ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಇದು ಬರೀ ಶ್ವಾನವಲ್ಲ... ಸೂಪರ್‌ ಹೀರೋ! ಮಕ್ಕಳ ರಕ್ಷಣೆಗೆ ಬಾಲ್ಕನಿಯಿಂದ ಜಂಪ್‌- ಈ ವಿಡಿಯೊ ನೋಡಿ

Pet dog save children from stray dog: ಸಾಮಾಜಿಕ ಮಾಧ್ಯಮದಲ್ಲಿ ಮಕ್ಕಳನ್ನು ಬೀದಿನಾಯಿಯಿಂದ ರಕ್ಷಿಸಿದ ಜರ್ಮನ್ ಶೆಫರ್ಡ್ ಶ್ವಾನದ ಹೃದಯಸ್ಪರ್ಶಿ ವಿಡಿಯೊ ವೈರಲ್ ಆಗಿದೆ. ಉತ್ತರಾಖಂಡದ ಋಷಿಕೇಶದಲ್ಲಿ ಈ ಘಟನೆ ನಡೆದಿದ್ದು, ನಿಷ್ಠಾವಂತ ಸಾಕುಪ್ರಾಣಿಯು ಮಕ್ಕಳನ್ನು ರಕ್ಷಿಸಿದೆ. ಜರ್ಮನ್ ಶೆಫರ್ಡ್ ಜಾತಿಯ ಶ್ವಾನದ ಚತುರತೆಯಿಂದ ಬೀದಿನಾಯಿ ದಾಳಿಯಿಂದ ಮಕ್ಕಳು ಪಾರಾಗಿದ್ದಾರೆ. ಇದು ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

ಮಕ್ಕಳ ಜೀವ ಉಳಿಸಲು ಬಾಲ್ಕನಿಯಿಂದ ಹಾರಿದ ಶ್ವಾನ!

Priyanka P Priyanka P Aug 13, 2025 5:35 PM

ಋಷಿಕೇಶ: ಇತ್ತೀಚೆಗೆ ಬೀದಿ ನಾಯಿ ದಾಳಿ ಪ್ರಕರಣ ಹೆಚ್ಚಾಗುತ್ತಿದೆ. ಇಲ್ಲೊಂದೆಡೆ ದಾಳಿಗಿಳಿದ ಬೀದಿನಾಯಿಯನ್ನು ಸಾಕುಶ್ವಾನವೊಂದು ಹಿಮ್ಮೆಟ್ಟಿಸಿದ ಘಟನೆಯ ವಿಡಿಯೊ ವೈರಲ್ ಆಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಮಕ್ಕಳನ್ನು ಬೀದಿನಾಯಿಯಿಂದ ರಕ್ಷಿಸಿದ ಜರ್ಮನ್ ಶೆಫರ್ಡ್ ಶ್ವಾನದ ಹೃದಯಸ್ಪರ್ಶಿ ವಿಡಿಯೊ ವೈರಲ್(Viral Video) ಆಗಿದೆ. ಉತ್ತರಾಖಂಡದ ಋಷಿಕೇಶದಲ್ಲಿ ಈ ಘಟನೆ ನಡೆದಿದ್ದು, ನಿಷ್ಠಾವಂತ ಸಾಕುಪ್ರಾಣಿಯು ಮಕ್ಕಳನ್ನು ರಕ್ಷಿಸಿದೆ.

ಮನೆ ಕಾಂಪೌಂಡ್ ಒಳಗೆ ಕುಳಿತಿದ್ದ ಜರ್ಮನ್ ಶೆಫರ್ಡ್ ನಾಯಿಯು ರಸ್ತೆಯಲ್ಲಿರುವ ಮಕ್ಕಳನ್ನು ಗಮನಿಸುತ್ತಿರುತ್ತದೆ. ಈ ವೇಳೆ ಮಕ್ಕಳು ಓಡಿಹೋಗುವುದನ್ನು ನೋಡಿದ ಶ್ವಾನಕ್ಕೆ ಬೀದಿ ನಾಯಿ ಮಕ್ಕಳ ಮೇಲೆ ದಾಳಿ ಮಾಡುತ್ತಿದೆ ಎಂಬುದನ್ನು ತಿಳಿದ ಕೂಡಲೇ ಎಚ್ಚೆತ್ತ ನಾಯಿ ಕಾಂಪೌಂಡ್ ಹಾರಿ ನಾಯಿಯನ್ನು ಓಡಿಸಿದೆ. ಜರ್ಮನ್ ಶೆಫರ್ಡ್ ಜಾತಿಯ ಶ್ವಾನದ ಚತುರತೆಯಿಂದ ಬೀದಿನಾಯಿ ದಾಳಿಯಿಂದ ಮಕ್ಕಳು ಪಾರಾಗಿದ್ದಾರೆ.

