ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಹೆಣ್ಣಿಲ್ಲದೇ ಕೇವಲ ಗಂಡಿನ ಮೂಲಕ ಸಂತಾನೋತ್ಪತ್ತಿ: ಚೀನಾ ವಿಜ್ಞಾನಿಗಳಿಂದ ಸಂಶೋಧನೆ!

ಚೀನಾದ ವಿಜ್ಞಾನಿಗಳು ಹೊಸ ಸಂಶೋಧನೆಯನ್ನು ನಡೆಸಿದ್ದು ಈ ಮೂಲಕ ಹೆಣ್ಣಿಲ್ಲದೆ ಕೇವಲ ಗಂಡಿನ ಮೂಲಕ ಸಂತಾನೋತ್ಪತ್ತಿ ನಡೆಸಿ ಜನ್ಮ ನೀಡಬಹುದು ಎಂದು ಸಂಶೋಧನೆಯ ವರದಿ ತಿಳಿಸಿದೆ. ವಿಜ್ಞಾನ ಲೋಕದಲ್ಲಿ ಇದೊಂದು ಅಚ್ಚರಿಯ ಸಂಶೋಧನೆಯಾಗಿದ್ದು, ನೆಟ್ಟಿಗರು ಬೆರಗಾಗಿದ್ದಾರೆ. ಈ ಸುದ್ದಿ ಇದೀಗ ಭಾರೀ ವೈರಲ್‌ ಆಗಿದೆ.

ಸಂತಾನೋತ್ಪತ್ತಿಗೆ ಹೆಣ್ಣು ಬೇಕಿಲ್ಲ; ಚೀನಾ ವಿಜ್ಞಾನಿಗಳ ಸಂಶೋಧನೆ!

Viral News

Profile Deekshith Nair Feb 3, 2025 2:37 PM

ಬೀಜಿಂಗ್:‌ ವಿಜ್ಞಾನ ಲೋಕವು ನಮ್ಮನ್ನು ಆಗಾಗ್ಗೆ ಅಚ್ಚರಿಗೆ ದೂಡುತ್ತದೆ. ಕೆಲವು ವಿಜ್ಞಾನಿಗಳ ಸಂಶೋಧನೆಗಳಂತೂ ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುವಂತೆ ಇರುತ್ತವೆ. ಸಂತಾನೋತ್ಪತ್ತಿಗೆ ಹೆಣ್ಣು ಅಗತ್ಯ ಮತ್ತು ಅನಿವಾರ್ಯ ಎಂಬುದು ಎಲ್ಲರಿಗೂ ಗೊತ್ತಿದೆ. ಹೆಣ್ಣು ಸೃಷ್ಟಿಕರ್ತೆ. ಅರ್ಥಾತ್‌ ಜನ್ಮ ನೀಡುವವಳು. ಹೆಣ್ತನ ಎಂಬುದೇ ಬಹುದೊಡ್ಡ ಶಕ್ತಿ. ಆದರೆ ಚೀನಾ ವಿಜ್ಞಾನಿಗಳ(China Scientists) ಹೊಸ ಸಂಶೋಧನೆಯು(Research) ಹಲವರನ್ನು ಬೆಚ್ಚಿ ಬೀಳಿಸಿದೆ. ಹೆಣ್ಣಿಲ್ಲದೆ ಕೇವಲ ಗಂಡಿನ ಮೂಲಕ ಸಂತಾನೋತ್ಪತ್ತಿ ನಡೆಸಿ ಜನ್ಮ ನೀಡಬಹುದು ಎಂದು ಅವರ ಸಂಶೋಧನೆಯ ವರದಿ ತಿಳಿಸಿದೆ. ವಿಜ್ಞಾನ ಲೋಕದಲ್ಲಿ ಇದೊಂದು ವಿಸ್ಮಯದ ಸಂಶೋಧನೆಯಾಗಿದ್ದು, ನೆಟ್ಟಿಗರು ಬೆರಗಾಗಿದ್ದಾರೆ. (Viral News) ಈ ಸುದ್ದಿ ಇದೀಗ ಭಾರೀ ವೈರಲ್‌ ಆಗಿದೆ.

