ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಕಾಡಿನಲ್ಲಿ ಅಲೆದಾಡುತ್ತಿದ್ದ ಪ್ರವಾಸಿಗರಿಗೆ ಸಿಕ್ತು ಹಳೆಕಾಲದ ನಿಧಿ; ಈ ಸಂಪತ್ತಿನ ಮೌಲ್ಯ ಎಷ್ಟು ಗೊತ್ತೆ?

ಜೆಕ್ ಗಣರಾಜ್ಯದ ಕ್ರ್ಕೊನೊಸ್ ಪರ್ವತಗಳಲ್ಲಿ ಇಬ್ಬರು ಪ್ರವಾಸಿಗರು ಹಳೆ ಕಾಲದ ಗುಪ್ತ ನಿಧಿಯನ್ನು ಕಂಡುಹಿಡಿದಿದ್ದಾರೆ. ಅದನ್ನು ಅವರು ಹ್ರಾಡೆಕ್ ಕ್ರಾಲೋವೆಯಲ್ಲಿರುವ ಪೂರ್ವ ಬೊಹೆಮಿಯಾ ವಸ್ತು ಸಂಗ್ರಹಾಲಯದ ಪುರಾತತ್ವ ವಿಭಾಗಕ್ಕೆ ಹಸ್ತಾಂತರಿಸಿದ್ದಾರೆ. ಇದೀಗ ಅವರು ಈ ಬಗ್ಗೆ ತನಿಖೆ ಮಾಡುತ್ತಿದ್ದಾರೆ. ಈ ಸುದ್ದಿ ಈಗ ವೈರಲ್‌ ಆಗಿದೆ. ಚಿನ್ನದ ನಾಣ್ಯಗಳು 8 ಪೌಂಡ್ (3.7 ಕೆಜಿ) ತೂಕವಿದ್ದು, 80 ಲಕ್ಷ ಜೆಕ್ ಕೊರುನಾ (ಸುಮಾರು 3 ಕೋಟಿ ರೂ.) ಮೌಲ್ಯದ್ದು ಎಂದು ಅಂದಾಜಿಸಲಾಗಿದೆ.

ಕಾಡಿನಲ್ಲಿ ಆಕಸ್ಮಿಕವಾಗಿ ಸಿಕ್ತು ನಿಧಿ; ಪ್ರವಾಸಿಗರು ಮಾಡಿದ್ದೇನು?

Profile pavithra May 21, 2025 6:55 PM

ಜೆಕ್ ಗಣರಾಜ್ಯದ ಉತ್ತರದಲ್ಲಿರುವ ಕ್ರ್ಕೊನೊಸೆ ಪರ್ವತಗಳಲ್ಲಿ ಪರ್ವತಗಳಲ್ಲಿ ಪ್ರವಾಸಿಗರಿಬ್ಬರಿಗೆ ಹಳೆ ಕಾಲದ ಗುಪ್ತ ನಿಧಿಯನ್ನು ಸಿಕ್ಕಿದೆ. ಅದನ್ನು ಅವರು ಹ್ರಾಡೆಕ್ ಕ್ರಾಲೋವೆಯಲ್ಲಿರುವ ಪೂರ್ವ ಬೊಹೆಮಿಯಾ ವಸ್ತುಸಂಗ್ರಹಾಲಯದ ಪುರಾತತ್ವ ವಿಭಾಗಕ್ಕೆ ಹಸ್ತಾಂತರಿಸಿದ್ದಾರೆ. ಇದೀಗ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ಸುದ್ದಿ ಈಗ ವೈರಲ್‌ (Viral News) ಆಗಿದೆ. ಈ ಇಬ್ಬರು ಕಾಡಿನಲ್ಲಿ ಹೋಗುತ್ತಿದ್ದಾಗ ಕಲ್ಲುಗಳಿಂದ ಭಾಗಶಃ ಮುಚ್ಚಿಹೋಗಿದ್ದ ಹೊಳೆಯುವ ಅಲ್ಯೂಮಿನಿಯಂ ಪೆಟ್ಟಿಗೆಯನ್ನು ಗಮನಿಸಿದ್ದಾರೆ. ಕುತೂಹಲ ಕೆರಳಿದ ಕಾರಣ ಅವರು ಆ ಪೆಟ್ಟಿಗೆಯನ್ನು ತೆರೆದಿದ್ದಾರೆ. ಅದರಲ್ಲಿ 598 ಚಿನ್ನದ ನಾಣ್ಯಗಳು, 10 ಚಿನ್ನದ ಬಳೆಗಳು,17 ಸೀಲ್‍ ಮಾಡಿದ ಸಿಗಾರ್ ಬಾಕ್ಸ್‌ಗಳು, ಕಾಂಪ್ಯಾಕ್ಟ್‌ ಪೌಡರ್‌ ಮತ್ತು ಒಂದು ಬಾಚಣಿಗೆ ಇತ್ತು.