ಇದೀಗ ನಾಯಿಯ ತ್ವರಿತ ಪ್ರತಿಕ್ರಿಯೆಯು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಶಂಸಿಸಲಾಗಿದೆ. ಆದರೆ ವಿಡಿಯೊದ ನಿಖರವಾದ ಹಿನ್ನೆಲೆ ಮತ್ತು ಸತ್ಯಾಸತ್ಯತೆಯನ್ನು ಅಧಿಕೃತವಾಗಿ ಪರಿಶೀಲಿಸಲಾಗಿಲ್ಲ. ‘ಒಂದು ನಾಯಿ ಮತ್ತೊಂದು ನಾಯಿಯಿಂದ ಮಕ್ಕಳನ್ನು ರಕ್ಷಿಸಲು ಸೂಪರ್ ಹೀರೋನಂತೆ ಹಾರಿತು’ ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೊವನ್ನು ಎಕ್ಸ್‌ನಲ್ಲಿ ಹಂಚಿಕೊಳ್ಳಲಾಗಿದೆ.

ವಿಡಿಯೊ ವೀಕ್ಷಿಸಿ:



ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಾಗಿನಿಂದ, ಈ ವಿಡಿಯೊವು ಒಂದು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದೆ. ಇದು ಧೈರ್ಯಶಾಲಿ ಜರ್ಮನ್ ಶೆಫರ್ಡ್ ಬಗ್ಗೆ ಮೆಚ್ಚುಗೆಯ ಅಲೆಯನ್ನು ಹುಟ್ಟುಹಾಕಿತು. ನಾಯಿಗಳು ಮನುಷ್ಯರಿಗಿಂತ ಹೆಚ್ಚು ನಿಷ್ಠಾವಂತವಾಗಿವೆ, ಅದು ಮತ್ತೊಮ್ಮೆ ಸಾಬೀತಾಗಿದೆ ಎಂದು ಒಬ್ಬ ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಮಕ್ಕಳ ನಿಜವಾದ ಅಂಗರಕ್ಷಕ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Murder accused escape: ಜೈಲಿನಿಂದ ಕೊಲೆ ಆರೋಪಿ ಎಸ್ಕೇಪ್‌- ಶಾಕಿಂಗ್‌ ವಿಡಿಯೊ ವೈರಲ್‌

ಬೀದಿ ನಾಯಿಗಳ ಮೇಲೆ ಕ್ರಮ ಕೈಗೊಳ್ಳಲು ಸುಪ್ರೀಂ ಕೋರ್ಟ್ ಆದೇಶ

ದೆಹಲಿ ಸರ್ಕಾರ ಮತ್ತು ನೋಯ್ಡಾ, ಗುರುಗ್ರಾಮ ಮತ್ತು ಗಾಜಿಯಾಬಾದ್‌ನ ನಾಗರಿಕ ಸಂಸ್ಥೆಗಳು ಬೀದಿನಾಯಿಗಳನ್ನು ಹಿಡಿದು, ಸಂತಾನಹರಣ ಚಿಕಿತ್ಸೆ ಮಾಡಿ, ಎಂಟು ವಾರಗಳಲ್ಲಿ ಶಾಶ್ವತವಾಗಿ ಆಶ್ರಯ ತಾಣಗಳಿಗೆ ಸ್ಥಳಾಂತರಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.

ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಆರ್. ಮಹಾದೇವನ್ ಅವರನ್ನೊಳಗೊಂಡ ಪೀಠವು ಸುಮಾರು 5,000 ಬೀದಿ ನಾಯಿಗಳನ್ನು ಇರಿಸುವ ಸಾಮರ್ಥ್ಯವಿರುವ ನಾಯಿ ಆಶ್ರಯ ತಾಣಗಳನ್ನು ಸ್ಥಾಪಿಸಬೇಕು. ಸಂತಾನಹರಣ ಚಿಕಿತ್ಸೆ ಮತ್ತು ಲಸಿಕೆ ಹಾಕಲು ಸಾಕಷ್ಟು ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ಆದೇಶಿಸಿದೆ. ಈ ಆಶ್ರಯ ತಾಣಗಳಿಗೆ ಒಮ್ಮೆ ಸ್ಥಳಾಂತರಿಸಿದ ನಂತರ ಬೀದಿ ನಾಯಿಗಳನ್ನು ಬೀದಿಗಳು, ವಸತಿ ವಸಾಹತುಗಳು ಅಥವಾ ಸಾರ್ವಜನಿಕ ಸ್ಥಳಗಳಿಗೆ ಮತ್ತೆ ಬಿಡಬಾರದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಇದೇ ವೇಳೆ ಬೀದಿ ನಾಯಿಗಳನ್ನು ಸೆರೆಹಿಡಿದು ಆಶ್ರಯ ನೀಡುವ ಅಧಿಕಾರಿಗಳ ಪ್ರಯತ್ನಗಳಿಗೆ ಅಡ್ಡಿಪಡಿಸಲು ಪ್ರಯತ್ನಿಸುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸುಪ್ರೀಂ ಕೋರ್ಟ್ ಎಚ್ಚರಿಸಿದೆ.