ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ರಸ್ತೆಬದಿಯಲ್ಲಿ ಮಕ್ಕಳೊಂದಿಗೆ ಪಟಾಕಿ ಸಿಡಿಸಿ ದೀಪಾವಳಿ ಆಚರಿಸಿದ ಮುಸ್ಲಿಂ ಕುಟುಂಬ; ಹೃದಯಸ್ಪರ್ಶಿ ವಿಡಿಯೊ ವೈರಲ್

Muslim Family Secretly Celebrates Diwali: ರಸ್ತೆಬದಿಯಲ್ಲಿ ಮುಸ್ಲಿಂ ಕುಟುಂಬವೊಂದು ಪಟಾಕಿ ಸಿಡಿಸಿ ಹಬ್ಬವನ್ನು ಆಚರಿಸಿದೆ. ಈ ಹೃದಯಸ್ಪರ್ಶಿ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವಿಡಿಯೊ ತ್ವರಿತವಾಗಿ ಸಾವಿರಾರು ವೀಕ್ಷಣೆಗಳು ಮತ್ತು ಭಾವನಾತ್ಮಕ ಕಾಮೆಂಟ್‌ಗಳನ್ನು ಸಂಗ್ರಹಿಸಿತು.

ಮಕ್ಕಳೊಂದಿಗೆ ಪಟಾಕಿ ಸಿಡಿಸಿ ದೀಪಾವಳಿ ಆಚರಿಸಿದ ಮುಸ್ಲಿಂ ಕುಟುಂಬ

-

Priyanka P Priyanka P Oct 24, 2025 2:19 PM

ನವದೆಹಲಿ: ದೇಶಾದ್ಯಂತ ದೀಪಾವಳಿ (Deepavali) ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು. ಈ ನಡುವೆ ಹೃದಯಸ್ಪರ್ಶಿ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ. ರಸ್ತೆಬದಿಯಲ್ಲಿ ಮುಸ್ಲಿಂ ಕುಟುಂಬವೊಂದು ಪಟಾಕಿ ಸಿಡಿಸಿ ಹಬ್ಬವನ್ನು ಆಚರಿಸಿದೆ. ಈ ವಿಡಿಯೊ, ಭಾರತದಲ್ಲಿ ಬೆಳಕಿನ ಹಬ್ಬ ಮತ್ತು ಏಕತೆಯ ನಿಜವಾದ ಅರ್ಥವನ್ನು ಸೆರೆಹಿಡಿಯುತ್ತದೆ.

ಮುಸ್ಲಿಂ ಕುಟುಂಬವೊಂದು ರಸ್ತೆಬದಿಯಲ್ಲಿ ಪಟಾಕಿಗಳನ್ನು ಜಾಗರೂಕತೆಯಿಂದ ಹಚ್ಚಿದೆ. ಎಲ್ಲರಂತೆ ದೀಪಾವಳಿಯನ್ನು ಆಚರಿಸಬೇಕೆಂಬ ತಮ್ಮ ಮಕ್ಕಳ ಮುಗ್ಧ ಆಸೆಯನ್ನು ಈಡೇರಿಸುವುದನ್ನು ಈ ವಿಡಿಯೊ ತೋರಿಸುತ್ತದೆ. ಸಮಾಜ ಏನು ಹೇಳುತ್ತದೆ ಅನ್ನೋದನ್ನು ನೆನಪು ಮಾಡಿಕೊಳ್ಳದೆ ಶಾಂತಿಯುತವಾಗಿ ಹಬ್ಬವನ್ನು ಆನಂದಿಸಲು ಏಕಾಂತ ಸ್ಥಳವನ್ನು ಆರಿಸಿಕೊಂಡರು.

ಈ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಈ ವಿಡಿಯೊ ತ್ವರಿತವಾಗಿ ಸಾವಿರಾರು ವೀಕ್ಷಣೆಗಳು ಮತ್ತು ಭಾವನಾತ್ಮಕ ಕಾಮೆಂಟ್‌ಗಳನ್ನು ಸಂಗ್ರಹಿಸಿತು. ಕೆಲವೊಮ್ಮೆ ಮಕ್ಕಳ ಹಠವೂ ಒಳ್ಳೆಯದಾಗಿರುತ್ತದೆ ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. ಈ ಕಥೆ ನನ್ನ ಹೃದಯವನ್ನು ಕರಗಿಸಿದೆ ಎಂದು ಮತ್ತೊಬ್ಬ ಬಳಕೆದಾರರು ಹೇಳಿದರು.

