ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಮನೆಯ ನೆಲಮಾಳಿಗೆಯಲ್ಲಿ ಗೂಡಿನಂತೆ ಸುರುಳಿ ಸುತ್ತಿಕೊಂಡ ಹಾವುಗಳ ರಾಶಿ! ಮೈನವಿರೇಳಿಸುವ ವಿಡಿಯೊ ನೋಡಿ

ಉತ್ತರ ಪ್ರದೇಶದ ಮಹಾರಾಜ್‌ಗಂಜ್‌ನ ಹಾರ್ದಿದಾಲಿ ಗ್ರಾಮದ ಮನೆಯೊಂದರ ನೆಲಮಾಳಿಗೆಯಲ್ಲಿ ಹತ್ತಕ್ಕೂ ಹೆಚ್ಚು ಹಾವುಗಳು ಒಟ್ಟಿಗೆ ಸುರುಳಿಯಾಗಿ ಸುತ್ತಿಕೊಂಡು ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ. ಈ ಭಯಾನಕ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಇದೀಗ ‌ಸಿಕ್ಕಾಪಟ್ಟೆ ವೈರಲ್ ಆಗಿದೆ.

ನೆಲಮಾಳಿಗೆಯಲ್ಲಿ ರಾಶಿ ರಾಶಿ ಹಾವು; ಭಯಾನಕ ವಿಡಿಯೊ ಇಲ್ಲಿದೆ

Profile pavithra May 19, 2025 7:20 PM

ಲಖನೌ: ಮನೆಯ ಅಕ್ಕಪಕ್ಕ ಹಾವನ್ನು ನೋಡಿದರೆ ಹಲವರು ಭಯ ಬಿದ್ದು ಓಡುತ್ತಾರೆ. ಅಂತಹದರಲ್ಲಿ ಮನೆಯಲ್ಲಿ ಹತ್ತಾರು ಹಾವುಗಳನ್ನು ಒಟ್ಟಿಗೆ ಸುರುಳಿ ಸುತ್ತಿರುವುದನ್ನು ನೋಡಿದರೆ ಅವರ ಸ್ಥಿತಿ ಏನಾಗಿರಬಹುದು? ಅಂತಹದ್ದೊಂದು ಭಯಾನಕ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ. ಉತ್ತರ ಪ್ರದೇಶದ ಮಹಾರಾಜ್‌ಗಂಜ್‌ನ ಹಾರ್ದಿದಾಲಿ ಗ್ರಾಮದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ ಎಂದು ವರದಿಯಾಗಿದೆ. ಮನೆಯ ನೆಲ ಮಾಳಿಗೆಯಲ್ಲಿ ಹತ್ತಕ್ಕೂ ಹೆಚ್ಚು ಹಾವುಗಳು ಒಟ್ಟಿಗೆ ಸುರುಳಿಯಾಗಿ ಸುತ್ತಿಕೊಂಡಿವೆ. ಈ ದೃಶ್ಯ ನೋಡಿ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ವರದಿ ಪ್ರಕಾರ, ನೆಲಮಾಳಿಗೆಯ ಗೂಡಿನಂತಹ ರಚನೆಯಲ್ಲಿ ಡಜನ್‍ಗಟ್ಟಲೆ ಹಾವುಗಳು ಕಂಡುಬಂದಿವೆ. ಗ್ರಾಮಸ್ಥರು ತಕ್ಷಣ ಪೊಲೀಸರು ಮತ್ತು ಅರಣ್ಯ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಿ ಪರಿಶೀಲನೆ ನಡೆಸುವಂತೆ ಮತ್ತು ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಳಿಕೊಂಡಿದ್ದಾರೆ.

ಹಾವುಗಳ ವಿಡಿಯೊ ಇಲ್ಲಿದೆ ನೋಡಿ...



ಸೋಶಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿದ ವಿಡಿಯೊದಲ್ಲಿ ಕತ್ತಲೆಯಲ್ಲಿ ಹಾವುಗಳ ರಾಶಿಯನ್ನು ಸೆರೆ ಹಿಡಿಯಲಾಗಿದೆ. ಅದರೊಳಗೆ ಹಾವುಗಳು ಒಂದಕ್ಕೊಂದು ದಾರಿ ಬಿಡದೆ ನಿಧಾನವಾಗಿ ಚಲಿಸುತ್ತಿರುವುದು ಕಂಡುಬಂದಿದೆ. ಅವು ಕತ್ತಲೆಯಾದ ಮೂಲೆಯಲ್ಲಿ ಗೂಡುಕಟ್ಟಿಕೊಂಡು ಒಟ್ಟಿಗೆ ಸುರುಳಿಯಾಗಿ ಸುತ್ತಿಕೊಂಡಿವೆ.

