ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Love Jihad: ಹಿಂದೂ ಹುಡುಗಿಯರೇ ಇವ್ರ ಟಾರ್ಗೆಟ್! ಮುಸ್ಲಿಂ ವಿದ್ಯಾರ್ಥಿಗಳ ಅಶ್ಲೀಲ ಚಾಟ್‌ ವೈರಲ್‌

Obscene chats expose: ಗರ್ಬಾ ಕಾರ್ಯಕ್ರಮದ ಸಂದರ್ಭದಲ್ಲಿ ಲವ್ ಜಿಹಾದ್ ಬೆಳಕಿಗೆ ಬಂದಿದೆ. 12ನೇ ತರಗತಿಯ ವಿದ್ಯಾರ್ಥಿಯೊಬ್ಬ ಹಿಂದೂ ಹುಡುಗಿಯರ ವಿಡಿಯೊಗಳನ್ನು ಚಿತ್ರೀಕರಿಸಿದ್ದಲ್ಲದೆ, ಅವರನ್ನು ವಂಚಿಸಲು ಪ್ರಯತ್ನಿಸಿರುವುದನ್ನು ಆಯೋಜಕರು ಪತ್ತೆಹಚ್ಚಿದ್ದಾರೆ. ಇದು ಭಾರಿ ಕೋಲಾಹಲಕ್ಕೆ ಕಾರಣವಾಗಿದೆ.

ಹಿಂದೂ ಹುಡುಗಿಯರೇ ಇವ್ರ ಟಾರ್ಗೆಟ್! ಅಶ್ಲೀಲ ಚಾಟ್‌ ವೈರಲ್‌

-

Priyanka P Priyanka P Sep 30, 2025 3:45 PM

ಮುಂಬೈ: ವಸಾಯಿ-ವಿರಾರ್ ಪ್ರದೇಶದ ಅತಿದೊಡ್ಡ ಗರ್ಬಾ (Garba) ಕಾರ್ಯಕ್ರಮ ನಡೆಯುವ ಸ್ಥಳವಾದ ವಿರಾರ್ ಪಶ್ಚಿಮದಲ್ಲಿರುವ ವಿವಾ ಕಾಲೇಜಿನಲ್ಲಿ (College) ಆತಂಕಕಾರಿ ಘಟನೆಯೊಂದು ನಡೆದಿದೆ. ಪ್ರವೇಶ ಪಾಸ್‍ಗಳನ್ನು ಖರೀದಿಸುವ ವಿದ್ಯಾರ್ಥಿಗಳು ಮತ್ತು ಹೊರಗಿನ ನಾಗರಿಕರನ್ನು ಆಕರ್ಷಿಸುವ ಈ ಕಾರ್ಯಕ್ರಮವು ಇದೀಗ ಪ್ರಮುಖ ವಿವಾದದ ಕೇಂದ್ರಬಿಂದುವಾಗಿದೆ. ಅಷ್ಟಕ್ಕೂ ಏನಿದು ಘಟನೆ, ಎಂಬ ಬಗ್ಗೆ ಇಲ್ಲಿದೆ ವಿವರ (Viral News).

ಕಳೆದ ಶುಕ್ರವಾರ ಗರ್ಬಾ ಕಾರ್ಯಕ್ರಮದ ಸಂದರ್ಭದಲ್ಲಿ ಲವ್ ಜಿಹಾದ್ ಬೆಳಕಿಗೆ ಬಂದಿದೆ. 12ನೇ ತರಗತಿಯ ವಿದ್ಯಾರ್ಥಿಯೊಬ್ಬ ಹುಡುಗಿಯರ ವಿಡಿಯೊಗಳನ್ನು ಚಿತ್ರೀಕರಿಸುವುದನ್ನು ಸಂಘಟಕರು ಗಮನಿಸಿದರು. ತಕ್ಷಣ ವಿಚಾರಿಸಿ ಆತನ ಮೊಬೈಲ್ ಪರಿಶೀಲಿಸಿದಾಗ, ಹಿಂದೂ ಹುಡುಗಿಯರ ಹಲವಾರು ವಿಡಿಯೊಗಳನ್ನು, ಅಶ್ಲೀಲ ಚಾಟ್‍ಗಳನ್ನು ಮತ್ತು ಹಿಂದೂ ಹುಡುಗಿಯರನ್ನು ಮೋಸಗೊಳಿಸುವುದು ಹಾಗೂ ಹಾಳು ಮಾಡುವ ಬಗ್ಗೆ ಹಂಚಿಕೊಳ್ಳಲಾದ ಸಂಭಾಷಣೆಗಳನ್ನು ಸಂಘಟಕರು ಪತ್ತೆಹಚ್ಚಿದರು.

