ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಹುಲಿಯ ಡೆಡ್ಲಿ ಅಟ್ಯಾಕ್‌! ಕೂದಲೆಳೆ ಅಂತರದಲ್ಲಿ ಪಾರಾದ ಪ್ರಯಾಣಿಕರು; ಇಲ್ಲಿದೆ ಮೈಜುಮ್ಮೆನ್ನಿಸುವ ವಿಡಿಯೊ

Deadly Attack From Tiger: ಹುಲಿಯ ಮಾರಕ ದಾಳಿಯಿಂದ ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪಾರಾದ ಮೈ ಜುಮ್ಮೆನ್ನಿಸುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಮಹಾರಾಷ್ಟ್ರದ ತಡೋಬಾ ಅಂಧಾರಿ ಹುಲಿ ಸಂರಕ್ಷಿತ ಪ್ರದೇಶದ ಕೆಸ್ಲಘಾಟ್ ಗೇಟ್ ಬಳಿಯ ಚಿಚ್ಪಲ್ಲಿ ರಸ್ತೆಯ ಬಳಿ ಈ ಘಟನೆ ನಡೆದಿದೆ.

ಹುಲಿಯ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾದ ಪ್ರಯಾಣಿಕರು

-

Priyanka P Priyanka P Oct 26, 2025 6:20 PM

ಪುಣೆ: ಹುಲಿಯ ಮಾರಕ ದಾಳಿಯಿಂದ ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ಮಹಾರಾಷ್ಟ್ರದ (Maharashtra) ತಡೋಬಾ ಅಂಧಾರಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದಿದೆ. ಅಕ್ಟೋಬರ್ 25ರ ಶನಿವಾರ ಬೆಳಗಿನ ಜಾವ ಕೆಸ್ಲಘಾಟ್ ಗೇಟ್ ಬಳಿಯ ಚಿಚ್ಪಲ್ಲಿ ರಸ್ತೆಯ ಬಳಿ ವಾಹನಗಳು ಮತ್ತು ಪ್ರಯಾಣಿಕರ ಮೇಲೆ ಕೆ-ಮಾರ್ಕ್ ಹುಲಿ ಎಂದು ಗುರುತಿಸಲಾದ ಹೆಣ್ಣು ಹುಲಿ ದಾಳಿ ಮಾಡಲು ಪ್ರಯತ್ನಿಸುವ ದೃಶ್ಯವು ಕ್ಯಾಮರಾದಲ್ಲಿ ಸೆರೆಯಾಗಿದೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೊದಲ್ಲಿ, ಹುಲಿ ಇದ್ದಕ್ಕಿದ್ದಂತೆ ಕಾಡಿನಿಂದ ಹೊರಬಂದು ಚಲಿಸುವ ವಾಹನಗಳತ್ತ ನುಗ್ಗುತ್ತಿರುವುದನ್ನು ಕಾಣಬಹುದು. ಇದರಿಂದಾಗಿ ಪ್ರವಾಸಿಗರು ಮತ್ತು ಸ್ಥಳೀಯರು ಭಯಭೀತರಾಗಿದ್ದಾರೆ. ಹುಲಿಯು ರಸ್ತೆಗೆ ಬರುತ್ತಿದ್ದಂತೆ ಬೆಚ್ಚಿಬಿದ್ದ ಸವಾರರು ಭಯಭೀತರಾಗಿದ್ದಾರೆ. ಕಾರು ಚಾಲಕ ತನ್ನ ಕಾರಿನ ಕಿಟಕಿಯನ್ನು ಮುಚ್ಚಿದ್ದಾನೆ. ಬೈಕ್ ಸವಾರ ಹೆದರಿಕೆಯಿಂದ ನಿಧಾನವಾಗಿ ನೋಡುತ್ತಾ ಮುಂದೆ ಸಾಗಿದ್ದಾನೆ.

ವರದಿಗಳ ಪ್ರಕಾರ, ಈ ಘಟನೆ ಶನಿವಾರ ಬೆಳಿಗ್ಗೆ 6:45 ರ ಸುಮಾರಿಗೆ ನಡೆದಿದ್ದು, ಈ ಸಮಯದಲ್ಲಿ ದಿನನಿತ್ಯದ ಪ್ರಯಾಣಿಕರು ಮತ್ತು ಅರಣ್ಯ ಸಂದರ್ಶಕರು ಅಭಯಾರಣ್ಯದ ರಸ್ತೆಯ ಮೂಲಕ ಹಾದುಹೋಗುತ್ತಿದ್ದರು. ಅದೃಷ್ಟವಶಾತ್, ಹುಲಿಯು ಯಾರ ಮೇಲೂ ದಾಳಿ ಮಾಡಿಲ್ಲ. ದಾಳಿ ಮಾಡುವ ರೀತಿ ಹೆದರಿಸಿದೆ. ಹೀಗಾಗಿ ಈವರೆಗೆ ಯಾವುದೇ ಗಾಯಗಳು ಅಥವಾ ಸಾವುನೋವುಗಳು ವರದಿಯಾಗಿಲ್ಲ.

