ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಯೂನಿಫಾರ್ಮ್‌ನಲ್ಲೇ ಹೋಗಿ ಮದ್ಯ ಖರೀದಿಸಿದ ಬಾಲಕಿಯರು! ಶಾಕಿಂಗ್‌ ವಿಡಿಯೊ ವೈರಲ್‌

Girls bought alcohol in school uniforms: ಶಾಲಾ ಸಮವಸ್ತ್ರದಲ್ಲಿರುವ ವಿದ್ಯಾರ್ಥಿನಿಯರು ಸರ್ಕಾರಿ ಮದ್ಯದ ಅಂಗಡಿಯಿಂದ ಮದ್ಯ ಖರೀದಿಸಿದ ಆತಂಕಕಾರಿ ಘಟನೆ ಮಧ್ಯಪ್ರದೇಶದ ಮಾಂಡ್ಲಾ ಜಿಲ್ಲೆಯ ನೈನ್‌ಪುರದಲ್ಲಿ ನಡೆದಿದೆ. ಈ ಘಟನೆಯು ಸಾಕಷ್ಟು ಆಕ್ರೋಶವನ್ನು ಹುಟ್ಟುಹಾಕಿದೆ.

ಯೂನಿಫಾರ್ಮ್‌ನಲ್ಲೇ ಹೋಗಿ ಮದ್ಯ ಖರೀದಿಸಿದ ಬಾಲಕಿಯರು!

-

Priyanka P Priyanka P Oct 26, 2025 3:37 PM

ಭೋಪಾಲ್: ಶಾಲಾ ಸಮವಸ್ತ್ರದಲ್ಲಿರುವ ವಿದ್ಯಾರ್ಥಿನಿಯರು ಸರ್ಕಾರಿ ಮದ್ಯದ ಅಂಗಡಿಯಿಂದ ಮದ್ಯ ಖರೀದಿಸುವ ಫೋಟೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral News) ಆಗಿದೆ. ಮಧ್ಯಪ್ರದೇಶದ (Madhya Pradesh) ಮಾಂಡ್ಲಾ ಜಿಲ್ಲೆಯ ನೈನ್‌ಪುರದಲ್ಲಿ ಈ ಆತಂಕಕಾರಿ ಘಟನೆ ನಡೆದಿದೆ. ಈ ಘಟನೆಯು ಸಾಕಷ್ಟು ಆಕ್ರೋಶವನ್ನು ಹುಟ್ಟುಹಾಕಿದ್ದು, ಸ್ಥಳೀಯ ಅಧಿಕಾರಿಗಳನ್ನು ಮುಜುಗರಕ್ಕೀಡು ಮಾಡಿದೆ. ಹಾಗೆಯೇ ರಾಜ್ಯದಲ್ಲಿ ಕಾನೂನು ಜಾರಿ ಮತ್ತು ಸಾಮಾಜಿಕ ಜಾಗೃತಿಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಸಮವಸ್ತ್ರ ಧರಿಸಿದ ಶಾಲಾ ಬಾಲಕಿಯರ ಗುಂಪು ತಲೆಗೆ ಭಾಗಶಃ ಸ್ಕಾರ್ಫ್‌ಗಳನ್ನು ಧರಿಸಿ, ಮದ್ಯದ ಅಂಗಡಿಯೊಳಗೆ ನಡೆದುಕೊಂಡು ಹೋಗಿದ್ದಾರೆ. ಕೌಂಟರ್ ಬಳಿ ಹೋದ ವಿದ್ಯಾರ್ಥಿನಿಯರು ಮದ್ಯ ಖರೀದಿಸಿ ಹೊರಟು ಹೋಗಿದ್ದಾರೆ. ಅಂಗಡಿಯವನು ವಿದ್ಯಾರ್ಥಿನಿಯರ ಕೋರಿಕೆಯನ್ನು ಈಡೇರಿಸಿದ್ದಲ್ಲೆ, ಸಲೀಸಾಗಿ ಮದ್ಯವನ್ನು ಕೊಟ್ಟಿದ್ದಾನೆ. ಇದು ಕಾನೂನಿನ ಉಲ್ಲಂಘನೆಯಾಗಿದೆ.

ಈ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬುತ್ತಿದ್ದಂತೆ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ (SDM) ಅಶುತೋಷ್ ಠಾಕೂರ್, ತಹಸೀಲ್ದಾರ್ ಮತ್ತು ಸ್ಥಳೀಯ ಪೊಲೀಸರೊಂದಿಗೆ ಸ್ಥಳದಲ್ಲೇ ತನಿಖೆ ನಡೆಸಲು ಅಂಗಡಿಗೆ ಧಾವಿಸಿದರು. ಅಧಿಕಾರಿಗಳು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ಪ್ರಾಥಮಿಕ ತನಿಖೆಯಲ್ಲಿ ಅಪ್ರಾಪ್ತ ವಯಸ್ಕರಿಗೆ ಮದ್ಯ ಮಾರಾಟ ಮಾಡಿರುವುದು ದೃಢಪಟ್ಟಿದ್ದು, ಇದು ಸಾಮಾನ್ಯ ಪರವಾನಗಿ ಷರತ್ತುಗಳನ್ನು (ಜಿಎಲ್‌ಸಿ) ಉಲ್ಲಂಘಿಸುತ್ತದೆ ಮತ್ತು ಮದ್ಯ ಕಾನೂನುಗಳ ಅಡಿಯಲ್ಲಿ ಕ್ರಿಮಿನಲ್ ಅಪರಾಧವಾಗಿದೆ.

