ್ 12ರ ಮೊದಲ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿತು. ಇದರ ಬೆನ್ನಲ್ಲೇ ಈಗ ಈ ಬಾರಿ ದೊಡ್ಮನೆಯೊಳಗೆ ಹೋಗುವ ಕಂಟೆಸ್ಟೆಂಟ್ಗಳ ಒಂದೊಂದೆ ಹೆಸರು ವೈರಲ್ ಆಗುತ್ತಿದೆ.

ಬಿಗ್ ಬಾಸ್ 12ಕ್ಕೆ 4 ಮಂದಿ ಕಂಟೆಸ್ಟೆಂಟ್ ಫೈನಲ್: ಇವರೇ ನೋಡಿ

BBK 12 Contestant -

Profile Vinay Bhat Sep 5, 2025 7:42 AM

ಕನ್ನಡದ ಜನಪ್ರಿಯ ಹಾಗೂ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 12 (Bigg Boss Kannada) ಸೆಟ್ಟೇರಲು ಸಿದ್ಧವಾಗಿದೆ. ನಿರೀಕ್ಷೆಯಂತೆ ಬಿಬಿಕೆ 12ಗೆ ಸೆಪ್ಟೆಂಬರ್ 28 ರಂದು ಅದ್ದೂರಿ ಚಾಲನೆ ಸಿಗಲಿದೆ. 29 ರಿಂದ ದೊಡ್ಮನೆಯ ರಿಯಲ್ ಕಹಾನಿ ಶುರುವಾಗಿದೆ. ಮೊನ್ನೆಯಷ್ಟೆ ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬದ ಕಾರಣ ಬಿಗ್ ಬಾಸ್ ಕನ್ನಡ ಸೀಸನ್ 12ರ ಮೊದಲ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿತು. ಇದರ ಬೆನ್ನಲ್ಲೇ ಈಗ ಈ ಬಾರಿ ದೊಡ್ಮನೆಯೊಳಗೆ ಹೋಗುವ ಕಂಟೆಸ್ಟೆಂಟ್​ಗಳ ಒಂದೊಂದೆ ಹೆಸರು ವೈರಲ್ ಆಗುತ್ತಿದೆ.

ಬಿಗ್ ಬಾಸ್ 12 ಪ್ರೋಮೋ ಹೊರಬಿದ್ದ ಬೆನ್ನಲ್ಲೇ ಈ ಬಾರಿ ಮನೆಯೊಳಗೆ ಹೋಗುವ ಸ್ಪರ್ಧಿಗಳು ಇವರೇ ಎಂಬ ಗುಸುಗುಸು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅದು ಯಾರೆಲ್ಲ ಅಂದ್ರೆ, ಈ ಸಾಲಿನಲ್ಲಿ ಕೇಳಿಬರುತ್ತಿರುವ ಮೊದಲ ಹೆಸರು ಸಾಗರ್ ಬಿಳಿಗೌಡ. ಸೀಸನ್ 11ರ ಸ್ಪರ್ಧಿ ಗೌತಮಿ ಜಾಧವ್ ಅವರ ಸತ್ಯ ಸೀರಿಯಲ್​ನಲ್ಲಿ ಸಾಗರ್ ಹೀರೋ ಆಗಿ ಕಾಣಿಸಿಕೊಂಡಿದ್ದರು. ಇನ್ನು ಎರಡನೇ ಹೆಸರು ಶ್ವೇತಾ ಪ್ರಸಾದ್. ಆರಂಭದಲ್ಲಿ ಧಾರಾವಾಹಿಗಳ ಮೂಲಕ ಶ್ವೇತಾ ಗಮನ ಸೆಳೆದವರು. ಆ ಬಳಿಕ ಅವರು ಆರ್​ಜೆ ಪ್ರದೀಪ್ ಜೊತೆ ವಿವಾಹ ಮಾಡಿಕೊಂಡಿದ್ದಾರೆ.

ಝೀ ಕನ್ನಡದಲ್ಲಿ ಪ್ರಸಾರ ಕಂಡ ಭರ್ಜರಿ ಬ್ಯಾಚುಲರ್ಸ್ ಸೀಸನ್ 2ನ ಸ್ಪರ್ಧಿ ಅನನ್ಯಾ ಅಮರ್ ಈ ಬಾರಿ ಬಿಗ್ ಬಾಸ್ ಮನೆಗೆ ಹೋಗಲಿದ್ದಾರೆ ಎನ್ನಲಾಗಿದೆ. ಇನ್ನು ಪತ್ರಿಕೋದ್ಯಮ ಕೋಟಾದಿಂದ ಈ ಬಾರಿ ಜಯಪ್ರಕಾಶ್ ಶೆಟ್ಟಿ ಬಿಗ್ ಬಾಸ್​ಗೆ ಬರಲಿದ್ದಾರೆ ಎಂಬ ಪೋಸ್ಟ್ ವೈರಲ್ ಆಗಿದೆ.

Kannada Serial TRP: ಕರ್ಣ ಧಾರಾವಾಹಿಗೆ ಬಿಗ್ ಶಾಕ್: 9ನೇ ವಾರಕ್ಕೆ ಕುಸಿದ ಟಿಆರ್ಪಿ

ಇವರ ಜೊತೆಗೆ ಕೆಜಿಎಫ್‌ ಸಿನಿಮಾದ ಮೂಲಕ ದೇಶಾದ್ಯಂತ ಸದ್ದು ಮಾಡಿದವರು ಅರ್ಚನಾ ಜೋಯಿಸ್‌ ಬಿಗ್ ಬಾಸ್​ಗೆ ಪ್ರವೇಶಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಕಳೆದ ಕೆಲವು ವರ್ಷಗಳಿಂದ ಡಾ ಬ್ರೋ ಅಲಿಯಾಸ್ ಗಗನ್ ಶ್ರೀನಿವಾಸ್ ಕೂಡ ಈ ಪಟ್ಟಿಯಲ್ಲಿ ಇದ್ದಾರೆ. ಸೀತಾ ರಾಮ ಸೀರಿಯಲ್‌ನಲ್ಲಿ ನಟಿಸಿದ್ದ ಗಗನ್ ದೊಡ್ಮನೆಯೊಳಗೆ ಕಾಲಿಡಬಹುದು ಎಂಬ ಗುಸು-ಗುಸು ಇದೆ. ಜೊತೆಗೆ ಇದೇ ಧಾರಾವಾಹಿಯಲ್ಲಿ ವಿಲನ್ ಪಾತ್ರ ಮಾಡಿದ ದಿವಂಗತ ನಟ ಲೋಕೇಶ್ - ಗಿರಿಜಾ ಲೋಕೇಶ್ ದಂಪತಿಯ ಪುತ್ರಿ ಪೂಜಾ ಲೋಕೇಶ್ ಕೂಡ ಮನೆಯೊಳಗೆ ಕಾಲಿಡಬಹುದು. ನೂರು ಜನ್ಮಕೂ, ಗೀತಾ ಸೀರಿಯಲ್‌ನಲ್ಲೂ ನಟಿಸಿದ್ದ ಧನುಷ್ ಗೌಡ ಈ ಬಾರಿ ಬಿಗ್ ಬಾಸ್ ಸ್ಪರ್ಧಿಯಾಗಬಹುದು ಎನ್ನಲಾಗಿದೆ.