Gold Rate Increase: ಬೆಳ್ಳಿ ದರ ಕೆ.ಜಿ ಗೆ 1.5 ಲಕ್ಷ ರೂ. ; ಬಂಗಾರ ದಾಖಲೆಯ ಜಿಗಿತ, ಕಾರಣವೇನು?
ಬೆಳ್ಳಿ ಮತ್ತು ಬಂಗಾರದ ದರದಲ್ಲಿ ಸಾರ್ವಕಾಲಿಕ ಏರಿಕೆಯಾಗಿದೆ. ಮೊಟ್ಟ ಮೊದಲ ಬಾರಿಗೆ ಬೆಳ್ಳಿಯ ದರ ಪ್ರತಿ ಕೇಜಿಗೆ 1.5 ಲಕ್ಷ ರುಪಾಯಿಗೆ ಏರಿಕೆಯಾಗಿದೆ. ಬಂಗಾರದ ದರ ಕೂಡ ಪ್ರತಿ 10 ಗ್ರಾಮ್‌ಗೆ 1 ಲಕ್ಷದ 19 ಸಾವಿರದ 500 ರುಪಾಯಿಗೆ ಜಿಗಿದಿದೆ.

-

ಕೇಶವಪ್ರಸಾದ.ಬಿ
ಮುಂಬೈ: ಬೆಳ್ಳಿ ಮತ್ತು ಬಂಗಾರದ ದರದಲ್ಲಿ ಸಾರ್ವಕಾಲಿಕ ಏರಿಕೆಯಾಗಿದೆ. ಮೊಟ್ಟ ಮೊದಲ ಬಾರಿಗೆ ಬೆಳ್ಳಿಯ ದರ ಪ್ರತಿ ಕೇಜಿಗೆ 1.5 (Gold Rate Increase) ಲಕ್ಷ ರುಪಾಯಿಗೆ ಏರಿಕೆಯಾಗಿದೆ. ಬಂಗಾರದ ದರ ಕೂಡ ಪ್ರತಿ 10 ಗ್ರಾಮ್‌ಗೆ 1 ಲಕ್ಷದ 19 ಸಾವಿರದ 500 ರುಪಾಯಿಗೆ ಜಿಗಿದಿದೆ. (Silver Price) ಈ ಎರಡೂ ಲೋಹಗಳ ದರಗಳು ಮತ್ತಷ್ಟು ಏರಿಕೆಯಾದರೂ ಆಶ್ಚರ್ಯ ಇಲ್ಲ ಎಂಬಂತಾಗಿದೆ. ಸೆಪ್ಟೆಂಬರ್ 29ರಂದು, ಒಂದೇ ದಿನ ಬೆಳ್ಳಿಯ ದರದಲ್ಲಿ 7,000 ರುಪಾಯಿ ಏರಿದ್ದು ಪ್ರತಿ ಕಿಲೊ ಗ್ರಾಮ್‌ಗೆ ಒಂದೂವರೆ ಲಕ್ಷ ರುಪಾಯಿಗಳ ಗಡಿಯನ್ನು ದಾಟಿತು.
ಇದೇ ದಿನ ಬಂಗಾರದ ದರದದಲ್ಲೂ ದಿಢೀರ್ 1,500/- ಏರಿಕೆಯಾಗಿ, ಪ್ರತಿ 10 ಗ್ರಾಮ್ ಚಿನ್ನದ ದರವು 1 ಲಕ್ಷದ 19 ಸಾವಿರ 500 ರುಪಾಯಿಗೆ ಏರಿಕೆಯಾಯಿತು. ಕಳೆದ 14 ವರ್ಷಗಳಲ್ಲಿಯೇ ಸೆಪ್ಟೆಂಬರ್‌ನಲ್ಲಿ ಬಂಗಾರಕ್ಕೆ ಬೆಸ್ಟ್ ತಿಂಗಳೆನ್ನಿಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ ಚಿನ್ನದ ದರ 3,842 ಡಾಲರ್‌ಗೆ ಏರಿಕೆಯಾಗಿದೆ. ಸೆಪ್ಟೆಂಬರ್ ತಿಂಗಳೊಂದರಲ್ಲೇ 11% ಹೆಚ್ಚಳವಾಗಿದೆ. ತಜ್ಞರ ಪ್ರಕಾರ ಬೆಳ್ಳಿ ಹಾಗೂ ಬಂಗಾರ ಎರಡರ ದರಗಳೂ ಭವಿಷ್ಯದ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗಲಿದೆ.