ಇದನ್ನೂ ಓದಿ: Viral News: ಗಲ್ಲಾ ಪೆಟ್ಟಿಗೆಗೇ ಕೈ ಇಟ್ಟ ಪೊಲೀಸರು... ಸಾಲದಕ್ಕೆ ಕಪಾಳಮೋಕ್ಷ ಮಾಡಿ ದರ್ಪ

ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಠಾಕೂರ್ ಅವರು ಅಬಕಾರಿ ಇಲಾಖೆಗೆ ವಿವರವಾದ ತನಿಖೆ ನಡೆಸಿ ತಕ್ಷಣದ ಕ್ರಮ ವರದಿಯನ್ನು ಸಲ್ಲಿಸುವಂತೆ ಸೂಚನೆ ನೀಡಿದರು. ಈ ಸಂಬಂಧ ಅಂಗಡಿ ಮಾಲೀಕರನ್ನು ವಿಚಾರಣೆ ನಡೆಸಲಾಗುತ್ತಿದೆ. ವಿದ್ಯಾರ್ಥಿನಿಯರು ಅವರಾಗಿಯೇ ಬಂದಿದ್ದಾ ಅಥವಾ ಬೇರೆ ಯಾರಾದರೂ ಕಳುಹಿಸಿದ್ದಾರೆಯೇ ಎಂಬ ಬಗ್ಗೆ ಅಧಿಕಾರಿಗಳು ತನಿಖೆ ನಡೆಸಿದ್ದಾರೆ.

ತನಿಖೆಯಲ್ಲಿ ವಿದ್ಯಾರ್ಥಿನಿಯರು ಮದ್ಯ ಖರೀದಿಸಿದ್ದು ನಿಜವೆಂದು ಕಂಡುಬಂದಿದೆ. ಶೀಘ್ರದಲ್ಲೇ ಜಿಲ್ಲಾಧಿಕಾರಿಗೆ ವರದಿಯನ್ನು ಕಳುಹಿಸಲಾಗುವುದು. ಮದ್ಯದಂಗಡಿಯ ಪರವಾನಗಿಯನ್ನು ರದ್ದುಗೊಳಿಸಲಾಗುವುದು ಮತ್ತು ದಂಡ ವಿಧಿಸಲಾಗುವುದು. ಅಪ್ರಾಪ್ತ ವಯಸ್ಕರಿಗೆ ಮದ್ಯ ಮಾರಾಟ ಮಾಡಿದವನನ್ನು ಕೆಲಸದಿಂದ ವಜಾಗೊಳಿಸಲಾಗುವುದು. ಅಪ್ರಾಪ್ತ ವಯಸ್ಕರಿಗೆ ಮದ್ಯ ಮಾರಾಟ ಮಾಡುವುದು ಪರವಾನಗಿ ಷರತ್ತುಗಳ ಗಂಭೀರ ಉಲ್ಲಂಘನೆಯಾಗಿದೆ ಎಂದು ಜಿಲ್ಲಾ ಅಬಕಾರಿ ಅಧಿಕಾರಿ ರಾಮ್‌ಜಿ ಪಾಂಡೆ ಹೇಳಿದರು.

ಈ ವಿಚಾರವು ಮಾಂಡ್ಲಾ ಸುತ್ತಮುತ್ತ ಭಾರಿ ಆಕ್ರೋಶದ ಅಲೆಯನ್ನು ಎಬ್ಬಿಸಿದೆ. ಅಂಗಡಿ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಅಪ್ರಾಪ್ತ ವಯಸ್ಕರಿಗೆ ಇಷ್ಟೊಂದು ಬಹಿರಂಗವಾಗಿ ಮದ್ಯ ಖರೀದಿಸಲು ಹೇಗೆ ಅವಕಾಶ ನೀಡಲಾಗಿದೆ ಎಂದು ಅವರು ಪ್ರಶ್ನಿಸಿದ್ದಾರೆ.

ಇನ್ನು ಮಾಜಿ ಶಾಸಕ ಮತ್ತು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ. ಅಶೋಕ್ ಮಾರ್ಸ್ಕೋಲ್ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಮಧ್ಯಪ್ರದೇಶದಲ್ಲಿ ಹೆಚ್ಚುತ್ತಿರುವ ಮದ್ಯಪಾನವನ್ನು ಎತ್ತಿ ತೋರಿಸಲು ಜಿತು ಪಟ್ವಾರಿ ಕೇಂದ್ರ ಸರ್ಕಾರದ ವರದಿಯನ್ನು ಉಲ್ಲೇಖಿಸಿದಾಗ, ಬಿಜೆಪಿ ನಾಯಕರು ಅವರ ಪ್ರತಿಕೃತಿಯನ್ನು ಸುಟ್ಟುಹಾಕಿದರು. ಇಂದು, ನೈನ್‌ಪುರದಲ್ಲಿ ಶಾಲಾ ಬಾಲಕಿಯರು ಮದ್ಯವನ್ನು ಖರೀದಿಸುತ್ತಿರುವಾಗ, ಅದೇ ನಾಯಕರು ಮತ್ತು ಅವರ ಮಹಿಳಾ ಶಕ್ತಿ ಎಲ್ಲಿದೆ? ಎಂದು ಪ್ರಶ್ನಿಸಿದ್ದಾರೆ.