ವಿಡಿಯೊ ವೀಕ್ಷಿಸಿ:

ಕುಟುಂಬಕ್ಕೆ ಖಾಸಗಿತನಕ್ಕೆ ಅವಕಾಶ ನೀಡಬೇಕಿತ್ತು ಎಂದು ಕೆಲವರು ಆಶಯ ವ್ಯಕ್ತಪಡಿಸಿದರೆ, ಇನ್ನು ಕೆಲವರು ಈ ವಿಡಿಯೊವನ್ನು ಭರವಸೆಯ ಸಂಕೇತವಾಗಿ ನೋಡಿದ್ದಾರೆ. ನಿಜವಾದ ಭಾರತ, ನನ್ನ ಭಾರತ- ಎಲ್ಲರಿಗೂ ಪ್ರೀತಿ ಹಂಚುವುದು ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. ಹೀಗೆ ಖಾಸಗಿಯಾಗಿ ದೀಪಾವಳಿ ಆಚರಿಸುವುದು ಯಾಕೆ? ಎಲ್ಲರ ಜೊತೆಯಲ್ಲಿ ಆಚರಿಸಿ ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಧರ್ಮಕ್ಕಿಂತ ಮಾನವೀಯತೆ ಮುಖ್ಯ. ನಾವು ಎಲ್ಲಾ ಹಬ್ಬಗಳನ್ನು ಬಹಿರಂಗವಾಗಿ ಆಚರಿಸುತ್ತೇವೆ. ಧರ್ಮಕ್ಕಿಂತ ದೇಶ ಮೊದಲು ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: Viral Video: ದೀಪ ಬೆಳಗಿಸಿ, ರಸ್ತೆ ಗುಂಡಿಗಳಿಗೆ ಹೂವಿನ ಅಲಂಕಾರ ; ವಿನೂತನ ಪ್ರತಿಭಟನೆಯ ವಿಡಿಯೋ ವೈರಲ್‌

ಈ ವರ್ಷ ದೀಪಾವಳಿಯನ್ನು ಅಕ್ಟೋಬರ್ 20 ರಂದು ಆಚರಿಸಲಾಯಿತು. ನರಕ ಚತುರ್ದಶಿಯಿಂದ ಪ್ರಾರಂಭವಾದ ದೀಪಾವಳಿಯು ಬಲಿ ಪಾಡ್ಯಮಿಯೊಂದಿಗೆ ಕೊನೆಗೊಂಡಿತು. ದೇಶಾದ್ಯಂತ ಮನೆಗಳು ದೀಪಗಳಿಂದ ಝಗಮಗಿಸಿದವು. ಸಿಹಿ-ತಿಂಡಿಗಳನ್ನು ಹಂಚಿ ತಿನ್ನುತ್ತಾ, ಪಟಾಕಿ ಹಚ್ಚಿದ ಜನರು ಹಬ್ಬವನ್ನು ಆಚರಿಸಿದರು. ಈ ನಡುವೆ ಇದೀಗ ವೈರಲ್ ಆಗಿರುವ ಮುಸ್ಲಿಂ ಕುಟುಂಬದ ಹಬ್ಬದ ಆಚರಣೆಯು ಬೆಳಕಿನ ಹಬ್ಬಕ್ಕೆ ಯಾವುದೇ ಧರ್ಮವಿಲ್ಲ ಎಂಬುದನ್ನು ಎಲ್ಲರಿಗೂ ನೆನಪಿಸಿತು.

ಆಸ್ಟ್ರೇಲಿಯಾದಲ್ಲೂ ಸಡಗರದಿಂದ ಆಚರಿಸಲಾಯ್ತು ದೀಪಾವಳಿ

ಬೆಳಕಿನ ಹಬ್ಬ ದೀಪಾವಳಿಯನ್ನು ಆಸ್ಟ್ರೇಲಿಯಾದಲ್ಲೂ ಬಹಳ ಸಂಭ್ರಮದಿಂದ ಆಚರಿಸಲಾಯಿತು. ಅದರಲ್ಲೂ ಸಿಡ್ನಿ ನಗರವಂತೂ ಪ್ರಕಾಶಮಾನವಾಗಿ ಹೊಳೆದಿದೆ. ನಿರಿಂಬಾ ಫೀಲ್ಡ್ಸ್‌ನ ಫ್ಯಾಂಟಮ್ ಸ್ಟ್ರೀಟ್‌ನಿಂದ ಮಾರ್ಸ್ಡೆನ್ ಪಾರ್ಕ್‌ವರೆಗೆ ಫಳಫಳನೆ ಹೊಳೆದಿದೆ. ಎಲ್‌ಇಡಿ, ವರ್ಣರಂಜಿತ ರಂಗೋಲಿಗಳು, ದೀಪಗಳು ಮತ್ತು ಲೈಟಿಂಗ್ಸ್‌ಗಳಿಂದ ಮನೆಗಳು ಕಂಗೊಳಿಸುತ್ತಿತ್ತು. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.