ಕೂಡಲೇ ಈ ಬಗ್ಗೆ ಗರ್ಬಾ ಆಯೋಜಕರು ಮತ್ತು ವಿವಾ ಕಾಲೇಜು ಶಿಕ್ಷಣ ಸಂಸ್ಥೆಯು ಪೊಲೀಸರಿಗೆ ದೂರು ನೀಡಿದೆ. ಮೂರು ದಿನಗಳ ನಂತರ ಅಂದರೆ ಸೋಮವಾರದಂದು ವಿರಾರ್‌ನ ಬೊಲಿಂಜ್ ಪೊಲೀಸ್ ಠಾಣೆಯಲ್ಲಿ ಅಪ್ರಾಪ್ತ ವಿದ್ಯಾರ್ಥಿಯ ವಿರುದ್ಧ ಅಧಿಕೃತವಾಗಿ ಎಫ್‌ಐಆರ್ ದಾಖಲಿಸಲಾಗಿದೆ. ಅಪ್ರಾಪ್ತ ವಿದ್ಯಾರ್ಥಿಯು, ಮುಸ್ಲಿಂ ಹುಡುಗರಿಂದ ಹಿಂದೂ ಹುಡುಗಿಯರನ್ನು ವಂಚಿಸಲು ನಿರ್ದಿಷ್ಟ ಅಪ್ಲಿಕೇಶನ್ ಬಳಸುತ್ತಿದ್ದ ಎಂಬುದು ತನಿಖೆಯಿಂದ ತಿಳಿದು ಬಂದಿದೆ.

ಇದನ್ನೂ ಓದಿ: Viral Video: ಛೇ... ಇವೆರೆಂಥಾ ಮನಷ್ಯರು! ಗಾಯಗೊಂಡ ನವಿಲನ್ನು ರಕ್ಷಿಸುವ ಬದಲು ಗರಿಗಳನ್ನು ಕಿತ್ತ ಜನ

ವಿಡಿಯೊ ವೀಕ್ಷಿಸಿ:



ಮುಂಬೈ ಮತ್ತು ಅಹಮದಾಬಾದ್‍ನಂತಹ ನಗರಗಳಲ್ಲಿ ಇದೇ ರೀತಿಯ ಘಟನೆಗಳು ನಡೆದಿದೆ ಎಂದು ವರದಿಯಾಗಿದೆ. ಗರ್ಬಾ ಕಾರ್ಯಕ್ರಮಗಳಿಗೆ ಮುಸ್ಲಿಂ ಹುಡುಗರ ಪ್ರವೇಶವನ್ನು ನಿರ್ಬಂಧಿಸುವಂತೆ ರಾಜಕೀಯ ಪಕ್ಷಗಳು ನಿರಂತರವಾಗಿ ಒತ್ತಾಯಿಸುತ್ತಿರುವ ನಡುವೆಯೇ ಈ ಘಟನೆ ನಡೆದಿದೆ.

ಇತ್ತೀಚೆಗೆ ಐ ಲವ್ ಮೊಹಮ್ಮದ್ ಎಂದು ಬರೆದಿದ್ದ ಬ್ಯಾನರ್‌ಗಳನ್ನು ಎಲ್ಲೆಡೆ ಹಾಕಲಾಗಿತ್ತು. ಸೌಹಾರ್ದಯುತ ವಾತವಾರಣವು ಹಾಳು ಮಾಡುವ ಪ್ರಯತ್ನಗಳು ನಡೆಯುತ್ತಿವೆ ಎಂದು ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ. ಇದೀಗ ವಿವಾರ್ ಘಟನೆಯು ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.

ಇನ್ನು ತನಿಖೆಯಲ್ಲಿ, ಮುಸ್ಲಿಂ ಯುವಕರು ಹಿಂದೂ ಹುಡುಗಿಯರನ್ನು ಹಾಳು ಮಾಡುವ ಬಗ್ಗೆ ಚರ್ಚಿಸಲು ಬಳಸುವ ನಿರ್ದಿಷ್ಟ ಅಪ್ಲಿಕೇಶನ್‍ನ ಅಸ್ತಿತ್ವವನ್ನು ದೃಢಪಡಿಸುತ್ತದೆ. ಗರ್ಬಾ ಕಾರ್ಯಕ್ರಮದ ಸಮಯದಲ್ಲಿ ಅನೇಕ ಹಿಂದೂ ಹುಡುಗಿಯರನ್ನು ವಂಚಿಸಿದ್ದಾರೆ ಎಂಬುದು ತಿಳಿದುಬಂದಿದೆ. ಒಟ್ಟಾರೆ ಇಡೀ ಘಟನೆಯು ವಸೈ-ವಿರಾರ್‌ನಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಗಿದ್ದು, ತೀವ್ರ ಚರ್ಚೆಗೆ ಕಾರಣವಾಗಿದೆ.

ವಿಡಿಯೊ ವೀಕ್ಷಿಸಿ: