ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಸಿಂದೂ ನದಿ ಜಲ ಒಪ್ಪಂದ ರದ್ದು; ಭಾರತೀಯ ವ್ಯಕ್ತಿಗೆ ಕುಡಿಯಲು ನೀರು ಕೊಡದೆ ಪಾಕಿಸ್ತಾನಿ ಯುವಕರಿಂದ ದೌರ್ಜನ್ಯ

ಉದ್ಯೋಗ ಕೊಡಿಸುವ ಆಮಿಷವೊಡ್ಡಿ ಉತ್ತರಾಖಂಡದ ವ್ಯಕ್ತಿಯನ್ನು ದುಬೈಗೆ ಕರೆಸಿಕೊಂಡು ಅಲ್ಲಿ ಪಾಕಿಸ್ತಾನಿ ರೂಮ್‌ಮೇಟ್‌ಗಳು ಕುಡಿಯಲು ನೀರು ಕೊಡದೆ ಕಿರುಕುಳ ನೀಡಿದ್ದಾರೆ. ಕೊನೆಗೆ ಆತನನ್ನು ಪೊಲೀಸರು ರಕ್ಷಿಸಿ ಮನೆಗೆ ಕಳುಹಿಸಿದ್ದಾರೆ. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕೆಲಸದ ಆಮಿಷವೊಡ್ಡಿ ಪಾಕಿಸ್ತಾನಿ ಯುವಕರಿಂದ ಭಾರತೀಯ ವ್ಯಕ್ತಿಗೆ ಚಿತ್ರಹಿಂಸೆ

Profile pavithra May 19, 2025 4:46 PM

ದುಬೈ: ಉತ್ತರಾಖಂಡದ ವ್ಯಕ್ತಿಯೊಬ್ಬನಿಗೆ ದುಬೈಯಲ್ಲಿ ಪಾಕಿಸ್ತಾನಿ ರೂಮ್‌ಮೇಟ್‌ಗಳು ಕುಡಿಯಲು ನೀರು ಕೊಡದೆ ಕಿರುಕುಳ ನೀಡಿದ್ದ ಘಟನೆ ವರದಿಯಾಗಿದೆ. ಉದ್ಯೋಗ ಕೊಡಿಸುವ ಆಮಿಷವೊಡ್ಡಿ ವ್ಯಕ್ತಿಯನ್ನು ದುಬೈಗೆ ಕರೆಯಿಸಿಕೊಂಡು ಇಂತಹ ಸಂಕಷ್ಟಕ್ಕೆ ಸಿಲುಕಿಸಿದ್ದಾರೆ ಎಂದು ಆತ ಆರೋಪಿಸಿದ್ದಾನೆ. ಕೊನೆಗೆ ಆತನನ್ನು ಪೊಲೀಸರು ರಕ್ಷಿಸಿ ಮನೆಗೆ ಕಳುಹಿಸಿದ್ದಾರೆ. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಿದೆ.

ವ್ಯಕ್ತಿ ಮನೆಗೆ ಹಿಂದಿರುಗಿದ ನಂತರ, ಉಧಮ್ ಸಿಂಗ್ ನಗರ ಪೊಲೀಸರು ಆತ ತನ್ನ ಕುಟುಂಬದ ಸದಸ್ಯರೊಂದಿಗೆ ಮತ್ತೆ ಒಂದಾದ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆದು ವೈರಲ್ ಆಗಿದೆ.



ಮಾಹಿತಿ ಪ್ರಕಾರ, ವಿಶಾಲ್ ಎಂದು ಗುರುತಿಸಲ್ಪಟ್ಟ ವ್ಯಕ್ತಿ, ಸಮೀರ್ ಎಂಬ ಉದ್ಯೋಗ ಏಜೆಂಟ್‌ನಿಂದ ಆಮಿಷಕ್ಕೊಳಗಾಗಿ ದುಬೈಗೆ ಹೋಗಿದ್ದನು. ಆದರೆ ಅವನು ದುಬೈ ತಲುಪಿದ ನಂತರ ಅಲ್ಲಿ ಪಾಕಿಸ್ತಾನಿಯ ಒಂದಷ್ಟು ಮಂದಿಯಿಂದ ನಿರಂತರವಾಗಿ ಕಿರುಕುಳ ಅನುಭವಿಸಿದ್ದನು. ಎರಡು ದೇಶಗಳ ನಡುವಿನ ಹೆಚ್ಚುತ್ತಿರುವ ಉದ್ವಿಗ್ನತೆ ಹಾಗೂ ಭಾರತದಿಂದ ಪಾಕಿಸ್ತಾನಕ್ಕೆ ಹರಿಯುವ ಸಿಂದೂ ನದಿಯನ್ನು ತಡೆ ಹಿಡಿದಿರುವುದನ್ನು ಕೀಟಲೆ ಮಾಡುತ್ತಾ ವಿಶಾಲ್‌ಗೆ ಪಾಕಿಸ್ತಾನಿ ಯುವಕರು ಕುಡಿಯಲು ನೀರನ್ನು ಸಹ ನೀಡದೆ ನಿರಂತರವಾಗಿ ಕಿರುಕುಳ ನೀಡಿದ್ದಾರೆ. "ಭಾರತ ಪಾಕಿಸ್ತಾನಕ್ಕೆ ನೀರು ಹರಿಯುವುದನ್ನು ನಿಲ್ಲಿಸಿದ್ದರೆ, ನಾವು ನಿನಗೆ ಕುಡಿಯಲು ಸಹ ಬಿಡುವುದಿಲ್ಲ" ಎಂದು ಪಾಕಿಸ್ತಾನಿ ಯುವಕರು ಅಪಹಾಸ್ಯ ಮಾಡಿದ್ದಾರೆ. ಅವರ ಕಿರುಕುಳ ತಾಳಲಾರದೆ ವಾಪಸ್ ಕಳುಹಿಸುವಂತೆ ಹತಾಶೆಯಿಂದ ಬೇಡಿಕೊಂಡಿದ್ದಾನೆ.

ಕುಡಿಯಲು ನೀರು ಇಲ್ಲದೆ ದೀರ್ಘಕಾಲದ ನಿರ್ಜಲೀಕರಣ ಮತ್ತು ಅತಿಯಾದ ಕಿರುಕುಳದಿಂದಾಗಿ ವಿಶಾಲ್ ಆರೋಗ್ಯ ಹದಗೆಟ್ಟಿದೆ. ಸಹಾಯಕ್ಕಾಗಿ ಅವನು ಪದೇ ಪದೆ ಮನವಿ ಮಾಡಿದ ನಂತರ, ಅವನ ಕುಟುಂಬ ಪೊಲೀಸರನ್ನು ಸಂಪರ್ಕಿಸಿದೆ. ಮಾಹಿತಿ ಪಡೆದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಮಣಿಕಾಂತ್ ಮಿಶ್ರಾ ಪ್ರಕರಣವನ್ನು ಕೈಗೆತ್ತಿಕೊಂಡರು. ವಿಶಾಲ್ ನೀಡಿದ ಮಾಹಿತಿಯನ್ನು ಬಳಸಿಕೊಂಡು, ಪೊಲೀಸರು ಉದ್ಯೋಗ ಏಜೆನ್ಸಿಯನ್ನು ಪತ್ತೆಹಚ್ಚಿ, ವಿಶಾಲ್‌ನನ್ನು ಹುಡುಕಿ ಮರಳಿ ಮನೆಗೆ ಕರೆತಂದಿದ್ದಾರೆ.

ಈ ಸುದ್ದಿಯನ್ನೂ ಓದಿ‌Viral Video: ಒಂದಲ್ಲ... ಎರಡಲ್ಲ... ಬರೋಬ್ಬರಿ 22ರಾಜ್ಯಗಳಲ್ಲಿ ಟೂರ್‌; ಈ ಫ್ಯಾಮಿಲಿಯ ಟ್ರಾವೆಲಿಂಗ್‌ ಕ್ರೇಜ್‌ ನೋಡಿ ನೆಟ್ಟಿಗರು ಫುಲ್‌ ಫಿದಾ!

ಎಸ್‌ಎಸ್‌ಪಿ ಮಣಿಕಾಂತ್ ಮಿಶ್ರಾ ಅವರ ತ್ವರಿತ ಕ್ರಮದಿಂದಾಗಿ, ದುಬೈನಲ್ಲಿ ಸಿಕ್ಕಿಬಿದ್ದ ಯುವಕ ಮನೆಗೆ ಮರಳಿ ಬಂದಿದ್ದಕ್ಕೆ ಅವನ ಕುಟುಂಬವು ಎಸ್‌ಎಸ್‌ಪಿಗೆ ಕೃತಜ್ಞತೆ ಸಲ್ಲಿಸಿದೆ. ಹಾಗಾಗಿ ಮೇ 15ರಂದು ವಿಶಾಲ್ ಮತ್ತು ಅವನ ಕುಟುಂಬವು ರುದ್ರಪುರ ಪೊಲೀಸ್ ಕಚೇರಿಯಲ್ಲಿ ಎಸ್‌ಎಸ್‌ಪಿ ಮಣಿಕಾಂತ್ ಮಿಶ್ರಾ ಅವರನ್ನು ಭೇಟಿಯಾಗಿ ಧನ್ಯವಾದ ಅರ್ಪಿಸಿದೆ. ಪಾಕಿಸ್ತಾನದ ಮೇಲಿನ ಭಾರತದ ನೀರಿನ ನಿರ್ಬಂಧಗಳನ್ನು ಧಿಕ್ಕರಿಸಿ, ಪಾಕಿಸ್ತಾನಿ ಯುವಕರು ತನಗೆ ನೀರು ನೀಡದೆ ಎಷ್ಟು ಕಿರುಕುಳ ನೀಡಿದರು ಎಂಬುದನ್ನು ವಿಶಾಲ್ ವಿವರಿಸಿದ್ದಾನೆ.