ವಿಡಿಯೊ ವೀಕ್ಷಿಸಿ:

ಇದನ್ನೂ ಓದಿ: Viral Video: ಯಮನಂತೆ ಬಂದ ರೈಲಿನಿಂದ ಜಸ್ಟ್‌ ಮಿಸ್‌ ಆದ ತಾತ; ಎದೆ ಝಲ್ಲೆನ್ನಿಸುವ ವಿಡಿಯೊ ವೈರಲ್

ಹುಲಿಯ ಪಾರ್ಶ್ವದಲ್ಲಿರುವ ವಿಶಿಷ್ಟವಾದ ಕೆ ಮಾದರಿಯಿಂದಾಗಿ ಅದು ಕೆ-ಮಾರ್ಕ್ ಹೆಣ್ಣು ಹುಲಿ ಎಂದು ಅರಣ್ಯ ಅಧಿಕಾರಿಗಳು ದೃಢಪಡಿಸಿದ್ದಾರೆ. ಹುಲಿಯ ಈ ಆಕ್ರಮಣವು ಹತ್ತಿರದಲ್ಲಿ ಅವುಗಳ ಮರಿಗಳು ಇರುವುದರ ಪರಿಣಾಮವಾಗಿರಬಹುದೆಂದು ಅವರು ಅಂದಾಜಿಸಿದ್ದಾರೆ. ತಡೋಬಾ ಅರಣ್ಯ ಇಲಾಖೆಯ ಅಧಿಕಾರಿಗಳು, ಮುಂಜಾನೆ ಮತ್ತು ಸಂಜೆ ವೇಳೆಯಲ್ಲಿ ಅರಣ್ಯ ರಸ್ತೆಗಳನ್ನು ಬಳಸುವುದನ್ನು ಕಡಿಮೆ ಮಾಡುವಂತೆ ಹಾಗೂ ಬಫರ್ ವಲಯಗಳ ಮೂಲಕ ಪ್ರಯಾಣಿಸುವಾಗ ಜಾಗರೂಕರಾಗಿರಲು ಸಾರ್ವಜನಿಕರನ್ನು ಒತ್ತಾಯಿಸಿದ್ದಾರೆ.

ಈ ಘಟನೆಯು ಕೆಲವರಲ್ಲಿ ಭಯ ಹುಟ್ಟಿಸಿದ್ದರೂ, ಸಂರಕ್ಷಿತ ಪ್ರದೇಶಗಳ ಬಳಿ ಮಾನವ ಚಲನೆಯು ಕಾಡು ಪ್ರಾಣಿಗಳನ್ನು ಹೇಗೆ ಕೆರಳಿಸುತ್ತದೆ ಎಂಬುದನ್ನು ಈ ಘಟನೆ ನೆನಪಿಸುತ್ತದೆ ಎಂದು ವನ್ಯಜೀವಿ ತಜ್ಞರು ಒತ್ತಿ ಹೇಳಿದ್ದಾರೆ.

ಕೆಲವು ದಿನಗಳ ಹಿಂದೆ ಟ್ರಕ್ ಅಪಘಾತದಲ್ಲಿ ಹುಲಿಯು ತನ್ನ ಒಂದು ಮರಿಯನ್ನು ಕಳೆದುಕೊಂಡಿದ್ದಾಳೆ ಎಂದು ವದಂತಿ ಇದೆ. ಹೀಗಾಗಿ ಅವಳು ಸ್ವಲ್ಪ ಆಕ್ರಮಣಕಾರಿಯಾಗಿರುತ್ತಾಳೆ ಎಂದು ಒಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಅದು ದಾಳಿಯಲ್ಲ. ನೀವು ನಿಮ್ಮ ವಾಹನಗಳನ್ನು ಸಫಾರಿಯಂತೆ ರಸ್ತೆಯಲ್ಲಿ ನಿಲ್ಲಿಸುತ್ತೀರಿ. ಅವಳು ಬಂದು ಸೆಲ್ಫಿಗಳಿಗೆ ಪೋಸ್ ನೀಡುತ್ತಾಳೆಂದು ನೀವು ನಿರೀಕ್ಷಿಸಿದ್ದೀರಾ? ಎಂದು ಮತ್ತೊಬ್ಬ ಬಳಕೆದಾರರು ಪ್ರಶ್ನಿಸಿದ್ದಾರೆ.