ಒಂದೇ ಸ್ಥಳದಲ್ಲಿ ಇಷ್ಟೊಂದು ಹಾವು ಏಕೆ ಒಟ್ಟು ಸೇರಿದ್ದಾವೆ ಎಂಬುದು ಮಾತ್ರ ತಿಳಿದುಬಂದಿಲ್ಲ. ಆದರೆ ಈ ಘಟನೆಯ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಂಚಲನ ಮೂಡಿಸಿದೆ.

ವಿಶಿಷ್ಟ ಹಾವುಗಳು ಉತ್ತರ ಪ್ರದೇಶದಲ್ಲಿ ಪತ್ತೆಯಾಗಿರುವುದು ಇದೇ ಮೊದಲಲ್ಲ. ಕಳೆದ ತಿಂಗಳು, ದುಧ್ವಾ ಹುಲಿ ಮೀಸಲು ವಿಭಾಗದಿಂದ ಸುಮಾರು 125 ಕಿ.ಮೀ. ದೂರದಲ್ಲಿರುವ ಲಖಿಂಪುರ-ಖೇರಿ ಜಿಲ್ಲೆಯಲ್ಲಿ ಅಪರೂಪದ ಉದ್ದನೆಯ ಮೂತಿಯ ಬಳ್ಳಿಯಾಕಾರದ ಹಾವು ಕಂಡು ಬಂದಿತ್ತು. ಕಿಶನ್‌ಪುರ ವನ್ಯಜೀವಿ ಅಭಯಾರಣ್ಯದ ಹುಲ್ಲುಗಾವಲಿನಲ್ಲಿ ಪತ್ತೆಯಾದ ಈ ಅಪರೂಪದ ಮತ್ತು ನಿಗೂಢ ಪ್ರಭೇದದ ಹಾವಿನ ಫೋಟೊ ತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತೊಂದು ಆಘಾತಕಾರಿ ಪ್ರಕರಣದಲ್ಲಿ, ಉತ್ತರ ಪ್ರದೇಶದ ವ್ಯಕ್ತಿಯೊಬ್ಬ ಕುತ್ತಿಗೆಗೆ ಹಾವು ಸುತ್ತಿಕೊಂಡು, ಅದು ಕಚ್ಚಿದ್ದರಿಂದ ಸಾವನ್ನಪ್ಪಿದ್ದನು. ಶಹಜಹಾನ್‌ಪುರದ ಬಂಡಾ ಪ್ರದೇಶದಲ್ಲಿ ತನ್ನ ಮನೆಯಲ್ಲಿ ಆಟವಾಡುತ್ತಿದ್ದಾಗ ಮಗುವೊಂದಕ್ಕೆ ಹಾವು ಕಚ್ಚಿ ವಿಷವೇರಿ ಸಾವನ್ನಪ್ಪಿತ್ತು.

ಈ ಸುದ್ದಿಯನ್ನೂ ಓದಿ:Viral Video: ಸಾವಿರಾರು ಪಕ್ಷಿಗಳಿಗೆ ಟೆರೇಸ್‍ ಮೇಲೆ ಆಶ್ರಯ ನೀಡಿದ ದಂಪತಿ; ವಿಡಿಯೊ ವೈರಲ್

ಇತ್ತೀಚೆಗೆ ಉತ್ತರ ಪ್ರದೇಶದ ಮೀರತ್‌ನ ಅಕ್ಬರ್‌ಪುರ್ ಸಾದತ್‌ನ ಗ್ರಾಮದ ಮನೆಯೊಂದಕ್ಕೆ ಹಾವು ನುಗ್ಗಿ ಮಲಗಿದ್ದ ವ್ಯಕ್ತಿಯ ಮೇಲೆ ರಾತ್ರಿಯಿಡೀ ಸುಮಾರು 10 ಬಾರಿ ದಾಳಿ ಮಾಡಿದೆ. ಆತ ಸತ್ತ ಮೇಲೂ ಆ ಹಾವು ಅವನ ಮೃತ ದೇಹದ ಕೆಳಗೆ ಸುರುಳಿಯಾಗಿ ಸುತ್ತಿಕೊಂಡು ಕಚ್ಚುತ್ತಲೇ ಇತ್ತು ಎಂದು ವರದಿಯಾಗಿದೆ. ಇದನ್ನು ಕಂಡು ಗ್ರಾಮಸ್ಥರು ಭಯಭೀತರಾಗಿದ್ದರು. ಹಾವು ಆತನ ಮೇಲೆ ಸೇಡು ತೀರಿಸಿಕೊಂಡಿದೆ ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಇದು ಕೆಟ್ಟ ಶಕುನ ಎಂದು ತಿಳಿಸಿದ್ದರು.