ಹಾಗಾದರೆ ಇದಕ್ಕೆ ಕಾರಣವೇನು?
ಬೆಳ್ಳಿಯನ್ನು ಇಂಡಸ್ಟ್ರಿಗಳಲ್ಲಿಯೂ ಬಳಸುತ್ತಿರುವುದರಿಂದ ಬೇಡಿಕೆ ಹೆಚ್ಚುತ್ತಿದೆ. ಅಮೆರಿಕ ಸರಕಾರವು ಬೆಳ್ಳಿಯನ್ನು ಕ್ರಿಟಿಕಲ್ ಮಿನರಲ್ಸ್ ಲಿಸ್ಟ್‌ನಲ್ಲಿ ಸೇರಿಸಿದೆ. ಸೌದಿ ಅರೇಬಿಯಾ ಕೂಡ ಬೆಳ್ಳಿಯಲ್ಲಿ ಹೂಡಿಕೆ ಮಾಡುತ್ತಿದೆ. ಆದ್ದರಿಂದ ವ್ಯೂಹಾತ್ಮಕವಾಗಿ ರಜತ ಲೋಹಕ್ಕೆ ಡಿಮಾಂಡ್ ಸೃಷ್ಟಿಯಾಗಿದೆ.
ಅಮೆರಿಕವು 2025ರ ಆಗಸ್ಟ್ 26ರಂದು ಬೆಳ್ಳಿ ಸೇರಿದಂತೆ 6 ಮಿನರಲ್‌ಗಳನ್ನು ತನ್ನ ಕ್ರಿಟಿಕಲ್ ಮಿನರಲ್ಸ್ ಲಿಸ್ಟಿಗೆ ಸೇರಿಸಿದೆ. ಹೀಗಾಗಿ, ಬೆಳ್ಳಿ ಮತ್ತು ಹೂಡಿಕೆಯ ದೃಷ್ಟಿಯಿಂದಾಚೆಗೂ ಬೆಳ್ಳಿಯ ಪ್ರಾಮುಖ್ಯತೆ ಹೆಚ್ಚಿದಂತಾಗಿದೆ. ಹೈಟೆಕ್ ಅಪ್ಲಿಕೇಶನ್ಸ್‌ಗಳಲ್ಲಿ, ಎಲೆಕ್ಟ್ರಿಕ್ ವೆಹಿಕಲ್ಸ್, ಸೋಲಾರ್ ಫೊಟೊವೋಲ್ಟಾಕ್ಸ್‌ಗಳಲ್ಲಿ, ಎಲೆಕ್ಟ್ರಾನಿಕ್ಸ್, ಮೆಡಿಕಲ್ ಸಾಧನಗಳಲ್ಲಿ, ರಿನೆವಬಲ್ ಎನರ್ಜಿ ಮೂಲಸೌಕರ್ಯಗಳಲ್ಲಿ ಬೆಳ್ಳಿಯ ಬಳಕೆಯಾಗುತ್ತಿದೆ. ಅಮೆರಿಕವು ಮೆಕ್ಸಿಕೊ, ಕೆನಡಾದಿಂದ ಬೆಳ್ಳಿಯ ಆಮದು ಮಾಡುತ್ತದೆ. ಬೆಳ್ಳಿಯನ್ನು ಅತಿ ಹೆಚ್ಚು ಉತ್ಪಾದಿಸುವ ದೇಶಗಳ ಪಟ್ಟಿಯನ್ನು ನೋಡೋಣ. ಮೆಕ್ಸಿಕೊ ಜಗತ್ತಿನಲ್ಲೇ ಅತಿ ಹೆಚ್ಚು ಬೆಳ್ಳಿಯನ್ನು ಉತ್ಪಾದಿಸುತ್ತದೆ. ಚೀನ ನಂತರದ ಸ್ಥಾನದಲ್ಲಿದೆ. ಪೆರು, ಪೊಲೆಂಡ್, ಆಸ್ಟ್ರೇಲಿಯಾ, ಕೆನಡಾ, ಚಿಲಿ ದೇಶಗಳೂ ಸಿಲ್ವರನ್ನು ಉತ್ಪಾದಿಸುತ್ತವೆ.