ಚಿನ್ನದ ನಾಣ್ಯಗಳು ಮಾತ್ರ 8 ಪೌಂಡ್ (3.7 ಕೆಜಿ) ತೂಕವಿದ್ದು, 80 ಲಕ್ಷ ಜೆಕ್ ಕೊರುನಾ (ಸುಮಾರು 3 ಕೋಟಿ ರೂ.) ಮೌಲ್ಯದ್ದಾಗಿವೆ ಎಂದು ಅಂದಾಜಿಸಲಾಗಿದೆ. ಸಿಗಾರ್ ಬಾಕ್ಸ್‌ಗಳನ್ನು ಮುಚ್ಚಲಾಗಿದ್ದು, ಇದು ಅವರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿತ್ತು. ಆದರೆ ಪ್ರವಾಸಿಗರು ಆ ನಿಧಿಯನ್ನು ಇಟ್ಟುಕೊಳ್ಳುವ ಬದಲು, ಅದನ್ನು ಜವಾಬ್ದಾರಿಯುತವಾಗಿ ಹ್ರಾಡೆಕ್ ಕ್ರಾಲೋವೆಯಲ್ಲಿರುವ ಪೂರ್ವ ಬೊಹೆಮಿಯಾ ವಸ್ತುಸಂಗ್ರಹಾಲಯಕ್ಕೆ ಹಸ್ತಾಂತರಿಸಿದ್ದಾರೆ. ವಸ್ತು ಸಂಗ್ರಹಾಲಯದ ಪುರಾತತ್ವ ವಿಭಾಗದ ಮುಖ್ಯಸ್ಥ ಮಿರೋಸ್ಲಾವ್ ನೊವಾಕ್ ಪ್ರಕಾರ, ಶೋಧಕರು ಯಾವುದೇ ಮುನ್ಸೂಚನೆಯಿಲ್ಲದೆ ಆಗಮಿಸಿ ತಮ್ಮ ತಂಡಕ್ಕೆ ನಿಧಿಯನ್ನು ನೀಡಿದ್ದಾರೆ. ಇದು ತನಿಖೆಗೆ ಆದೇಶಿಸುವಂತೆ ಪ್ರೇರೇಪಿಸಿತು.

ಈ ನಾಣ್ಯಗಳು ಕನಿಷ್ಠ 1921ರ ಹಿಂದಿನವಂತೆ. ಅಂದರೆ ಒಂದು ಶತಮಾನಕ್ಕೂ ಹೆಚ್ಚು ಹಳೆಯದು. ಎರಡನೇ ಮಹಾಯುದ್ಧದ ಮೊದಲು ಅಥವಾ 1945ರ ಸುಮಾರಿಗೆ ನಿಧಿಯನ್ನು ಮರೆಮಾಡಲಾಗಿದೆ ಎಂದು ನೊವಾಕ್ ಊಹಿಸಿದ್ದಾರೆ. ಕುತೂಹಲಕಾರಿ ವಿಚಾರವೆಂದರೆ ಯಾವುದೇ ನಾಣ್ಯಗಳು ಜೆಕ್ ಗಣರಾಜ್ಯದದ್ದಲ್ಲ, ಅರ್ಧದಷ್ಟು ಬಾಲ್ಕನ್ ಪ್ರದೇಶದಿಂದ ಬಂದವು ಮತ್ತು ಉಳಿದವು ಫ್ರಾನ್ಸ್‌ನವು. ಕೆಲವು 1920 ಮತ್ತು 1930ರ ದಶಕಗಳಲ್ಲಿ ಹಿಂದಿನ ಯುಗೊಸ್ಲಾವಿಯದ ಗುರುತುಗಳನ್ನು ಸಹ ಹೊಂದಿವೆ.

ಕೆಲವರು ಇದು ಕುಕ್ಸ್ ಎಸ್ಟೇಟ್‌ನ ಶ್ರೀಮಂತ ಸ್ವಿರ್ಟ್ಸ್-ಶ್ಪೋರ್ಕ್ ಕುಟುಂಬಕ್ಕೆ ಸೇರಿರಬಹುದು ಎಂದು ಸೂಚಿಸಿದರೆ, ಇನ್ನು ಕೆಲವರು ಇದು ಸಂಕಷ್ಟದ ಸಮಯದಲ್ಲಿ ಜೆಕೊಸ್ಲೊವಾಕ್ ಸೈನಿಕರು ಮರೆ ಮಾಡಿದ ಲೂಟಿ ಎಂದು ಹೇಳಿದ್ದಾರೆ. ಆದರೆ ನಿಜವಾದ ಕಥೆಯು ಇತಿಹಾಸದಲ್ಲಿ ಹುದುಗಿ ಹೋಗಿದೆ.

ಈ ಸುದ್ದಿಯನ್ನೂ ಓದಿ:Viral Video: ಇದು ಅಮೆಜಾನ್‌ ಕಾಡಲ್ಲ; ಕಾಡಿನ ಮಧ್ಯದಲ್ಲಿರುವ ಅದ್ಭುತ ಕ್ರಿಕೆಟ್ ಮೈದಾನ: ಇದೆಲ್ಲಿದೆ?

ವಸ್ತು ಸಂಗ್ರಹಾಲಯವು ವಸ್ತುಗಳನ್ನು ಪರಿಶೀಲಿಸುವುದನ್ನು ಮುಂದುವರಿಸಿದೆ. ಮೊಹರು ಮಾಡಿದ ಸಿಗಾರ್ ಬಾಕ್ಸ್‌ಗಳು ಮತ್ತು ಲೋಹಗಳ ಬಗ್ಗೆ ವಿಶೇಷ ಗಮನ ನೀಡಲಾಗುತ್ತದೆ. ಜೆಕ್ ಕಾನೂನಿನಡಿಯಲ್ಲಿ, ನಿಧಿ ಅಧಿಕೃತವಾಗಿ ಸ್ಥಳೀಯ ಆಡಳಿತದ ಆಸ್ತಿಯಾಗಿದೆ. ಆದರೆ ಕಂಡುಹಿಡಿದವರು ಬಹುಮಾನಕ್ಕೆ ಅರ್ಹರಾಗಿರುತ್ತಾರೆ.