ಚೀನಾದ ಈ ಸಂಶೋಧನೆಯಲ್ಲಿ ಹೆಣ್ಣಿನ ಅವಶ್ಯಕತೆ ಇಲ್ಲ ಕೇವಲ ಗಂಡು ಹೊಂದಿದ್ದರೆ ಸಾಕು ಸಂತಾನೋತ್ಪತ್ತಿ ಮಾಡಬಹುದು. ಇದು ಯಾವ ಪ್ರಾಣಿ ಮತ್ತು ಮನುಷ್ಯ ಎಂಬ ಪ್ರಶ್ನೆ ಎಲ್ಲರಲ್ಲಿಯೂ ಸೃಷ್ಟಿಯಾಗಿದೆ. ತಂತ್ರಜ್ಞಾನದ ಮೂಲಕ ಹೆಣ್ಣಿನ ಡಿಎನ್ಎ ಸಹಾಯವಿಲ್ಲದೆ ಕೇವಲ ಎರಡು ಗಂಡು ಇಲಿಗಳ ಡಿಎನ್ಎ ಇಟ್ಟುಕೊಂಡು ಮರಿಯನ್ನು ಸೃಷ್ಟಿಸಬಹುದು. ತಳಿ ಶಾಸ್ತ್ರದಲ್ಲಿ ಚೀನಾ ವಿಜ್ಞಾನಿಗಳು ಭಾರೀ ಸಾಧನೆಯನ್ನು ಮಾಡಿದ್ದಾರೆ. ಎರಡು ಗಂಡು ಇಲಿಗಳ ಸಹಾಯದಿಂದ ಸೃಷ್ಟಿಸಿದ ಇಲಿಯು ಪ್ರೌಢಾವಸ್ಥೆಯವರೆಗೂ ಬದುಕುಳಿಯುತ್ತವೆ ಎಂದು ತಿಳಿದು ಬಂದಿದೆ.



ಜನವರಿ 8ರಂದು ಪ್ರಕಟವಾದ ಅಧ್ಯಯನದ ವರದಿ ಪ್ರಕಾರ, ಇದೊಂದು ವಿಶಿಷ್ಟ ವಿಧಾನವಾಗಿದ್ದು, ಚೀನಾ ಅಕಾಡೆಮಿ ಆಫ್ ಸೈನ್ಸ್ ನೇತೃತ್ವದ ತಂಡವು ಈ ಸಂಶೋಧನೆ ನಡೆಸಿದೆ. ಡಿಎನ್ಎಯನ್ನು ಬಳಸಿಕೊಂಡು ಯಾವ ರೀತಿ ಸಂತಾನೋತ್ಪತ್ತಿ ಮಾಡಬಹುದು ಎನ್ನುವ ಯೋಚನೆಯೊಂದಿಗೆ ಇದನ್ನು ಸೃಷ್ಟಿಸಿದ್ದು, ಡಿಎನ್ಎ ಸರಿಯಾಗಿ ಕೆಲಸ ಮಾಡಿದರೆ ಇವುಗಳಿಗೆ ಅಸ್ವಸ್ಥತೆ ಉಂಟಾಗುತ್ತದೆ ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ:ಹೆಚ್.ಎನ್.ವಿಜ್ಞಾನ ಬುದ್ದಿ ಮತ್ತು ವೈಚಾರಿಕ ಜಾಗೃತಿಯ ಮೇರುಶಿಖರವಾಗಿದ್ದರು : ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್

ಇದಕ್ಕೂ ಮುನ್ನ ಜಪಾನ್ ವಿಜ್ಞಾನಿಗಳು ಗಂಡು ಇಲಿಯ ಚರ್ಮವನ್ನು ಬಳಸಿಕೊಂಡು ಮೊಟ್ಟೆ ಮತ್ತು ವೀರ್ಯದೊಂದಿಗೆ ಫಲವತ್ತಾಗಿಸಿ ಕೇವಲ ಪುರುಷ ಡಿಎನ್ಎ ಹೊಂದಿರುವ ಇಲಿಗಳನ್ನು ಸೃಷ್ಟಿಸಿದ್ದರು. ಈಗ ಚೀನಾ ವಿಜ್ಞಾನಿಗಳು ಕೈಗೊಂಡಿರುವ ಸಂಶೋಧನೆ ಪ್ರಕಾರ ಎರಡು ಗಂಡು ಇಲಿಗಳ ಮೂಲಕ ಇಲ್ಲಿಯನ್ನು ಸೃಷ್ಟಿಸಬಹುದಾಗಿದೆ. ಈ ರೀತಿಯ ಚಿತ್ರ ವಿಚಿತ್ರ ಸಂಶೋಧನೆಗಳು ಸೋಶಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಅಗುತ್ತಿರುತ್ತವೆ.