ಬಂಗಾರವನ್ನು ಹೂಡಿಕೆಯ ಸುರಕ್ಷಿತ ಸಾಧನ ಎಂದು ಕರೆಯುತ್ತಾರೆ. ಜಾಗತಿಕ ಅನಿಶ್ಚಿತತೆಗಳ ಸಂದರ್ಭ ಹೂಡಿಕೆದಾರರು ಬಂಗಾರದಲ್ಲಿ ಹೂಡಿಕೆ ಹೆಚ್ಚಿಸುತ್ತಾರೆ. ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿ ದರ ಕಡಿತ ಮಾಡುವ ಸಾಧ್ಯತೆ ಇರೋದ್ರಿಂದ, ಬಂಗಾರ-ಬೆಳ್ಳಿ ದರ ಏರುಗತಿಯಲ್ಲಿದೆ.
ಹಾಗಾದರೆ ಬೆಳ್ಳಿ ಮತ್ತು ಬಂಗಾರದಲ್ಲಿ ಈಗ ಹೂಡಿಕೆ ಮಾಡಬಹುದೇ? ಖಂಡಿತವಾಗಿಯೂ ಮಾಡಬಹುದು. ಆದರೆ ನಿಮ್ಮ ಹೂಡಿಕೆಯ ಎಲ್ಲ ಹಣವನ್ನೂ ಅಲ್ಲ, ಒಂದಷ್ಟು ಪಾಲನ್ನು ಇನ್ವೆಸ್ಟ್ ಮಾಡಿ ಎನ್ನುತ್ತಾರೆ ತಜ್ಞರು. ಕೆಲವರು 15-20% ಹೂಡಿಕೆಯನ್ನು ಮಾಡಬಹುದು ಎಂದು ಸಲಹೆ ನೀಡುತ್ತಾರೆ. ಆದರೆ ನಿಮ್ಮ ಹೂಡಿಕೆಯ ಪೋರ್ಟ್ ಫೋಲಿಯೊದಲ್ಲಿ ಇರಲೇಬೇಕಾದ ಅಮೂಲ್ಯ ಲೋಹಗಳಿವು ಎನ್ನಬಹುದು.
ಅಮೆರಿಕದಲ್ಲಿ ಟ್ರಂಪ್ ಟಾರಿಫ್ ಗದ್ದಲದಿಂದ ಜಾಗತಿಕ ಮಟ್ಟದಲ್ಲಿ ತೀವ್ರ ಅನಿಶ್ಚಿತತೆ ಉಂಟಾಗಿದೆ. ಅಮೆರಿಕ ಉದ್ಯೋಗ ಪರಿಸ್ಥಿತಿ ನಿರೀಕ್ಷಿತ ರೀತಿಯಲ್ಲಿ ಇಲ್ಲ. ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಇಕಾನಮಿಯ ಕೆಲವು ವಿಚಾರಗಳಲ್ಲಿ ಸ್ಲೋ ಡೌನ್ ಕಂಡು ಬಂದಿದೆ. ಜಾಬ್ ಓಪನಿಂಗ್ಸ್ ಮತ್ತು ಪ್ರೈವೇಟ್ ಪೇರೋಲ್ ಬಗ್ಗೆ ಹೆಚ್ಚಿನ ವರದಿಗಳು ಬರಬೇಕಿದೆ. ಅಲ್ಲಿನ ಫೆಡರಲ್ ರಿಸರ್ವ್ ಬಡ್ಡಿ ದರ ಇಳಿಸುವ ಸಾಧ್ಯತೆ ಇರೋದ್ರಿಂದ ಬಂಗಾರದ ಹೂಡಿಕೆ ಆಕರ್ಷಕವಾಗಿ ಕಾಣಿಸುತ್ತಿದೆ. ಗೋಲ್ಡ್ ಇಟಿಎಫ್‌ಗಳಲ್ಲಿ ಕೂಡ ಹೂಡಿಕೆ ಹೆಚ್ಚುತ್ತಿದೆ.
ಬಂಗಾರದಲ್ಲಿ ಹೂಡಿಕೆಗೆ ಹಲವಾರು ಆಯ್ಕೆಗಳು ಇವೆ. ಆಭರಣಗಳು, ಬಂಗಾರದ ಗಟ್ಟಿ, ನಾಣ್ಯಗಳಲ್ಲಿ ಹೂಡಿಕೆ ಮಾಡಬಹುದು. ಗೋಲ್ಡ್ ಇಟಿಎಫ್ ಮತ್ತು ಮ್ಯೂಚುವಲ್ ಫಂಡ್ ಗಳೂ ಇವೆ. ಬಂಗಾರದ ದರ ಸ್ಫೋಟದ ಪರಿಣಾಮ ಈ ವರ್ಷ ಗೋಲ್ಡ್ ಇಟಿಎಫ್‌ಗಳಿ ಸರಾಸರಿ 47% ರಿಟರ್ನ್ ನೀಡಿವೆ. ಉದಾಹರಣೆಗಳನ್ನು ಈಗ ನೋಡೋಣ.
ಈ ಸುದ್ದಿಯನ್ನೂ ಓದಿ: ಟಾಟಾ ಮೋಟಾರ್ಸ್‌ನಿಂದ ಸಣ್ಣ ವಾಣಿಜ್ಯ ವಾಹನಗಳು ಮತ್ತು ಪಿಕ್‌ಅಪ್‌ಗಳ ಮೇಲೆ ಭಾರಿ ಆಫರ್ ಘೋಷಣೆ
ಇನ್ವೆಸ್ಕೊ ಇಂಡಿಯಾ ಗೋಲ್ಡ್ ಇಟಿಎಫ್ : 47.35%
ಯುಟಿಐ ಗೋಲ್ಡ್ ಇಟಿಎಫ್: 47.35%
ನಿಪ್ಪೋನ್ ಇಂಡಿಯಾ ಇಟಿಎಫ್ ಗೋಲ್ಡ್ ಬೀಸ್: 47.07%
ಗ್ರೊ ಗೋಲ್ಡ್ ಇಟಿಎಫ್ : 44.51%
ಸಿಲ್ವರ್ ಇಟಿಎಫ್‌ಗಳು ಈ ವರ್ಷ ಇದುವರೆಗೆ 55% ರಿಟರ್ನ್ ನೀಡಿವೆ. ಅವುಗಳ ಉದಾಹರಣೆಯನ್ನು ನೋಡೋಣ.
ಎಚ್‌ಡಿಎಫ್‌ಸಿ ಸಿಲ್ವರ್ ಇಟಿಎಫ್: 54.57%
ನಿಪ್ಪೋನ್ ಇಂಡಿಯಾ ಸಿಲ್ವರ್ ಇಟಿಎಫ್: 54.46%
ಆದಿತ್ಯ ಬಿರ್ಲಾ ಸಿಲ್ವರ್ ಇಟಿಎಫ್: 54.40%
ಐಸಿಐಸಿಐ ಪ್ರು ಸಿಲ್ವರ್ ಇಟಿಎಫ್: 54.38%